ಶೀಘ್ರ ಭಾರತಕ್ಕೆ ಮೊಟೋ ಜಿ40 ಫ್ಯೂಸನ್ ಸ್ಮಾರ್ಟ್‌ಫೋನ್?

By Suvarna News  |  First Published Apr 3, 2021, 4:58 PM IST

ಮೊಟೋರೊಲಾ ಕಂಪನಿಯು ಮೊಟೋ ಜಿ60 ಸ್ಮಾರ್ಟ್‌ಫೋನ್‌ ಅನ್ನು ಸ್ವಲ್ಪ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಮೊಟೋ ಜಿ40 ಫ್ಯೂಸನ್ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ ತಾಂತ್ರಿಕವಾಗಿ ಶ್ರೀಮಂತವಾಗಿರಲಿದೆ.


ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಪಾಲು ಹೊಂದಿದ್ದ ಮೊಟೋರೊಲಾ ಕಂಪನಿ ಸ್ವಲ್ಪ ಕಾಲ ಮಂಕಾಗಿತ್ತು. ಆದರೆ, ಮೊಟೋ ಸೀರೀಸ್ ಫೋನ್‌ಗಳ ಮೂಲಕ ಮತ್ತೆ ತನ್ನ ಎಂದಿನ ಖದರ್‌ಗೆ ಬಂದಿದ್ದ ಕಂಪನಿ, ಬಳಿಕ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ, ಗ್ರಾಹಕರನ್ನು ಸಂತುಷ್ಟಗೊಳಿಸಲು ಮತ್ತು ಅವರಿಗೆ ತಾಂತ್ರಿಕ ಶ್ರೀಮಂತಿಕೆ ಅನುಭವವನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ.

ಈಗ ಕಂಪನಿಯು ಮೊಟೋ ಜಿ60 ಸ್ಮಾರ್ಟ್‌ಫೋನ್‌ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಹಬ್ಬಿದೆ. ಕಂಪನಿಯು ಈ ಫೋನ್‌ ಅನ್ನು ಮೊಟೋ ಜಿ640 ಫ್ಯೂಸನ್‌ ಶೀರ್ಷಿಕೆಯಡಿ ಲಾಂಚ್ ಮಾಡಲಿದೆ ಎಂದು ವರದಿಯಾಗಿದೆ.

Latest Videos

undefined

ಕೈಗೆಟುಕುವ ದರದಲ್ಲಿ 4 ಕ್ಯಾಮೆರಾ ಇರುವ ಪೋಕೋ ಎಕ್ಸ್3 ಪ್ರೋ ಫೋನ್ ಲಾಂಚ್

ಈ ಮೊಟೋ ಜಿ60 ಸ್ಮಾರ್ಟ್‌ಫೋನ್ ಬಗ್ಗೆ ಈ ಹಿಂದೆಯೂ ಅನೇಕ ಮಾಹಿತಿಗಳು ಸೋರಿಕೆಯಾಗಿ, ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಕಂಪನಿ ಭಾರತದಲ್ಲಿ ಅದೇ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಹೊರಟಿದೆ.

ಮೊಟೋ ಜಿ40 ಫ್ಯೂಸನ್ ಹೆಸರಲ್ಲಿ ಬಿಡುಗಡೆಯಾಗಲಿರುವ ಮೊಟೋ ಜಿ60 ಸ್ಮಾರ್ಟ್‌ಫೋನ್‌ನಲ್ಲಿ ಒಂದಿಷ್ಟು ಬದಲಾವಣೆಗಳು ಇರಲಿವೆ ಎಂದು ಹೇಳಲಾಗುತ್ತಿದೆ. ಯುರೋಪಿಯನ್ ಮಾರುಕಟ್ಟೆಯಲ್ಲಿ ಮೊಟೋ ಜಿ60 ಎಂದು ಕರೆಯಿಸಿಕೊಳ್ಳುವ ಈ ಸ್ಮಾರ್ಟ್‌ಫೋನ್ ಭಾರತ ಮತ್ತು ಬ್ರೆಜಿಲ್ ಮಾರುಕಟ್ಟೆಯಲ್ಲಿ ಮೊಟೋ ಜಿ40 ಫ್ಯೂಸನ್ ಎಂಬ ಬ್ರ್ಯಾಂಡ್‌ನಡಿ ಬಿಡುಗಡೆಯಾಗಲಿದೆ ಎಂದು ಟೆಕನಿಕ್‌ನ್ಯೂಸ್ ಎಂಬ ವೆಬ್‌ತಾಣದ ವರದಿಯನ್ನು ಉಲ್ಲೇಖಿಸಿ ಸುದ್ದಿತಾಣಗಳು ವರದಿ ಮಾಡಿವೆ.

ಈ ವರದಿಯ ಪ್ರಕಾರ ಮೊಟೋರೊಲಾ ಕಂಪನಿಯು ಮೊಟೋ ಜಿ60 ವ್ಯಾಪ್ತಿಯ ಎರಡು ಫೋನ್‌ಗಳ ಸಂಬಂಧ ಹನೋಯಿ ಮತ್ತು ಹನೋಯಿಪಿ ಎಂಬ ಕೋಡ್‌ನೇಮ್‌ನಡಿ ಕೆಲಸ ಮಾಡುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆಧಾರ್‌ ಜೊತೆ ಪಾನ್‌ ಕಾರ್ಡ್‌ ಲಿಂಕ್ ಮಾಡಿದವರು ಮತ್ತೆ ಮಾಡಬೇಕಾ?

ಈ ಎರಡು ಸ್ಮಾರ್ಟ್‌ಫೋನ್ ‌ಅಭಿವೃದ್ಧಿ ವೇಳೆ ಕಂಪನಿಯು ಒಂದೇ ಫೋನ್‌ ವಿನ್ಯಾಸ ಮಾಡಲು ಮುಂದಾಗಿತ್ತು. ಆದರೆ, ಇತ್ತೀಚಿನ ವರದಿಗಳ ಪ್ರಕಾರ, ಕಂಪನಿಯು ಹನೋಯಿ ಮಾಡೆಲ್‌ ಬೇರೆ ಬೇರೆ ಮಾರುಕಟ್ಟೆಗಳಲ್ಲಿ ಲಾಂಚ್ ಮಾಡಲಿದೆ. ಮತ್ತು ಹನೋಯಿಪಿ ಅಂದರೆ ಮೊಟೋ ಜಿ60 ಸ್ಮಾರ್ಟ್‌ಫೋನ್ ಅನ್ನು ಯುರೋಪ್ ಮಾರುಕಟ್ಟೆಗೆ ಬಿಡುಗಡೆ ಮಾಡಿದರೆ,  ಹನೋಯಿ ಅಂದರೆ ಮೊಟೋ ಜಿ40 ಫ್ಯೂಸನ್ ಸ್ಮಾರ್ಟ್‌ಫೋನ್ ಕಂಪನಿ ಭಾರತ ಮತ್ತು  ಬ್ರೆಜಿಲ್ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಮೊಟೊ ಜಿ60 ಸ್ಮಾರ್ಟ್‌ಫೋನ್‌ನಲ್ಲಿ 6 ಜಿಬಿ ರ್ಯಾಮ್ ಇದ್ದರೆ 128 ಜಿಬಿ ಸ್ಟೋರೇಜ್ ಇರಲಿದೆ. ಇನ್ನು ಮೊಟೋ ಜಿ40 ಫ್ಯೂಸನ್ ಸ್ಮಾರ್ಟ್‌ಫೋನ್ 4ಜಿಬಿ ರ್ಯಾಮ್ ಮತ್ತು 64ಜಿಬಿ ಸ್ಟೋರೇಜ್, 6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್‌ಗಳಲ್ಲಿ ದೊರೆಯಲಿದೆ ಎನ್ನಲಾಗುತ್ತದೆ.

ಮೊಟೋ ಜಿ60 ಮತ್ತು ಮೊಟೊ ಜಿ40 ಫ್ಯೂಸನ್‌ ಎರಡೂ ಸ್ಮಾರ್ಟ್‌ಫೋನ್‌ಗಳು ಒಂದೇ ರೀತಿಯ ವಿಶೇಷತೆಗಳನ್ನು ಹೊಂದಿರುವ ಸಾಧ್ಯತೆ ಇದೆ. ಎರಡೂ ಫೋನ್‌ಗಳಲ್ಲಿ ಮೂರು ಕ್ಯಾಮೆರಾಗಳ ಸೆಟ್‌ಅಪ್ ಇರಲಿದ್ದು, ಮೊಟೋ ಜಿ60 ಸ್ಮಾರ್ಟ್‌ಫೋನ್‌ನಲ್ಲಿ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದರೆ, ಮೊಟೋ ಜಿ40 ಫ್ಯೂಸನ್ ಸ್ಮಾರ್ಟ್‌ಫೋನ್‌ನಲ್ಲಿ 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನುಳಿದ 8 ಮೆಗಾ ಪಿಕ್ಸೆಲ್ ಮತ್ತು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳು ಈ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ನಲ್ಲಿ ಇರಲಿವೆ ಎನ್ನಲಾಗುತ್ತದೆ.

4ಜಿ ಬಳಿಕ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್20 ಎಫ್ಇ 5ಜಿ ಸ್ಮಾರ್ಟ್‌ಫೋನ್ ಲಾಂಚ್

ಹಾಗೆಯೇ, ಈ ಎರಡೂ ಸ್ಮಾರ್ಟ್‌ಫೋನ್‌ಗಳ ಫ್ರಂಟ್‌ ಕ್ಯಾಮೆರಾಗಳಲ್ಲಿ ವ್ಯತ್ಯಾಸ ಇರಲಿದೆ. ಮೊಟೋ ಜಿ 60 ಸ್ಮಾರ್ಟ್‌ಫೋನ್‌ನ ಮುಂಭಾಗದಲ್ಲಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ಬರಬಹುದು. ಹಾಗೆಯೇ, ಮೊಟೊ ಜಿ40 ಫ್ಯೂಸನ್ ಕ್ಯಾಮೆರಾದ ಫ್ರಂಟ್‌ನಲ್ಲಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ. ಈ ವಿಷಯವನ್ನು ಗಮನಿಸಿದರೆ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಸೆಲ್ಫಿ ಕ್ಯಾಮೆರಾಗಳಿಗೆ ಹೆಚ್ಚಿನ ಸ್ಕೋಪ್ ನೀಡಲಾಗಿದೆ ಎಂದು ಹೇಳಬಹುದು.

click me!