6000 mAh ಬ್ಯಾಟರಿಯ ಟೆಕ್ನೋ ಸ್ಪಾರ್ಕ್ 7 ಸ್ಮಾರ್ಟ್‌ ಫೋನ್ ಬಿಡುಗಡೆ

By Suvarna News  |  First Published Apr 10, 2021, 10:18 AM IST

ಚೀನಾ ಮೂಲದ ಟೆಕ್ನೋ ಮೊಬೈಲ್ ಕಂಪನಿಯ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಟೆಕ್ನೋ ಸ್ಪಾರ್ಕ್ 7 ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ಈ ಫೋನ್ ಶಕ್ತಿಶಾಲಿ ಬ್ಯಾಟರಿಯನ್ನು ಒಳಗೊಂಡಿದೆ. ಜೊತೆಗೆ ಹಲವು ವಿಶಿಷ್ಟ ಫೀಚರ್‌ಗಳಿದ್ದು, ಬೆಲೆಯೂ  ಕೈಗೆಟುಕುವ ದರದಲ್ಲಿದೆ.


ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಮಾರುಕಟ್ಟೆಯನ್ನು ಹೊಂದಿರುವ ಚೀನಾ ಮೂಲದ ಟೆಕ್ನೋ ಮೊಬೈಲ್ ಕಂಪನಿ ಭಾರತೀಯ ಮಾರುಕಟ್ಟೆಗೆ ಟೆಕ್ನೋ ಸ್ಪಾರ್ಕ್ 7 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಟೆಕ್ನೋ ಮೊಬೈಲ್‌ನ ಈ ಹೊಸ ಸ್ಮಾರ್ಟ್‌ಫೋನ್ ಭಾರತದಲ್ಲಿ ಪೋಕೋ ಸಿ3, ಮೈಕ್ರೋಮ್ಯಾಕ್ಸ್ ಇನ್ 1ಬಿ ಮತ್ತು ರೆಡ್‌ಮಿ 9ಎಗಳಂತ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ಠಕ್ಕರ್ ನೀಡುವ ಸಾಧ್ಯತೆ ಇದೆ.

Mi 11 ಅಲ್ಟ್ರಾ ಫೋನ್‍ ಹಿಂಬದಿಯಲ್ಲೂ ಡಿಸ್‌ಪ್ಲೇ! ಏ.23ಕ್ಕೆ ಲಾಂಚ್

Tap to resize

Latest Videos

undefined

ಟೆಕ್ನೋ ಸ್ಪಾರ್ಕ್ 7 ಟೆಕ್ನೋ ಮೊಬೈಲ್ ಕಂಪನಿಯ ಎಂಟ್ರಿ ಲೇವಲ್ ಸ್ಮಾರ್ಟ್‌ಫೋನ್ ಆಗಿದ್ದು, ಇದೇ ವರ್ಗದ ಗ್ರಾಹಕರನ್ನು ಆದ್ಯತೆಯಾಗಿ ಸ್ಮಾರ್ಟ್‌ಫೋನ್ ಅನ್ನು ರೂಪಿಸಿರುವಂತೆ ಕಾಣುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಿರುವ ಈ ಟೆಕ್ನೋ ಸ್ಪಾರ್ಕ್ 7, 64 ಜಿಬಿ ಸ್ಟೋರೇಜ್‌ ಸಾಮರ್ಥ್ಯದೊಂದಿಗೆ ಎರಡು ವೆರಿಯೆಂಟ್‌ಗಳಲ್ಲಿ ಬರುತ್ತದೆ. ಈ ಸ್ಮಾರ್ಟ್‌ಫೋನ್ ವಿಶೇಷ ಏನೆಂದರೆ, ಶಕ್ತಿಶಾಲಿ ಬ್ಯಾಟರಿಯನ್ನು ಹೊಂದಿದೆ. ಕಂಪನಿಯು  6000 ಎಂಎಎಚ್ ಬ್ಯಾಟರಿಯನ್ನು ನೀಡುತ್ತದೆ. ಇದರ ಜೊತೆಗೆ, ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳು ಮತ್ತು ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಟೈಮ್  ಲ್ಯಾಪ್ಸ್, ವಿಡಿಯೋ ಬೊಕೇ, ಸ್ಲೋ ಮೋ ಸೇರಿದಂತೆ ವಿಶಿಷ್ಟ ಪ್ರಿಲೋಡೆಡ್ ಫೀಚರ್‌ಗಳೊಂದಿಗೆ ಈ ಟೆಕ್ನೋ ಸ್ಪಾರ್ಕ್ 7 ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಮೂರು ಮಾದರಿಯ ಬಣ್ಣಗಳಲ್ಲಿ ಮಾರಾಟಕ್ಕೆ ಸಿಗಲಿದೆ.

ಈ ಟೆಕ್ನೋ ಸ್ಪಾರ್ಕ್ 7 ಸ್ಮಾರ್ಟ್‌ಫೋನ್ ಹಲವು ವಿಶೇಷತೆಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್  ಡ್ಯುಯಲ್-ಸಿಮ್ (ನ್ಯಾನೋ) 7 ಆಂಡ್ರಾಯ್ಡ್ 11ನಲ್ಲಿ ಹಿಯೋಸ್ 7.5 ಜೊತೆಗೆ ಕಾರ್ಯನಿರ್ವಹಿಸುತ್ತದೆ ಮತ್ತು 6.52-ಇಂಚಿನ ಎಚ್‌ಡಿ + (720x1,600 ಪಿಕ್ಸೆಲ್‌ಗಳು) ಡಾಟ್ ನಾಚ್ ಡಿಸ್‌ಪ್ಲೇಯನ್ನು 20: 9ಅನುಪಾತದಲ್ಲಿ ಹೊಂದಿದೆ.

ಭಾರೀ ನಿರೀಕ್ಷೆಯ ಗೂಗಲ್ ಪಿಕ್ಸೆಲ್ 6 ಸ್ಮಾರ್ಟ್‌ಫೋನ್ ಯಾವಾಗ ರಿಲೀಸ್?

ಟೆಕ್ನೋ ಸ್ಪಾರ್ಕ್ 7  ಸ್ಮಾರ್ಟ್ ಫೋನ್ 2ಜಿ ರ್ಯಾಮ್ ವೆರಿಯಂಟ್‌ನಲ್ಲಿ ನೀವು ಕ್ವಾಡ್ ಕೋರ್  ಮೀಡಿಯಾ ಟೆಕ್ ಹೆಲಿಯೋ ಎ20 ಪ್ರೊಸೆಸರ್ ಕಾಣಬಹುದು. ಈ ಸ್ಮಾರ್ಟ್‌ ಫೋನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾಗಳ ಸೆಟ್‌ಅಪ್ ನೋಡಬಹುದು. ಇದರಲ್ಲಿ ಮೊದಲನೆಯ ಕ್ಯಾಮೆರಾ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ. ಎಲ್ಇಡಿ ಫ್ಲ್ಯಾಶ್‌ನೊಂದಿಗೆ ಎಐ ಲೆನ್ಸ್ ಕೂಡ ಇದರಲ್ಲಿದೆ. ಸೆಲ್ಫಿ ಫೋಟೋಗಳನ್ನು ತೆಗೆಯಲು ಕಂಪನಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಿದೆ. ಇಲ್ಲೂ ಎಲ್ಇಡಿ ಫ್ಲ್ಯಾಶ್ ಇರುವುದನ್ನು ನೀವು ಕಾಣಬಹುದು.

ಸ್ಟೋರೇಜ್ ‌ಬಗ್ಗೆ ಹೇಳುವುದಾದರೆ ಈ ಸ್ಮಾರ್ಟ್‌ಫೋನ್ 32 ಜಿಬಿ ಮತ್ತು 64 ಜಿಬಿ ಸ್ಟೋರೇಜ್ ವೆರಿಯೆಂಟ್‌ಗಳಲ್ಲಿ ಸಿಗುತ್ತದೆ. ಬಳಕೆದಾರರು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ಸಾಮರ್ಥ್ಯವನ್ನು 256 ಜಿಬಿವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.

4ಜಿ ವೋಎಲ್ಇಟಿ, ವೈ ಫೈ, ಬ್ಲೂಟೂತ್ ವಿ5.0, ಮೈಕ್ರೋ ಯುಎಸ್‌ಬಿ, 3.5 ಎಂಎಂ ಹೆಡ್‌ಫೋನ್ ಜಾಕ್ ಸೇರಿ ಇನ್ನಿತರ ಕನೆಕ್ಟಿವಿಟಿ ಫೀಚರ್‌ಗಳನ್ನು ಈ ಟೆಕ್ನೋ ಸ್ಪಾರ್ಕ್ 7 ಸ್ಮಾರ್ಟ್‌ಫೋನ್ ಹೊಂದಿದೆ. ಈ ಮೊದಲೇ ಹೇಳಿದಂತೆ ಈ ಸ್ಮಾರ್ಟ್‌ಫೋನ್ ಕಂಪನಿ 6000 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ. ಒಮ್ಮೆ ಚಾರ್ಜ್ ಮಾಡಿದರೆ, ಸ್ಟ್ಯಾಂಡ್ ಬೈ ಆಗಿ ನಿಮಗೆ 40 ದಿನಗಳವರೆಗೂ ಬಾಳಿಕೆ ಬರುತ್ತದೆ.

ವಿದ್ಯಾರ್ಥಿಗಳಿಗೆ ಎಚ್‌ಪಿ ಕ್ರೋಮ್‌ಬುಕ್ ಲ್ಯಾಪ್‌ಟ್ಯಾಪ್; 21,999 ರೂ.ನಿಂದ ಬೆಲೆ ಆರಂಭ

ಭಾರತದಲ್ಲಿ ಬಿಡುಗಡೆಯಾಗಿರುವ ಟೆಕ್ನೋ ಸ್ಪಾರ್ಕ್ 7 ಸ್ಮಾರ್ಟ್‌ಫೋನ್ ಬೆಲೆ ಕೂಡ ತೀರಾ ತುಟ್ಟಿಯೇನೂ ಅಲ್ಲ. 2 ಜಿಬಿ ರ್ಯಾಮ್ ಮತ್ತು 32 ಜಿಬಿ ಸ್ಟೋರೇಜ್ ವೆರಿಯೆಂಟ್ ಬೆಲೆ 7,499 ರೂಪಾಯಿ ಇದೆ. ಅದೇ ವೇಳೆ, 3 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಸಾಮರ್ಥ್ಯದ ಫೋನ್ ಬೆಲೆ 8,499 ರೂ. ಇದ್ದು, ಮ್ಯಾಗ್ನೆಟ್ ಬ್ಲ್ಯಾಕ್, ಮೊರ್ಪೇಸ್ ಬ್ಲೂ ಮತ್ತು ಸ್ಪ್ರೂಸ್ ಗ್ರೀನ್ ಬಣ್ಣಗಳಲ್ಲಿ ಮಾರಾಟಕ್ಕೆ ಸಿಗಲಿದೆ. ಏಪ್ರಿಲ್ 16ರ ನಂತರ ಈ  ಫೋನ್ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಮಾರಾಟಕ್ಕೆ ಸಿಗಲಿದೆ.

click me!