ಈಗಿನ ಜನರ ಲೈಫ್‌ಸ್ಟೈಲ್ ಹೇಗಿದೆಯೆಂದರೆ ಹಿಟ್ಟನ್ನು ನಾದೋಕೆ, ಲಟ್ಟಿಸೋಕೆ ಸಮಯ ಇಲ್ಲ. ವಿಶೇಷವಾಗಿ ಸಿಂಗಲ್ ಆಗಿ ಇರೋರಿಗೆ ಅಥವಾ ಈಗ ಅಡುಗೆ ಮಾಡಲು ಕಲಿಯುತ್ತಿರುವ ಹೊಸಬರಿಗೆ ಚಪಾತಿ ಮಾಡುವುದೆಂದರೆ ಒಂದು ದೊಡ್ಡ ಸವಾಲೇ ಸರಿ. ಆದರೆ ಈಗ ನೀವು ಚಿಂತಿಸಬೇಕಾಗಿಲ್ಲ. ಚಪಾತಿ ಮಾಡುವ ಕಲೆ ಇಲ್ಲದಿದ್ದರೂ ಸಹ ನಿಮ್ಮ ಶ್ರಮವನ್ನು ಉಳಿಸಲು ನಿಮಗೆ ಸಹಾಯ ಮಾಡುವ ಒಂದು ಟೆಕ್ನಿಕ್ ಇಲ್ಲಿದೆ ನೋಡಿ..
ಯೂಟ್ಯೂಬರ್ ಸಂಗೀತ ತ್ಯಾಗಿ ಅವರ "ನೋ-ನೀಡ್, ನೋ-ರೋಲ್" ಟೆಕ್ನಿಕ್ ಈ ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ. ಈ ವಿಧಾನದಲ್ಲಿ ಹಿಟ್ಟನ್ನು ನಾದುವ ಬದಲು ನಯವಾಗಿ ಹಿಟ್ಟನ್ನು ತಯಾರಿಸಿಕೊಳ್ಳಬೇಕಾಗಿದೆ. ಆಶ್ಚರ್ಯಕರ ವಿಷಯವೆಂದರೆ ಇದು ಪ್ಯಾನ್ ಮೇಲೆ ಸಾಂಪ್ರದಾಯಿಕ ಚಪಾತಿಯಂತೆ ಮೇಲೇರುತ್ತದೆ ಮತ್ತು ಅಷ್ಟೇ ಮೃದುವಾಗಿರುತ್ತದೆ. ನೀವು ಅಡುಗೆಮನೆಯಲ್ಲಿ ಸಮಯವನ್ನು ಉಳಿಸಲು ಬಯಸಿದರೆ ಖಂಡಿತವಾಗಿಯೂ ಈ ವಿಧಾನವನ್ನು ಪ್ರಯತ್ನಿಸಬಹುದು.
ಮೇಲೆ ಹೇಳಿದಂತೆ ಈ ಟೆಕ್ನಿಕ್ ಚಪಾತಿ ಮಾಡಲು ಹಿಟ್ಟನ್ನು ನಾದುವ ಅಗತ್ಯವನ್ನು ನಿವಾರಿಸುತ್ತದೆ . ಮೊದಲು ಒಂದು ಕಪ್ ಗೋಧಿ ಹಿಟ್ಟನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ. ರುಚಿ ಮತ್ತು ವಿನ್ಯಾಸಕ್ಕಾಗಿ ಸ್ವಲ್ಪ ಕಡಲೆ ಹಿಟ್ಟು ಮತ್ತು ಉಪ್ಪನ್ನು ಸೇರಿಸಿ. ಚಪಾತಿ ಹೆಚ್ಚು ಮೃದುವಾಗಿರಲು ಬಯಸಿದರೆ ನೀವು ಒಂದು ಚಮಚ ಎಣ್ಣೆಯನ್ನು ಸೇರಿಸಬಹುದು. ಈಗ ಹಿಟ್ಟಿಗೆ ಸ್ವಲ್ಪ ಸ್ವಲ್ಪ ನೀರನ್ನು ಸೇರಿಸಿ.
ವಿಡಿಯೋದಲ್ಲಿ ತೋರಿಸಿದಂತೆ ಹಿಟ್ಟನ್ನು ದೋಸೆ ಹದಕ್ಕೆ ಮಾಡಿಕೊಂಡ ನಂತರ ಅದನ್ನು ತಕ್ಷಣ ಪ್ಯಾನ್ ಮೇಲೆ ಹಾಕಬೇಡಿ. ಮುಚ್ಚಿ ಕನಿಷ್ಠ 10 ರಿಂದ 15 ನಿಮಿಷಗಳ ಕಾಲ ಬಿಡಿ. ಈ ಹಂತವು ಬಹಳ ಮುಖ್ಯ. ಏಕೆಂದರೆ ಇದು ಹಿಟ್ಟಿನ ಕಣಗಳು ನೀರನ್ನು ಹೀರಿಕೊಳ್ಳಲು ಮತ್ತು ಗಟ್ಟಿಯಾಗಲು ಅನುವು ಮಾಡಿಕೊಡುತ್ತದೆ. 15 ನಿಮಿಷಗಳ ನಂತರ ನೀವು ಹಿಟ್ಟನ್ನು ತಿರುಗಿಸಿ ನೋಡಿದಾಗ ಅದು ಇನ್ನಷ್ಟು ಮೃದುವಾಗಿರುತ್ತದೆ. ಚಪಾತಿ ಹರಿದು ಹೋಗುವುದನ್ನು ತಡೆಯುತ್ತದೆ.
ಈಗ ಸ್ಟೌವ್ ಮೇಲೆ ನಾನ್-ಸ್ಟಿಕ್ ಅಥವಾ ಸಾಮಾನ್ಯ ಹಂಚು ಇರಿಸಿ. ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಸ್ವಲ್ಪ ಪ್ರಮಾಣದ ಹಿಟ್ಟನ್ನು ಪ್ಯಾನ್ ಮೇಲೆ ಸುರಿಯಿರಿ. ದೋಸೆ ಹರಡಿದ ಹಾಗೆ ವೃತ್ತಾಕಾರದ ಚಲನೆಯಲ್ಲಿ ಹರಡಿ. ನಿಮ್ಮ ಆದ್ಯತೆಗೆ ಅನುಗುಣವಾಗಿ ನೀವು ಚಪಾತಿಯನ್ನ ತೆಳ್ಳಗೆ ಅಥವಾ ದಪ್ಪವಾಗಿ ಮಾಡಬಹುದು. ಉರಿ ಹೆಚ್ಚು ಬಿಸಿಯಾಗದಂತೆ ಎಚ್ಚರವಹಿಸಿ, ಇಲ್ಲದಿದ್ದರೆ ಚಪಾತಿ ಒಳಗೆ ಬೇಯದೆ ಉಳಿಯುತ್ತದೆ.
ಚಪಾತಿ ಮೇಲ್ಭಾಗ ಒಣಗಿದಂತೆ ಕಾಣಲು ಪ್ರಾರಂಭಿಸಿದ ತಕ್ಷಣ ಮತ್ತು ಅಂಚುಗಳು ಪ್ಯಾನ್‌ನಿಂದ ಹೊರಗೆ ಬರಲು ಪ್ರಾರಂಭಿಸಿದ ತಕ್ಷಣ, ಅದನ್ನು ಎಚ್ಚರಿಕೆಯಿಂದ ತಿರುಗಿಸಿ. ಇನ್ನೊಂದು ಬದಿಯು ಸ್ವಲ್ಪ ಗೋಲ್ಡನ್ ಬಣ್ಣ ಬರುವವರೆಗೆ ಬೇಯಿಸಿ. ಸಂಗೀತಾ ತ್ಯಾಗಿ ಅವರ ಪ್ರಕಾರ, ಚಪಾತಿಯನ್ನು ಹತ್ತಿ ಬಟ್ಟೆ ಅಥವಾ ಸ್ಪಾಟುಲಾದಿಂದ ನಿಧಾನವಾಗಿ ಒತ್ತಿ ಬೇಯಿಸಿ. ಈ ಒತ್ತಡವು ಚಪಾತಿಯೊಳಗಿನ ಉಗಿಯನ್ನು ಸಂಪೂರ್ಣವಾಗಿ ಬೇಯಿಸಲು ಅನುವು ಮಾಡಿಕೊಡುತ್ತದೆ.
ಚಪಾತಿ ಎರಡೂ ಬದಿ ಚೆನ್ನಾಗಿ ಬೆಂದ ನಂತರ ಅದನ್ನು ನೇರವಾಗಿ ಗ್ಯಾಸ್ ಜ್ವಾಲೆಯ ಮೇಲೆ ಇರಿಸಿ. ಅದು ಬಲೂನಿನಂತೆ ಉಬ್ಬುವುದನ್ನು ನೀವು ಗಮನಿಸಬಹುದು. ಹಿಟ್ಟಿನಿಂದ ಮಾಡಿದ ಚಪಾತಿಗಳಂತೆ. ಈ ರೀತಿ ಮಾಡಿದ ಚಪಾತಿ ರುಚಿ ಮತ್ತು ಸುವಾಸನೆ ಬದಲಾಗುವುದಿಲ್ಲ ಹಾಗೂ ಚಪಾತಿ ದೀರ್ಘಕಾಲದವರೆಗೆ ಮೃದುವಾಗಿರುತ್ತವೆ ಎಂದು ಸಂಗೀತ ತ್ಯಾಗಿ ಹೇಳಿಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.