
ಟೆಲಿಕಾಂ ಜಗತ್ತಿನಲ್ಲಿ ಅತಿ ಕಡಿಮೆ ಬೆಲೆಗೆ ಹೆಚ್ಚಿನ ಡೇಟಾ ನೀಡೋ ವಿಷ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಜಿಯೋ ಕಂಪನಿ ಈಗ ಮತ್ತೊಂದು ಆಫರ್ ನೀಡ್ತಿದೆ. ಅತಿ ಕಡಿಮೆ ಬೆಲೆಗೆ ಜಿಯೋ ಕಂಪನಿ ಗ್ರಾಹಕರಿಗೆ 1.5 ಜಿಬಿ ಡೇಟಾ ನೀಡ್ತಿದೆ.
ಜಿಯೋ ಹಲವಾರು ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಹೊಂದಿದೆ. ಅವುಗಳು ವಿಭಿನ್ನ ಬೆಲೆಗಳು ಮತ್ತು ಪ್ರಯೋಜನಗಳೊಂದಿಗೆ ಬರುತ್ತವೆ. ಜಿಯೋ 239 ರೂಪಾಯಿಗಳ ರೀಚಾರ್ಜ್ ಪ್ಲಾನ್ ಹೊಂದಿದ್ದು, ಇದರಲ್ಲಿ ಬಳಕೆದಾರರು ಕರೆ, ಡೇಟಾ ಮತ್ತು ಇತರ ಹಲವು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಜಿಯೋದ 239 ರೂಪಾಯಿಗಳ ರೀಚಾರ್ಜ್ ಯೋಜನೆಯು ಪ್ರತಿದಿನ 1.5GB ಡೇಟಾವನ್ನು ನೀಡುತ್ತದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಒಟ್ಟು 33GB ಡೇಟಾ ಸಿಗ್ತಿದೆ.
ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟ ಏರ್‍ಟೆಲ್.. ನಿಮ್ಮ ಜೇಬಿಗೆ ಮತ್ತಷ್ಟು ಕತ್ತರಿ..!
ಜಿಯೋದ 239 ರೂಪಾಯಿಗಳ ರೀಚಾರ್ಜ್ ಪ್ಲಾನ್ ಅನಿಯಮಿತ ಕರೆಗಳ ಪ್ರಯೋಜನವನ್ನು ನೀಡುತ್ತದೆ. ಈ ರೀಚಾರ್ಜ್ ಯೋಜನೆಯು 22 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಪ್ರತಿದಿನ 1.5GB ಡೇಟಾವನ್ನು ನೀಡುತ್ತದೆ. ಅಲ್ಲದೆ ಕಂಪನಿ ದಿನಕ್ಕೆ 100 ಎಸ್ಎಂಎಸ್ ನೀಡುತ್ತದೆ.
ಜಿಯೋ ಟಿವಿ ಸಬ್ಸ್ಕ್ರೈಬ್ ಜಿಯೋದ ಈ 239 ಪ್ಲಾನ್ ನಲ್ಲಿ ಗ್ರಾಹಕರಿಗೆ ಜಿಯೋ ಟಿವಿ ಮತ್ತು ಜಿಯೋ ಐಕ್ಲೌಡ್ಗೆ ಸಬ್ಸ್ಕ್ರೈಬ್ ಸಿಗ್ತಿದೆ. ಈ ಜಿಯೋ ರೀಚಾರ್ಜ್ ಯೋಜನೆಯನ್ನು ಜಿಯೋದ ಅಧಿಕೃತ ಪೋರ್ಟಲ್ನಲ್ಲಿ ಪಟ್ಟಿ ಮಾಡಲಾಗಿದೆ. ಈ ಯೋಜನೆಯೊಂದಿಗೆ ಬಳಕೆದಾರರು ಹಲವಾರು ವೈಶಿಷ್ಟ್ಯಗಳನ್ನು ಪಡೆಯುತ್ತಾರೆ.
ಭಾರತದಲ್ಲಿ ಬಡವರು ಖರೀದಿಸುತ್ತಿದ್ದ ಬಜೆಟ್ ಫೋನ್‌ಗಳಿಗೆ ಬ್ರೇಕ್;
200 ಗಿಂತ ಕಡಿಮೆ ಬೆಲೆ ಪ್ಲಾನ್
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ 200 ರೂ.ಗಿಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ಪ್ಲಾನ್ಗಳನ್ನು ನೀಡುತ್ತದೆ. ಈ ಪ್ಲಾನ್ ವಿಶೇಷವಾಗಿ ಮನೆ ಅಥವಾ ಕಚೇರಿಯಲ್ಲಿ ವೈ-ಫೈ ಬಳಸುವವರಿಗೆ ಮತ್ತು ಕಡಿಮೆ ಮೊಬೈಲ್ ಡೇಟಾ ಅಗತ್ಯವಿರುವವರಿಗೆ ಒಳ್ಳೆಯದು. ಈ ಪ್ಲಾನ್ನಲ್ಲಿ, ಬಳಕೆದಾರರು 28 ದಿನಗಳ ವ್ಯಾಲಿಡಿಟಿ, ಅನಿಯಮಿತ ಧ್ವನಿ ಕರೆ ಮತ್ತು ಕೆಲವು ಡೇಟಾವನ್ನು ಪಡೆಯುತ್ತಾರೆ. ಈ ಜಿಯೋ ಪ್ಲಾನ್ನ ಬೆಲೆ 189 ರೂಪಾಯಿ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.