ದೀಪದ ಬತ್ತಿಗೆ ನೇಲ್ ಪಾಲಿಶ್ ಹಚ್ಚಿದರೆ ಗಾಳಿ ಬೀಸಿದರೂ ಆರಲ್ವ? ವೈರಲ್ ಹ್ಯಾಕ್ ಹಿಂದಿನ ಸತ್ಯ ಇದು

Published : Nov 02, 2026, 07:42 PM IST
burning  lamp

ಸಾರಾಂಶ

ಉರಿಸಿ ಕೆಲವೇ ದಿನಗಳಲ್ಲಿ ದೀಪ ಆರಿ ಹೋಗುತ್ತೆ. ಅದಕ್ಕೆ ನೇಲ್‌ ಪಾಲಿಶ್‌ ಹಚ್ಚಿ ಎನ್ನುವ ಹ್ಯಾಕ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆದ್ರೆ ಈ ಹ್ಯಾಕ್‌ ಬಳಸುವ ಮುನ್ನ ಎಚ್ಚರ.

ದೀಪಾವಳಿಯಲ್ಲಿ ದೀಪಕ್ಕೆ ಎಲ್ಲಿಲ್ಲದ ಬೇಡಿಕೆ. ಮನೆ ತುಂಬಾ ದೀಪ ಹಚ್ಚಿ ಮನೆ ಬೆಳಗಲು ಜನರು ಬಯಸ್ತಾರೆ. ಆದ್ರೆ ಮನೆ ಹೊರಗೆ ಇಲ್ಲ ಹೆಚ್ಚು ಗಾಳಿ ಬರುವ ಜಾಗದಲ್ಲಿ ದೀಪ ಹಚ್ಚಿ ಕೆಲವೇ ಕ್ಷಣಕ್ಕೆ ಆರಿಹೋಗುತ್ತದೆ. ಇದನ್ನು ತಡೆಯಲು ಈಗ ಒಂದು ಹ್ಯಾಕ್‌ ವೈರಲ್‌ ಆಗಿದೆ. ದೀಪದ ಬತ್ತಿಗೆ ನೇಲ್ ಪಾಲಿಶ್‌ ಹಚ್ಚಿದ್ರೆ ದೀಪ ಬಹಳ ಹೊತ್ತು ಉರಿಯುತ್ತದೆ ಅಂತ ಜನ ನಂಬ್ತಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುವ ಎಲ್ಲ ಹ್ಯಾಕ್‌ ಗಳನ್ನು ನೀವು ಕಣ್ಣುಮುಚ್ಚಿ ನಂಬಬಾರದು. ಅದ್ರಿಂದ ಆಗುವ ಅಪಾಯಗಳೇನು, ಅದು ಎಷ್ಟು ಸತ್ಯ ಎಂಬುದನ್ನು ಮೊದಲು ತಿಳಿಯಬೇಕು. ನೇಲ್ ಪಾಲಿಶ್ನಲ್ಲಿರುವ ರಾಸಾಯನಿಕಗಳು ಬೆಂಕಿಗೆ ತಗುಲಿದಾಗ ಆರೋಗ್ಯ ಮತ್ತು ಸುರಕ್ಷತೆಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ.

ವೈರಲ್‌ ಆಗಿರೋದೇನು?

ಸಾಮಾಜಿಕ ಜಾಲತಾಣದ ವಿಡಿಯೋವೊಂದರಲ್ಲಿ ದೀಪದ ಹತ್ತಿಯ ಬತ್ತಿಯ ಮೇಲ್ಭಾಗಕ್ಕೆ ನೇಲ್ ಪಾಲಿಶ್ ಹಚ್ಚುವಂತೆ ಹೇಳಲಾಗಿದೆ. ಹೀಗೆ ಮಾಡಿದರೆ ಬೆಂಕಿ ಹಚ್ಚಿದ ತಕ್ಷಣವೇ ದೀಪ ಉರಿಯುತ್ತದೆ. ಹೊರಗೆ ಎಷ್ಟೇ ಗಾಳಿ ಬೀಸಿದರೂ ದೀಪ ಸುಲಭವಾಗಿ ಆರಿಹೋಗುವುದಿಲ್ಲ , ಹೆಚ್ಚು ಹೊತ್ತು ಉರಿಯುತ್ತದೆ ಎಂದು ಹೇಳಿಕೊಳ್ಳಲಾಗಿದೆ. ಆದರೆ ಈ ವಿಧಾನವನ್ನು ಅನುಸರಿಸುವ ಮೊದಲು ಅದರಲ್ಲಿರುವ ಅಪಾಯಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.

ಏನೆಲ್ಲ ಅಪಾಯಗಳಿವೆ?

ನೇಲ್ ಪಾಲಿಶ್ನಲ್ಲಿ ನೈಟ್ರೋಸೆಲ್ಯುಲೋಸ್ ಮತ್ತು ವಿವಿಧ ದ್ರಾವಕಗಳು ಸೇರಿದಂತೆ ಬೆಂಕಿ ಹೊತ್ತಿಕೊಳ್ಳುವ ಗುಣವಿರುವ ರಾಸಾಯನಿಕಗಳಿರುತ್ತವೆ. ಇವುಗಳನ್ನು ದೀಪದ ಬತ್ತಿಗೆ ಹಚ್ಚಿ ಬೆಂಕಿ ಹಚ್ಚುವುದರಿಂದ ಕೆಲವು ಅಪಾಯಗಳು ಎದುರಾಗಬಹುದು.

• ನೇಲ್ ಪಾಲಿಶ್ನಲ್ಲಿರುವ ರಾಸಾಯನಿಕಗಳು ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ಗುಣ ಹೊಂದಿವೆ. ಇದರಿಂದ ಏಕಾಏಕಿ ಜ್ವಾಲೆ ಹೆಚ್ಚಾಗಿ ಕೈ ಸುಡುವ ಅಥವಾ ಬೆಂಕಿ ಹರಡುವ ಅಪಾಯವಿದೆ.

• ರಾಸಾಯನಿಕಗಳು ಉರಿಯುವಾಗ ಹೊಗೆ ಮತ್ತು ತೀಕ್ಷ್ಣ ವಾಸನೆ ಹೊರಬರಬಹುದು. ಇದು ಕಣ್ಣು ಮತ್ತು ಉಸಿರಾಟಕ್ಕೆ ಕಿರಿಕಿರಿ ಉಂಟುಮಾಡಬಹುದು.

• ನೇಲ್ ಪಾಲಿಶ್ ಒಣಗಿದ ಬಳಿಕ ಹತ್ತಿಯ ಬತ್ತಿಯ ಮೇಲ್ಮೈಯನ್ನು ಮುಚ್ಚಬಹುದು. ಇದರಿಂದ ಎಣ್ಣೆ ಅಥವಾ ತುಪ್ಪ ಬತ್ತಿಯ ಮೂಲಕ ಮೇಲಕ್ಕೆ ಹರಿಯುವುದಕ್ಕೆ ಅಡ್ಡಿಯಾಗಬಹುದು.

ದೀಪ ಹೆಚ್ಚು ಹೊತ್ತು ಉರಿಯಲು ಏನು ಮಾಡಬೇಕು?

ದೀಪವನ್ನು ಹೆಚ್ಚು ಹೊತ್ತು ಉರಿಯುವಂತೆ ಮಾಡಲು ಕೆಲವು ಸರಳ ವಿಧಾನಗಳನ್ನು ನೀವು ಅನುಸರಿಸಬಹುದು.

1. ತುಂಬಾ ತೆಳುವಾದ ಅಥವಾ ಸಡಿಲವಾಗಿ ಸುತ್ತಿದ ಬತ್ತಿಗಳು ಗಾಳಿಗೆ ಬೇಗ ಆರಿಹೋಗಬಹುದು. ಆದ್ದರಿಂದ ದೀಪಕ್ಕೆ ಸೂಕ್ತವಾದ, ಸ್ವಲ್ಪ ದಪ್ಪವಾಗಿರುವ ಮತ್ತು ಚೆನ್ನಾಗಿ ಸುತ್ತಿದ ಹತ್ತಿಯ ಬತ್ತಿಯನ್ನು ಬಳಸಿ.

2. ಬತ್ತಿಯು ನಿರಂತರವಾಗಿ ಎಣ್ಣೆ ಅಥವಾ ತುಪ್ಪವನ್ನು ಹೀರಿಕೊಳ್ಳುವಷ್ಟು ಪ್ರಮಾಣದಲ್ಲಿ ದೀಪದಲ್ಲಿ ಎಣ್ಣೆ ಇರಬೇಕು. ಎಣ್ಣೆ ಕಡಿಮೆಯಾದರೆ ದೀಪ ಬೇಗ ಆರಬಹುದು.

3. ಮನೆಯ ಹೊರಗೆ ಅಥವಾ ಬಾಲ್ಕನಿಯಲ್ಲಿ ದೀಪ ಇಡುವಾಗ ನೇರವಾಗಿ ಗಾಳಿ ಬೀಸುವ ಸ್ಥಳವನ್ನು ತಪ್ಪಿಸಿ. ಗಾಳಿಯಿಂದ ರಕ್ಷಣೆ ಸಿಗುವ ಸುರಕ್ಷಿತ ಸ್ಥಳದಲ್ಲಿ ದೀಪವಿಡಿ.

4. ದೀಪದ ಸುತ್ತ ಸೂಕ್ತವಾದ ಗ್ಲಾಸ್ ಅಥವಾ ದೀಪದ ಶೇಡ್ ಬಳಸಬಹುದು. ಇದರಿಂದ ಗಾಳಿಯ ನೇರ ಹೊಡೆತ ಕಡಿಮೆಯಾಗುತ್ತದೆ. ಆದರೆ ಇದು ದೀಪದ ಜ್ವಾಲೆಗೆ ತಾಗದಂತೆ ಮತ್ತು ಬಿಸಿಯಿಂದ ಒಡೆಯದಂತೆ ನೋಡಿಕೊಳ್ಳಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜಿಕೆವಿಕೆ ಕೃಷಿ ಮೇಳದಲ್ಲಿ 3 ಹೊಸ ತಳಿಗಳು ಲೋಕಾರ್ಪಣೆ; ಬರಗಾಲದಲ್ಲೂ ಬಂಪರ್ ಇಳುವರಿ ಖಚಿತ
Long Necklace: ಸೀರೆಯುಟ್ಟಾಗ ನಿಮ್ಮ ಅಂದವನ್ನು ದುಪ್ಪಟ್ಟು ಮಾಡುವ ಲಾಂಗ್ ನೆಕ್ಲೇಸ್ ಡಿಸೈನ್‌ಗಳಿವು