4ಜಿ ಬಳಿಕ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್20 ಎಫ್ಇ 5ಜಿ ಸ್ಮಾರ್ಟ್‌ಫೋನ್ ಲಾಂಚ್

By Suvarna News  |  First Published Apr 1, 2021, 3:50 PM IST

ಅಮೆರಿಕನ್ ಮಾರುಕಟ್ಟೆಯಲ್ಲಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಲಾಂಚ್ ಆಗಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್20 ಎಫ್ಇ 4ಜಿ ಮತ್ತು 5ಜಿ ಸ್ಮಾರ್ಟ್‌ಫೋನ್‌ಗಳ ಪೈಕಿ 5ಜಿ ಸ್ಮಾರ್ಟ್‌ಫೋನ್ ಅನ್ನು ಕಂಪನಿ ಇದೀಗ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 4ಜಿ ವೆರಿಯೆಂಟ್ ಭಾರತದಲ್ಲಿ ಕಳೆದ ಅಕ್ಟೋಬರ್‌ನಲ್ಲೇ ಲಾಂಚ್ ಆಗಿತ್ತು. ಈ ಹೊಸ ಫೋನ್ ಹಲವು ಗಮನ ಸೆಳೆಯುವ ಫೀಚರ್‌ಗಳನ್ನು ಒಳಗೊಂಡಿದೆ.


ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶಿಯೋಮಿ, ರಿಯಲ್‌ಮಿ, ಪೋಕೋ ಮತ್ತು ವಿವೋ ಬ್ರ್ಯಾಂಡ್‌ಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಸ್ಯಾಮ್ಸಂಗ್ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇದೆ. ಇತ್ತೀಚೆಗಷ್ಟೇ ಕಂಪನಿ ಗ್ಯಾಲಕ್ಸಿ ಎ52 ಮತ್ತು ಎ72 ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿತ್ತು.

ಕೈಗೆಟುಕುವ ದರದಲ್ಲಿ 4 ಕ್ಯಾಮೆರಾ ಇರುವ ಪೋಕೋ ಎಕ್ಸ್3 ಪ್ರೋ ಫೋನ್ ಲಾಂಚ್

Latest Videos

undefined

ಈಗ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್20 ಎಫ್ಇ 5ಜಿ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಡೆ ಮಾಡಿದೆ. ಈ ಫೋನ್‌ 5ಜಿ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುತ್ತದೆ. ವಿಶೇಷ ಎಂದರೆ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲೇ ಸ್ಯಾಮ್ಸಂಗ್, ಈ ಗ್ಯಾಲಕ್ಸಿ ಎಸ್20 ಎಫ್ಇ ಸ್ಮಾರ್ಟ್‌ಫೋನ್ ಅನ್ನು 4ಜಿ ಮತ್ತು 5ಜಿ ವೆರಿಯೆಂಟ್‌ಗಳಲ್ಲಿ ಅಮೆರಿಕದ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಆ ನಂತರ ಅಕ್ಟೋಬರ್ ತಿಂಗಳಲ್ಲಿ ಕಂಪನಿಯು ಗ್ಯಾಲಕ್ಸಿ ಎಸ್20 ಎಫ್‌ಇ 4ಜಿ ವೆರಿಯೆಂಟ್ ಮಾತ್ರವೇ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದೀಗ, ಕಂಪನಿ ಗ್ಯಾಲಕ್ಸಿ ಎಸ್20 ಎಫ್ಇ 5ಜಿ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು, 5ಜಿ ಸ್ಮಾರ್ಟ್‌ಫೋನ್‌ಗಳ ಸ್ಪರ್ಧೆಗಿಳಿದಿದೆ.

ಪ್ರೀಮಿಯಂ ಫೋನ್ ಆಗಿರುವ ಸ್ಯಾಮ್ಸಂಗ್‌ ಗ್ಯಾಲಕ್ಸಿ ಎಸ್20 ಎಫ್ಇ 5ಜಿ ಫೋನ್ ಬೆಲೆ ತುಸು ತುಟ್ಟಿಯೇ ಎನ್ನಬಹುದು. 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಇರುವ ಈ 5ಜಿ ಸ್ಮಾರ್ಟ್‌ಫೋನ್ ಬೆಲೆ 55,999 ರೂಪಾಯಿ ಇದ್ದು, ಬಿಡುಗಡೆಯ ರಿಯಾಯ್ತಿಯಾಗಿ ಗ್ರಾಹಕರಿಗೆ ಇದು 47,999 ರೂಪಾಯಿಗೆ ಸಿಗಲಿದೆ. ಅಂದರೆ, ಅಂದಾಜು 8 ಸಾವಿರ ರೂಪಾಯಿವರೆಗೂ ಇನ್ಸಟೆಂಟ್ ಕ್ಯಾಶ್ ಬ್ಯಾಕ್ ಸಿಗಬಹುದು.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್20 ಎಫ್ಇ 5ಜಿ ಸ್ಮಾರ್ಟ್‌ಫೋನ್ 6.5 ಇಂಚ್ ಫುಲ್ ಎಚ್‌ಡಿ ಮತ್ತು ಅಮೋಎಲ್ಇಡಿ ಡಿಸ್‌ಪ್ಲೇ ಹೊಂದಿದೆ. ಐಪಿ68 ಧೂಳು ಮತ್ತು ನೀರು ನಿರೋಧಕ ವ್ಯವಸ್ಥೆಯನ್ನು ಒಳಗೊಂಡಿದೆ. ಈ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್20 ಎಫ್ಇ 5ಜಿ ಸ್ಮಾರ್ಟ್‌ಪೋನ್ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 865 ಆಧರಿತವಾಗಿದ್ದು, 8 ಜಿಬಿ ರ್ಯಾಮ್ ಮತ್ತು 128 ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಸ್ಟೋರೇಜ್ ಸಾಮರ್ಥ್ಯವನ್ನು ಮೈಕ್ರೋ ಎಸ್ ಕಾರ್ಡ್ ಮೂಲಕ 1 ಟಿಬಿವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.

ಬ್ಯಾಂಡ್, ಪ್ರೊಜೆಕ್ಟರ್ ಜತೆಗೆ ಎಂಐ 11 ಸೀರೀಸ್ ಫೋನ್‌ ಲಾಂಚ್

ಈ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್20 ಎಫ್ಇ 5ಜಿ ವೆರಿಯೆಂಟ್ ಸ್ಮಾರ್ಟ್‌ಪೋನ್ ಕೂಡ 4ಜಿ ಸ್ಮಾರ್ಟ್‌ಪೋನ್ ಹೊಂದಿರುವ ಕ್ಯಾಮೆರಾಗಳನ್ನು ಹೊಂದಿವೆ. ಈ 5ಜಿ ವೆರಿಯೆಂಟ್ ಫೋನ್ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳ ಸೆಟ್ ಅಪ್ ಇದೆ. ಈ ಪೈಕಿ 12 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಇದ್ದರೆ, ಎರಡನೇ ಕ್ಯಾಮೆರಾ ಅಂದರೆ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಕೂಡ 12 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ. ಇನ್ನು ಟೆಲಿಫೋಟೋ ಕ್ಯಾಮೆರಾ ಆಗಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ವಿಶೇಷ ಎಂದರೆ ಈ ಫ್ರಂಟ್‌ನಲ್ಲಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಕಂಪನಿ ಅಳವಡಿಸಿದೆ. ಹಾಗಾಗಿ ಸೆಲ್ಫಿ ಚಿತ್ರಗಳನ್ನು ಸಖತ್ ಆಗಿ ಕ್ಲಿಕ್ಕಿಸಬುಹದು.

ಸ್ಯಾಮ್ಸಂಗ್ ಭಾರತದಲ್ಲಿ ಬಿಡುಗಡೆ ಮಾಡಿರುವ ಈ ಗ್ಯಾಲಕ್ಸಿ ಎಸ್20 ಎಫ್ಇ 5ಜಿ ವೆರಿಯೆಂಟ್ ಫೋನ್‌ನಲ್ಲಿ 4,500 ಎಂಎಎಚ್ ಬ್ಯಾಟರಿ ನೀಡಲಾಗಿದ್ದು, ಇದು ವೈರ್‌ಲೆಸ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. 25 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೂ ಬೆಂಬಲ ನೀಡುತ್ತದೆ. 4ಜಿ ಮತ್ತು 5ಜಿ ಎರಡೂ ವೆರಿಯೆಂಟ್‌ಗಳು ವೈರ್‌ಲೆಸ್ ಪವರ್ ಷೇರ್ ಫೀಚರ್ ಅನ್ನು ಒಳಗೊಂಡಿವೆ.

ಇನ್ನು ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ ಈ ಗ್ಯಾಲಕ್ಸಿ ಎಸ್20 ಎಫ್ಇ 5ಜಿ ಸ್ಮಾರ್ಟ್‌ಫೋನ್ 5ಜಿ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುತ್ತದೆ.  ಈ ಫೋನ್, 4ಜಿ ವೋಎಲ್‌ಟಿಇ, ವೈಫೈ, ಬ್ಲೂಟೂಥ್ ವಿ5.0, ಜಿಪಿಎಸ್, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್ ಸಿ-ಪೋರ್ಟ್‌ಗಳನ್ನು ಹೊಂದಿದೆ.

ಕೊರೋನಾ ಕಾಡಿದ್ರೂ ಆನ್‌ಲೈನ್‌ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಭಾರೀ ಏರಿಕೆ

click me!