
ಅಮೆರಿಕ ಅಧ್ಯಕ್ಷರನ್ನು ಎದುರು ಹಾಕಿಕೊಂಡು ಬದುಕಲಾದೀತೆ. ಅಮೆರಿಕದ ಮಹಿಳೆಯೊಬ್ಬಳಿಗೆ ಇದೇ ಗತಿ ಆಗಿದೆ. ಟ್ರಂಪ್‌ರನ್ನು ಎದುರು ಹಾಕಿಕೊಳ್ಳಲು ಹೋಗಿ ಜ್ಯೂಲಿ ಎಂಬಾಕೆ ಕೆಲಸ ಕಳೆದುಕೊಂಡಿ ದ್ದಾಳೆ. ಇತ್ತೀಚೆಗೊಂದು ದಿನ ಟ್ರಂಪ್ ಗಾಲ್ಫ್ ಕ್ಲಬ್ ಕಡೆ ಹೋಗುತ್ತಿದ್ದರು. ಈ ವೇಳೆ ಅದೇ ಕ್ಲಬ್‌ನಲ್ಲಿ ಕೆಲಸ ಮಾಡುವ ಜ್ಯೂಲಿ ಸೈಕಲ್‌ನಲ್ಲಿ ಹೋಗುತ್ತಿದ್ದರು. ಟ್ರಂಪ್ ವಾಹನ ನೋಡಿದ ಕೂಡಲೇ ತನ್ನ ಎಡಗೈನ ಮಧ್ಯಬೆರಳನ್ನು ಟ್ರಂಪ್ ಕಡೆಗೆ ತೋರಿಸಿ ಅಶ್ಲೀಲ ಸಂಜ್ಞೆ ಮಾಡಿದ್ದಾಳೆ. ಇದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ವಿಷಯ ಗೊತ್ತಾದ ಬಳಿಕ ಆಕೆಯನ್ನು ಕೆಲಸದಿಂದ ಕಿತ್ತುಹಾಕಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.