ಮಳೆಗಾಲದಲ್ಲಿ ಈ ಕಪ್ಪೆಗಳು ಬಣ್ಣ ಬದಲಿಸೋದ್ಯಾಕೆ? ಕಪ್ಪೆಗಳ ಚಿನ್ನದ ಬಣ್ಣದ ರಹಸ್ಯ

Published : Jul 02, 2026, 06:04 PM IST
indian bullfrog

ಸಾರಾಂಶ

ಆಂಧ್ರಪ್ರದೇಶದ ಕೈಕಲೂರಿನಲ್ಲಿ ಅಪರೂಪದ ಹಳದಿ ಕಪ್ಪೆಗಳು ಕಾಣಿಸಿಕೊಂಡಿವೆ. ಇವು ಇಂಡಿಯನ್ ಬುಲ್ ಫ್ರಾಗ್ ಆಗಿದ್ದು, ಮಳೆಗಾಲದಲ್ಲಿ ಸಂತಾನೋತ್ಪತ್ತಿಗಾಗಿ ಗಂಡು ಕಪ್ಪೆಗಳು ಹೆಣ್ಣನ್ನು ಆಕರ್ಷಿಸಲು ತಮ್ಮ ಬಣ್ಣವನ್ನು ಬದಲಾಯಿಸುತ್ತವೆ. ಪರಿಸರ ಮಾಲಿನ್ಯದಿಂದಾಗಿ ಈ ಜೀವಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ಕುರಿತ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ಪ್ರಕೃತಿ ಯಾವಾಗಲೂ ತನ್ನಲ್ಲಿರುವ ಅದ್ಭುತಗಳಿಂದ ನಮ್ಮನ್ನು ಬೆರಗುಗೊಳಿಸುತ್ತಲೇ ಇರುತ್ತದೆ. ಸಾಮಾನ್ಯವಾಗಿ ಮಳೆಗಾಲದ ಆರಂಭದಲ್ಲಿ ಹಳದಿ ಬಣ್ಣದ ಕಪ್ಪೆಗಳನ್ನ ನೋಡುತ್ತೇವೆ. ಇವುಗಳು ಕಂಡುಬಂದ್ರೆ ಪಕ್ಕಾ ಮಳೆಗಾಲ ಶುರುವಾಯ್ತು ಅಂತಲೇ ಅರ್ಥ. ಇತ್ತೀಚೆಗೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಕೈಕಲೂರು ಭಾಗದಲ್ಲಿ ಇಂತಹ ಅಪರೂಪದ ಹಳದಿ ಕಪ್ಪೆಗಳು ಗುಂಪು ಗುಂಪಾಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿವೆ.

ಸಾಮಾನ್ಯವಾಗಿ ಕಪ್ಪೆಗಳು ಕಂದು ಅಥವಾ ಹಸಿರು ಬಣ್ಣದಲ್ಲಿರುತ್ತವೆ. ಆದ್ರೆ ಮಳೆಗಾಲ ಶುರುವಾದ ತಕ್ಷಣ ಕೆಲವು ಕಪ್ಪೆಗಳು ಪ್ರಕಾಶಮಾನವಾದ ಹಳದಿ ಬಣ್ಣಕ್ಕೆ ತಿರುಗುತ್ತವೆ. ಇವು ನೋಡಲು ತುಂಬಾ ಅದ್ಭುತವಾಗಿ ಕಾಣುತ್ತವೆ. ಚಿನ್ನದ ಬಣ್ಣದ ಈ ಕಪ್ಪೆಗಳನ್ನ ನೋಡೋದೇ ಚಂದ! ಅದೇ ರೀತಿ ಆಂಧ್ರದ ಕೈಕಲೂರು ಟೌನ್‌ಹಾಲ್ ಮೈದಾನದಲ್ಲಿ ಚಿನ್ನದ ಬಣ್ಣದ ಕಪ್ಪೆಗಳು ಸಖತ್ ಸದ್ದು ಮಾಡಿವೆ. ಇವುಗಳನ್ನು ನೋಡಲು ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ಆಗಮಿಸಿದ್ದರು.

ಕಪ್ಪೆಯ ಚಿನ್ನದ ಬಣ್ಣದ ರಹಸ್ಯ

ಅಂದಹಾಗೆ ಈ ಕಪ್ಪೆಗಳ ವೈಜ್ಞಾನಿಕ ಹೆಸರು ‘ಹೂಪ್ಲೋಬಟ್ರಾಕಸ್ ಟೈಗರಿನಸ್’ (Hoplobatrachus tigerinus). ಇವುಗಳನ್ನು ಸಾಮಾನ್ಯವಾಗಿ ‘ಇಂಡಿಯನ್ ಬುಲ್ ಫ್ರಾಗ್’ (Indian Bullfrog) ಎಂದು ಕರೆಯಲಾಗುತ್ತದೆ. ಇವು ಸುಮಾರು 17 ಸೆಂಟಿಮೀಟರ್‌ಗಳವರೆಗೆ ಬೆಳೆಯುತ್ತವೆ. ಕಪ್ಪೆಗಳು ಬಣ್ಣ ಬದಲಿಸುವುದರ ಹಿಂದೆ ಯಾವುದೇ ದೈವಿಕ ಪವಾಡವಿಲ್ಲ, ಬದಲಿಗೆ ಆಸಕ್ತಿದಾಯಕ ಜೀವಶಾಸ್ತ್ರದ ಪ್ರಕ್ರಿಯೆಯಿದೆ.

ಸಂತಾನೋತ್ಪತ್ತಿಗಾಗಿ ಬಣ್ಣ ಬದಲಾವಣೆ

ಹೌದು.. ಮಳೆಯಲಿ, ಜೊತೆಯಲಿ ಅಂತಾ ಸಂಗಾತಿ ಹುಡುಕುವ (Mating) ಸಮಯದಲ್ಲಿ ಮಾತ್ರ ಗಂಡು ಕಪ್ಪೆಗಳು ತಮ್ಮ ದೇಹವನ್ನು ಪ್ರಕಾಶಮಾನವಾದ ಹಳದಿ ಬಣ್ಣಕ್ಕೆ ಬದಲಿಸಿಕೊಳ್ಳುತ್ತವೆ. ಇದು ಹೆಣ್ಣು ಕಪ್ಪೆಗಳನ್ನು ಆಕರ್ಷಿಸಲು ಪ್ರಕೃತಿ ಇವುಗಳಿಗೆ ನೀಡಿದ ವಿಶೇಷ ಶಕ್ತಿಯಾಗಿದೆ. ಗಂಡು ಕಪ್ಪೆಗಳು ಶಬ್ದ ಮಾಡುವಾಗ ಅವುಗಳ ಗಂಟಲಿನ ಭಾಗದಲ್ಲಿರುವ ಎರಡು ಸ್ವರಪೇಟಿಕೆಗಳು ಅಥವಾ ಧ್ವನಿ ಚೀಲಗಳು (Vocal sacs) ನೀಲಿ ಬಣ್ಣಕ್ಕೆ ತಿರುಗುತ್ತವೆ. ಇನ್ನು, ಮಳೆಗಾಲ ಮುಗಿದು, ಸಂತಾನೋತ್ಪತ್ತಿಯ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಇವು ಮತ್ತೆ ತಮ್ಮ ಹಳೆಯ ಸಾಮಾನ್ಯ (ಕಂದು/ಹಸಿರು) ಬಣ್ಣಕ್ಕೆ ಮರಳುತ್ತವೆ.

ಅಳಿವಿನಂಚಿನಲ್ಲಿರುವ ಜೀವಿಗಳು!

ಒಂದು ಕಾಲದಲ್ಲಿ ಹಳ್ಳಿಗಳಲ್ಲಿ ಮತ್ತು ಕೆರೆಗಳ ಹತ್ತಿರ ಯಥೇಚ್ಛವಾಗಿ ಕಾಣಸಿಗುತ್ತಿದ್ದ ಈ ಇಂಡಿಯನ್ ಬುಲ್ ಫ್ರಾಗ್ ಸಂಖ್ಯೆ ಈಗ ಕ್ಷೀಣಿಸುತ್ತಿದೆ. ಕೆರೆಗಳು ಮಾಲಿನ್ಯಗೊಳ್ಳುತ್ತಿರುವುದು ಮತ್ತು ವಾಸಸ್ಥಳಗಳ ನಾಶದಿಂದಾಗಿ ಇವುಗಳ ಅಸ್ತಿತ್ವಕ್ಕೆ ಅಪಾಯ ಎದುರಾಗಿದೆ ಅನ್ನೋದು ಪರಿಸರ ಪ್ರೇಮಿಗಳು ಕಳವಳ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹಣೆ ಮೇಲೆ ಕುಂಕುಮ, ಮೈಮೇಲೆ ಕೇಸರಿ ವಸ್ತ್ರ… ಕಾಮಾಕ್ಯ ಮಂದಿರದಲ್ಲಿ ಉರ್ಫಿ ಜಾವೇದ್
Tandoori roti recipe: 4 ಸ್ಟೆಪ್‌ ಸಾಕು, ತಂದೂರ್‌ ಇಲ್ಲದೆ ಹೋಟೆಲ್‌ ಸ್ಟೈಲ್‌ ತಂದೂರಿ ರೋಟಿ ಮಾಡ್ಬೋದು!