OnePlus 10Pro ಜನವರಿಯಲ್ಲಿ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಬಿಡುಗಡೆ ಖಚಿತ!

By Suvarna News  |  First Published Dec 21, 2021, 7:11 PM IST

* ಒನ್‌ಪ್ಲಸ್ 10 ಪ್ರೋ  ಜತೆಗೆ ಒನ್‌ಪ್ಲಸ್ 10 ಸ್ಮಾರ್ಟ್‌ಫೋನ್ ಕೂಡ ಬಿಡುಗಡೆಯಾಗಲಿದೆ
* ಈ ಎರಡೂ ಫೋನುಗಳಲ್ಲಿ ಸ್ನ್ಯಾಪ್‌ಡ್ರಾಗನ್ 8 ಜೆನ್ ಪ್ರೊಸೆಸರ್ ಇರಲಿದೆ ಎನ್ನಲಾಗುತ್ತಿದೆ
* ಫೋನ್ ಬಿಡುಗಡೆಯನ್ನು Weiboನಲ್ಲಿ ಖಚಿತಪಡಿಸಿದ ಕಂಪನಿಯ ಸಿಇಒ


ಚೀನಾ ಮೂಲದ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಬ್ರ್ಯಾಂಡ್ ಪೈಕಿ ಒಂದಾಗಿರುವ ಒನ್‌ಪ್ಲಸ್ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕವಲಯವನ್ನು ವಿಸ್ತರಿಸಿಕೊಂಡಿದೆ. ಭಾರತೀಯ ಮಾರುಕಟ್ಟೆಯೂ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಒನ್‌ಪ್ಲಸ್ ಸ್ಮಾರ್ಟ್‌ಫೋನುಗಳಿಗೆ ಬೇಡಿಕೆ ಇದೆ. ಹಾಗಾಗಿಯೇ ಕಂಪನಿ ಹೊಸ ಹೊಸ ಸ್ಮಾರ್ಟ್‌ಫೋನು ಲಾಂಚ್ ಮಾಡುತ್ತಲೇ ಇರುತ್ತದೆ. ಒನ್‌ಪ್ಲಸ್ 10 ಪ್ರೋ (OnePlus 10 Pro) ಸ್ಮಾರ್ಟ್‌ಫೋನ್ ಲಾಂಚ್ ಬಗ್ಗೆ ಸುಮಾರು ದಿನಗಳಿಂದಲೂ ಸುದ್ದಿಗಳಿದ್ದವು. ಇದೀಗ ಕಂಪನಿಯು ಈ ಫೋನ್ ಬಿಡುಗಡೆಯನ್ನು ಖಚಿತಪಡಿಸಿದೆ. ಒನ್‌ಪ್ಲಸ್ ಸಹ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಪೀಟ್ ಲಾವು (Pete Lau) ಅವರೇ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಹೊಸ ವರ್ಷದಲ್ಲಿ ಅಂದರೆ ಜನವರಿ ತಿಂಗಳಲ್ಲಿ ಒನ್‌ಪ್ಲಸ್ 10 ಪ್ರೋ ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ.  ಈ ಫೋನ್ ವಿಶೇಷತೆಗಳ ಬಗ್ಗೆ ಈಗಾಗಲ ಸಾಕಷ್ಟು ಮಾಹಿತಿಗಳು ಸೋರಿಕೆಯಾಗಿದ್ದು, ಬಳಕೆದಾರರಲ್ಲಿ ಕುತೂಹಲ ಕೂಡ ಇದೆ. ಕೆಲವು ಮೂಲಗಳ ಪ್ರಕಾರ, ಒನ್‌ಪ್ಲಸ್ 10 (OnePlus 10) ಜತೆಗೇ ಒನ್‌ಪ್ಲಸ್ 10 ಪ್ರೋ (OnePlus 10 Pro) ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ ಎನ್ನಲಾಗುತ್ತಿದೆ.

Honor X30 5G ಸ್ಮಾರ್ಟ್‌ಫೋನ್ ಲಾಂಚ್, ಬೆಲೆ ಎಷ್ಟು? 

Latest Videos

undefined

ಜನವರಿ ತಿಂಗಳಲ್ಲಿ ಬಿಡುಗಡೆಯಾಗಲಿರುವ  ಒನ್‌ಪ್ಲಸ್ 10 ಮತ್ತು ಒನ್‌ಪ್ಲಸ್ 10 ಪ್ರೋ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಪನಿಯು ಸ್ನ್ಯಾಪ್‌ಡ್ರಾಗನ್ 8 ಜೆನ್ ಪ್ರೊಸೆಸರ್ ಬಳಸಲಿದೆ ಎನ್ನಲಾಗುತ್ತಿದೆ. ಈ ಎರಡೂ ಸ್ಮಾರ್ಟ್‌ಫೋನುಗಳ ಮಧ್ಯೆ ಸಣ್ಣಪುಟ್ಟ ವ್ಯತ್ಯಾಸಗಳು ಇರಲಿವೆ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದಲೂ ಒನ್‌ಪ್ಲಸ್ 10 ಸೀರೀಸ್ ಸ್ಮಾರ್ಟ್‌ಫೋನುಗಳ ಲಾಂಚ್ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದವು ಮತ್ತು ಇದೀಗ ಕಂಪನಿಯೇ ಬಿಡುಗಡೆಯನ್ನು ಖಚಿತಪಡಿಸಿದೆ. 

ಚೀನಾದ ಸಾಮಾಜಿಕ ಜಾತಣಾವಾಗಿರುವ Weiboನಲ್ಲಿ ಪೀಟ್ ಲಾವು ಅವರು ಜನವರಿಯಲ್ಲಿ ಒನ್ ಪ್ಲಸ್ 10 ಪ್ರೋ ಸ್ಮಾರ್ಟ್‌ಫೋನ್ ಲಾಂಚ್ ಆಗುವ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಆದರೆ, ಜನವರಿ ತಿಂಗಳಲ್ಲಿ ಯಾವ ದಿನದಂದು ಈ ಫೋನ್ ಲಾಂಚ್ ಆಗಲಿದೆ ಎಂಬ ಮಾಹಿತಿಯನ್ನು ಮಾತ್ರ ಖಚಿತಪಡಿಸಿಲ್ಲ. ಇದರ ಹೊರತಾಗಿಯೂ ಜನವರಿ 5ರಂದು ಲಾಸ್ ವೆಗಾಸ್‌ (Las Vegas)ನಲ್ಲಿ ಲಾಂಚಿಂಗ್ ಇವೆಂಟ್ ನಡೆಯಲಿದೆ ಎನ್ನಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲೇ ಒನ್ ಪ್ಲಸ್ 10 ಸೀರೀಸ್ ಫೋನುಗಳ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ಜನವರಿ ತಿಂಗಳಲ್ಲೇ ಈ ಫೋನುಗಳ ಬಿಡುಗೆಯಾದರೂ ಭಾರತವೂ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ 2022ರ ಮೊದಲ ತ್ರೈಮಾಸಿಕದಲ್ಲಿ ಬರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. 

ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಒನ್ ಪ್ಲಸ್ 10 ಪ್ರೋ ಸ್ಮಾರ್ಟ್‌ಫೋನ್‌ಗಳ ಬಗೆಗಿನ ಒಂದಿಷ್ಟು ಮಾಹಿತಿಗಳು ಈಗಾಗಲೇ ಸೋರಿಕೆಯಾಗಿದ್ದು, ಹಲವು ವಿಶೇಷತೆಗಳನ್ನು ನಿರೀಕ್ಷಿಸಬಹುದಾಗಿದೆ. ಈ ಪೈಕಿ ಒನ್‌ಪ್ಲಸ್ 10 ಸ್ಮಾರ್ಟ್‌ಫೋನ್ ಲಾರ್ಜ್ ಸ್ಕ್ವೈರ್ ಆಕಾರದ ಕ್ಯಾಮೆರಾವನ್ನು ಹಿಂಬದಿಯಲ್ಲಿ ಹೊಂದಿರುವ ಸಾಧ್ಯತೆ ಇದೆ. ಒನ್ ಪ್ಲಸ್ 9 ಸ್ಮಾರ್ಟ್‌ಫೋನ್‌ನಲ್ಲಿ ಬಳಕೆಯಾಗಿದ್ದ ಝೂಮ್ ಫೀಚರ್ಸ್‌ಗಳೇ ಈ ಹೊಸ ಸ್ಮಾರ್ಟ್‌ಫೋನ್‌ನಲ್ಲೂ ಮುಂದುವರಿಯುವ ಸಾಧ್ಯತೆಗಳಿವೆ. ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಸಾಧ್ಯತೆ ಇದೆ.

Tesla CEO Elon Musk ಈ ವರ್ಷ ಎಷ್ಟು ತೆರಿಗೆ ಕಟ್ಟಬಹುದು? ಗೆಸ್ ಮಾಡಿ, ಈ ಸುದ್ದಿ ಓದಿ!

ಈ ಒನ್ ಪ್ಲಸ್ 10 ಪ್ರೋ (OnePlus 10 Pro) ಸ್ಮಾರ್ಟ್‌ಫೋನ್ 6.7 ಕ್ಯೂಎಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿರಲಿದೆ. 12 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್‌ನೊಂದಿಗೆ ಈ ಫೋನು ಬರಬಹುದು. ಕಂಪನಿಯು 500 mAh  ಬ್ಯಾಟರಿಯನ್ನು ಅಳವಡಿಸಲಿದೆ ಎನ್ನಲಾಗುತ್ತಿದೆ. ಈ ಫೋನ್ ಆಂಡ್ರಾಯ್ಡ್ OxygenOS 12 ಒಎಸ್ ಆಧರಿತವಾಗಿರಲಿದೆ. ಈ ಫೋನು ಬಗ್ಗೆ ಕಂಪನಿ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಹಾಗಾಗಿ, ಬಳಕೆದಾರರಲ್ಲಿ ಈ ಪ್ರೀಮಿಯಂ ಫೋನು ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ.

click me!