Redmi Note 10T 5G ಜು.20ಕ್ಕೆ ಬಿಡುಗಡೆ, ಫಾಸ್ಟ್ ಚಾರ್ಜಿಂಗ್‌ ಸೇರಿ ಹಲವು ಫೀಚರ್ಸ್

By Suvarna NewsFirst Published Jul 13, 2021, 4:41 PM IST
Highlights

ಶಿಯೋಮಿ ಕಂಪನಿಯ ಸಬ್‌ಬ್ರ್ಯಾಂಡ್ ಆಗಿರುವ ರೆಡ್‌ಮಿ ನೋಟ್‌ 10ಟಿ 5ಜಿ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಜುಲೈ 20ರಂದು ಬಿಡುಗಡೆಯಾಗುವುದು ಖಚಿತವಾಗಿದೆ. ಸುಮಾರು 20 ಸಾವಿರ ರೂಪಾಯಿ  ಆಸು ಪಾಸು ಬೆಲೆ ಹೊಂದಿರಬಹುದಾದ ಈ ಫೋನ್, ಅತ್ಯುತ್ತಮ  ಫೀಚರ್‌ಗಳನ್ನು ಒಳಗೊಂಡಿವೆ.

ಭಾರತೀಯ ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ 10ಟಿ 5ಜಿ ಸ್ಮಾರ್ಟ್‌ಫೋನ್ ಜುಲೈ 20ಕ್ಕೆ ಬಿಡುಗಡೆಯಾಗಲಿದೆ. ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಬಿಡುಗಡೆಯನ್ನು ಬಗ್ಗೆ ರೆಡ್‌ಮಿ ಇಂಡಿಯಾ ಟ್ವೀಟ್ ಮಾಡಿ ಖಚಿತಪಡಿಸಿದೆ. ಇದು ರೆಡ್‌ಮಿಯ ಮೊದಲ 5ಜಿ ಸ್ಮಾರ್ಟ್‌ಫೋನ್ ಆಗಿದೆ.

ಪ್ರೀಮಿಯಂ ಎಂಐ ನೋಟ್‌ಬುಕ್ ಪ್ರೋ ಎಕ್ಸ್ 15 ಲ್ಯಾಪ್‌ಟ್ಯಾಪ್ ಲಾಂಚ್, ಬೆಲೆ ಎಷ್ಟು ಗೊತ್ತಾ?

ವಿಶೇಷ ಏನೆಂದರೆ, ಇತ್ತೀಚೆಗಷ್ಟೇ ರೆಡ್‌ಮಿ ನೋಟ್ 10 5ಜಿ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಪೋಕೋ ಎಂ3 ಪ್ರೋ 5ಜಿ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಈ ಸ್ಮಾರ್ಟ್‌ಫೋನ್‌ಗೆ ಗ್ರಾಹಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ರೆಡ್‌ಮಿ ನೋಟ್ 10ಟಿ 5ಜಿ, ರೆಡ್‌ಮಿ ನೋಟ್ 10 5ಜಿ ಮತ್ತು ಪೋಕೋ ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್‌ಗಳು ಹಲವು ಸಾಮ್ಯತೆಗಳನ್ನು ಹೊಂದಿವೆ. 

ಶಿಯೋಮಿ ಇಂಡಿಯಾ  ಕಮ್ಯುನಿಕೇಷನ್ ಮುಖ್ಯಸ್ಥರ ಕಸ್ತೂರಿ ಪಲಧಿ ಅವರು ರೆಡ್‌ಮಿ ನೋಟ್ 10ಟಿ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಸಂಬಂಧ ಪ್ರಕಟಿಸಿರುವ ವಿಡಿಯೋದಲ್ಲಿ ಕಾಣಿಸಿಕೊಂಡು, ವಿಷಯವನ್ನು ಖಜಿತಪಡಿಸಿಕೊಂಡಿದ್ದಾರೆ. ಸ್ಮಾರ್ಟ್‌ಫೋನ್  ಅಧಿಕೃತ ಬಿಡುಗಡೆಗಾಗಿಯೇ ಮೈಕ್ರೋಸೈಟ್ ರಚಿಸಿದೆ. ಸ್ಮಾರ್ಟ್‌ಫೋನ್ ವಿನ್ಯಾಸ ಮತ್ತಿತರ ವಿಷಯಗಳನ್ನು ತಿಳಿಸಲಾಗಿದೆ. ಕಳೆದ ವಾರವಷ್ಟೇ ಅಮೆಜಾನ್ ಕೂಡ ರೆಡ್‌ಮಿ ನೋಟ್ 10ಟಿ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆಯ ಬಗ್ಗೆ ಟೀಸರ್ ಮಾಡಿತ್ತು. ಅಮೆಜಾನ್ ಸೇರಿದಂತೆ ಇತರ ತಾಣಗಳು ಮೂಲಕವು ರೆಡ್‌ಮಿ ನೋಟ್ 10 ಟಿ ಸ್ಮಾರ್ಟ್ ಫೋನ್ ಮಾರಾಟಗೊಳ್ಳಲಿದೆ.

ರೆಡ್‌ಮಿ ನೋಟ್ 10ಟಿ 5ಜಿ ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಎಂಬುದು ಇನ್ನೂ ಗೊತ್ತಾಗಿಲ್ಲ. ಹಾಗಿದ್ದೂ, ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಬೆಲೆ ಅಂದಾಜು 20 ಸಾವಿರ ರೂಪಾಯಿವರೆಗೂ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.

ಎಂಐಯುಐ ಜತೆ ಆಂಡ್ರಾಯ್ಡ್ 11 ಆಧರಿತವಾಗಿರುವ ರೆಡ್‌ಮಿ ನೋಟ್ 10ಟಿ 5ಜಿ ಸ್ಮಾರ್ಟ್‌ಫೋನ್, 6.5 ಇಂಚ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಅಕ್ಟಾ ಕೋರ್ ಮೀಡಿಯಾ ಟೆಕ್ ಡಿಮೆನ್ಸಿಟಿ 700 ಪ್ರೊಸೆಸರ್ ಜೊತೆಗೆ 6 ಜಿಬಿ ರ್ಯಾಮ್ ಇದೆ. ಕ್ಯಾಮೆರಾದ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳ ಸೆಟ್‌ಅಪ್ ನೀಡಲಾಗಿದೆ. ಈ ಮೂರು ಕ್ಯಾಮೆರಾಗಳ ಪೈಕಿ 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಮೊದಲನೆಯ ಕ್ಯಾಮೆರಾವಾಗಿದೆ. ಮ್ಯಾಕ್ರೋ ಶೂಟರ್ ಮತ್ತು ಡೆಪ್ತ್ ಸೆನ್ಸರ್ 2 ಮೆಗಾ ಪಿಕ್ಸೆಲ್ ಎರಡು ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಇನ್ನು ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ ಸೆಲ್ಫಿಗಾಗಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.

1,299 ಮತ್ತು 1,799 ರೂಪಾಯಿಗೆ ಡಿಝೋ ಫೋನ್‌ ಲಾಂಚ್ ಮಾಡಿದ ರಿಯಲ್‌ಮಿ

ರೆಡ್‌ಮಿ ನೋಟ್ 10ಟಿ ಸ್ಮಾರ್ಟ್‌ಫೋನ್ 128 ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. 5ಜಿ, 4ಜಿ ಎಲ್‌ಟಿಇ, ವೈ ಫೈ, ಬ್ಲೂಟೂಥ್ ವಿ5.1, ಎನ್ಎಫ್‌ಸಿ, ಯುಎಸ್‌ಬಿ ಟೈಪ್-ಸಿ, 3.5 ಎಂಎಂ ಹೆಡ್‌ಫೋನ್ ಜಾಕ್‌ಗೆ ಸಪೋರ್ಟ್ ಮಾಡುತ್ತದೆ. ಈ ಫೋನ್‌ನ ಬದಿಯಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ನೀಡಲಾಗಿದೆ. 18 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುವ 5,000 ಎಂಎಎಚ್ ಬ್ಯಾಟರಿಯನ್ನು ಒದಗಿಸಲಾಗಿದೆ.

 

Excited for 's 1st ever smartphone! 🚀

👉 is launching on 20.07.21. The experience is now going to go mainstream!

This will help accelerate 5G adoption in India! 🇮🇳

Get notified: https://t.co/tve1IwEy6E

I ❤️ pic.twitter.com/WmNgppvs6G

— Manu Kumar Jain (@manukumarjain)

 

ಈ ಹಿಂದೆಯೇ ಟ್ವೀಟ್ ಮೂಲಕ ಖಚಿತಪಡಿಸಿದ್ದ ಕಂಪನಿ

ಶಿಯೋಮಿ ಎಲೆಕ್ಟ್ರಾನಿಕ್ಸ್ ಕಂಪನಿಯ ಸಬ್‌ಬ್ರ್ಯಾಂಡ್ ಆಗಿರುವ ರೆಡ್‌ಮಿ ಇಂಡಿಯಾ, ರೆಡ್‌ಮಿ ನೋಟ್ ನೋಟ್ 10ಟಿ 5ಜಿ ಸ್ಮಾರ್ಟ್‌ಫೋನ್ ಭಾರತದಲ್ಲಿ ಶೀಘ್ರವೇ ಬಿಡುಗಡೆಯಾಗುವುದನ್ನು ಟ್ವೀಟ್ ಮೂಲಕ ಖಚಿತಪಡಿಸಿತ್ತು. ರೆಡ್ ಮಿ ಇಂಡಿಯಾ ತನ್ನ ಈ ಟ್ವೀಟ್‌ನಲ್ಲಿ, ನಾವು ಪ್ರಥಮವಾಗಿ #FastAndFuturistic ಸ್ಮಾರ್ಟ್‌ಫೋನ್‌ನೊಂದಿಗೆ ಬರುತ್ತಿದ್ದೇವೆ. ಹಾಗಾಗಿ ನೀವು ಆರಾಮವಾಗಿ ಕುಳಿತುಕೊಂಡು ನಿಮ್ಮ ನೆಚ್ಚಿನ ಟೀ ಸವಿಯಿರಿ ಎಂದು ಹೇಳಲಾಗಿತ್ತು.

ಜುಲೈ 22ಕ್ಕೆ ಒನ್‌ಪ್ಲಸ್ ನಾರ್ಡ್ 2 ಸ್ಮಾರ್ಟ್‌ಫೋನ್ ಲಾಂಚ್ ಫಿಕ್ಸ್

ಈ ಟ್ವೀಟ್‌ನಲ್ಲಿರುವ ಲಿಂಕ್  ಮೇಲೆ ಕ್ಲಿಕ್ ಮಾಡಿದರೆ ಅದು ನಿಮ್ಮನ್ನು ಮೈಕ್ರೋಸೈಟ್‌ಗೆ ರಿಡೈರೆಕ್ಟ್ ಮಾಡುತ್ತದೆ ಮತ್ತು ಅಲ್ಲಿ ನೀವು ಎಂಐ ಸ್ಟೋರ್ ಆಪ್‌ನಲ್ಲಿ ನೋಟಿ ಫೈ ಬಟನ್ ಮೇಲೆ ಕ್ಲಿಕ್ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು.

click me!