Flipkart Big Saving Days ಆ್ಯಪಲ್ ಐಫೋನ್ 13 ಮೇಲೆ ಭರ್ಜರಿ ಡಿಸ್ಕೌಂಟ್, 19,445 ರೂ ವಿನಾಯಿತಿ!

Published : Dec 19, 2021, 08:45 PM IST
Flipkart Big Saving Days ಆ್ಯಪಲ್ ಐಫೋನ್ 13 ಮೇಲೆ ಭರ್ಜರಿ ಡಿಸ್ಕೌಂಟ್, 19,445 ರೂ ವಿನಾಯಿತಿ!

ಸಾರಾಂಶ

ಡಿಸೆಂಬರ್ 21ರ ವರೆಗೆ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಆಫರ್ ಆ್ಯಪಲ್ ಐಫೋನ್ 13, ಐಫೋನ್ ಸೀರಿಸ್ ಸೇರಿದಂತೆ ಇತರ ಫೋನ್ ಮೇಲೆ ಡಿಸ್ಕೌಂಟ್ ಕೈಗೆಟುಕುವ ದರದಲ್ಲಿ ಖರೀದಿಸಿ ಆ್ಯಪಲ್ ಫೋನ್

ಬೆಂಗಳೂರು(ಡಿ.19):  ಆನ್‌ಲೈನ್ ಶಾಪಿಂಗ್(Online Shopping) ಮೂಲಕ ಸ್ಮಾರ್ಟ್‌ಫೋನ್, ಎಲೆಕ್ಟ್ರಾನಿಕ್ಸ್ ವಸ್ತುಗಳು, ಉಡುಪು ಸೇರಿದಂತೆ ಗೃಹ ಬಳಕೆ ವಸ್ತುಗಳ ಖರೀದಿಗೆ ಇದು ಸೂಕ್ತ ಸಮಯ. ಕಾರಣ ಕ್ರಿಸ್ಮಸ್(christmas) ಆಫರ್, ಹೊಸ ವರ್ಷದ(New Year 2022) ಡಿಸ್ಕೌಂಟ್ ಆಫರ್‌ಗಳು ಇದೀಗ ಲಭ್ಯವಿದೆ. ಇ ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್ ಇದೀಗ ಬಿಗ್ ಸೇವಿಂಗ್ ಡೇಸ್ ಆಫರ್(Flipkart Big Saving Days) ಘೋಷಿಸಿದೆ. ಈ ಆಫರ್ ಮೂಲಕ ಹೊಚ್ಚ ಹೊಸ ಆ್ಯಪಲ್ ಐಫೋನ್ 13(Apple iPhone 13) ಖರೀದಿ ಮೇಲೆ ಬರೋಬ್ಬರಿ 19,445 ರೂಪಾಯಿ ಡಿಸ್ಕೌಂಟ್(Discounts) ಸಿಗಲಿದೆ. 

ಐಫೋನ್ ಸೀರಿಸ್(iphone series) ಫೋನ್ ದುಬಾರಿ ಫೋನ್‌ಗಳು. ಆದರೆ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಆಫರ್ ಮೂಲಕ ಐಫೋನ್ ಫೋನ್ ಕೈಗೆಟುಕುವ ದರದಲ್ಲಿ ಖರೀದಿಸಲು ಸಾಧ್ಯವಿದೆ. ಆದರೆ ಈ ಆಫರ್ ಡಿಸೆಂಬರ್ 21ರ ವರೆಗೆ ಮಾತ್ರ ಲಭ್ಯವಿದೆ. ಇತ್ತೀಚೆಗೆ ಐಫೋನ್ 13 ಮೇಲೆ ನೇರವಾದ ಡಿಸ್ಕೌಂಟ್ ಆಫರ್ ಲಭ್ಯವಿಲ್ಲ. ಆದರೂ 19,445 ರೂಪಾಯಿ ಡಿಸ್ಕೌಂಟ್ ಮೂಲಕ ಐಫೋನ್ 13 ಖರೀದಿಗೆ ಅವಕಾಶವಿದೆ.

Flipkart Big Saving Days ಸೇಲ್‌ನಲ್ಲಿದೆ Realme ಮೊಬೈಲ್‌ಗಳ ಮೇಲೆ ಸೂಪರ್ ಆಫರ್!

ಆ್ಯಪಲ್ ಐಫೋನ್ 13 ಬೆಲೆ 79,900 ರೂಪಾಯಿ. ಇದನ್ನು 60,455 ರೂಪಾಯಿ ಬೆಲೆಗೆ ಖರೀದಿಸಲು ಅವಕಾಶವಿದೆ. ಆ್ಯಪಲ್ ಐಫೋನ್ 13 ಫೋನ್ ಖರೀದಿಯನ್ನು ಫ್ಲಿಪ್‌ಕಾರ್ಟ್ ಆ್ಯಕ್ಸಿಸ್ ಬ್ರ್ಯಾಂಡ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಶೇಕಡಾ 5 ರಷ್ಟು ಡಿಸ್ಕೌಂಟ್ ಸಿಗಲಿದೆ. ಅಂದರೆ  3,995 ರೂಪಾಯಿ ಇಲ್ಲಿ ಉಳಿತಾಯವಾಗಲಿದೆ. ಈ 5% ಡಿಸ್ಕೌಂಟ್‌ನಿಂದ ಐಫೋನ್ 13 ಬೆಲೆ 75,905 ರೂಪಾಯಿ ಆಗಲಿದೆ. ಇಷ್ಟಕ್ಕೆ ಮುಗಿಯಲಿಲ್ಲ. ಇನ್ನೊಂದು ವಿಧಾನದ ಮೂಲಕ ಮತ್ತೆ ಡಿಸ್ಕೌಂಟ್ ಪಡೆಯಬಹುದು.

ಹೊಸ ಐಫೋನ್ 13 ಖರೀದಿಸುವಾಗ ನೀವು ಹಳೇ ಫೋನ್ ಬದಲಾಯಿಸಿದರೆ 15,450 ರೂಪಾಯಿ ಡಿಸ್ಕೌಂಟ್ ಪಡೆಯಲಿದ್ದೀರಿ. ಇದೀಗ ಒಟ್ಟು 19,445 ರೂಪಾಯಿ ಡಿಸ್ಕೌಂಟ್ ಆಗಲಿದೆ. ಇದರಿಂದ 79,900 ರೂಪಾಯಿ ಐಫೋನ್ 13 ಬೆಲೆ  60,455 ರೂಪಾಯಿಗೆ ಸಿಗಲಿದೆ. ಆದರೆ ಯಾವ ಪೋನ್ ಎಕ್ಸ್‌ಚೇಂಜ್ ಮಾಡುತ್ತೀರಿ ಅನ್ನೋದರಲ್ಲಿ ಮೇಲೆ ಬೆಲೆ ಬದಲಾಗಲಿದೆ.

iphone 14 Features Leaked: 48MP ವೈಡ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ ಹೊಸ ಐಫೋನ್?

ಆ್ಯಪಲ್ ಐಫೋನ್ ಸೀರಿಸ್ ಫೋನ್ ಮೇಲೆ ನೇರವಾದ ಡಿಸ್ಕೌಂಟ್ ಲಭ್ಯವಿದೆ. ಐಫೋನ್ 12 ಮೇಲೆ  13,900 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಐಫೋನ್ 12 ಪ್ರೋ ಮೇಲೆ 14,150 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಐಫೋನ್ ಪ್ರೋ ಮ್ಯಾಕ್ಸ್ ಮೇಲೆ 14,250 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. Mi10 ಫೋನ್ ಎಕ್ಸ್‌ಚೇಂಜ್ ಮಾಡುತ್ತಿದ್ದರೆ 10,500 ರೂಪಾಯಿ ಮೌಲ್ಯ ಸಿಗಲಿದೆ. ಇನ್ನು ಸ್ಯಾಮ್ಸಂಗ್ ಗ್ಯಾಲೆಕ್ಸಿ S20  ಅಲ್ಟ್ರಾ ಫೋನ್ ಎಕ್ಸ್‌ಚೇಂಜ್ ಮೌಲ್ಯ ಸರಿಸುಮಾರು 14,350 ರೂಪಾಯಿ. 

Amazon Offers: iPhone 12 Pro ಖರೀದಿ ಮೇಲೆ ಭರ್ಜರಿ ರಿಯಾಯಿತಿ! ಈ ಆಫರ್‌ ಮಿಸ್‌ ಮಾಡ್ಕೋಬೇಡಿ!

ಇತ್ತೀಚೆಗೆ ಬಿಡುಗಡೆಯಾದ ಆ್ಯಪಲ್  5ಜಿ  ಸ್ಮಾರ್ಟ್‌ಫೋನ್ 6.1 ಇಂಚಿನ ಸೂಪರ್ ರೇಟಿನಾ XDR ಡಿಸ್‌ಪ್ಲೇ ಹೊಂದಿದೆ.  A15 ಬಯೋನಿಕ್ ಚಿಪ್‌ಸೆಟ್ ಹೊಂದಿದೆ. 2MP ಡ್ಯುಯೆಲ್ ರೇರ್ ಕ್ಯಾಮಾರ, ಫ್ರಂಟ್ ಕ್ಯಾಮಾರ 12MP ಹೊಂದಿದೆ. ಸ್ಟೋರೇಜ್‌ನಲ್ಲಿ 128 GB ವೇರಿಯೆಂಟ್ ಫೋನ್ ಡ್ಯುಯೆಲ್ ಸಿಮ್ ಹಾಗೂ ವಾಟರ್ ರೆಸಿಸ್ಟೆಂಟ್ ಹಾಗೂ iOS 15 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. 3240 mAh ಬ್ಯಾಟರಿ ಹೊಂದಿರುವ ಈ ಪೋನ್ ಸತತವಾಗಿ 18 ಗಂಟೆ ಮೂವಿ ಪ್ಲೇ ಆಗಲಿದೆ. ಐಫೋನ್ 13 ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿದೆ. ಈ ಆಫರ್ ಮೂಲಕ ಹೊಸ ವರ್ಷವನ್ನು ಹೊಸ ಫೋನ್‌ನೊಂದಿಗೆ ಆಚರಿಸಲು ಸಾಧ್ಯವಿದೆ.
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ