ನೀತಾ ಅಂಬಾನಿ ಧರಿಸಿದ್ದ ಅಪರೂಪದ Dragonfly ಬ್ರೂಚ್, ಇದರ ಬೆಲೆಯಲ್ಲಿ ಬೆಂಗಳೂರಲ್ಲಿ ಒಂದು ಸೈಟ್‌ ಖರೀದಿಸಬಹುದು!

Published : Nov 02, 2026, 06:30 PM IST
nita ambani rare dragonfly brooch

ಸಾರಾಂಶ

ಎನ್‌ಎಂಎಸಿಸಿ ನೂತನ ಗ್ರಂಥಾಲಯದ ಉದ್ಘಾಟನಾ ಸಮಾರಂಭದಲ್ಲಿ ನೀತಾ ಅಂಬಾನಿ ಅವರು ಆಧುನಿಕ ಶೈಲಿಯ ಸೂಟ್ ಧರಿಸಿ ಗಮನ ಸೆಳೆದಿದ್ದಾರೆ. ಈ ವೇಳೆ ಅವರು ಧರಿಸಿದ್ದ ವಾಲ್ಲೇಸ್ ಚಾನ್ ವಿನ್ಯಾಸದ 'ಡ್ರ್ಯಾಗನ್‌ಫ್ಲೈ' ಬ್ರೂಚ್‌ನ ಬೆಲೆ ಬರೋಬ್ಬರಿ ₹12 ರಿಂದ ₹15 ಕೋಟಿ ಎಂದು ಅಂದಾಜಿಸಲಾಗಿದೆ.

ಮುಂಬೈ (ನ.2): ತಮ್ಮ ಸಾಂಪ್ರದಾಯಿಕ ಉಡುಪುಗಳು ಹಾಗೂ ಅಪರೂಪದ ರೇಷ್ಮೆ ಸೀರೆಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದಾ ಸದ್ದು ಮಾಡುವ ರಿಲಾಯನ್ಸ್ ಫೌಂಡೇಶನ್ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ನೀತಾ ಅಂಬಾನಿ (Nita Ambani), ಈ ಬಾರಿ ಆಧುನಿಕ ಶೈಲಿಯ 'ಪವರ್-ಡ್ರೆಸ್ಸಿಂಗ್' (Power-dressing) ಮೂಲಕ ಫ್ಯಾಷನ್ ಲೋಕಕ್ಕೆ ಅಚ್ಚರಿ ಮೂಡಿಸಿದ್ದಾರೆ. ಆಕರ್ಷಕ ಸೂಟ್ ಧರಿಸಿ ಮಿಂಚಿದ ಅವರ ಎದೆಯ ಭಾಗದಲ್ಲಿದ್ದ ಒಂದೇ ಒಂದು ಬ್ರೂಚ್ (Brooch) ಬೆಲೆ ಬರೋಬ್ಬರಿ ₹12 ಕೋಟಿಯಿಂದ ₹15 ಕೋಟಿ ಎಂದರೆ ನೀವು ನಂಬಲೇಬೇಕು!

ಮುಂಬೈನಲ್ಲಿರುವ 'ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್' (NMACC) ನೂತನ ಗ್ರಂಥಾಲಯದ ('The Library') ಅದ್ದೂರಿ ಉದ್ಘಾಟನಾ ಸಮಾರಂಭದಲ್ಲಿ ನೀತಾ ಅಂಬಾನಿ ಅವರು ವಿಶಿಷ್ಟ ಬೀಜ್ ಬಣ್ಣದ (Beige tailored ensemble) ಟ್ರೌಸರ್ ಸೂಟ್‌ನಲ್ಲಿ ಭಾಗವಹಿಸಿದ್ದರು. ಆದರೆ, ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರ ಕಣ್ಣು ನೆಟ್ಟಿದ್ದು ಅವರು ಧರಿಸಿದ್ದ ಬೆಲೆಬಾಳುವ ಹಾಗೂ ಅತ್ಯಂತ ಅಪರೂಪದ 'ಡ್ರ್ಯಾಗನ್‌ಫ್ಲೈ' (Dragonfly - ಚಿಟ್ಟೆ ಮಾದರಿಯ ಕೀಟ) ವಿನ್ಯಾಸದ ಬ್ರೂಚ್ ಮೇಲೆ.

10 ವರ್ಷಗಳ ಕಾಲ ಸೃಷ್ಟಿಯಾದ 'ಸೋರಿಂಗ್ ಸ್ಪಿರಿಟ್' ಜಾದೂ

ನೀತಾ ಅಂಬಾನಿ ಅವರ ಉಡುಪಿನ ಸೌಂದರ್ಯವನ್ನು ಹೆಚ್ಚಿಸಿದ ಈ ಬ್ರೂಚ್ ಅನ್ನು ಜಗತ್ಪ್ರಸಿದ್ಧ ಜ್ಯುವೆಲ್ಲರಿ ಆರ್ಟಿಸ್ಟ್ ವಾಲ್ಲೇಸ್ ಚಾನ್ (Wallace Chan) ವಿನ್ಯಾಸಗೊಳಿಸಿದ್ದಾರೆ. ಈ ಕಲಾಕೃತಿಗೆ 'ಸೋರಿಂಗ್ ಸ್ಪಿರಿಟ್' (Soaring Spirit) ಎಂದು ಹೆಸರಿಡಲಾಗಿದ್ದು, ಇದು ಅಪರಿಮಿತ ಸಾಧ್ಯತೆಗಳ ಸಂಕೇತವಾಗಿರುವ ಡ್ರ್ಯಾಗನ್‌ಫ್ಲೈ ಕೀಟದ ವಿನ್ಯಾಸವನ್ನು ಹೊಂದಿದೆ. ಈ ಅಪರೂಪದ ಆಭರಣವನ್ನು ಸಂಪೂರ್ಣವಾಗಿ ತಯಾರಿಸಲು ವಿನ್ಯಾಸಕ ವಾಲ್ಲೇಸ್ ಚಾನ್‌ಗೆ ಬರೋಬ್ಬರಿ 10 ವರ್ಷ ತೆಗೆದುಕೊಂಡಿದೆ.

ಆಭರಣದಲ್ಲಿರುವ ರತ್ನಗಳು: ಬಲಿಷ್ಠ 'ಟೈಟಾನಿಯಂ' (Titanium) ಲೋಹದ ತಳಹದಿಯ ಮೇಲೆ ಈ ಬ್ರೂಚ್ ತಯಾರಿಸಲಾಗಿದೆ. ಇದರಲ್ಲಿ ಅತ್ಯಂತ ಅಪರೂಪದ 17.67-ಕ್ಯಾರಟ್ ತೂಕದ 'ತ್ಸಾವೊರೈಟ್ ಗಾರ್ನೆಟ್' (Tsavorite Garnet), ಡೆಮಂಟಾಯ್ಡ್ ಗಾರ್ನೆಟ್, ಹಳದಿ ಮತ್ತು ವಿವಿಧ ಬಣ್ಣಗಳ ವಜ್ರಗಳು, ಕೆಂಪು ಮಾಣಿಕ್ಯಗಳು (Rubies) ಹಾಗೂ ನವಿರಾದ ಗುಲಾಬಿ ಬಣ್ಣದ ಸಫೈರ್‌ಗಳನ್ನು (Pink Sapphires) ಕಲಾತ್ಮಕವಾಗಿ ಜೋಡಿಸಲಾಗಿದೆ.

ಬೆಲೆ ಎಷ್ಟು?: ಅಂತಾರಾಷ್ಟ್ರೀಯ ಆಭರಣ ಮಾರುಕಟ್ಟೆಯಲ್ಲಿ ಈ ಬ್ರೂಚ್‌ನ ಅಂದಾಜು ಬೆಲೆ 1.5 ಮಿಲಿಯನ್‌ನಿಂದ 1.8 ಮಿಲಿಯನ್ ಯುಎಸ್ ಡಾಲರ್ ಆಗಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಬರೋಬ್ಬರಿ ₹12 ಕೋಟಿಯಿಂದ ₹15 ಕೋಟಿ ರೂಪಾಯಿಗಳು!

ನೀತಾ ಅಂಬಾನಿ ಅವರ ವಿಶಿಷ್ಟ ಸ್ಟೈಲಿಂಗ್

ಅತ್ಯಂತ ದುಬಾರಿ ಬ್ರೂಚ್‌ಗೆ ಸೂಕ್ತ ವೈಭವ ನೀಡುವಂತೆ ನೀತಾ ಅಂಬಾನಿ ತಮ್ಮ ಉಡುಪಿನ ಸ್ಟೈಲಿಂಗ್ ಅನ್ನು ಸರಳ ಹಾಗೂ ಸಭ್ಯವಾಗಿ (Demure elegance) ರೂಪಿಸಿಕೊಂಡಿದ್ದರು. ಅವರು ಲಿನೆನ್ ಬಟ್ಟೆಯ ಬೀಜ್ ಬ್ಲೇಜರ್ ಹಾಗೂ ಅದಕ್ಕೆ ಹೊಂದುವ ಫ್ಲೇರ್ಡ್ ಟ್ರೌಸರ್ ಧರಿಸಿದ್ದರು. ಬ್ಲೇಜರ್‌ಗೆ ಪಫ್ ಶೋಲ್ಡರ್ ಹಾಗೂ ಮೊಣಕೈವರೆಗಿನ ಬಲೂನ್ ತೋಳುಗಳಿದ್ದು, ಒಳಗಡೆ ನವಿರಾದ ಪಿಂಕ್ ಬಣ್ಣದ ಲೇಸ್ ಬ್ಲೌಸ್ ಧರಿಸುವ ಮೂಲಕ ಫ್ಯಾಶನ್‌ ಸ್ಪರ್ಶ ನೀಡಿದ್ದರು. ₹15 ಕೋಟಿಯ ಬ್ರೂಚ್ ಸ್ಟಾರ್ ಅಟ್ರ್ಯಾಕ್ಷನ್ ಆಗಿ ಕಾಣಿಸಲು ಇತರ ಯಾವುದೇ ಅತಿಯಾದ ಆಭರಣ ಧರಿಸಿರಲಿಲ್ಲ. ಅತ್ಯಂತ ಆಕರ್ಷಕ ಡೈಮಂಡ್ ಕಿವಿ ಓಲೆ, ದೊಡ್ಡ ವಜ್ರದ ಹರಳಿನ ಉಂಗುರ ಹಾಗೂ ಲೆದರ್ ಸ್ಟ್ರಾಪ್ ಹೊಂದಿದ್ದ ರಾಯಲ್ ಕೈಗಡಿಯಾರ ಧರಿಸಿದ್ದರು.

ಸೈಡ್ ಪಾರ್ಟಿಂಗ್ ಮಾಡಿ ಸಾಫ್ಟ್ ವೇವ್ಸ್ ಮಾದರಿಯಲ್ಲಿ ಕೂದಲನ್ನು ಸಡಿಲವಾಗಿ ಬಿಟ್ಟಿದ್ದರು. ಕಾಡಿಗೆ ಹಚ್ಚಿದ ಕಣ್ಣುಗಳು, ಸ್ಮಡ್ಜ್ಡ್ ಬ್ರೌನ್ ಶ್ಯಾಡೋ, ಮಸ್ಕರಾ ಹಾಗೂ ಗ್ಲೋಸಿ ಪಿಂಕ್ ಲಿಪ್‌ಸ್ಟಿಕ್ ಜೊತೆಗೆ ನ್ಯಾಚುರಲ್ ಮೇಕಪ್‌ನಲ್ಲಿ ಕಂಗೊಳಿಸಿದರು. ಸದಾ ರೇಷ್ಮೆ ಉಡುಪುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನೀತಾ ಅಂಬಾನಿ ಅವರ ಈ ಮಾಡರ್ನ್ ಹಾಗೂ ಪವರ್‌ಫುಲ್ ಅವತಾರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಫ್ಯಾಷನ್ ಪ್ರೇಮಿಗಳು ಅವರ ಡ್ರೆಸ್ಸಿಂಗ್ ಸೆನ್ಸ್‌ಗೆ ಮಾರುಹೋಗಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Long Necklace: ಸೀರೆಯುಟ್ಟಾಗ ನಿಮ್ಮ ಅಂದವನ್ನು ದುಪ್ಪಟ್ಟು ಮಾಡುವ ಲಾಂಗ್ ನೆಕ್ಲೇಸ್ ಡಿಸೈನ್‌ಗಳಿವು
ಇದೊಂದು ಸಿಂಪಲ್ ಸೀಕ್ರೆಟ್ ಟ್ರಿಕ್ ಗೊತ್ತಿದ್ರೆ KFC ಸ್ಟೈಲ್ ಗರಿಗರಿಯಾದ ಫ್ರೆಂಚ್ ಫ್ರೈಸ್ ಮನೆಯಲ್ಲೇ ಮಾಡ್ಬೋದು