ಜಿಯೋ ಗೂಗಲ್‌ನಿಂದ ವಿಶ್ವದ ಅತೀ ಕಡಿಮೆ ಬೆಲೆ ಸ್ಮಾರ್ಟ್‌ಫೋನ್; ಮುಂದಿನ ವಾರ ಲಾಂಚ್!

By Suvarna News  |  First Published Sep 3, 2021, 8:02 PM IST
  • ಭಾರತ ಸೇರಿ ವಿಶ್ವದಲ್ಲಿ ಸ್ಮಾರ್ಟ್‌ಫೋನ್ ಕ್ರಾಂತಿ
  • ಜಿಯೋ ಗೂಗಲ್ ಜಂಟಿಯಾಗಿ ಉತ್ಪಾದಿಸಿದ ಸ್ಮಾರ್ಟ್‌ಫೋನ್
  • ಅತೀ ಕಡಿಮೆ ಬೆಲೆಗೆ ಜಿಯೋಫೋನ್ ನೆಕ್ಸ್ಟ್ ಲಭ್ಯ

ಮುಂಬೈ(ಸೆ.03): ಭಾರತದಲ್ಲಿ ಮೊಬೈಲ್‌ನಲ್ಲಿ ಕ್ರಾಂತಿ ಮಾಡಿದ ಹೆಗ್ಗಳಿಗೆ ರಿಲಾಯನ್ಸ್‌ಗಿದೆ. ಅತೀ ಕಡಿಮೆ ಬೆಲೆಗೆ CDMA ಮೊಬೈಲ್ ಮಾರಾಟ ಮಾಡುವ ಮೂಲಕ ಭಾರತದಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಬಳಿಕ ಜಿಯೋ ಸಿಮ್ ಮೂಲಕ ಟಿಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇದೀಗ ಜಿಯೋ ಹಾಗೂ ಗೂಗಲ್ ಜೊತೆ ಸೇರಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುತ್ತಿದೆ. ದೇಶದಲ್ಲಿ ಜಿಯೋ ಮಹತ್ತರ ಕ್ರಾಂತಿಗೆ ಮುಂದಾಗಿದೆ.

ಜಿಯೋಫೋನ್ ನೆಕ್ಸ್ಟ್‌ ಖರೀದಿಗೆ ಮುಂದಿನ ವಾರದಿಂದ ಬುಕ್ಕಿಂಗ್?

Tap to resize

Latest Videos

ಗೂಗಲ್ ಜೊತೆ ಸೇರಿ ಮುಖೇಶ್ ಅಂಬಾನಿಯ ಜಿಯೋಫೋನ್ ನೆಕ್ಸ್ಟ್ ಭಾರತದಲ್ಲಿ ಮುಂದಿನ ವಾರದಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಅಂಬಾನಿ ಹೇಳಿದಂತೆ ಸೆಪ್ಟೆಂಬರ್ 10 ರಂದು ಅಂದರೆ ಗಣೇಶ ಚತುರ್ಥಿ ದಿನ 4ಜಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ. 

ಜಿಯೋಫೋನ್ ನೆಕ್ಸ್ಟ್ ಬೆಲೆ 3,500 ರಿಂದ 3,700 ರೂಪಾಯಿ ಒಳಗಿರಲಿದೆ. ಅತೀ ಕಡಿಮೆ ಬೆಲೆಗೆ ಲಭ್ಯವಿರುವ 4ಜಿ ಫೋನ್ ಇದಾಗಿದೆ. ಅಂಡ್ರಾಯ್ಡ್ 11 OS, HD ಡಿಸ್‌ಪ್ಲೇ, ಕ್ವಾಡ್‌ಕೋರ್ ಕ್ವಾಲ್ಕಾಮ್, ಸ್ನಾಪ್ ಡ್ರಾಗನ್ X5 LTE, 13 ಹಾಗೂ 8 ಮೆಗಾಪಿಕ್ಸಲ್ ಕ್ಯಾಮಾರ ಸೇರಿದಂತೆ ಹಲವು ವಿಶೇಷತೆಗಳು ಈ ಫೋನ್‌ನಲ್ಲಿದೆ ಎಂದು ಹೇಳಲಾಗುತ್ತಿದೆ. 

ಜಿಯೋಫೋನ್ ನೆಕ್ಸ್ಟ್ ಫೋನ್ ಹೇಗಿದೆ? ಬೆಲೆ ಎಷ್ಟಿದೆ?

ದೇಶದಲ್ಲಿ ಸುಮಾರು 300 ಮಿಲಿಯನ್ ಸ್ಮಾರ್ಟ್‌ ಬಳಕೆದಾರರು ಆನ್‌ಲೈನ್ ಮೂಲಕ ಫೋನ್ ಖರೀದಿ ಮಾಡುತ್ತಾರೆ. ಜಿಯೋನೆಕ್ಸ್ಟ್ ಇದೀಗ ದೇಶದಲ್ಲಿ ಹೊಸ ಅಲೆ ಸೃಷ್ಟಿಸಲಿದೆ. ಅತೀ ಕಡಿಮೆ ಬೆಲೆ ದೇಶದ ಮೂಲೆ ಮೂಲೆಗೂ 4ಜಿ ಫೋನ್ ಒದಿಗಸುವ ಮೂಲಕ ಮತ್ತೊಂದು ಮೆಘಾ ಪ್ಲಾನ್ ಹಾಕಿಕೊಂಡಿದೆ.

ಭಾರತದಲ್ಲಿ 4ಜಿ ಸ್ಮಾರ್ಟ್‌ಫೋನ್‌ಗಳಲ್ಲಿ ಚೀನಾ ಫೋನ್‌ಗಳದ್ದೇ ಕಾರುಬಾರು. ಆದರೆ ಜಿಯೋಫೋನ್ ಚೀನಾ ಪ್ರಾಬಲ್ಯ ಅಂತ್ಯಗೊಳಿಸಿ ದೇಶಿ ಫೋನ್ ನೀಡಲಿದೆ. ಗೂಗಲ್ ಟೆಕ್ ಸಪೋರ್ಟ್ ಇರುವುದರಿಂದ ಅತ್ಯುತ್ತಮ ಫೋನ್ ಇದಾಗಲಿದೆ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ.

ಇದುವರೆಗೆ ಭಾರತದಲ್ಲಿ ಚೀನಾ ಫೋನ್‌ಗೆ ಪರ್ಯಾವಾಗಿ ಭಾರತದ ಫೋನ್ ಪೈಪೋಟಿ ನೀಡಿಲ್ಲ. ನಿರಾತಂಕವಾಗಿ ಸಾಗುತ್ತಿದ್ದ ಚೀನಾ ಕಂಪನಿಗಳಿಗೆ ಇದೀಗ ನಡುಕು ಶುರುವಾಗಿದೆ. 

click me!