
ನವದೆಹಲಿ(ಜು.10): ತನ್ನ ವಿವಾದಿತ ಖಾಸಗಿತನ ನೀತಿಗೆ ತಡೆ ನೀಡಲು ಹಾಗೂ ತನ್ನ ನೀತಿಯನ್ನು ಒಪ್ಪಿ ಎಂದು ಬಳಕೆದಾರರ ಮೇಲೆ ಒತ್ತಡ ಹೇರದೇ ಇರಲು ವಾಟ್ಸಾಪ್ ನಿರ್ಧರಿಸಿದೆ. ದಿಲ್ಲಿ ಹೈಕೋರ್ಟ್‌ಗೆ ಶುಕ್ರವಾರ ಈ ವಿಷಯವನ್ನು ವಾಟ್ಸಾಪ್ ತಿಳಿಸಿದೆ.
ವಾಟ್ಸಾಪ್ ಖಾಸಗಿತನ ನೀತಿ ವಿರುದ್ಧ ದಿಲ್ಲಿ ಹೈಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದೆ. ಈ ಸಂಬಂಧ ಕಂಪನಿ ಪರ ವಾದ ಮಾಡಿದ ಹಿರಿಯ ವಕೀಲ ಹರೀಶ್ ಸಾಳ್ವೆ, ‘ಸರ್ಕಾರದ ದತ್ತಾಂಶ ರಕ್ಷಣಾ ಕಾಯ್ದೆ ಜಾರಿಗೆ ಬರುವ ತನಕ ನಾವು ನಮ್ಮ ಖಾಸಗಿತನ ನೀತಿ ತಡೆಹಿಡಿಯಲು ನಿರ್ಧರಿಸಿದ್ದೇವೆ. ನೀತಿ ಒಪ್ಪಿ ಎಂದು ಬಳಕೆದಾರರಿಗೂ ಬಲವಂತ ಮಾಡುವುದಿಲ್ಲ. ಈ ನಿರ್ಧಾರವನ್ನು ನಾವು ಬಳಕೆದಾರರಿಗೆ ಪ್ರದರ್ಶಿಸಲಿದ್ದೇವೆ’ ಎಂದು ತಿಳಿಸಿದರು.
ಕಳೆದ ವರ್ಷ ವಾಟ್ಸಾಪ್, ಖಾಸಗಿತನ ನೀತಿ ಒಪ್ಪಿಕೊಳ್ಳಿ ಎಂದು ಬಳಕೆದಾರರಿಗೆ ತಾಕೀತು ಮಾಡಿತ್ತು. ಮಾಡದೇ ಇದ್ದರೆ ಅಂಥ ಬಳಕೆದಾರರ ಖಾತೆ ನಿಷ್ಕಿ್ರಯಗೊಳುವುದಾಗಿ ಎಚ್ಚರಿಸಿತ್ತು. ಆದರೆ ಈ ನೀತಿ ಒಪ್ಪಿದರೆ ತಮ್ಮ ಖಾಸಗಿತನಕ್ಕೆ ಭಂಗ ಬರಬಹುದು ಎಂದು ಬಳಕೆದಾರರು ಆತಂಕ ವ್ಯಕ್ತಪಡಿಸಿದ್ದರು. ವಾಟ್ಸಾಪ್ ನೀತಿ ವಿವಾದಕ್ಕೀಡಾಗಿ ಕೋರ್ಟ್ ಮೆಟ್ಟಿಲೇರಿತ್ತು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.