ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ ಜಿಯೋ!

By Suvarna News  |  First Published Apr 3, 2021, 4:01 PM IST

ಭಾರತೀಯ ಟೆಲಿಕಾಂ ತೀವ್ರ ಪೈಪೋಟಿ ಎದುರಿಸುತ್ತಿದೆ. ಹೀಗಾಗಿ ಜಿಯೋ ತನ್ನ ಚಂದಾದಾರಿಕೆ ಹೆಚ್ಚಿಸಲು ಹೊಸ ಯೋಜನೆ ಜಾರಿಗೆ ತರುತ್ತಿದೆ. ಜಿಯೋ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.


ನವದೆಹಲಿ(ಎ.03) : ಆಕ್ರಮಣಕಾರಿ ತಂತ್ರಕ್ಕೆ ಮುಂದಾಗಿರುವ ಜಿಯೋ  ಹೊಸ ಜಿಯೋಫೋನ್ ಕೊಡುಗೆಗಳು ಮತ್ತು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಲಾಂಚ್ ಮಾಡುವ ಮೂಲಕ ಚಂದಾದಾರರ ಸಂಖ್ಯೆಯನ್ನು ಏರಿಕೆ ಮಾಡಿಕೊಳ್ಳಲು ಮುಂದಾಗಿದೆ.  

ಆರ್‌ಐಎಲ್ ಎಜಿಎಂ ವೇಳೆ ಜಿಯೋ ಲ್ಯಾಪ್‌ಟ್ಯಾಪ್, 5ಜಿ ಫೋನ್ ಬಿಡುಗಡೆ?

Tap to resize

Latest Videos

ಜಿಯೋ ಪ್ರತಿ ತಿಂಗಳು ಸರಾಸರಿ 4.7 ಮಿಲಿಯನ್  ನಿವ್ವಳ ಚಂದಾದಾರರನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಳ್ಳುತ್ತಿತ್ತು, ಆದರೆ ಆದರೆ ಮಾರ್ಚ್ 2020 ರಲ್ಲಿ ಸರಾಸರಿ 2.3 ಮಿಲಿಯನ್ ಚಂದದಾರರು ಮಾತ್ರವೇ ಹೊಸದಾಗಿ ಜಿಯೋ ಸೇರ್ಪಡೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಬಳಕೆದಾರರ ಸಂಖ್ಯೆಯನ್ನು ಏರಿಸಿಕೊಳ್ಳು ಹೊಸ ತಂತ್ರಕ್ಕೆ ಜಿಯೋ ಕೈ ಹಾಕಿದೆ.

ಸ್ಪೆಕ್ಟ್ರಂ ಹರಾಜು: ಜಿಯೋದಿಂದ ಅತ್ಯಧಿಕ 57122 ಕೋಟಿ ರೂ. ಸ್ಪೆಕ್ಟ್ರಂ ಖರೀದಿ!.

ಹೊಸ ಜಿಯೋಫೋನ್ ಯೋಜನೆಗಳ ಮೂಲಕ ಚಂದಾದಾರರನ್ನು ಸೆಳೆಯುವುದರೊಂದಿಗೆ ಹೊಸ ಮಾದರಿಯ ಕಡಿಮೆ ಬೆಲೆಯ ಸ್ಮಾರ್ಟ್‌ ಫೋನ್ ಲಾಂಚ್ ಮಾಡುವುದು ಸಹ ಹೊಸ ಅಸ್ತ್ರವಾಗಲಿದೆ.

ಕೋವಿಡ್‌ ನಂತರದ ದತ್ತಾಂಶ ಬಳಕೆಯ ಹೆಚ್ಚಳದಿಂದಾಗಿ ಜಿಯೋನ ಚಂದಾದಾರರ ಸಂಖ್ಯೆ 21 ಹಣಕಾಸಿನ ಅವಧಿಯಲ್ಲಿ ತಟಸ್ಥವಾಗಿದೆ,  ಆದರೆ ಮೊಬೈಲ್ ಬ್ರಾಡ್ಬ್ಯಾಂಡ್ ಚಂದಾದಾರರ ಹೆಚ್ಚಿನ ಪಾಲನ್ನು ಸಮೀಪ ಸ್ಪರ್ಧಿ (ಭಾರ್ತಿ ಎರ್‌ಟೆಲ್) ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಜೆಮ್‌ ಫೈನಾಷಿಯಲ್ ವರದಿ ಮಾಡಿದೆ.

2G ಮುಕ್ತ ಭಾರತಕ್ಕೆ ಹೊಸ ಜಿಯೋಫೋನ್ 2021 ಆಫರ್; 1,999ಕ್ಕೆ ಜಿಯೋಫೋನ್!

ಹೆಚ್ಚುವರಿಯಾಗಿ, ಹೊಸ "ಆಕ್ರಮಣಕಾರಿ" ಜಿಯೋಫೋನ್ ಕೊಡುಗೆಗಳು, ಕಡಿಮೆ ವೆಚ್ಚದ ಸ್ಮಾರ್ಟ್ಫೋನ್ಗಳ ಬಿಡುಗಡೆಯು ಜಿಯೋಗೆ ಚಂದಾದಾರರನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ. "ಹೊಸ ಜಿಯೋಫೋನ್ ಕೊಡುಗೆಗಳು ಹಾಗೂ ಸ್ಮಾರ್ಟ್‌ಫೋನ್ ಲಾಂಚ್ ಚಂದಾದಾರರ ಸೇರ್ಪಡೆ ಹೆಚ್ಚಿಸಲು ಜಿಯೋಗೆ ಅನುವು ಮಾಡಿಕೊಡಲಿದೆ.

click me!