iPhone Production in India: ಭಾರತದಲ್ಲಿ ಐಫೋನ್ 13 ಉತ್ಪಾದನೆ ಪ್ರಾರಂಭಿಸಿದ ಆ್ಯಪಲ್!

By Suvarna News  |  First Published Dec 22, 2021, 11:50 AM IST

ಆ್ಯಪಲ್  ಚೆನ್ನೈ ಬಳಿಯ ತನ್ನ ಫಾಕ್ಸ್‌ಕಾನ್ ಪ್ಲ್ಯಾಂಟ್‌ನಲ್ಲಿ ಐಫೋನ್ 13  ಪ್ರಾಯೋಗಿಕ ಉತ್ಪಾದನೆಯನ್ನು ಪ್ರಾರಂಭಿಸಿದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.


Tech Desk: ಜಗತ್ತಿನ ಪ್ರತಷ್ಟಿತ ಟೆಕ್ ದೈತ್ಯ ಆಪಲ್ ಭಾರತದಲ್ಲಿ‌ ಆ್ಯಪಲ್ ಐಫೋನ್ 13 (iPhone 13)  ನ ಪ್ರಾಯೋಗಿಕ ಉತ್ಪಾದನೆಯನ್ನು ಪ್ರಾರಂಭಿಸಿದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಕಂಪನಿಯು ತನ್ನ ಎಲ್ಲಾ  ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಉತ್ಪಾದಿಸಲು ತಯಾರಿ ನಡೆಸುತ್ತಿರುವುದರಿಂದ, ಕಂಪನಿಯು ಚೆನ್ನೈ ಬಳಿಯ ತನ್ನ ಫಾಕ್ಸ್‌ಕಾನ್ ಪ್ಲ್ಯಾಂಟ್‌ನಲ್ಲಿ‌ (Foxconn plant) ಪ್ರಾಯೋಗಿಕ ಉತ್ಪಾದನೆಯನ್ನು (Trial Production) ಪ್ರಾರಂಭಿಸಿದೆ. 

ಫೆಬ್ರವರಿ ವೇಳೆಗೆ ದೇಶೀಯ ಮಾರುಕಟ್ಟೆ ಮತ್ತು ಜಾಗತಿಕ ರಫ್ತು ಎರಡಕ್ಕೂ ಭಾರತದಲ್ಲಿ ಐಫೋನ್ 13 ನ ವಾಣಿಜ್ಯ ಉತ್ಪಾದನೆಯನ್ನು ಆ್ಯಪಲ್ ಪ್ರಾರಂಭಿಸಲಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ  ಇಬ್ಬರು ಉದ್ಯಮದ ಎಕ್ಸಿಕ್ಯೂಟಿವ್‌ಗಳನ್ನು ಉಲ್ಲೇಖಿಸಿ ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

Tap to resize

Latest Videos

undefined

20-30 ಪ್ರತಿಶತ ಉತ್ಪನಗಳು ಭಾರತದಿಂದ ರಫ್ತು!

ಆಪಲ್ ಸೆಮಿಕಂಡಕ್ಟರ್ ಚಿಪ್‌ಗಳ (Semiconductor Chip) ಪೂರೈಕೆಯನ್ನು ಸಹ ಪಡೆದುಕೊಂಡಿದೆ ಮತ್ತು ಭಾರತದಲ್ಲಿ ಐಫೋನ್ ಉತ್ಪಾದನೆ ಮಾಡಲು ಕಂಪನಿಯ ವಿಸ್ತರಣಾ ಯೋಜನೆಗೆ ಇದು ಸಹಾಯ ಮಾಡಿದೆ ಎಂದು ವರದಿ ಹೇಳುತ್ತದೆ. ಭಾರತದಲ್ಲಿ ಐಫೋನ್ 13 ಉತ್ಪಾದನೆಯು  ಜಾಗತಿಕ ಮಾರುಕಟ್ಟೆಗಳಿಗೆ ಆ್ಯಪಲ್ ಉತ್ಪನ್ನಗಳನ್ನು ಪೂರೈಸಲು ಸಹಾಯ ಮಾಡುತ್ತದೆ. 

ಭಾರತದಲ್ಲಿ ಉತ್ಪಾದನೆಯಾಗುವ ಸುಮಾರು 20-30 ಪ್ರತಿಶತ ಉತ್ಪನಗಳನ್ನು ರಫ್ತು ಮಾಡಲಾಗುತ್ತದೆ ಎಂದು ಕಾರ್ಯನಿರ್ವಾಹಕರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಆ್ಯಪಲ್ ಮತ್ತು ಫಾಕ್ಸ್‌ಕಾನ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. 

ಈಗಾಗಲೇ  ಐಫೋನ್ 11 ಮತ್ತು ಐಫೋನ್ 12 ಉತ್ಪಾದಿಸುತ್ತಿರುವ ಆ್ಯಪಲ್!

ಆಪಲ್ ಭಾರತದಲ್ಲಿ ಐಫೋನ್ 13 ಉತ್ಪಾದನೆಯನ್ನು ತರಲು ಯೋಜನೆ ಜತೆಗೆ ತನ್ನ ಎಲ್ಲಾ ಐಫೋನ್‌ಗಳ ಸರಬರಾಜು ಸುಧಾರಿಸಿದೆ ಎಂದು ವರದಿ ಹೇಳಿದೆ. ಐಫೋನ್ 13 ಇತ್ತೀಚಿನ ಐಫೋನ್ 13 ಸರಣಿಯಲ್ಲಿ ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಫೋನ್ ಆಗಿದ್ದು ಆಪಲ್ ಭಾರತದಲ್ಲಿ ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ಅನ್ನು ಉತ್ಪಾದಿಸುವ ಯಾವುದೇ ಯೋಜನೆ ಇಲ್ಲ ಎಂದು ತಿಳಿದು ಬಂದಿದೆ.

ಆ್ಯಪಲ್ ಈಗಾಗಲೇ ಚೆನ್ನೈ  ಫಾಕ್ಸ್‌ಕಾನ್ ಪ್ಲ್ಯಾಂಟ್‌ನಲ್ಲಿ  ಐಫೋನ್ 11 ಮತ್ತು ಐಫೋನ್ 12 ಅನ್ನು ಉತ್ಪಾದಿಸುತ್ತದೆ. ಬೆಂಗಳೂರಿನ ವಿಸ್ಟ್ರಾನ್ ಪ್ಲ್ಯಾಂಟ್‌ನಲ್ಲಿ ಐಫೋನ್ SE ಅನ್ನು ಉತ್ಪಾದಿಸುತ್ತಿದೆ. ಆ್ಯಪಲ್ ಭಾರತದಲ್ಲಿ ಮಾರಾಟ ಮಾಡುವ ಸುಮಾರು 70 ಪ್ರತಿಶತದಷ್ಟು ಸ್ಮಾರ್ಟ್‌ಫೋನ್‌ಗಳನ್ನು ದೇಶದೊಳಗೆ ಉತ್ಪಾದಿಸಲಿದೆ ಎಂಬ ಸುಳಿವು ನೀಡಿದೆ ಎಂದು ವರದಿಯು  ಉಲ್ಲೇಖಿಸಿದೆ.

ನಿಮ್ಮ ಐಫೋನ್‌ನನ್ನು ಟ್ರ್ಯಾಕ್ ಮಾಡುವ ಆ್ಯಪ್‌ಗಳನ್ನು ಪತ್ತೆ ಮಾಡುವುದು ಹೇಗೆ?

ಪ್‌ಲ್‌ ಐಫೋನ್‌ ಟೆಕ್‌ ಜಗತ್ತಿನ ಪ್ರೀಮಿಯಂ ಫೋನ್‌ಗಳಲ್ಲೊಂದು. ಐಫೋನ್‌ ನೀಡುವ ಕೆಲವು ವಿಶಿಷ್ಟ ಫೀಚರ್‌ಗಳನ್ನು ಜನರು ಇಷ್ಟಪಡುತ್ತಾರೆ. ವಿಶೇಷವಾಗಿ  ಆ್ಯಪ್‌ಲ್ ತನ್ನ ಉತ್ಪನ್ನಗಳಲ್ಲಿ ನೀಡುವ ಸೆಕ್ಯೂರಿಟಿ ಫೀಚರ್‌ಗಾಗಿ ಹಲವರು ಐಫೋನ್‌ಗಳನ್ನು ಖರೀದಿಸುತ್ತಾರೆ.‌ ಹೀಗಾಗಿ ಆ್ಯಪ್‌ಲ್ ತನ್ನ ಅಪ್ಡೇಟ್‌ಗಳಲ್ಲಿ ಬಳಕೆದಾರರಿಗೆ ಹೊಸ ಫೀಚರ್ಸ್‌ ನೀಡುತ್ತಲೆ ಬಂದಿದೆ. ಈ ಪಟ್ಟಿಗೆ ಸೇರ್ಪಡೆ ಎಂಬಂತೆ  ಆ್ಯಪ್‌ಲ್  iOS 15  ಅಪ್ಡೇಟ್‌ನಲ್ಲಿ  ಅಪ್ಲಿಕೇಶನ್‌ ಪ್ರೈವೇಸಿ ರಿಪೋರ್ಟ್ (App Privacy Report) ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ.

ಜೂನ್‌ನಲ್ಲಿ ಕಂಪನಿಯ WWDC 2021 ಈವೆಂಟ್‌ನಲ್ಲಿ  iOS 15 ಅಪ್ಡೇಟ್ ಘೋಷಿಸಿದಾಗ ಆಪಲ್ ಬಹಿರಂಗಪಡಿಸಿದ ಅತ್ಯಂತ ಶಕ್ತಿಶಾಲಿ ಗೌಪ್ಯತೆ ವೈಶಿಷ್ಟ್ಯಗಳಲ್ಲಿ ಅಪ್ಲಿಕೇಶನ್‌ ಪ್ರೈವೇಸಿ ರಿಪೋರ್ಟ್ ಕೂಡ ಒಂದಾಗಿದೆ. ಈ ವೈಶಿಷ್ಟ್ಯವು ಬಳಕೆದಾರರು ತಮ್ಮ ಐಫೋನ್‌ನಲ್ಲಿ ತಮ್ಮ ಕ್ಯಾಮರಾ, ಮೈಕ್ರೊಫೋನ್, ಕಾಂಟ್ಯಾಕ್ಟ್ ಅಥವಾ ಅವರ ಲೊಕೆಶನ್ ಡೇಟಾವನ್ನು ಟ್ರ್ಯಾಕ್‌ ಮಾಡುವ ಅಪ್ಲಿಕೇಶನ್‌ಗಳ ಮೇಲೆ ಕಣ್ಣಿಡಲು ಅನುಮತಿಸುತ್ತದೆ. ಸಂಪೂರ್ಣ ಲೇಖನವನ್ನು ಇಲ್ಲಿ ಓದಿ

ಇದನ್ನೂ ಓದಿ:

1) WhatsApp Group Adminಗಳಿಗೆ ಹೆಚ್ಚಿನ ಅಧಿಕಾರ:‌ ಶೀಘ್ರದಲ್ಲೇ ಸದಸ್ಯರ ಮೆಸೇಜ್‌ ಡೀಲಿಟ್‌ ಮಾಡುವ ಸೌಲಭ್ಯ!

2) OnePlus 10Pro ಜನವರಿಯಲ್ಲಿ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಬಿಡುಗಡೆ ಖಚಿತ!

3) Card Stuck in ATM : ಎಟಿಎಂ ಯಂತ್ರದಲ್ಲಿ ಕಾರ್ಡ್ ಸಿಕ್ಕಿಬಿದ್ರೆ ಚಿಂತೆ ಬೇಡ,ಹೀಗೆ ಮಾಡಿ!

click me!