ಟೆಲಿಕಾಂನಲ್ಲಿ ಕ್ರಾಂತಿ ಮಾಡಿದ ಜಿಯೋಗೆ 5 ವರ್ಷ; ಭಾರತದಲ್ಲಿ ಮಹತ್ತರ ಬದಲಾವಣೆ!

By Suvarna News  |  First Published Sep 9, 2021, 9:45 PM IST
  • ರಿಲಯನ್ಸ್ ಜಿಯೋಗೆ 5 ವರ್ಷದ ಸಂಭ್ರಮ
  • ಡೇಟಾ, ಅನ್‌ಲಿಮಿಟೆಡ್ ಕಾಲ್ ಸೇರಿ ಹಲವು ಕೊಡುಗೆ
  • 2016ರಲ್ಲಿ ಆರಂಭಗೊಂಡ ಜಿಯೋ ಟೆಲಿಕಾಂ

ನವದೆಹಲಿ(ಸೆ.09): ಭಾರತದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಹೆಗ್ಗಳಿಗೆ ರಿಲಯನ್ಸ್ ಜಿಯೋಗೆ ಸಲ್ಲಲಿದೆ. ಅತೀ ಕಡಿಮೆ ದರದಲ್ಲಿ ಡೇಯಾ, ಉಚಿತ ಕರೆ ಸೇರಿದಂತೆ ಹಲವು ಕೊಡುಗೆ ನೀಡಿದ ಶ್ರೇಯಸ್ಸು ಜಿಯೋಗಿದೆ. ಇದೀಗ ಜಿಯೋಗೆ 5 ವರ್ಷದ ಸಂಭ್ರಮ.

ಜಿಯೋ ಗೂಗಲ್‌ನಿಂದ ವಿಶ್ವದ ಅತೀ ಕಡಿಮೆ ಬೆಲೆ ಸ್ಮಾರ್ಟ್‌ಫೋನ್; ಮುಂದಿನ ವಾರ ಲಾಂಚ್!

Tap to resize

Latest Videos

ತೊಂಬತ್ತರ ದಶಕದ ಅಂತ್ಯದಲ್ಲೇ ಇಂಟರ್ನೆಟ್‌ ಭಾರತದ ಸಾಮಾನ್ಯನಿಗೂ ಪರಿಚಯವಾಗಿತ್ತು. ಆದರೆ ಅದು ಅಗ್ಗದ, ಕೈಗೆಟುಕುವಂತೆ ಇರಲಿಲ್ಲ. ದುಬಾರಿಯೂ, ಅಷ್ಟು ಉತ್ತಮವೂ ಅಲ್ಲದೆ ಈ ಸೇವೆಯನ್ನು ಎಲ್ಲರಿಗೂ ತಲುಪಿಸಿದ ಶ್ರೇಯ ರಿಲಯನ್ಸ್‌ ಸಂಸ್ಥೆ ಜಿಯೋಕ್ಕೆ ಸೇರುತ್ತದೆ.

ಭಾರತದಲ್ಲಿ ಫೇಸ್‌ಬುಕ್‌ ಬಳಕೆದಾರರ ಸಂಖ್ಯೆ 2016 ರಲ್ಲಿ 205 ದಶಲಕ್ಷದಿಂದ ಈಗ 425 ದಶಲಕ್ಷಕ್ಕೆ ದ್ವಿಗುಣಗೊಂಡಿದೆ. ಅದೇ ರೀತಿಯಲ್ಲಿ, ಲಕ್ಷಾಂತರ ಭಾರತೀಯರಿಗೆ ವಾಟ್ಸ್‌ಆಪ್‌ ಅನ್ನು ಬಳಸುತ್ತಿದ್ದಾರೆ. ಡಿಜಿಟಲ್‌ ಸೇವೆ, ಈ ಕಾಮರ್ಸ್‌, ಸೇವೆ ಹೆಚ್ಚಳವಾಗಿ, ಗ್ರಾಹಕರ ಸಂಖ್ಯೆಯೂ 190 ದಶಲಕ್ಷದಿಂದ 390 ದಶಲಕ್ಷಕ್ಕೆ ಏರಿದೆ.

ರೀಚಾರ್ಜ್ ಮಾಡಿ ನಂತರ ಪಾವತಿಸಿ; ಜಿಯೋದಿಂದ ಎಮರ್ಜೆನ್ಸಿ ಡೇಟಾ ಲೋನ್!

ಐದು ವರ್ಷಗಳ ಹಿಂದೆ ರಿಲಯನ್ಸ್ ಜಿಯೋ 4ಜಿ ಸೇವೆಗಳನ್ನು ಆರಂಭಿಸಿ,  ಹೆಚ್ಚಿನ ವೇಗದ ಡೇಟಾವನ್ನು ನೀಡುವ ಮೂಲಕ ಹೊಸ ಬಳಕೆದಾರರನ್ನು ಸೃಷ್ಟಿಸುವ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು.  ತನ್ನ ಪ್ರತಿಸ್ಪರ್ಧಿಗಳಿಗಿಂತ ಶೇಕಡಾ 95 ರಷ್ಟು ಕಡಿಮೆ ಟಾರಿಫ್ ಇರುವ, ಒಟಿಟಿ ಪ್ಲಾಟ್‌ಫಾರ್ಮ್‌, ಧ್ವನಿ ಕರೆಗಳು ಉಚಿತವಾಗಿ ಲಭ್ಯವಾದವು. ಅಲ್ಲಿಯವರೆಗೆ ಅಸ್ತಿತ್ವದಲ್ಲಿದ್ದ ಆಪರೇಟರ್‌ಗಳು ತಮ್ಮ ಗ್ರಾಹಕ ಬಳಗವನ್ನು ಉಳಿಸಿಕೊಳ್ಳುವುದಕ್ಕೆ ಜಿಯೋ ಮಾರ್ಗವನ್ನು  ಅನುಸರಿಸುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ. ಐದು ವರ್ಷಗಳ ನಂತರ, ಜಿಯೋ ಆರಂಭಿಸಿದ ಡೇಟಾ ಕ್ರಾಂತಿಯು ಟೆಲಿಕಾಂ ಕ್ಷೇತ್ರವನ್ನು ನಾಟಕೀಯವಾಗಿ ಬದಲಿಸಿದೆ.

ಜಿಯೋ, ಆನ್‌ಲೈನ್ ಸ್ಟಾರ್ಟ್ ಅಪ್ ಕಂಪನಿಗಳ ಬೆಳವಣಿಗೆಯನ್ನು ಉತ್ತೇಜಿಸಿದೆ. ಈ ಐದು ವರ್ಷಗಳ ಅವಧಿಯಲ್ಲಿ  ವಿಶಾಲ ಅರ್ಥದಲ್ಲಿ ಯೂನಿಕಾರ್ನ್ ಸಂಸ್ಥೆಯಾಗಿ ಬೆಳೆದು ನಿಂತಿದೆ. ಗ್ರಾಹಕರು ಶಾಪಿಂಗ್ ಮಾಡುವ, ಚಲನಚಿತ್ರಗಳನ್ನು ನೋಡುವ, ವಿಮೆ ಅಥವಾ ಆಹಾರವನ್ನು ಖರೀದಿಸುವ, ರಜಾದಿನಗಳನ್ನು ಕಾಯ್ದಿರಿಸುವ ಅಥವಾ ವೈದ್ಯರನ್ನು ಸಂಪರ್ಕಿಸುವ ವಿಧಾನವನ್ನು ಬದಲಾಯಿಸಲು ಜಿಯೋ ಕ್ರಾಂತಿ ಅನುವು ಮಾಡಿಕೊಟ್ಟಿದೆ ಎಂದರೆ ಎಂತಹ ಮನ್ವಂತರವಾಗಿರಬಹುದು ಎಂದು ಊಹಿಸಿಕೊಳ್ಳಬಹುದು.

ಐದು ವರ್ಷದಲ್ಲಿ ಆದ ಬದಲಾವಣೆ
• ಸೆಪ್ಟೆಂಬರ್‌ 2016ರಲ್ಲಿ 192.30 ಮಿಲಿಯನ್‌ ಇದ್ದ  ಬ್ರಾಡ್‌ಬ್ಯಾಂಡ್ ಚಂದಾದಾರರ ಸಂಖ್ಯೆ ಜೂನ್‌ 2021ರಲ್ಲಿ 312% ಹೆಚ್ಚಳದೊಂದಿಗೆ 792.78 ಮಿಲಿಯನ್‌ಗೆ ತಲುಪಿದೆ.
• ಡಿಸೆಂಬರ್‌ 2016ರಲ್ಲಿ ಡಾಟಾ ಖರ್ಚು ಪ್ರತಿ ಜಿಬಿಗೆ ರೂ 160ರಷ್ಟಿದ್ದ ಬೆಲೆ 93%ರಷ್ಟು ಕಡಿಮೆ ಆಗಿದ್ದು, 2021ರ ಮಾರ್ಚ್‌ ಹೊತ್ತಿಗೆ ಪ್ರತಿ ಜಿಬಿಗೆ ರೂ 10.77 ಆಗಿದೆ. 
• ಡಿಸೆಂಬರ 2016ರಲ್ಲಿ 878.63 ಎಂಬಿಯಷ್ಟಿದ್ದ, ಪ್ರತಿ ಬಳಕೆದಾರನ ಒಂದು ತಿಂಗಳ ಡಾಟಾ ಬಳಕೆಯ ಪ್ರಮಾಣವು 2021ರ ಮಾರ್ಚ್‌ ಹೊತ್ತಿಗೆ 12.33 ಜಿಬಿಗೆ ಹೆಚ್ಚಿದೆ. ಅಂದರೆ 1,303%ರಷ್ಟು ಹೆಚ್ಚಿದೆ
• ಸೆಪ್ಟೆಂಬರ್‌ 2016ರಲ್ಲಿ  ರೂ 131ರಷ್ಟಿದ್ದ ಎರ್‌ಪಿಯು ಶೇ. 20% ಇಳಿದು, ಮಾರ್ಚ್‌ 2021ರ ಹೊತ್ತಿಗೆ ರೂ 103.58ಕ್ಕೆ ಇಳಿದಿದೆ.
• ಸೆಪ್ಟೆಂಬರ್‌ 2016ರಲ್ಲಿ 50,539 ಕೋಟಿ ರೂ.ಗಳಿದ್ದ ಎಜಿಆರ್‌ ಆದಾಯ ಶೇ. 4ರಷ್ಟು ಕುಸಿದಿದ್ದು,, ಮಾರ್ಚ್‌ 2021ರ ಹೊತ್ತಿಗೆ 48,587ಕೋಟಿ ರೂ.ಗಳಾಗಿದೆ.
• ಸೆಪ್ಟೆಂಬರ್‌ 2016ರಲ್ಲಿ 32.64 ಕೋಟಿ ರೂ.ಗಳಷ್ಟಿದ್ದ ಯುಪಿಐ ವಹಿವಾಟು ಆಗಸ್ಟ್‌ 2021ರ ಹೊತ್ತಿಗೆ 6.19 ಟ್ರಿಲಿಯನ್‌ ಮುಟ್ಟಿದೆ.
•  ಸೆಪ್ಟೆಂಬರ್‌ 2016ರಲ್ಲಿ 21ರಷ್ಟಿದ್ದ ಯುಪಿಐ ಸೇವೆಗಳನ್ನು ಹೊಂದಿದ್ದ ಬ್ಯಾಂಕ್‌ಗಳ ಸಂಖ್ಯೆ ಆಗಸ್ಟ್‌ 2021ರ ಹೊತ್ತಿಗೆ 249 ತಲುಪಿದೆ. 

click me!