ಕುಡಿದ್ರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ...

By Web DeskFirst Published Mar 21, 2019, 3:18 PM IST
Highlights

ರಾತ್ರಿ ಪಾರ್ಟಿಯಲ್ಲಿ ಎಣ್ಣೆ ಸ್ವಲ್ಪ ಜಾಸ್ತಿ ಆದ್ರಂತೂ ಮಾರನೇ ದಿನ ಬೆಳಗ್ಗೆ ಹ್ಯಾಂಗ್‌ ಓವರ್ ಕಾಡುತ್ತೆ ಅನೇಕರಿಗೆ. ಇದರಿಂದ ದಿನಾಪೂರ್ತಿ ವೇಸ್ಟ್. ಹಾಟ್ ಡ್ರಿಂಕ್‌ಗೂ ಮುನ್ನ ವೈನ್ ಕುಡಿದ್ರೆ ಹ್ಯಾಂಗ್ ಓವರ್ ಇರಲ್ವಾ? 

ಬೆಂಗಳೂರಿನಂಥ ಊರಿನಲ್ಲಿ ಬ್ಯುಸಿ ಲೈಫ್ ನಡೆಸ್ತಿರೋ ಮಂದಿ ರಿಲ್ಯಾಕ್ಸ್ ಆಗೋಕೆ ವೀಕೆಂಡ್ ಪಾರ್ಟಿಗಳಲ್ಲಿ ಬ್ಯುಸಿ ಆಗ್ತಾರೆ. ಶನಿವಾರ, ಭಾನುವಾರ ರಾತ್ರಿ ಪೂರ್ತಿ ಕಂಠ ಪೂರ್ತಿ ಕುಡಿದು, ಸೋಮವಾರ ಬೆಳಗ್ಗೆ ಹ್ಯಾಂಗ್‌ ಓವರ್‌ನಿಂದ ಒದ್ದಾಡುತ್ತಾರೆ. ಮತ್ತೆ ವಾರ ಪೂರ್ತಿ ತಲೆ ಭಾರ, ತಲೆ ನೋವು, ಏನೋ ಆಲಸ್ಯ...ಇಂಥ ಸಮಸ್ಯೆಗಳಿಂದ ಒದ್ದಾಡಿ, ಸಮಯದೊಂದಿಗೆ ಆರೋಗ್ಯವನ್ನೂ ಹಾಳು ಮಾಡಿಕೊಳ್ಳುತ್ತಾರೆ.

ಜರ್ನಲ್ ಆಫ್ ಅಮೆರಿಕ ಕ್ಲಿನಿಕಲ್ ನ್ಯೂಟ್ರಿಷನ್ ಮಾಡಿದ ಸಂಶೋಧನೆಯೊಂದು ಹೇಳುವ ಪ್ರಕಾರ ಖಾಲಿ ಹೊಟ್ಟೇಲಿ ಆಲ್ಕೋಹಾಲ್ ಸೇವಿಸಿದರೆ ಹಲವಾರು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಬದಲಾಗಿ ನೀರು ಅಥವಾ ಮಜ್ಜಿಗೆ ಕುಡಿದು, ಆಲ್ಕೋಹಾಲ್ ಸೇವಿಸಿದರೆ ಹ್ಯಾಂಗೋವರ್ ಕಡಿಮೆಯಾಗುತ್ತೆ ಎಂದು ಹೇಳಿದೆ. 

ತೂಕ ಕಳೆದುಕೊಳ್ಳಬೇಕಾ. ನಿದ್ರೆಗೆ ಜಾರುವ ಮುನ್ನ ಹೀಗೆ ಮಾಡಿ

ಹಾಗಂಥ ಕಂಠ ಪೂರ್ತಿ ಕುಡಿಯವುದು ದೇಹಕ್ಕೆ ಯಾವತ್ತೂ ಒಳ್ಳೇಯದಲ್ಲ. ಕುಡಿತವೊಂದು ರೋಗ. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದು, ಆರೋಗ್ಯವಂತ ಜೀವನ ನಡೆಸುವುದು ಬುದ್ಧಿವಂತರ ಲಕ್ಷಣ ಎಂಬುದನ್ನು ನೆನಪಿನಲ್ಲಿರಿ....

click me!