ಭಾರತದ ಮೊಬೈಲ್ ಮಾರುಕಟ್ಟೆಯಷ್ಟು ವೇಗವಾಗಿ ಬೆಳೆಯುತ್ತಿರುವ ಹಾಗೂ ಹೊಸ ಹೊಸ ಆವಿಶಷ್ಕಾರ ಕಾಣುತ್ತಿರುವ ಇಂಡಸ್ಟ್ರಿ ಮತ್ತೊಂದಿಲ್ಲ. ಹೀಗಾಗಿ ಪ್ರತಿ ದಿನ ಹೊಸ ಹೊಸ ಫೋನ್ ಮಾರುಕಟ್ಟೆ ಪ್ರವೇಶಿಸುತ್ತಿದೆ. ಇದೀಗ ರಿಯಲ್‌ಮಿ ಮತ್ತೆರಡು ಹೊಸ ಫೋನ್ ಬಿಡುಗಡೆ ಮಾಡಿದೆ.
ನವದೆಹಲಿ(ಮಾ.19): 64 ಎಂಪಿ ಎಐ ಕ್ವಾಡ್ ಕ್ಯಾಮೆರಾ, 30 ಡಬ್ಲ್ಯೂ ಫ್ಲಾಶ್ ಚಾರ್ಜ್ (60 ನಿಮಿಷಗಳಲ್ಲಿ ಪೂರ್ತಿ ಚಾರ್ಜ್)ನಂಥಾ ಹೊಸತನಗಳಿರುವ ರಿಯಲ್ ಮಿ 6 ಹಾಗೂ ರಿಯಲ್ ಮಿ 6 ಪ್ರೊ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದಿವೆ. ಬಜೆಟ್ ಮೊಬೈಲ್‌ನಲ್ಲೂ ಬಹಳ ಸ್ಮೂಥ್ ಆಗಿ ಸ್ಕೊ್ರೕಲ್ ಮಾಡಲು ಸಹಕಾರಿಯಾದ 90 ಎಚ್‌ಝಡ್ ಡಿಸ್‌ಪ್ಲೇ ಹಾಗೂ ಆಂಡ್ರಾಯ್ಡ್ 10 ನಂಥಾ ಓಎಸ್ ನೀಡುತ್ತಿರುವುದು ಇದರ ಹೆಚ್ಚುಗಾರಿಕೆ.
4ಜಿಬಿ+64ಜಿಬಿ , 6ಜಿಬಿ+64ಜಿಬಿ, 8ಜಿಬಿ+128ಜಿಬಿ ಮಾದರಿಗಳಲ್ಲಿ ರಿಯಲ್ ಮಿ 6 ಸ್ಮಾರ್ಟ್‌ಫೋನ್‌ಗಳಿವೆ. ರಿಯಲ್ ಮಿ 6 ಪ್ರೊದಲ್ಲೂ ಮೂರು ಬಗೆಯ ಮೆಮೊರಿ ಮಾಡೆಲ್‌ಗಳಿವೆ. 6ಜಿಬಿ+64ಜಿಬಿ, 6ಜಿಬಿ+128ಜಿಬಿ ಹಾಗೂ 8ಜಿಬಿ+128ಜಿಬಿ ಗಳಲ್ಲಿ ಈ ಫೋನ್‌ಗಳು ಲಭ್ಯ.
undefined
ಇನ್ಫಿನಿಕ್ಸ್ ಪಾಪ್-ಅಪ್ ಸೆಲ್ಫಿ ಕ್ಯಾಮರಾ S5 ಪ್ರೊ ಸ್ಮಾರ್ಟ್ ಫೋನ್ ಬಿಡುಗಡೆ!
ಅದರಲ್ಲೂ ರಿಯಲ್‌ಮಿ 6 ಪ್ರೊ ಒಟ್ಟು 6 ಕ್ಯಾಮೆರಾಗಳನ್ನು ಹೊಂದಿದ್ದು, ಇದರಲ್ಲಿ ಡ್ಯುಯೆಲ್ ವೈಡ್ ಆ್ಯಂಗಲ್‌ನ ಫ್ರಂಟ್ ಕ್ಯಾಮೆರಾ ಮತ್ತು 64 ಎಂಪಿ ಕ್ವಾಡ್ ರೇರ್ ಕ್ಯಾಮೆರಾ ಹೊಂದಿದೆ.
ಬೆಲೆ: ರಿಯಲ್ ಮಿ 6 - 12,999 ರು.(4ಜಿಬಿ+64ಜಿಬಿ), 14,999 ರು.( 6 ಜಿಬಿ+64 ಜಿಬಿ), 15,999 ರು. (8ಜಿಬಿ+128ಜಿಬಿ)
ರಿಯಲ್ ಮಿ 6 ಪ್ರೊ- 16,999 ರು. (6ಜಿಬಿ+64ಜಿಬಿ), 17,999 ರು. ( 6ಜಿಬಿ+128ಜಿಬಿ), 18,999 ರು. (8ಜಿಬಿ+128ಜಿಬಿ)
ಜಿಯೋ ಗ್ರಾಹಕರಿಗೆ ಮತ್ತಷ್ಟು ಸ್ಪೀಡ್ ನೆಟ್..!
ರಿಯಲ್‌ಮಿ ಬ್ಯಾಂಡ್ ಕೂಡ ಬಂತು
ಸ್ಮಾರ್ಟ್‌ಫೋನ್ ಕಂಪನಿಗಳೆಲ್ಲಾ ಸ್ಮಾರ್ಟ್‌ವಾಚ್ ಹಿಂದೆ ಬಿದ್ದಿವೆ. ಈಗ ರಿಯಲ್‌ಮಿ ಕೂಡ ಫಿಟ್‌ನೆಸ್ ಬ್ಯಾಂಡ್ ತಂದಿದೆ. 0.96 ಇಂಚಿನ ಕಲರ್ಸ್ ಡಿಸ್ಪೆ$್ಲೕ ಹೊಂದಿರುವ ಈ ಬ್ಯಾಂಡ್ ಹಾರ್ಟ್ ರೇಟ್ ಮಾನಿಟರ್, ಸ್ಪೋರ್ಟ್ಸ್ ಟ್ರ್ಯಾಕರ್, ಸ್ಲೀಪ್ ಕ್ವಾಲಿಟಿ ಮಾನಿಟರ್ ಫೀಚರ್ ಹೊಂದಿದೆ. ಈ ಬ್ಯಾಂಡಿನ ಬೆಲೆ 1,499 ರೂಪಾಯಿ.