ಅನ್ನ ಮಿಕ್ಕಿಬಿಡ್ತೆಂದು ಚಿಂತೆನಾ? ಚಿತ್ರಾನ್ನ ಬಿಟ್ಟಾಕಿ- ಟೇಸ್ಟಿ ಟೇಸ್ಟಿ ದೋಸೆ ಹೀಗೆ ಮಾಡಿ ನೋಡಿ

Published : Aug 30, 2026, 05:16 PM IST
Rice Dosa

ಸಾರಾಂಶ

ಸಾಮಾನ್ಯವಾಗಿ ಮನೆಗಳಲ್ಲಿ ಮಿಕ್ಕಿದ ಅನ್ನವನ್ನು ಏನು ಮಾಡುವುದು ಎಂಬ ಚಿಂತೆ ಇರುತ್ತದೆ. ಚಿತ್ರಾನ್ನದ ಬದಲು, ಮಿಕ್ಕಿದ ಅನ್ನ, ರವೆ ಮತ್ತು ಮೊಸರನ್ನು ಬಳಸಿ ರುಚಿಕರವಾದ ಮತ್ತು ಸುಲಭವಾದ ದೋಸೆಯನ್ನು ಹೇಗೆ ತಯಾರಿಸಬಹುದು ಎಂಬುದನ್ನು ಈ ಲೇಖನ ವಿವರಿಸುತ್ತದೆ.

ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ಅನ್ನ ಮಿಕ್ಕುವುದು ಸಾಮಾನ್ಯ. ದಿನನಿತ್ಯವೂ ಅದೇ ಅಳತೆಯ ಅಕ್ಕಿ ಹಾಕಿ ಅನ್ನ ಮಾಡಿದರೂ, ಮನೆಯವರು ನಿತ್ಯಕ್ಕಿಂತ ಕಡಿಮೆ ಊಟ ಮಾಡಿದರೆ, ಅಥವಾ ಅಕ್ಕಿಯ ಬದಲಾವಣೆಯಿಂದಲೋ, ಅನ್ನ ಕಡಿಮೆಯಾಗಿಬಿಟ್ಟರೆ ಎಂದು ಸ್ವಲ್ಪ ಅಕ್ಕಿ ಹೆಚ್ಚು ಹಾಕಿದ್ದರಿಂದಲೋ, ಯಾರಾದರೂ ಮನೆಗೆ ಬರುವವರಿದ್ದಾರೆ ಎಂದು ಅನ್ನ ಹೆಚ್ಚು ಮಾಡಿದ್ದರೋ... ಹೀಗೆ ಕಾರಣ ಏನೇ ಇರಲಿ, ಕೆಲವು ಸಲ ಅನ್ನ ಮಿಕ್ಕುವುದನ್ನು ಮಾತ್ರ ತಪ್ಪಿಸಲು ಸಾಧ್ಯವೇ ಇಲ್ಲ!

ಚಿತ್ರಾನ್ನ ಬಿಟ್ಟಾಕಿ

ಹೀಗೆ ಮಿಕ್ಕಿದ ಅನ್ನವನ್ನು ಫ್ರಿಡ್ಜ್​ನಲ್ಲಿ ಇಟ್ಟು ಮರುದಿನ ತಿನ್ನುವವರು ಇದ್ದಾರೆ. ಆದರೆ ಇದು ಆರೋಗ್ಯಕ್ಕೆ ಬಹಳ ಅಪಾಯಕಾರಿ ಎನ್ನುವುದು ಇದಾಗಲೇ ಸಾಬೀತಾಗಿದೆ. ಇದೇಕಾರಣಕ್ಕೆ ಮರುದಿನ ಹಲವರು ಚಿತ್ರಾನ್ನ ಮಾಡಿ ತಿನ್ನುತ್ತಾರೆ. ಚಿತ್ರಾನ್ನದಲ್ಲಿಯೂ ಬೇರೆ ಬೇರೆ ವೆರೈಟಿಗಳನ್ನು ಟ್ರೈ ಮಾಡುವವರೂ ಕಮ್ಮಿಯೇನಿಲ್ಲ. ಕೆಲವರು ಅಕ್ಕಿಯ ರೊಟ್ಟಿ ಮಾಡುವಾಗ ಮಿಕ್ಕಿದ ಅನ್ನವನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಅಕ್ಕಿ ಹಿಟ್ಟಿಗೆ ಮಿಕ್ಸ್​ ಮಾಡಿ ಹಾಕುವುದೂ ಇದೆ. ಇದು ಕೂಡ ಟೇಸ್ಟ್​ ಆಗಿಯೇ ಆಗುತ್ತದೆ.

ದೋಸೆ ಮಾಡುವುದು ಹೀಗೆ

  • ಆದರೆ ಇವೆಲ್ಲವುಗಳಿಗಿಂತಲೂ ಭಿನ್ನವಾಗಿ ಟೇಸ್ಟಿ ಟೇಸ್ಟಿ ದೋಸೆಯನ್ನು ಮಾಡಬಹುದು ಎನ್ನೋದು ನಿಮಗೆ ಗೊತ್ತೆ? ಹಾಗಿದ್ದರೆ ಅದೇನು ಎನ್ನೋದನ್ನು ಇಲ್ಲಿ ನೋಡೋಣ.
  • ಮೊದಲಿಗೆ ಎರಡು ಕಪ್​ ಅನ್ನ, ಒಂದು ಕಪ್​ ರವೆ, ಅರ್ಧ ಕಪ್​ ಮೊಸರು ಮತ್ತು ಸ್ವಲ್ಪ ಮೊಸರು ಹಾಕಿಕೊಂಡು ರುಬ್ಬಿ.
  • ಇದನ್ನು ರುಬ್ಬಿದ ಬಳಿಕ ಒಂದು ಪಾತ್ರೆಯಲ್ಲಿ ತೆಗೆದಿಟ್ಟು ಎಲ್ಲವೂ ಚೆನ್ನಾಗಿ ಮಿಕ್ಸ್​ ಆಗುವಂತೆ 10 ನಿಮಿಷ ಹಾಗೆಯೇ ಬಿಡಿ.
  • ತವಾದ ಮೇಲೆ ಎಣ್ಣೆ ಇಲ್ಲವೇ ಬೆಣ್ಣೆ ಹಾಕಿ ಬಿಸಿ ಮಾಡಿ.
  • ಅದನ್ನು ದೋಸೆ ಹಾಕುವ ಹಾಕೆ ಹುಯ್ದು ತಿರುಗಿಸಿ.
  • ಈಗ ಅದರ ಮೇಲೆ ಚಿಕ್ಕದಾಗಿ ಕಟ್​ ಮಾಡಿಟ್ಟುಕೊಂಡಿರೋ ಈರುಳ್ಳಿ, ಕ್ಯಾರೆಟ್​, ದೊಣ್ಣೆಮೆಣಸಿನ ಕಾಯಿ ಹಾಗೂ ಕೊತ್ತಂಬರಿ ಸೊಪ್ಪನ್ನು ಉದುರಿಸಿ.
  • ನಂತರ ಎರಡೂ ಕಡೆ ತಿರುಗಿಸಿ, ಇಷ್ಟಾದರೆ ಮುಗಿಯಿತು. ತಿಂದು ನೋಡಿದರೆ, ಇದನ್ನು ಅನ್ನದಿಂದ ಮಾಡಿದ್ದು ಎಂದು ಯಾರೂ ಹೇಳಲು ಸಾದ್ಯವಿಲ್ಲ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೈಸ್‌ಬಾತ್‌ಗಳಿಗೆ, ಅನ್ನಕ್ಕೆ ಉಪ್ಪು ಕಮ್ಮಿಯಾದ್ರೆ ಒಂದೇ ನಿಮಿಷದಲ್ಲಿ ಹೀಗೆ ಸರಿ ಮಾಡಿ
ಅಮೆಜಾನ್ ಕಾಡಿನ ಮಧ್ಯೆ ಅಡಗಿದ್ದ ಮನುಷ್ಯರು; ವಿಮಾನದಿಂದ ಸೆರೆಯಾದ ವಿಸ್ಮಯ ದೃಶ್ಯ!