ಬಿಸಿಲಿಗಿಟ್ಟ ಸೋಪಾ ಒಳಗೆ ಹೋಗಿ ಹೊರಗೆ ಬರುವಷ್ಟರಲ್ಲಿ ಮಾಯ: ಸಿಸಿಟಿವಿ ನೋಡಿ ಆಘಾತ

Published : Jan 25, 2026, 04:02 PM IST
sofa missing

ಸಾರಾಂಶ

ಮನೆಯ ಗೃಹಿಣಿಯೊಬ್ಬರು ಸೋಫಾಗೆ ಸ್ವಲ್ಪ ಬಿಸಿಲು ತಾಗಲಿ ಎಂದು ಸೋಫಾವನ್ನು ಮನೆಯ ಹೊರಗೆ ಇಟ್ಟಿದ್ದರು. ಆದರೆ ಅವರ ಹೊರಗೆ ಹೋಗಿ ಒಳಗೆ ಬರುವಷ್ಟರಲ್ಲಿ ಅವರ ಸೊಗಸಾದ ಸೋಫಾ ಮಾಯವಾಗಿದೆ. ಹಾಗಿದ್ರೆ ಮನೆಯ ಮುಂಭಾಗ ಇದ್ದ ಸೋಫಾ ಏನಾಯ್ತು? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ..

ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿರುವ ಸೋಪಾಗಳನ್ನು ಬೆಡ್‌ಶೀಟ್‌ಗಳು ಸೀರೆಗಳು, ಹಾಸಿಗೆ ಇವೆಲ್ಲವನ್ನು ಎರಡು ಮೂರು ತಿಂಗಳಿಗೊಮ್ಮೆಯೋ ಅಥವಾ ವರ್ಷಕ್ಕೊಮ್ಮೆಯೋ ಬಿಸಿಲಿಗಿಡುತ್ತೇವೆ. ಅದರಲ್ಲೂ ಭಾರತೀಯ ಗೃಹಿಣಿಯರು ಮನೆಯ ಪಾತ್ರೆ ಸಾಮಾನುಳನ್ನು ತೊಳೆದ ನಂತರ ದಿನಾ ಬಿಸಿಲಿನಲ್ಲಿಟ್ಟು ಒಣಗಿಸುತ್ತಾರೆ. ಸೀರೆಗಳು ಬಿರುವಿನಲ್ಲೇ ನಿರಂತರವಾಗಿ ಇಟ್ಟರೆ ಗಾಳಿಯಾಡದೇ ಬೇಗ ಹಾಳಾಗಿ ಬಿಡುತ್ತವೆ. ಹೀಗಾಗಿ ರೇಷ್ಮೆ ಸೀರೆಗಳನ್ನು ಹೆಚ್ಚಿನವರು ಆಗಾಗ ಬಿಸಿಲಿನಲ್ಲಿ ಒಣಗಿಸುತ್ತಾರೆ. ಹಾಗೆಯೇ ಸೋಪಾಗಳು ಕೂಡ ತಣ್ಣನೆಯ ಹವೆಗೆ ಫಂಗಸ್ ಬರುತ್ತದೆ. ತಿಗಣೆಗಳ ಕಾಟವಿದ್ದರೇ ಕೇಳೋದೇ ಬೇಡ ಹೀಗಾಗಿ ಬಹುತೇಕ ಮನೆಗಳಲ್ಲಿ ಸೋಫಾಗಳನ್ನು ಹಳೆ ಬಟ್ಟೆ ಪಾತ್ರೆ ಸಾಮಾನುಗಳನ್ನು ಬೇಸಿಗೆಯಲ್ಲಿ ಬಿಸಿಲು ಕಾಯಲಿ ಎಂದು ಮನೆಯಿಂದ ಹೊರಗೆ ಹಾಕುತ್ತಾರೆ. ಹಾಗೆಯೇ ಇಲ್ಲೊಂದು ಕಡೆ ತನ್ನ ಸೋಫಾವನ್ನು ಬಿಸಿಲಿನಲ್ಲಿ ಒಣಗುವುದಕ್ಕೆಂದು ಹೊರಗೆ ಇಟ್ಟಿದ ಮಹಿಳೆಗೆ ಆಘಾತ ಕಾದಿದೆ.

ಹೌದು ಮನೆಯ ಗೃಹಿಣಿಯೊಬ್ಬರು ಸೋಫಾಗೆ ಸ್ವಲ್ಪ ಬಿಸಿಲು ತಾಗಲಿ ಎಂದು ಸೋಫಾವನ್ನು ಮನೆಯ ಹೊರಗೆ ಇಟ್ಟಿದ್ದರು. ಆದರೆ ಅವರ ಹೊರಗೆ ಹೋಗಿ ಒಳಗೆ ಬರುವಷ್ಟರಲ್ಲಿ ಅವರ ಸೊಗಸಾದ ಸೋಫಾ ಮಾಯವಾಗಿದೆ. ಹಾಗಿದ್ರೆ ಮನೆಯ ಮುಂಭಾಗ ಇದ್ದ ಸೋಫಾ ಏನಾಯ್ತು? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ..

ಇದನ್ನೂ ಓದಿ: ಯೋಧನ ಚಿತೆಗೆ ಬೆಂಕಿ ಇಟ್ಟ 1 ವರ್ಷದ ಪುತ್ರ: ಜಿಲ್ಲಾಧಿಕಾರಿ ಕಣ್ಣಲ್ಲೂ ನೀರು ತರಿಸಿತು ಭಾವುಕ ಕ್ಷಣ

ಸಾಮಾನ್ಯವಾಗಿ ನಗರಗಳಲ್ಲಿ ಹಳ್ಳಿಯಂತೆ ವಿಶಾಲವಾದ ಜಾಗ ಇರುವುದಿಲ್ಲ. ಮನೆಯ ಮೆಟ್ಟಿಲಿಳಿದರೆ ನೇರವಾಗಿ ರಸ್ತೆಯೇ ಸಿಗುತ್ತದೆ. ಹೀಗಿರುವಾಗ ಅಂಗಳ ಎಲ್ಲಿಯ ಮಾತು. ಹೀಗಾಗಿ ಮಹಿಳೆಯೊಬ್ಬರು ತಮ್ಮ ಸೋಫಾವನ್ನು ಬಿಸಿಲು ಕಾಯಲ್ಲಿ ಎಂದು ರಸ್ತಯಲ್ಲೇ ಇಟ್ಟಿದ್ದಾರೆ. ಆದರೆ ಅವರು ಇಟ್ಟ ಟೈಮಿಂಗ್ ಮಾತ್ರ ಸರಿ ಇಲ್ಲ, ಅಷ್ಟೇ. ಹೌದು ಮುಂಜಾನೆಯ ಸಮಯದಲ್ಲಿ ಪೌರ ಕಾರ್ಮಿಕರು ಕಸ ತೆಗೆದುಕೊಂಡು ಹೋಗುವುದಕ್ಕೆ ಬರುತ್ತಾರೆ. ಹೀಗಾಗಿ ನಗರದಲ್ಲಿ ಬಹುತೇಕರು ತಮ್ಮ ಮನೆ ಮುಂದೆ ಕಸ ಹಾಗೂ ತಮಗೆ ಬೇಡದ ವಸ್ತುಗಳನ್ನು ಮನೆಯ ಹೊರಗಿಡ್ತಾರೆ. ಹಾಗೆಯೇ ಇದೇ ಸಮಯಕ್ಕೆ ಮಹಿಳೆ ತನ್ನ ಸೋಫಾವನ್ನು ಕೂಡ ಮನೆಯ ಹೊರಗಿಟ್ಟುದ್ದು, ಆಕೆ ಒಳಗೆ ಹೋಗುತ್ತಿದ್ದಂತೆ ಅಲ್ಲಿಗೆ ಬಂದ ಪೌರ ಕಾರ್ಮಿಕರು ಅದನ್ನು ಎಸೆಯುವುದಕ್ಕೆ ಇಟ್ಟ ವಸ್ತು ಎಂದು ಕಸದ ಲಾರಿಗೆ ತುಂಬಿಸಿದ್ದಾರೆ. ಅದು ಎಸೆಯಲು ಇಟ್ಟಿದ್ದಲ್ಲ ಎಂಬುದರ ಅರಿವು ಅವರಿಗೂ ಇರಲಿಲ್ಲ.ಇತ್ತ ಇದರ ಅರಿವಿಲ್ಲದ ಮಹಿಳೆ ಸ್ವಲ್ಪ ಹೊತ್ತು ಬಿಟ್ಟು ಮನೆಯಿಂದ ಹೊರೆಗೆ ಬಂದು ನೋಡಿದ್ದು, ಆಕೆಗೆ ಅಲ್ಲಿ ತಾನಿಟ್ಟ ಸೋಫಾ ಇಲ್ಲದೇ ಇರುವುದು ನೋಡಿ ಆಘಾತವಾಗಿದೆ.

ಇದನ್ನೂ ಓದಿ: ಅಮ್ಮನಿಗೆ ನಾನು ಮನುಷ್ಯನಾದರೆ ಸಾಕು ಎಂಬ ಆಸೆ ಇತ್ತು, ಎಷ್ಟೋ ವರ್ಷ ಅಮ್ಮನ ದುಡಿಮೆಯಲ್ಲೇ ಬದುಕಿದೆ : ರಾಜ್ ಬಿ ಶೆಟ್ಟಿ

ನಂತರ ಮನೆ ಮುಂದಿನ ಸಿಸಿಟಿವಿ ಪರಿಶೀಲಿಸಿದ ಆಕೆಗೆ ಶಾಕ್ ಕಾದಿದೆ. ಪರಿಣಾಮ ಮನೆಯ ಕ್ಲೀನಿಂಗ್‌ಗೆಂದು ಹೊರಗಿಟ್ಟ ಸೋಫಾ ಕಸದ ಲಾರಿ ಸೇರಿದೆ. ದೈನಂದಿನ ಕೆಲಸವೊಂದು ನಮಗರಿವಿಲ್ಲದೇ ಕೆಲವೊಮ್ಮೆ ಎಷ್ಟು ಬೇಗನೆ ದೊಡ್ಡ ನಷ್ಟಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಇದೆಲ್ಲವೂ ಒಂದು ಸಣ್ಣ ಊಹೆಯಿಂದಾಗಿ ಸಂಭವಿಸಿದೆ. ಇಲ್ಲಿ ಯಾರೂ ಕೂಡ ತಪ್ಪಿತಸ್ಥರಲ್ಲ, ಯಾವುದೇ ದುರುದ್ದೇಶವಿಲ್ಲದೇ ಅನಾಹುತವೊಂದು ನಡೆದು ಹೋಗಿದೆ. ಅನೇಕರು ಈ ಘಟನೆಗೆ ಶಾಕ್ ವ್ಯಕ್ತಪಡಿಸಿದ್ದಾರೆ. ನಾವು ನಿಜವಾಗಿಯೂ ಇಂತಹ ವಸ್ತುಗಳನ್ನು ಎಸೆಯಲು ಬಯಸಿದಾಗ ಅವರು ಹೇಳಿದರೂ ತೆಗೆದುಕೊಂಡು ಹೋಗುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದನ್ನು ಖರೀದಿ ಮಾಡಬೇಕಾದರೆ ಅವರು ಮತ್ತೆ ಮೂರು ತಿಂಗಳು ಕೆಲಸ ಮಾಡಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಯಾರು ಕದ್ದೊಯ್ದರು ಎಂದು ಮೊದಲಿಗೆ ನಾನು ಭಾವಿಸಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ನಮ್ಮ ವಸ್ತುವನ್ನು ಬೇರೆಯವರು ಕದ್ದಿರುವುದಕ್ಕಿಂತಲೂ ಹೆಚ್ಚು ನೋವು ಕೊಡುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

 

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪತಿಯೊಂದಿಗೆ ಮುಂಬೈನಲ್ಲಿ ಪ್ರತ್ಯಕ್ಷರಾದ ಸಮಂತಾ.. ಮದುವೆ ಬಳಿಕ ಸಿಂಗಲ್ ಸುತ್ತಾಟದಿಂದ ದೂರ!
ಒಳ್ಳೆಯದು ಮಾಡೋಕೆ ಹೋಗಿ ಕೇಸ್‌ ಹಾಕಿಸಿಕೊಂಡಿದ್ದ ಜೋಡಿ; 3 ವರ್ಷದ ಬಳಿಕ ಲವ್‌ ಮ್ಯಾರೇಜ್‌ ಒಪ್ಪಿದ ಪಾಲಕರು; Hassan Love story