Mi 11 ಅಲ್ಟ್ರಾ ಫೋನ್‍ ಹಿಂಬದಿಯಲ್ಲೂ ಡಿಸ್‌ಪ್ಲೇ! ಏ.23ಕ್ಕೆ ಲಾಂಚ್

By Suvarna News  |  First Published Apr 8, 2021, 4:20 PM IST

ಕಳೆದ ತಿಂಗಳು ಚೀನಾದಲ್ಲಿ ಬಿಗುಡೆಯಾಗಿ ಭಾರೀ ಸದ್ದು ಮಾಡುತ್ತಿರುವ ಶಿಯೋಮಿ ಕಂಪನಿಯ ಎಂಐ 11 ಅಲ್ಟ್ರಾ ಸ್ಮಾರ್ಟ್‌ಪೋನ್ ಏಪ್ರಿಲ್ 23ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಈ ಬಗ್ಗೆ ಅಮೆಜಾನ್ ತಾಣದಲ್ಲಿ ಪ್ರತ್ಯೇಕವಾದ ಪುಟವನ್ನು ಸೃಷ್ಟಿಸಲಾಗಿದ್ದು, ನೋಂದಣಿಯನ್ನು ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ, ಎಂಐ 11 ಅಲ್ಟ್ರಾ  ಭಾರತದಲ್ಲಿ ಬಿಡುಗಡೆಯನ್ನು ಖಚಿತಪಡಿಸಿದಂತಾಗಿದೆ.


ಸ್ಮಾರ್ಟ್‌ಫೋನ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಚೀನಾ ಮೂಲದ ಶಿಯೋಮಿ ಕಂಪನಿಯ ಎಂಐ11 ಅಲ್ಟ್ರಾ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಕಳೆದ ತಿಂಗಳವಷ್ಟೇ ಈ ಫೋನ್‌ ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ, ಭಾರೀ ಸದ್ದು ಮಾಡಿತ್ತು. 

ಎಂಐ 11 ಅಲ್ಟ್ರಾ ಸ್ಮಾರ್ಟ್‌ಫೋನ್  ಹಿಂಬದಿಯಲ್ಲಿ ಹೊಂದಿರುವ ಡಿಸ್‌ಪ್ಲೇ ಕಾರಣಕ್ಕೆ ಹೆಚ್ಚು ಚರ್ಚೆಯಲ್ಲಿದೆ. ಭಾರತೀಯ ಮಾರುಕಟ್ಟೆಗೆ ಕಂಪನಿ ಈ ಸ್ಮಾರ್ಟ್‌ಫೋನ್ ಅನ್ನು ಏಪ್ರಿಲ್ 23ರಂದು ಬಿಡುಗಡೆ ಮಾಡಲಿದೆ. ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಲಾಂಚ್ ಆದ ಬಳಿಕ ಅಮೆಜಾನ್‌ನಲ್ಲಿ ಮಾರಾಟಕ್ಕೆ ಲಭ್ಯ ಇರುವುದನ್ನು ಖಚಿತಪಡಿಸಿದೆ. ಈ ಎಂಐ 11 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಾಗಿಯೇ ಒಂದು ಪೇಜ್‌ ಅನ್ನು ಅದು ತೆರೆದಿದೆ. 

Tap to resize

Latest Videos

undefined

ಭಾರೀ ನಿರೀಕ್ಷೆಯ ಗೂಗಲ್ ಪಿಕ್ಸೆಲ್ 6 ಸ್ಮಾರ್ಟ್‌ಫೋನ್ ಯಾವಾಗ ರಿಲೀಸ್?

ಈಗಾಲೇ ಹೇಳಿದಂತೆ ಎಂಐ 11 ಅಲ್ಟ್ರಾ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಸೆಕೆಂಡರಿ ಡಿಸ್‌ಪ್ಲೇ ಗಮನ ಸೆಳೆಯುತ್ತಿರುವ ಫೀಚರ್ ಆಗಿದೆ. ಹಾಗೆಯೇ, ಈ ಸ್ಮಾರ್ಟ್‌ಫೋನ್‌ನಲ್ಲಿ ನೀವು ಸ್ನ್ಯಾಪ್‌ ಡ್ರಾಗನ್ 888 ಪ್ರೊಸೆಸರ್, ವೈರ್ ಸಹಿತ ಹಾಗೂ ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇರುವ 5000 ಎಂಎಎಚ್ ಬ್ಯಾಟರಿಯನ್ನು ಕಾಣಬಹುದು. ಇನ್ನು 120x ಡಿಜಿಟಲ್ ಝೂಮ್‌ಗೆ ಸಪೋರ್ಟ್ ಮಾಡುವ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಈ ಫೋನ್‌ನ ಹಿಂಭಾಗದಲ್ಲಿ ಕಾಣಬಹುದು. 

ಕಳೆದ ತಿಂಗಳ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಈ ಎಂಐ 11 ಅಲ್ಟ್ರಾ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಇ ಕಾಮರ್ಸ್ ತಾಣ ಅಮೆಜಾನ್ ಇದಕ್ಕಾಗಿ ಪುಟವೊಂದನ್ನು ತೆರಿದಿದೆ. ನೋಟಿಫೈ ಬಟನ್ ಮೂಲಕ ಅಮೆಜಾನ್, ಆಸಕ್ತರಿಂದ ನೋಂದಣಿಯನ್ನು ಪಡೆದುಕೊಳ್ಳುತ್ತಿದೆ. ಹಾಗಾಗಿ, ಈ ಫೋನ್ ಭಾರತೀಯ ಮಾರುಕಟ್ಟೆಗೆ ಏಪ್ರಿಲ್ 23ರಂದು ಬಿಡುಗಡೆಯಾಗಲಿದೆ ಎಂಬುದನ್ನು ಖಚಿತಪಡಿಸುತ್ತಿದೆ.

ವಿದ್ಯಾರ್ಥಿಗಳಿಗೆ ಎಚ್‌ಪಿ ಕ್ರೋಮ್‌ಬುಕ್ ಲ್ಯಾಪ್‌ಟ್ಯಾಪ್; 21,999 ರೂ.ನಿಂದ ಬೆಲೆ ಆರಂಭ

ಆದರೆ, ಈ ಎಂಐ 11 ಅಲ್ಟ್ರಾ ಸ್ಮಾರ್ಟ್‌ಫೋನ್ ಬೆಲೆ ಎಷ್ಟಿರಲಿದೆ ಎಂಬುದು ಇನ್ನೂ ಖಚಿತಪಟ್ಟಿಲ್ಲ. ಆದರೂ, ಇತ್ತೀಚೆಗೆ ಸೋರಿಕೆಯಾದ ಮಾಹಿತಿಯ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ ಬೆಲೆ ಅಂದಾಜು 70 ಸಾವಿರ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಹಾಗಾಗಿ, ಶಿಯೋಮಿ ಕಂಪನಿಯ ಎಂಐ 11 ಅಲ್ಟ್ರಾ ಸ್ಮಾರ್ಟ್‌ಫೋನ್ ಮತ್ತೊಂದು ಪ್ರೀಮಿಯಂ ಸ್ಮಾರ್ಟ್‌ಫೋನ್ ಎಂದು ಹೇಳಬಹುದು.  2014ರಲ್ಲಿ ಬಳಿಕ ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿಯ ಅತಿ ತುಟ್ಟಿಯ ಸ್ಮಾರ್ಟ್‌ಫೋನ್ ಇದಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಸ್ಮಾರ್ಟ್‌ಫೋನ್ ಬಿಡುಗಡೆಯಾದ ಮೇಲಷ್ಟೇ ಅದರ ವಾಸ್ತವದ ಬೆಲೆ ಎಷ್ಟು ಎನ್ನುವುದು ಗೊತ್ತಾಗಲಿದೆ.

ಎಂಐ 11 ಅಲ್ಟ್ರಾ ಸ್ಮಾರ್ಟ್‌ಫೋನ್ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನ್ 6.81 ಇಂಚ್ ಅಮೋಎಲ್ಇಡಿ ಕ್ವಾಡ್ ಕರ್ವ್ಡ್ ಪ್ರೈಮರಿ ಡಿಸ್‌ಪ್ಲೇ ಮತ್ತು ಫೋನ್ ಹಿಂಭಾಗದಲ್ಲಿ  1.1 ಇಂಚ್‌ ಅಮೋಎಲ್ಇಡಿ ಸೆಕೆಂಡರೀ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸೌಲಭ್ಯದಿಂದ ಬಳಕೆದಾರರು ಸರಳವಾಗಿ ಹಿಂಬದಿ ಕ್ಯಾಮೆರಾದಿಂದಲೂ ಸೆಲ್ಫಿ ತೆಗೆದುಕೊಳ್ಳಬಹುದು. 

ಈ ಸ್ಮಾರ್ಟ್‌ಪೋನ್‌ ಸ್ನ್ಯಾಪ್‌ಡ್ರಾಗನ್ 888 ಪ್ರೊಸೆಸರ್ ಆಧರಿತವಾಗಿದೆ. 50 ಮೆಗಾ ಪಿಕ್ಸೆಲ್ ಸ್ಯಾಮ್ಸಂಗ್ ಜಿಎನ್2 ಪ್ರೈಮರೀ ಸೆನ್ಸರ್ ಇರುವ ಕ್ಯಾಮೆರಾ ಸೇರಿ ಮೂರು ಕ್ಯಾಮೆರಾಗಳನ್ನು ಒಳಗೊಂಡಿರುವ ಕ್ಯಾಮೆರಾ ಸೆಟ್‌ಅಪ್ ಅನ್ನು ನೀವು ಫೋನ್ ಹಿಂಬದಿಯಲ್ಲಿ ಕಾಣಬಹುದು. ವಿಶೇಷ ಎಂದರೆ, ಕ್ಯಾಮೆರಾ ವಿಷಯದಲ್ಲಿ ಈ ಫೋನ್ ಅಗ್ರಸ್ಥಾನಿಯಾಗಿದೆ.  ಈ ಫೋನ್ ನಂತರದಲ್ಲಿ ಸ್ಥಾನದಲ್ಲಿ ಹುವಾವೇ ಕಂಪನಿಯ ಮೇಟ್ 40 ಪ್ರೋ ಪ್ಲಸ್ ಸ್ಮಾರ್ಟ್‌ಫೋನ್ ಇದೆ. 

ಇನ್ನು ಎಲ್‌ಜಿ ಸ್ಮಾರ್ಟ್‌ಫೋನ್ ಸಿಗಲ್ಲ; ಉತ್ಪಾದನೆ ಸ್ಥಗಿತ ಮಾಡಿದ ಕಂಪನಿ

ಎಂಐ 11 ಅಲ್ಟ್ರಾ ಸ್ಮಾರ್ಟ್‌ಫೋನ್ 5ಜಿಗೆ ಸಪೋರ್ಟ್ ಮಾಡುತ್ತದೆ. ಇಷ್ಟು ಮಾತ್ರವಲ್ಲದೇ ಇನ್ನೂ ಅನೇಕ ಫೀಚರ್‌ಗಳಿದ್ದು ಫೋನ್ ಬಿಡುಗಡೆಯಾದ ಬಳಿಕವಷ್ಟೇ ಅವುಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಸಿಗಲಿದೆ. 

click me!