ಹಾಲಿವುಡ್ ಸಿನಿಮಾ ನೋಡಿದ್ರೂ ಸ್ಯಾಂಡಲ್‌ವುಡ್‌ ಸ್ಟಾರ್‌ಗೆ ಬಹುಪರಾಕ್.. ಯದುವೀರ್ ಒಡೆಯರ್ ನೆಚ್ಚಿನ ನಟ ಯಾರು ಗೊತ್ತೇ?

Published : Oct 22, 2026, 06:06 PM IST
Yaduveer Wadiyar favorite actor

ಸಾರಾಂಶ

Yaduveer Krishnadatta Chamaraja Wadiyar: ಮಸಾಲೆ ದೋಸೆ ಬದಲು ಸೆಟ್ ದೋಸೆ ಪ್ರೇಮಿ, ಜಪಾನೀಸ್ ಅಡುಗೆಯ ಅಭಿಮಾನಿ ಹಾಗೂ ಸ್ಯಾಂಡಲ್‌ವುಡ್‌ನ 'ಆ' ಪ್ರತಿಭಾವಂತ ನಟನ ದೊಡ್ಡ ಅಭಿಮಾನಿ! ಹೌದು, ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಅವರ ವೈಯಕ್ತಿಕ ಬದುಕಿನ ಅತಿ ಅಪರೂಪದ ಹಾಗೂ ಕುತೂಹಲಕಾರಿ ಇಷ್ಟ-ಕಷ್ಟಗಳು ಇಲ್ಲಿವೆ ನೋಡಿ.

ಮೈಸೂರು ರಾಜವಂಶಸ್ಥರು ಹಾಗೂ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ರಾಜಕೀಯ ಮತ್ತು ರಾಜಮನೆತನದ ಬದುಕಿನ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ, ಅವರ ವೈಯಕ್ತಿಕ ಜೀವನದ ಇಷ್ಟಗಳು, ಮೆಚ್ಚಿನ ಹವ್ಯಾಸಗಳು ಹೇಗಿವೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಸದಾ ಇರುತ್ತದೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಮ್ಮ ಮನದಾಳದ ಇಷ್ಟ-ಕಷ್ಟಗಳನ್ನು ಮುಕ್ತವಾಗಿ ಹಂಚಿಕೊಂಡಿರುವ ಯದುವೀರ್, ಒಡವೆ-ವಸ್ತ್ರಗಳಾಚೆಗಿನ ತಮ್ಮ ಸರಳ ಹಾಗೂ ವಿಭಿನ್ನ ಲೋಕವನ್ನು ತೆರೆದಿಟ್ಟಿದ್ದಾರೆ.

ಯಾವ ಆಹಾರ, ಸಿನಿಮಾ ಇಷ್ಟ?

ಸಾಮಾನ್ಯವಾಗಿ ಎಲ್ಲರಿಗೂ ಮೈಸೂರು ಮಸಾಲೆ ದೋಸೆ ಎಂದರೆ ಅಚ್ಚುಮೆಚ್ಚು. ಆದರೆ, ಯದುವೀರ್ ಅವರಿಗೆ ಮಸಾಲೆ ದೋಸೆಗಿಂತ 'ಸೆಟ್ ದೋಸೆ' ಎಂದರೆ ಹೆಚ್ಚು ಇಷ್ಟವಂತೆ. ಇನ್ನು ಆಹಾರ ಪದ್ಧತಿಯ ವಿಚಾರಕ್ಕೆ ಬಂದರೆ, ದಕ್ಷಿಣ ಭಾರತೀಯ ಅಡುಗೆಗಳ ಜೊತೆಗೆ ಅವರಿಗೆ ಜಪಾನೀಸ್ ಅಡುಗೆಗಳು ಬಹಳ ಇಷ್ಟ ಎಂದು ಹೇಳಿದ್ದಾರೆ. ಸಿನಿಮಾದ ವಿಷಯ ಬಂದಾಗ, ಕಾದಂಬರಿ ಆಧಾರಿತ ಇಂಗ್ಲಿಷ್‌ನ 'ಟೆಂಕರ್ ಟೇಲರ್ ಸೋಲ್ಜರ್ ಸ್ಪೈ' (Tinker Tailor Soldier Spy) ಎಂಬ ಸ್ಪೈ ಥ್ರಿಲ್ಲರ್ ಸಿನಿಮಾ ತಮ್ಮ ಆಲ್-ಟೈಮ್ ಫೇವರಿಟ್ ಎಂದಿದ್ದಾರೆ.

ಇವರ ನಟನೆಗೆ ಮೆಚ್ಚುಗೆ

ಸ್ಯಾಂಡಲ್‌ವುಡ್‌ನ ನೆಚ್ಚಿನ ನಟನ ಕುರಿತು ಮಾತನಾಡಿದ ಅವರು, "ಕನ್ನಡದಲ್ಲಿ ರಿಷಬ್ ಶೆಟ್ಟಿ ಅವರ ಸಿನಿಮಾಗಳು ನನಗೆ ಬಹಳ ಇಷ್ಟ. ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತಾ, ನಮ್ಮ ಪಾರಂಪರಿಕ ಮೌಲ್ಯಗಳನ್ನು ರಕ್ಷಿಸಿ ಪ್ರದರ್ಶಿಸುವ ದೃಷ್ಟಿಯಲ್ಲಿ ಅವರು ಅತ್ಯುತ್ತಮ ಚಿತ್ರಗಳನ್ನು ಮಾಡುತ್ತಿದ್ದಾರೆ" ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಯಾವ ಪುಸ್ತಕ, ಕ್ರೀಡೆ ಇಷ್ಟ?

ಯದುವೀರ್ ಅವರಿಗೆ ಓದುವುದೆಂದರೆ ಅಚ್ಚುಮೆಚ್ಚು. ವಿಶೇಷವೆಂದರೆ, ವಿಮಾನಯಾನ ಅಥವಾ ಪ್ರಯಾಣದ ವೇಳೆಯೂ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಬಳಸುವ ಬದಲು, ಭೌತಿಕ ಪುಸ್ತಕಗಳನ್ನೇ (Physical Books) ಕೈಯಲ್ಲಿ ಹಿಡಿದು ಓದುವ ಹವ್ಯಾಸವನ್ನು ಇಂದಿಗೂ ರೂಢಿಸಿಕೊಂಡಿದ್ದಾರೆ. ಇನ್ನು ಕ್ರೀಡಾ ಲೋಕದಲ್ಲಿ ಇವರಿಗೆ ಬಾಸ್ಕೆಟ್‌ಬಾಲ್ ಹಾಗೂ 'ಫಾರ್ಮುಲಾ 1' (Formula 1) ರೇಸಿಂಗ್ ವೀಕ್ಷಿಸುವುದು ಅಂದರೆ ತುಂಬಾ ಇಷ್ಟವಂತೆ.

ಮೈಸೂರಿನ ಪ್ರಕೃತಿ ಪ್ರೇಮಿ

ಹೃದಯಸ್ಪರ್ಶಿ ವಿಷಯವೆಂದರೆ, ಇಡೀ ಮೈಸೂರು ನಗರದಲ್ಲಿ ಅವರಿಗೆ ಅತಿ ಹೆಚ್ಚು ಇಷ್ಟವಾದ ಜಾಗಗಳು ಯಾವುವು ಎಂಬ ಪ್ರಶ್ನೆಗೆ, ಅವರು ರಾಜಮನೆತನದ ಅರಮನೆಗಳ ಹೆಸರನ್ನು ಹೇಳದೆ, ಮೈಸೂರಿನ ನೈಸರ್ಗಿಕ ಪರಿಸರವನ್ನು ನೆರೆದಿದ್ದಾರೆ. ಕುಕ್ಕರಹಳ್ಳಿ ಕೆರೆ, ಲಿಂಗಾಂಬುಧಿ ಕೆರೆ ಹಾಗೂ ದೇವನೂರು ಕೆರೆಗಳ ಸುತ್ತಮುತ್ತಲಿನ ಹಸಿರು ವಾತಾವರಣ ಮತ್ತು ಪ್ರಕೃತಿಯ ಮಡಿಲು ತಮಗೆ ಅತ್ಯಂತ ನೆಮ್ಮದಿ ನೀಡುವ ತಾಣಗಳು ಎಂದು ತಿಳಿಸುವ ಮೂಲಕ ತಮ್ಮೊಳಗಿನ ಪ್ರಕೃತಿ ಪ್ರೇಮವನ್ನು ಹೊರಹಾಕಿದ್ದಾರೆ. ಈ ಸರಳತೆಯ ಮಾತುಗಳು ಸದ್ಯ ಎಲ್ಲರ ಗಮನ ಸೆಳೆದಿವೆ.

ಅಮೆರಿಕದಲ್ಲಿ ವಿದ್ಯಾಭ್ಯಾಸ

ಯದುವೀರ್ ಒಡೆಯರ್ ಅವರು ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ (Boston University) ಅರ್ಥಶಾಸ್ತ್ರ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಉನ್ನತ ಶಿಕ್ಷಣ ಪಡೆದವರು. ವಿದೇಶದಲ್ಲಿ ಅಷ್ಟು ಆಧುನಿಕ ಶಿಕ್ಷಣ ಪಡೆದು ಬಂದಿದ್ದರೂ, ಅವರಲ್ಲಿನ ಅಪ್ಪಟ ಭಾರತೀಯತೆ ಮತ್ತು ದೇಸಿ ಸಂಸ್ಕೃತಿಯ ಮೇಲಿನ ಗೌರವ ಕಿಂಚಿತ್ತೂ ಕಮ್ಮಿಯಾಗಿಲ್ಲ ಎಂಬುದಕ್ಕೆ ಅವರ ಈ ಸರಳ ಇಷ್ಟಗಳೇ ಸಾಕ್ಷಿ. ಜಪಾನೀಸ್ ಫುಡ್ ಇಷ್ಟಪಟ್ಟರೂ, ಮಸಾಲೆ ದೋಸೆ ಬದಲು 'ಸೆಟ್ ದೋಸೆ' ಎನ್ನುವ ಅವರ ದೇಶಿ ರುಚಿಯ ಒಲವು ಇದಕ್ಕೆ ಉತ್ತಮ ಉದಾಹರಣೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬ್ರಷ್, ಟೂತ್‌ಪೇಸ್ಟ್‌ನಿಂದ ಉಜ್ಜಬೇಕಿಲ್ಲ! ವಾಷಿಂಗ್ ಮಷಿನ್‌ನಲ್ಲೇ ಶೂಗಳನ್ನು ಹೀಗೆ ಸ್ವಚ್ಛಗೊಳಿಸಿ
Resuse Egg Shell : ಮೊಟ್ಟೆ ತಿಂದು ಸಿಪ್ಪೆ ಎಸೆಯಬೇಡಿ, ಕಸದಿಂದ ರಸ ತೆಗೆಯುವ ವಿಧಾನ ಇಲ್ಲಿದೆ