ಮಾರುಕಟ್ಟೆಯಲ್ಲಿ ಸಿಗುವ ಹಣ್ಣು- ತರಕಾರಿ ಮೇಲೆ ಒಂದು ಬಿಲ್ ಸ್ಟಿಕ್ಕರ್ ಇರುತ್ತದೆ. ಅದು ಏನೆಂದು ನೋಡದೆ ಕೊಂಡುಕೊಳ್ಳುತ್ತೇವೆ. ಅಷ್ಟಕ್ಕೂ ಏನಿದು? ಯಾವ ಎಚ್ಚರಿಕೆ ತೆಗೆದುಕೊಳ್ಳಬೇಕು?
ಹಣ್ಣು ಅಥವಾ ತರಕಾರಿ ಬಗ್ಗೆ ಮಾಹಿತಿ ನೀಡಲು ಒಂದು ಸ್ಟಿಕ್ಕರ್ ಅಂಟಿಸಲಾಗುತ್ತದೆ. ಆ ಬಿಲ್ಲನ್ನು ಗಮನಿಸದೇ, ಹಣ ಕೊಟ್ಟು ಖರೀದಿಸಿದರೂ ಪರ್ವಾಗಿಲ್ಲ, ಆದರೆ, ಕೊಂಡಾದ ಮೇಲೆ ಹಾಗೇ ಅದನ್ನು ಬಿಟ್ಟು ಬಿಡಬೇಡಿ. ನೀಟಾಗಿ ಕಿತ್ತು, ಚೆನ್ನಾಗಿ ತೊಳೆಯಬೇಕು. ಇಲ್ಲದಿದ್ದರೆ ಪ್ಲಾಸ್ಟಿಕ್ ಅಂಶವುಳ್ಳ ಇದು ಹೊಟ್ಟೆಗೆ ಹೋಗಿ, ಹೇಳುವಂಥದ್ದು ಅಲ್ಲದೇ ಹೋದರೂ, ಸಮಸ್ಯೆ ತಂದೊಡ್ಡಬಲ್ಲದು.
2009ರ ಕಾನೂನಿನ ಪ್ರಕಾರ, ಬೆಳೆಯುವ ಹಣ್ಣು, ತರಕಾರಿ ಮೇಲೆ ಅದು ಯಾವ ದೇಶದಲ್ಲಿ ಬೆಳೆಯಲಾಗಿದೆ ಎಂಬುದನ್ನು ನಮೂದಿಸಬೇಕು. ಅದರಲ್ಲಿ ನಾಲ್ಕು ಅಥವಾ ಐದು ಅಂಕಿಗಳು ಇರಲಿದ್ದು, ಕೃಷಿ ಉತ್ಪನ್ನದ ಬೆಳವಣಿಗೆ ಬಗ್ಗೆ ಹೇಳುತ್ತದೆ. ಇದನ್ನು PLCode (ಪ್ರೈಸ್ ಲುಕ್ ಅಪ್ ಕೋಡ್) ಎನ್ನುತ್ತಾರೆ. ಬಿಲ್ ಮಾಡುವಲ್ಲಿ ಇದನ್ನು ಸ್ಕ್ಯಾನ್ ಮಾಡಿದರೆ ಬೆಲೆ ತಿಳಿಯುತ್ತದೆ.
ವೆಜ್ ಎನಿಸುವ ಈ ಆಹಾರ ಸಸ್ಯಾಹಾರವಲ್ಲ...!
ಅಕಸ್ಮಾತ್ ಈ ಸ್ಟಿಕ್ಕರ್ ಮೇಲೆ 3 ಅಥವಾ 4ರಿಂದ ಆರಂಭವಾಗುವ ಅಂಕಿ ಇದ್ದರೆ, ಆ ಉತ್ಪನ್ನವನ್ನು ಸಂಪ್ರದಾಯಿಕವಾಗಿ ಬೆಳೆಯಲಾಗಿದೆ ಎಂದರ್ಥ. 8 ರಿಂದ ಆರಂಭವಾದರೆ ಮಾರ್ಪಡಿಸಿರುವ ತಳಿ ಎಂದರ್ಥ. ಜೋಳ, ಸೊಯಾಬೀನ್, ಹತ್ತಿ, ಪಪ್ಪಾಯದಂಥ ಬೆಳೆಗಳನ್ನು ಈಗೀಗ ಮಾರ್ಪಡಿಸಲಾಗಿರುತ್ತದೆ. ಈಗ ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ತಳಿಗಳು ಇದೇ ವರ್ಗಕ್ಕೆ ಸೇರುತ್ತವೆ. ಇಂಥ ಉತ್ಪನ್ನಗಳನ್ನು ಸೇವಿಸಿದರೆ ಜೀವಕ್ಕೆ ಅಪಾಯ ತರುವಂಥ ರೋಗಗಳಿಗೆ ತುತ್ತಾಗಬಹುದು. ಅಲರ್ಜಿಯಂಥ ಸಮಸ್ಯೆಗಳನ್ನು ತಂದೊಡ್ಡುವುದಲ್ಲದೇ, ದೀರ್ಘ ಕಾಲ ಸೇವಿಸಿದರೆ ಒಂದಲ್ಲ, ಒಂದು ರೋಗವನ್ನು ಫೇಸ್ ಮಾಡಬೇಕಾಗಿ ಬರಬಹುದು.
ಐದಂಕಿ ಇದ್ದು, ಅದು 9ರಿಂದ ಶುರುವಾಗಿರಿತ್ತೋ ಅದನ್ನು ಸಾವಯವ ಕೃಷಿ ಪದ್ಧತಿ ಬಳಸಿ ಬೆಳೆಯಲಾಗಿದೆ ಎಂದರ್ಥ. ಇನ್ನು ಮುಂದೆ ಹಣ್ಣು ಹಂಪಲು ಕೊಳ್ಳುವಾಗ ಇವೆಲ್ಲವನ್ನೂ ಗಮನಿಸುವುದೊಳಿತು.