
ಟೆಕ್ನೋ ಭಾರತದ ಮಾರುಕಟ್ಟೆಗೆ ನ್ಯೂ ಕ್ಯಾಮೆರಾ-ಫೋಕ್ಸಡ್ ಸ್ಮಾರ್ಟ್‌ಫೋನ್ Tecno Camon 50 Ultra ಲಾಂಚ್ ಮಾಡಿದೆ. ಕ್ಯಾಮೆರಾ, ಡಿಸ್‌ಪ್ಲೇ ಮತ್ತು ಅತ್ಯಧಿಕ ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್ ಇದಾಗಿದೆ. Tecno Camon 50 Ultra ಸ್ಮಾರ್ಟ್‌ಫೋನ್ 8GB RAM + 256GB ಸ್ಟೋರೇಜ್‌ನ ಸಿಂಗಲ್ ವೇರಿಯಂಟ್ ಲಾಂಚ್ ಮಾಡಲಾಗಿದೆ.
6500mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಹೊಂದಿದ್ರೂ ಸ್ಮಾರ್ಟ್‌ಫೋನ್ ಸಾಕಷ್ಟು ಸ್ಲಿಮ್ ಆಗಿದೆ. 7.5mm ದಪ್ಪವಿದ್ದು, 190 ಗ್ರಾಂ ತೂಕವನ್ನು ಹೊಂದಿದೆ. ಫೋನ್ ಹಿಂಭಾಗ ಹೊಸ ಟ್ರಿಪಲ್ ಕ್ಯಾಮೆರಾ ಮಾಡ್ಯೂಲ್ ನೀಡಲಾಗಿದೆ. ಬ್ಯಾಕ್ ಪ್ಯಾನೆಲ್‌ನಲ್ಲಿ ಫಿಂಗರ್ ಪ್ರಿಂಟ್ ಆಫ್ಷನ್ ನೀಡಲಾಗಿದೆ. 45W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.
ಫೋನ್ ಎಡಭಾಗದಲ್ಲಿ ಪವರ್ ಮತ್ತು ವ್ಯಾಲ್ಯೂಮ್ ಬಟನ್ ನೀಡಲಾಗಿದೆ. ಕೆಳಭಾಗದಲ್ಲಿ USB Type-C ಪೋರ್ಟ್ ನೀಡಲಾಗಿದೆ IP66, IP68, IP69 ಮತ್ತು IP69K ರೇಟಿಂಗ್ ಹೊಂದಿರುವ ಕಾರಣ ಧೂಳು ಹಾಗೂ ವಾಟರ್ ಪ್ರೂಫ್ ಆಗಿದೆ. ಇಷ್ಟು ಮಾತ್ರವಲ್ಲ ಹೈ ಪ್ರೆಶರ್ ಬಿಸಿನೀರಿನಲ್ಲಿ ಬಿದ್ರೂ ಸ್ಮಾರ್ಟ್‌ಫೋನ್ ಸುರಕ್ಷಿತವಾಗಿರಲಿದೆ. ಈ ಸ್ಮಾರ್ಟ್‌ಫೋನ್ Cypress Green, Nebula Titanium ಮತ್ತು Misty Purple ಬಣ್ಣಗಳಲ್ಲಿ ಲಭ್ಯವಿದೆ.
ಡಿಸ್‌ಪ್ಲೇ: ಫೋನ್ 6.78 ಇಂಚಿನ ProXDR ಕರ್ವಡ್ AMOLED ಡಿಸ್‌ಪ್ಲೇ ನೀಡಲಾಗಿದೆ. 1.5k ರೆಸೆಲ್ಯೂಷನ್ ಮತ್ತು 44Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡುತ್ತದೆ. ಸ್ಕ್ರೀನ್ ಸುರಕ್ಷತೆಗಾಗಿ Corning Gorilla Glass 7iನ ಪ್ರೊಟೆಕ್ಷನ್ ನೀಡಲಾಗಿದೆ.
ಫೋಟೋಗ್ರಾಫಿಗಾಗಿ ಈ ಸ್ಮಾರ್ಟ್‌ಫೋನ್‌ನಲ್ಲಿ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ.
ಸೆಲ್ಫಿ ಮತ್ತು ವಿಡಿಯೋ ಕಾಲಿಂಗ್‌ಗಾಗಿ 50MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ.
ಫೋನ್‌ನಲ್ಲಿ MediaTek Dimensity 7400 Ultimate ಆಕ್ಟ್ ಪ್ರೊಸೆಸರ್ ನೀಡಲಾಗಿದೆ. HiOS 16ನಲ್ಲಿ ಕಾರ್ಯನಿರ್ವಹಿಸಲಿದ್ದು, 8GB LPDDR5X RAM ಮತ್ತು 256GB UFS 2.2 ಸ್ಟೋರೇಜ್ ಒಳಗೊಂಡಿದೆ. ಆಡಿಯೋಗಾಗಿ Dolby Atmos ಡ್ಯುಯಲ್ ಸ್ಟೀರಿಯೊ ಸ್ಪೀಕರ್ ಸಪೋರ್ಟ್ ಮಾಡುತ್ತದೆ. ಕನೆಕ್ಟಿವಿಟಿಗಾಗಿ Wi-Fi 5, Bluetooth, GPS, NFC, FM Radio, USB Type-C ಮತ್ತು OTG ಆಫ್ಷನ್ ಇದೆ.
ಬೆಲೆ ಎಷ್ಟು: ಸದ್ಯ ಈ ಮೊಬೈಲ್ ಬೆಲೆ 39,999 ರೂಪಾಯಿ ಆಗಿದ್ದು, ಗ್ರಾಹಕರು 3 ಸಾವಿರ ರೂ.ಗಳವರೆಗೆ ರಿಯಾಯ್ತಿ ಪಡೆದುಕೊಳ್ಳಬಹುದಾಗಿದ. ಜುಲೈ 21ರಿಂದ Tecno Camon 50 Ultra ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಭ್ಯವಿರಲಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ಕ್ರಾಂತಿಗೆ ಮುಂದಾದ Yulu, ರಾಜಧಾನಿಯಲ್ಲಿ ಫ್ಲೀಟ್ ಹೆಚ್ಚಿಸಲು ಮುಂದಾದ ಎಲೆಕ್ಟ್ರಿಕ್ ಬೈಕ್!
ಇದನ್ನೂ ಓದಿ: 526 ಕಿ.ಮೀ ಮೈಲೇಜ್, ಕೇವಲ 25 ಸಾವಿರ ರೂಗೆ ಬುಕ್ ಮಾಡಿ ಕಿಯಾ ಸೈರೋಸ್ ಎಲೆಕ್ಟ್ರಿಕ್ ಕಾರು
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.