Year End :2022ರಲ್ಲಿ ಹೆಚ್ಚು ಸರ್ಚ್ ಆದ ವಿಷಯಗಳೇನು?

Published : Dec 27, 2022, 04:14 PM IST
Year End :2022ರಲ್ಲಿ ಹೆಚ್ಚು ಸರ್ಚ್ ಆದ ವಿಷಯಗಳೇನು?

ಸಾರಾಂಶ

ಹೊಸ ವರ್ಷ ಬರ್ತಿದ್ದಂತೆ ಪ್ರಸ್ತುತ ವರ್ಷದಲ್ಲಿ ಏನೆಲ್ಲೆ ಆಯ್ತು? ಜನರು ಏನೆಲ್ಲ ಮಾಡಿದ್ರು, ಎಷ್ಟು ಸಾವಾಯ್ತು, ಯಾವ ರೋಗ ಬಂದಿತ್ತು ಹೀಗೆ ಅನೇಕ ಸಂಗತಿಯ ಮಾಹಿತಿ ನೀಡಲಾಗುತ್ತದೆ. ಹಾಗೆಯೇ ಗೂಗಲ್ ನಲ್ಲಿ ಹೆಚ್ಚು ಹುಡುಕಿದ ವಿಷ್ಯ ಯಾವುದು ಎಂಬ ಮಾಹಿತಿ ಕೂಡ ನಮಗೆ ಸಿಗುತ್ತದೆ.  

2022ರ ಕೊನೆಯಲ್ಲಿ ನಾವಿದ್ದೇವೆ. ಈ ವರ್ಷ ಸಾಕಷ್ಟು ಆಗುಹೋಗುಗಳು ನಮ್ಮ ಜೀವನದಲ್ಲಿ ಸಂಭವಿಸಿವೆ. ಡಿಜಿಟಲ್ ಲೈಫ್ ಸ್ಟೈಲ್ ಗೆ ಈ ವರ್ಷ ಹೆಚ್ಚು ಆದ್ಯತೆ ಸಿಕ್ಕಿದೆ. ಪ್ರತಿ ದಿನ ನಾವು ನೀವೆಲ್ಲ ಇಂಟರ್ನೆಟ್ ಬಳಕೆ ಮಾಡ್ತೇವೆ. ಯಾವುದೇ ಸಮಸ್ಯೆ ಬರಲಿ, ಆರೋಗ್ಯ ಹದಗೆಡಲಿ, ಯಾವ ವಿಷ್ಯದ ಬಗ್ಗೆ ಹೆಚ್ಚಿನ ಜ್ಞಾನ ಬೇಕು ಎಂದಾದ್ರೂ ನಾವು ಹೋಗೋದು ಇಂಟರ್ನೆಟ್ ಬಳಿ. ಪ್ರತಿ ದಿನ ಲಕ್ಷಾಂತರ ವಿಷ್ಯದ ಬಗ್ಗೆ ಜನರು ಇಂಟರ್ನೆಟ್ ನಲ್ಲಿ ಹುಡುಕಾಟ ನಡೆಸ್ತಾರೆ. 2022ರಲ್ಲಿ ಅಂತರ್ಜಾಲದಲ್ಲಿ ಆರೋಗ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಈ ವರ್ಷ ಗೂಗಲ್ ನಲ್ಲಿ ಹೆಚ್ಚು ಸರ್ಜ್ ಆಗಿವೆ.  ಇದರಲ್ಲಿ ಕೋವಿವ್ ಅಗ್ರಸ್ಥಾನದಲ್ಲಿದೆ. ಜನರು ಗೂಗಲ್ ನಲ್ಲಿ ಕೋವಿನ್  ಬಗ್ಗೆ ಹೆಚ್ಚಿನ ಮಾಹಿತಿ ಹುಡುಕಿದ್ದಾರೆ. 2022 ರಲ್ಲಿ ಇಂಟರ್ನೆಟ್‌ನಲ್ಲಿ ಪ್ರಾಬಲ್ಯ ಹೊಂದಿದ್ದ  5 ಆರೋಗ್ಯ ಪ್ರಶ್ನೆಗಳ ಬಗ್ಗೆ ನಾವಿಂದು ಹೇಳ್ತೆವೆ. 

1. ಲಸಿಕೆ (Vaccination) ಪ್ರಮಾಣಪತ್ರವನ್ನು ಡೌನ್‌ಲೋಡ್ (Download ) ಮಾಡುವುದು ಹೇಗೆ ? :  ಕೊರೊನಾ ಲಸಿಕೆ ಪಡೆದ ನಂತರ  ಎಲ್ಲ ಕಡೆ ಕೋವಿಡ್ ಲಸಿಕೆ ಪ್ರಮಾಣಪತ್ರಕ್ಕೆ ಬೇಡಿಕೆ ಇತ್ತು. ಎಲ್ಲ ಕಡೆ ಪ್ರಮಾಣ ಪತ್ರ ತೋರಿಸುವಂತೆ ಕೇಳಲಾಗ್ತಿತ್ತು. ಹಾಗಾಗಿ ಜನರು ಲಸಿಕೆ ಪಡೆದ ನಂತ್ರ ಅದರ ಸರ್ಟಿಫಿಕೇಟ್ ಡೌನ್ ಲೋಡ್ ಮಾಡಲು ಮುಂದಾಗಿದ್ದರು. ಅಂತರ್ಜಾಲದಲ್ಲಿ ಲಸಿಕೆ ಸರ್ಟಿಫಿಕೇಟ್ ಹೇಗೆ ಡೌನ್ಲೋಡ್ ಮಾಡೋದು ಎಂಬ ಪ್ರಶ್ನೆಗಳನ್ನು ಜನರು ಹೆಚ್ಚಾಗಿ ಕೇಳಿದ್ದಾರೆ. 2022 ರಲ್ಲಿ  ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂದು ಹೆಚ್ಚು ಹುಡುಕಲಾಗಿದೆ.  ದೇಶೀಯ ಕಂಪನಿಗಳ ಲಸಿಕೆಗಳ ಹೆಸರುಗಳನ್ನು ಸಹ ಇಂಟರ್ನೆಟ್‌ನಲ್ಲಿ ಸಾಕಷ್ಟು ಹುಡುಕಲಾಗಿದೆ.

2. ಬಾಡಿಗೆ ತಾಯ್ತನ ( ಸರೋಗೆನ್ಸಿ) ಎಂದರೇನು? : 2022 ರಲ್ಲಿ ನಟಿಯರು ಬಾಡಿಗೆ ತಾಯ್ತನ (Surrogacy) ದಿಂದ ಮಕ್ಕಳನ್ನು ಪಡೆದಿದ್ದಾರೆ. ಅದ್ರಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಸೇರಿದ್ದಾರೆ. ಪ್ರಿಯಾಂಕ ಬಾಡಿಗೆ ತಾಯ್ತನದ ಸಹಾಯದಿಂದ ತಾಯಿಯಾದ ನಂತ್ರ ಸೌತ್ ನಟಿ ನಯನತಾರಾ ಕೂಡ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದಾದ ನಂತ್ರ ಬಾಡಿಗೆ ತಾಯ್ತನದ ಬಗ್ಗೆ ಅನೇಕರು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ. ವಾಟ್ ಈಸ್ ಸರೊಗೆನ್ಸಿ ಎಂದು ಇಂಟರ್‌ನೆಟ್‌ನಲ್ಲಿ ತೀವ್ರವಾಗಿ ಹುಡುಕಲಾಗಿದೆ. ಗರ್ಭಿಣಿಯಾಗಲು ಸಾಧ್ಯವಾಗದ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಗಳನ್ನು ಹೊಂದಿರುವ ಮಹಿಳೆಯರಿಗೆ ಬಾಡಿಗೆ ತಾಯ್ತನ ತುಂಬಾ ಸಹಾಯಕಾರಿ.

ಮಗಳ ಮಗುವನ್ನೇ ಹೆತ್ತುಕೊಟ್ಟ ತಾಯಿ..! ಇದು ಭಾರತದ ಮೊದಲ ಬಾಡಿಗೆ ತಾಯ್ತನದ ಕಥೆ

3. ಸಮಂತಾ (Samantha) ರುತ್ ಅವರ ಮಯೋಸಿಟಿಸ್ : ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರ ಖಾಯಿಲೆ ಬಗ್ಗೆ ಗೂಗಲ್ ನಲ್ಲಿ ಹೆಚ್ಚು ಹುಡುಕಲಾಗಿದೆ. ಸಮಂತಾ, ತಮಗೆ ಮಯೋಸಿಟಿಸ್ ಇದೆ ಎಂದು ಹೇಳಿದ್ದರು. ಇದಾದ ನಂತರ ಜನರು  ಇಂಟರ್‌ನೆಟ್‌ನಲ್ಲಿ ಮಯೋಸಿಟಿಸ್ ಎಂದರೇನು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ನಡೆಸಿದ್ದಾರೆ. ಇದು ದೇಹದ ಸ್ನಾಯುಗಳನ್ನು ತುಂಬಾ ದುರ್ಬಲಗೊಳಿಸುತ್ತದೆ. ನೋವು ವಿಪರೀತವಾಗಿರುತ್ತದೆ.  

4. ಚಿಯಾ ಬೀಜ ಮತ್ತು ಅಗಸೆ ಬೀಜ : 2022 ರಲ್ಲಿ  ಚಿಯಾ ಬೀಜದ ಬಗ್ಗೆಯೂ ಹೆಚ್ಚು ಹುಡುಕಿದ್ದಾರೆ. ಇದನ್ನು ಸೂಪರ್‌ಫುಡ್ ಎಂದು ಪರಿಗಣಿಸಲಾಗುತ್ತದೆ. ಚಿಯಾ ಬೀಜಗಳು ಒಂಬತ್ತು ವಿಧದ ಅಮೈನೋ ಆಮ್ಲಗಳನ್ನು ಹೊಂದಿರುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಬಹಳಷ್ಟು ಕಡಿಮೆ ಮಾಡುತ್ತದೆ. ಇದಲ್ಲದೆ ಜನರು ಅಗಸೆ ಬೀಜದ ಬಗ್ಗೆಯೂ ಇಂಟರ್ನೆಟ್ ನಲ್ಲಿ ಮಾಹಿತಿ ಹುಡುಕಿದ್ದಾರೆ. 

2023ನೇ ಸಾಲಿನಲ್ಲಿ ತೆರಿಗೆ ಉಳಿತಾಯದ ಪ್ಲ್ಯಾನ್ ಹೇಗಿರಬೇಕು? ಯಾವ ಯೋಜನೆಯಲ್ಲಿ ಹೂಡಿಕೆ ಮಾಡ್ಬಹುದು?

5. ಗರ್ಭಾವಸ್ಥೆ ಬಗ್ಗೆ ಪ್ರಶ್ನೆ : ಗರ್ಭಾವಸ್ಥೆಯಲ್ಲಿ ಹೊಟ್ಟೆಗೆ ಸಂಬಂಧಿಸಿದ ಮಲಬದ್ಧತೆ, ಅತಿಸಾರದಂತಹ ಸಮಸ್ಯೆಗಳು ಸಾಮಾನ್ಯ.  ಅಂತರ್ಜಾಲದಲ್ಲಿ ಇಂತಹ ಪ್ರಶ್ನೆಗಳನ್ನು ಕೇಳಲಾಗಿದೆ. ಇದು ಐದನೇ ಸ್ಥಾನದಲ್ಲಿದೆ. ಹವ್ ಟು ಸ್ಟಾಪ್ ಮೋಷನ್ ಇನ್ ಪ್ರೆಗ್ನೆನ್ಸಿ ಎಂದು ಪ್ರಶ್ನೆ ಕೇಳಲಾಗಿದೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಯರ್ ಆಂಡ್ ಬ್ಯಾಕ್ ಟು ಬ್ಯಾಕ್ ಪಾರ್ಟಿ ಮೋಜಿನ ಜೊತೆ ಡಬಲ್ ನೋವು ನೀಡುತ್ತೆ
ದಿನಕ್ಕೆರಡೇ ಸಿಗರೇಟ್ ಸೇದೋದು ಮಗಾ, ಇಷ್ಟು ಧಮ್ಮೆಳೆದ್ರೆನಾಗುತ್ತೆ ಅನ್ನೋರಿಗೆ ಉತ್ತರ ಇಲ್ಲಿದೆ