ಚಿಪ್ ಕೊರತೆ, ಗಣೇಶ ಹಬ್ಬದ ಬದಲು ದೀಪಾವಳಿಗೆ ಜಿಯೋಫೋನ್ ನೆಕ್ಸ್ಟ್ ಬಿಡುಗಡೆ!

By Suvarna News  |  First Published Sep 11, 2021, 9:11 PM IST
  • ಜಿಯೋ ಹಾಗೂ ಗೂಗಲ್ ಅಭಿವೃದ್ಧಿ ಪಡಿಸಿದ ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್
  • ಅತೀ ಕಡಿಮೆ ಬೆಲೆಯ ಫೋನ್ ಇದಾಗಿದ್ದು, ಭಾರತದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ
  • ಅತ್ಯಾಧುನಿಕ ತಂತ್ರಜ್ಞಾನ ಸೇರಿ ಹಲವು ವಿಶೇಷತೆಗಳಿಂದ ಕೂಡಿರುವ  ಜಿಯೋಫೋನ್ ನೆಕ್ಸ್ಟ್

ಮುಂಬೈ(ಸೆ.11): ಬಹುನಿರೀಕ್ಷಿತ ಜಿಯೋಫೋನ್ ನೆಕ್ಸ್ಟ್  ಗಣೇಶ ಹಬ್ಬಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಜಾಗತಿಕ ಮಟ್ಟದಲ್ಲಿ ಚಿಪ್ ಕೊರತೆಯಿಂದಾಗಿ ವಿಶ್ವದ ಅತೀ ಕಡಿಮೆಯ ಸ್ಮಾರ್ಟ್‌ಫೋನ್ ಜಿಯೋಫೋನ್ ನೆಕ್ಸ್ಟ್ ಬಿಡುಗಡೆ ದೀಪಾವಳಿ ಹಬ್ಬಕ್ಕೆ ಮುಂದೂಡಲಾಗಿದೆ. ಗೂಗಲ್ ಹಾಗೂ ಜಿಯೋ ಜಂಟಿಯಾಗಿ ಅಭಿವದ್ಧಿಪಡಿಸಿದ ಈ ಫೋನ್‌ಗಾಗಿ ಇದೀಗ ಕಾಯುವಿಕೆ ಹೆಚ್ಚಾಗಿದೆ.

ಜಿಯೋಫೋನ್ ನೆಕ್ಸ್ಟ್‌ ಖರೀದಿಗೆ ಮುಂದಿನ ವಾರದಿಂದ ಬುಕ್ಕಿಂಗ್?

Tap to resize

Latest Videos

ಪ್ರಸ್ತುತ ಟಿಲಿಕಾಂ ಕ್ಷೇತ್ರಕ್ಕೆ ವ್ಯಾಪಿಸಿರುವ ಜಾಗತಿಕ ಸೆಮಿಕಂಡಕ್ಟರ್ ಕೊರತೆಯ ತೀವ್ರತೆಯನ್ನು ಕಡಿಮೆಮಾಡಲು ಲಾಂಚ್ ಮುಂದೂಡಲಾಗಿದೆ.  ಜಿಯೋಫೋನ್ ನೆಕ್ಸ್ಟ್, ಆಂಡ್ರಾಯ್ಡ್ ಮತ್ತು ಪ್ಲೇ ಸ್ಟೋರ್ ಆಧಾರಿತ ಆಪ್ಟಿಮೈಸ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಒಳಗೊಂಡಿರುವ ಆ ಬಗೆಯ ಮೊದಲ ಸಾಧನವಾಗಿದೆ. ಗ್ರಾಹಕರು ತಮ್ಮದೇ ಭಾಷೆಯಲ್ಲಿ ಮಾಹಿತಿ ಪಡೆಯಲು ಹಾಗೂ ಫೋನ್ ಬಳಸಲು ನೆರವಾಗುವ ವಾಯ್ಸ್-ಫಸ್ಟ್ ಫೀಚರ್‌ಗಳು, ಅತ್ಯುತ್ತಮ ಕ್ಯಾಮೆರಾ ಅನುಭವ, ಇತ್ತೀಚಿನ ಆಂಡ್ರಾಯ್ಡ್ ವೈಶಿಷ್ಟ್ಯಗಳು ಮತ್ತು ಸುರಕ್ಷತಾ ಅಪ್‌ಡೇಟ್‌ಗಳನ್ನು ಪಡೆಯುವ ಆಯ್ಕೆ ಸೇರಿದಂತೆ ಇದುವರೆಗೆ ಹೆಚ್ಚು ಶಕ್ತಿಯುತವಾದ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವೇ ಇರುತ್ತಿದ್ದ ಪ್ರೀಮಿಯಂ ಸಾಮರ್ಥ್ಯಗಳನ್ನು ಈ ಸಾಧನ ಹಾಗೂ ಆಪರೇಟಿಂಗ್ ಸಿಸ್ಟಮ್‌ಗಳೆರಡೂ ನೀಡಲಿವೆ.

ಮತ್ತಷ್ಟು ಪರಿಷ್ಕರಿಷ್ಕರಿಸುವ ಉದ್ದೇಶದಿಂದ ಎರಡೂ ಸಂಸ್ಥೆಗಳು ಜಿಯೋಫೋನ್ ನೆಕ್ಸ್ಟ್ ಅನ್ನು ಸೀಮಿತ ಬಳಕೆದಾರರೊಂದಿಗೆ ಪರೀಕ್ಷಿಸಲು ಪ್ರಾರಂಭಿಸಿವೆ ಹಾಗೂ ದೀಪಾವಳಿ ಹಬ್ಬದ ಸಮಯಕ್ಕೆ ಸರಿಯಾಗಿ ಅದನ್ನು ಹೆಚ್ಚು ವ್ಯಾಪಕವಾಗಿ ಲಭ್ಯವಾಗುವಂತೆ ಮಾಡಲು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. 

ಜಿಯೋಫೋನ್ ನೆಕ್ಸ್ಟ್ ಫೋನ್ ಹೇಗಿದೆ? ಬೆಲೆ ಎಷ್ಟಿದೆ?

ಜಿಯೋಫೋನ್ ನೆಕ್ಸ್ಟ್ ಅನ್ನು ಗೂಗಲ್ ಅಸಿಸ್ಟೆಂಟ್, ಯಾವುದೇ ಆನ್-ಸ್ಕ್ರೀನ್ ಪಠ್ಯಕ್ಕಾಗಿ ಸ್ವಯಂಚಾಲಿತ ಓದುವಿಕೆ ಮತ್ತು ಭಾಷಾ ಅನುವಾದ, ಭಾರತ-ಕೇಂದ್ರಿತ ಫಿಲ್ಟರ್‌ಗಳಿರುವ ಸ್ಮಾರ್ಟ್ ಕ್ಯಾಮೆರಾ ಮತ್ತು ಇನ್ನೂ ಹೆಚ್ಚಿನ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ನಿರ್ಮಿಸಲಾಗಿದೆ. ಲಕ್ಷಾಂತರ ಭಾರತೀಯರಿಗೆ, ಅದರಲ್ಲೂ ವಿಶೇಷವಾಗಿ ಮೊದಲ ಬಾರಿಗೆ ಅಂತರ್ಜಾಲವನ್ನು ಅನುಭವಿಸುವವರಿಗೆ,  ಹೊಸ ಅವಕಾಶಗಳನ್ನು ಒದಗಿಸುವ ತಮ್ಮ ಉದ್ದೇಶಕ್ಕೆ ಎರಡೂ ಸಂಸ್ಥೆಗಳು ತಮ್ಮ ಬದ್ಧತೆಯನ್ನು ಮುಂದುವರಿಸಿವೆ.

click me!