
ಕೆಲವು ಸಂದರ್ಭಗಳಲ್ಲಿ ಹಾವುಗಳು ಮನೆಯೊಳಗೆ ಪ್ರವೇಶಿಸಬಹುದು. ಹೇಗೆ ಎಂಬುದಕ್ಕೆ ಕಾರಣಗಳು ಹಲವುಗಳಿರುತ್ತೆ. ಕೆಲವೊಮ್ಮೆ ಶೌಚಾಲಯ ಅಥವಾ ಬಾತ್‌ರೂಮ್‌ನಲ್ಲಿ ನೀರು ಹೋಗಲು ಮಾಡಲಾಗಿರುವ ರಂಧ್ರದಿಂದ ಹಾವುಗಳನ್ನು ಮನೆಯೊಳಗೆ ಬರಬಹುದು. ಕೆಲವೊಮ್ಮೆ ವೆಸ್ಟರ್ನ್ ಕಮೋಡ್‌ನಿಂದಲೂ ಹಾವು ಮನೆಯೊಳಗೆ ಪ್ರವೇಶಿಸುವ ಸಾಧ್ಯತೆಗಳಿರುತ್ತವೆ. ಶೌಚಾಲಯದೊಳಗೆ ಹಾವು ಏಕೆ ಬರುತ್ತೆ? ಹಾವುಗಳು ಬಂದಾಗ ಏನು ಮಾಡಬೇಕು? ಮುಂಜಾಗ್ರತ ಕ್ರಮಗಳು ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.
ಶೌಚಾಲಯದಲ್ಲಿ ಹಾವುಗಳನ್ನು ಕಂಡ್ರೆ ಒಂದುಕ್ಷಣ ಹೃದಯ ಬಡಿತವೇ ನಿಂತಂತೆ ಆಗುತ್ತೆ. ಮನೆಯೊಳಗೆ ಹಾವು ಹೇಗೆ ಬಂತು ಎಂಬ ಪ್ರಶ್ನೆ ಜೊತೆಯಲ್ಲಿ ಭಯವೂ ಶುರುವಾಗುತ್ತದೆ. ಮಳೆ ಮತ್ತು ವಾತಾವರಣದಲ್ಲಿ ಬಿಸಿಲು ಪ್ರಮಾಣ ಏರಿಕೆಯಾದಾಗ ಹಾವುಗಳು ಮನೆ ಪ್ರವೇಶಿಸುವ ಸಾಧ್ಯತೆಗಳಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು? ವಿಷಕಾರಿ ಹಾವಿನಿಂದ ಕುಟುಂಬದ ಸದಸ್ಯರನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಕುರಿತಾದ ಸಲಹೆಗಳನ್ನು ಈ ಲೇಖನ ಹೊಂದಿದೆ.
ಹಾವುಗಳು ಒಳಗೆ ಬರಲು ನಿಮ್ಮ ಶೌಚಾಲಯ ಮತ್ತು ಬಾತ್‌ರೂಮ್ ಕೊಳಕು ಆಗಿರೋದು ಕಾರಣವಲ್ಲ. ಮನೆ, ಬಾತ್‌ರೂಮ್, ಶೌಚಾಲಯ ಸ್ವಚ್ಛವಾಗಿಟ್ಟುಕೊಂಡಿದ್ದರೂ ಹಾವು ಬಂದಿದೆ ಎಂದು ಕೆಲವರು ಹೇಳುತ್ತಿರುತ್ತವೆ. ಮನೆಗೆ ಅಂಡರ್‌ಗ್ರೌಂಡ್ ಲಿಂಕ್ ಹೊಂದಿರುವ ಪೈಪ್‌ಗಳು ತೇವಾಂಶದ ವಾತಾವರಣವನ್ನು ಹೊಂದಿರುತ್ತವೆ. ಈ ಸ್ಥಳದಲ್ಲಿ ಜಿರಳೆ, ಇಲಿ ಸೇರಿದಂತೆ ಸೂಕ್ಷ್ಮಜೀವಿಗಳು ವಾಸವಾಗಿರುತ್ತವೆ. ಈ ಸಂದರ್ಭದಲ್ಲಿ ಆಹಾರ ಅರಸಿಕೊಂಡು ಹಾವುಗಳು ಅಂಡರ್‌ಗ್ರೌಂಡ್ ಪೈಪ್‌ನೊಳಗೆ ಬರಬಹುದು.
ಕೆಲವು ಸಂದರ್ಭಗಳಲ್ಲಿ ಹಾವುಗಳು ಶಾಖದಿಂದ ತಪ್ಪಿಸಿಕೊಳ್ಳಲು ಕತ್ತಲೆ ಮತ್ತು ತೇವಾಂಶ ಹೊಂದಿರುವ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಮುಖ್ಯ ಚರಂಡಿಗೆ ಲಿಂಕ್ ಆಗಿರೋ ಅಂಡರ್‌ಗ್ರೌಂಡ್ ಪೈಪ್ ಪ್ರವೇಶಿಸಬಹುದು. ಮುಂದೆ ನಿಮ್ಮ ಬಾತ್‌ರೂಮ್ ಮತ್ತು ಶೌಚಾಲಯದೊಳಗೆ ಹಾವುಗಳ ಎಂಟ್ರಿಯಾಗಬಹುದು.
ಜಾಲರಿ ಬಳಕೆ: ಹಾವು ಬರೋದನ್ನು ತಡೆಯಲು ಮುಖ್ಯ ಕಾಲುವೆಯನ್ನು ಪ್ರವೇಶಿಸುವ ನಿಮ್ಮ ಅಂಡರ್‌ಗ್ರೌಂಡ್ ಪೈಪ್‌ಗೆ ಸ್ಟ್ರಾಂಗ್ ಆಗಿರೋ ಜಾಲರಿಯನ್ನು ಅಳವಡಿಸಿಕೊಳ್ಳಬೇಕು. ಹಾಗೆಯೇ ಶೌಚಾಲಯ ಮತ್ತು ಬಾತ್‌ರೂಮ್‌ನಲ್ಲಿಯೂ ನೀರು ಹೊರಗೆ ಹೋಗುವ ಸ್ಥಳವನ್ನು ಜಾಲರಿಯಿಂದ ಭದ್ರ ಮಾಡಿಕೊಳ್ಳಿ.
ಮನೆ ಸುತ್ತಲಿನ ವಾತಾವರಣ: ನಿಮ್ಮ ಮನೆಯ ಸುತ್ತಲೂ ಯಾವುದೇ ಪೊದೆ ಅಥವಾ ಅನಾವಶ್ಯಕ ವಸ್ತುಗಳ ಸಂಗ್ರಹವಿದ್ರೆ ಅದನ್ನು ತ್ವರಿತವಾಗಿ ಕ್ಲೀನ್ ಮಾಡ್ಕೊಳ್ಳಿ. ಇಂತಹ ಪ್ರದೇಶದಲ್ಲಿ ಹಾವುಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ.
ಕ್ರಮಬದ್ಧವಾಗಿ ಮುಚ್ಚುವಿಕೆ: ಸ್ನಾನಗೃಹ ಮತ್ತು ಶೌಚಾಲಯದಲ್ಲಿ ತೆರೆದ ಪೈಪ್‌ಗಳಿದ್ರೆ ಅವುಗಳನ್ನು ಕ್ರಮಬದ್ಧವಾಗಿ ಮುಚ್ಚಿ. ಸಿಮೆಂಟ್ ಅಥವಾ ಸಿಲಿಕೋನ್ ಸೀಲಾಂಟ್ ಬಳಸಿದ ತೆರೆದ ಪೈಪ್ ಮುಚ್ಚಬಹುದು.
ನಿಮ್ಮ ಮನೆಯ ಶೌಚಾಲಯ ಅಥವಾ ಸ್ನಾನಗೃಹಕ್ಕೆ ಹಾವು ಪ್ರವೇಶಿಸಿದರೆ, ಭಯಪಡಬೇಡಿ. ತಕ್ಷಣ ಬಾಗಿಲು ಮುಚ್ಚಬೇಕು. ನಂತರ ಬಾಗಿಲಿನ ಕೆಳಗೆ ಉಳಿಯುವ ಖಾಲಿ ಜಾಗವನ್ನು ಬಟ್ಟೆ ಅಥವಾ ಟವಲ್‌ನಿಂದ ಮುಚ್ಚಿ. ನಂತರ ತರಬೇತಿ ಪಡೆದ ಹಾವು ಹಿಡಿಯುವವರನ್ನು ಸಂಪರ್ಕಿಸಿ. ಯಾವುದೇ ಕಾರಣಕ್ಕೂ ಹಾವನ್ನು ನೀವೇ ಕೊಲ್ಲಲು ಅಥವಾ ಓಡಿಸಲು ಪ್ರಯತ್ನಿಸಬೇಡಿ. ಇದು ಪ್ರಾಣಕ್ಕೆ ಅಪಾಯಕಾರಿಯಾಗುವ ಸಾಧ್ಯತೆ ಹೆಚ್ಚಿರುತ್ತವೆ.
ಇದನ್ನೂ ಓದಿ: ಲ್ಯಾಪ್‌ಟಾಪ್ ಬದಲು ಹೆಬ್ಬಾವು ಹಿಡ್ಕೊಂಡು ಸ್ಕೂಟರ್‌ನಲ್ಲಿ ಬಂದ ಟೆಕ್ಕಿ, ಪೈಥಾನ್ ಪ್ರೋಗ್ರಾಂ ಎಂದ ಜನ
ಇದನ್ನೂ ಓದಿ: ಹಾವುಗಳಿಗೆ ಹೂವಿನ ಕುಂಡ ಅಂದ್ರೆ ಏಕಿಷ್ಟ? ಗಾರ್ಡನ್‌ನಲ್ಲೇ ಮನೆ ಮಾಡುವ 5 ಅಪಾಯಕಾರಿ ಹಾವುಗಳಿವು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.