ಚುಯಿಂಗ್ ಗಮ್‌ನಿಂದ ಕಾಡಬಹುದು ಅಜೀರ್ಣ!

By Web DeskFirst Published Apr 26, 2019, 3:44 PM IST
Highlights

ಒತ್ತಡವೋ, ಶೋಕಿಯೋ, ಆದರೆ ಬಾಯಲ್ಲಿ ಚೂಯಿಂಗ್ ಗಮ್ ಮಾತ್ರ ಕೆಲವರಿಗೆ ಇರ್ಲೇಬೇಕು. ಸದಾ ಹಸು ಮೆಲಕು ಹಾಕುವಂತೆ ಇದನ್ನು ಜಗಿಯುತ್ತಲೇ ಇರುತ್ತಾರೆ. ಇಂಥವರಿಗೆ ಇಲ್ಲಿದೆ ಬ್ಯಾಡ್ ನ್ಯೂಸ್. 

ಕೆಲವರು ಮೂಡ್ ಸ್ವಿಂಗ್ ಅಥವಾ ಒತ್ತಡ ಕಡಿಮೆ ಮಾಡಲು ಚೂಯಿಂಗ್ ಗಮ್ ತಿನ್ನುತ್ತಾರೆ. ಆದರಿದು  ಆರೋಗ್ಯದ ಮೇಲೆ ಭೀಕರ ಪರಿಣಾಮ ಬೀರುತ್ತದೆ. ಬಾಯಿ ದುರ್ವಾಸನೆ ನಡೆಯಲ ವಿಧ ವಿಧದ ಫ್ಲೇವರ್ ಚೂಯಿಂಗ್ ಗಮ್ ತಿನ್ನಲಾಗುತ್ತದೆ.  ಆದರೆ, ಸಂಶೆೋಧನೆಯೊಂದರ ಪ್ರಕಾರ ಚುಯಿಂಗ್ ಗಮ್ ತಿಂದರೆ ದುರ್ವಾಸನೆ ಕಡಿಮೆಯಾಗೋ ಬದಲು, ಕ್ರಮೇಣವಾಗಿ ಹೆಚ್ಚುತ್ತದೆ. ಆ ಕ್ಷಣಕ್ಕೆ ಬಾಯಿ ವಾಸನೆ ಕಡಿಮೆಯಾದಂತೆ ಕಂಡು ಬಂದರೂ, ಬಾಯಿಯಲ್ಲಿ ಬ್ಯಾಕ್ಟಿರೀಯಾಗಳು ಹೆಚ್ಚಾಗಿ, ಹಲ್ಲುಗಳ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ಹುಳುಕು ಹಲ್ಲಿಗೂ ಕಾರಣವಾಗುತ್ತದೆ. 

ಚೂಯಿಂಗ್ ಗಮ್ ಜಗಿಯುವುದರಿಂದ ಮುಖದ ಸ್ನಾಯುಗಳಿಗೆ ಒಳ್ಳೆ ವ್ಯಾಯಾಮವಾಗುತ್ತದೆ ಎಂಬ ನಂಬಿಕೆ ಇದೆ ಕೆಲವರಿಗೆ. ಆದರೆ 'ಅತಿಯಾದರೆ ಅಮೃತವೂ ವಿಷ ಎಂಬಂತೆ...' ಇದು ದವಡೆ ನೋವಿಗೂ ಎಡೆ ಮಾಡಿಕೊಡುತ್ತದೆ. ಇದರಲ್ಲಿ ಬಳಸುವ ಕೃತಕ ಸಿಹಿ ಪದಾರ್ಥಗಳು ಬ್ರೈನ್ ಟ್ಯೂಮರ್‌ ಹಾಗೂ ಕ್ಯಾನ್ಸರ್‌ಗೂ ಕಾರಣವಾಗಬಲ್ಲದು. 

ವಿಟಮಿನ್ ಕೊರತೆಯಿಂದ ಕಾಡೋ ಅನಾರೋಗ್ಯ...

ಜಗಿಯುವಾಗ ಅದಲ್ಲಿರುವ ರಸ ಎಂಜಿಲಿನೊಂದಿಗೆ ಹೊಟ್ಟೆಗೆ ಸೇರಿ ಅಜೀರ್ಣವಾಗುವಂತೆ ಮಾಡುತ್ತದೆ. ಇದರಿಂದ ದೇಹ ತೂಕ ಹೆಚ್ಚುತ್ತದೆ. 

ಅಕಸ್ಮಾತ್ ನುಂಗಿದರಂತೂ ಮುಗೀತು ಕಥೆ. ಹೊಟ್ಟೆ ಬಿಗಿದು, ಮಲಬದ್ಧತೆಯನ್ನುಂಟು ಮಾಡುತ್ತದೆ. ಇಷ್ಟೆಲ್ಲಾ ಆದರೂ ಚುಯಿಂಗ್ ಗಮ್ ಸಹವಾಸ ಏಕೆ ಹೇಳಿ? ಆರೋಗ್ಯಕ್ಕೆ ಹಿತವಾಗುವ ಅಭ್ಯಾಸ ಮಾತ್ರ ರೂಢಿಸಿಕೊಂಡರೆ ಸಾಕಲ್ಲವೇ?

click me!