ಜೆನ್‌‍‌ಝೀ ದುಡಿಯುವ ಶೇಕಡಾ 70ರಷ್ಟು ಹಣ ಖರ್ಚು ಮಾಡುತ್ತಿರುವುದು ಎಲ್ಲಿ? ಅಧ್ಯಯನ ವರದಿ

Published : Aug 14, 2026, 04:21 PM IST
Gen Z travel

ಸಾರಾಂಶ

ಜೆನ್‌ಝಿ ಯುವ ಸಮೂಹದ ಸ್ಯಾಲರಿ ಹೆಚ್ಚು. ಉತ್ತಮ ಆದಾಯಗಳಿಸುತ್ತಿರುವ ಜೆನ್‌ಝಿಗಳ ಖರ್ಚು ವೆಚ್ಚದ ಮಾಹಿತಿ ಬಯಲಾಗಿದೆ. ತಿಂಗಳಲ್ಲಿ ಶೇಕಡಾ 70 ರಷ್ಟು ಹಣ ಯಾವುದಕ್ಕೆ ಖರ್ಚು ಮಾಡುತ್ತಾರೆ, ಜೆನ್‌ಝಿಗಳ ಖರ್ಚಿನ ಡೀಟೇಲ್ಸ್

ನವದೆಹಲಿ (ಆ.14) ಭಾರತ ಸೇರಿದಂತೆ ವಿಶ್ವಿದೆಲ್ಲೆಡೆ ಜೆನ್‌ಝಿ ಸಮೂಹದ ಚರ್ಚೆಗಳು ನಡೆಯುತ್ತಿದೆ.ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾಗಳಲ್ಲಿ ಜೆನ್‌ಝಿ ಸಮೂಹ ಸರ್ಕಾರವನ್ನೇ ಉರುಳಿಸಿ ಹೊಸ ಸರ್ಕಾರ ತರುವಲ್ಲಿ ಯಶಸ್ವಿಯಾಗಿದೆ. ಜೆನ್‌ಝಿ ಸಮೂಹದ ಲೈಫ್‌ಸ್ಟೈಲ್ ಭಿನ್ನ. ಸಾಮಾನ್ಯವಾಗಿ ಜೆನ್‌ಝಿಗಳು ದುಬಾರಿ ಫೋನ್ ಅಥವಾ ಗ್ಯಾಜೆಟ್ಸ್, ಪ್ರವಾಸ, ಮೋಜು ಮಸ್ತಿ, ಪಾರ್ಟಿ ಹೀಗೆ ಹೆಚ್ಚಿನ ಹಣ ಖರ್ಚು ಮಾಡುತ್ತಾರೆ ಅನ್ನೋ ಕಲ್ಪನೆ ಇದೆ. ಆದರೆ ಇದೆಲ್ಲಾ ಸುಳ್ಳು ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.

ಜೆನ್‌ಝಿ ಖರ್ಚು ವೆಚ್ಚದಲ್ಲಿ ಭಾರಿ ಶಿಸ್ತು

ಜೆನ್‌ಝಿ ಯುವ ಸಮೂಹದ ಖರ್ಚು ವೆಚ್ಚದಲ್ಲಿ ಭಾರಿ ಶಿಸ್ತು ಎಂದು ಅಧ್ಯಯನ ವರದಿ ಹೇಳುತ್ತಿದೆ. ಸ್ಯಾಲರಿಸೇ (SalarySe) ನಡೆಸಿದ ಅಧ್ಯಯನ ವರದಿ ಈ ಮಾಹಿತಿ ನೀಡಿದೆ. ಈ ವರದಿ ಪ್ರಕಾರ ಜೆನ್‌ಝಿ ಸಮೂಹದ ಖರ್ಚು ವೆಚ್ಚಗಳ ಬಹುತೇಕ ತಮ್ಮ ದಿನಬಳಕೆ ವಸ್ತುಗಳು, ಮಾಸಿಕ ಬಿಲ್‌ಗಳಿಗೆ ಹೋಗುತ್ತಿದೆ. ಇನ್ನು ಪ್ರವಾಸ, ಎಲೆಕ್ಟ್ರಾನಿಕ್ ವಸ್ತುಗಳಿಗೆ ಕೇವಲ ಶೇಕಡಾ 5ರಷ್ಟು ಖರ್ಚು ಮಾಡುತ್ತಾರೆ ಎಂದು ವರದಿ ಹೇಳುತ್ತಿದೆ.

ತಿಂಗಳ ಬಿಲ್ ಹಾಗೂ ಸಬ್‌ಸ್ಕ್ರಿಪ್ಸನ್

ಜೆನ್‌ಝಿಗಳ ಶೇಕಡಾ 20.1ರಷ್ಟು ಹಣ ಯುಟಿಲಿಟಿ ಬಿಲ್, ಆನ್‌ಲೈನ್ ಸರ್ವೀಸ್‌ಗಳಿಗೆ ಖರ್ಚು ಮಾಡುತ್ತಾರೆ. ಇನ್ನು ಶೇಕಡಾ 15.7ರಷ್ಟು ಮೊತ್ತವನ್ನು ದಿನಸಿ ಸೇರಿದಂತೆ ಇತರ ಅಗತ್ಯ ವಸ್ತುಗಳಿಗೆ ಖರ್ಚು ಮಾಡುತ್ತಾರೆ. ಸಾಲದ ಇಎಂಐ, ವಿಮೆ, ಹೂಡಿಕೆಗಳಲಿಗೆ ಶೇಕಡಾ 12.ರಷ್ಟು ಖರ್ಚಾಗುತ್ತಿದೆ. ಶಾಪಿಂಗ್‌ಗೆ ಶೇಕಡಾ 11.9ರಷ್ಟು ಹಾಗೂ ಆಹಾರಕ್ಕೆ ಶೇಕಡಾ 11.5ರಷ್ಟು ಖರ್ಚು ಮಾಡುತ್ತಿದ್ದಾರೆ ಅನ್ನೋದು ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ. ಒಟ್ಟು ಶೇಕಡಾ 70ರಷ್ಟು ಹಣ ಮಾಸಿಕ ಖರ್ಚು ವೆಚ್ಚದಲ್ಲಿ ಖಾಲಿಯಾಗುತ್ತಿದೆ.

ಜೆನ್‌ಝಿ ಸಮೂಹದ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ನೋಡಿದರೆ ಸದಾ ಪ್ರವಾಸ ಮಾಡುತ್ತಾರೆ ಅನ್ನೋ ಕಲ್ಪನೆ ಮೂಡದೇ ಇರದು. ಆದರೆ ಜೆನ್‌ಜಿ ತಮ್ಮ ಮಾಸಿಕ ತಿಂಗಳಲ್ಲಿ ಪ್ರವಾಸಕ್ಕಾಗಿ ಖರ್ಚು ಮಾಡುವುದು ಶೇಕಡಾ 5ರಷ್ಟು ಮಾತ್ರ. ಮೋಜು ಮಸ್ತಿ, ಪ್ರವಾಸ ಜೆನ್‌ಜಿಗಳ ಆದ್ಯತೆ ಅಲ್ಲ. ಆದರೆ ಪ್ರವಾಸಕ್ಕೆ ಹೋದಾಗ ಮಸ್ತಿ ಮಾಡಲು ಹಿಂಜರಿಯುವುದಿಲ್ಲ.

ಜೆನ್‌ಝಿ ಸಮೂಹಗ ಎಟಿಎಂಗೆ ಹೋಗಿ ದುಡ್ಡು ಡ್ರಾ ಮಾಡಿ ಖರ್ಚು ಮಾಡುವ ಮಂದಿ ಕಡಿಮೆ. ಎಲ್ಲವೂ ಯುಪಿಐ ಮೂಲಕವೇ ನಡೆಯುತ್ತಿದೆ. ಯುಪಿಐ ಟ್ರಾನ್ಸಾಕ್ಷನ್ ಮೂಲಕವೇ ತಮ್ಮ ವ್ಯವಹಾರ ನಡೆಸುತ್ತಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಲೆ ಬಿಟ್ಟ ಹುಡುಗ ₹48,000 ಕೋಟಿ ಒಡೆಯ, 15 ಮಕ್ಕಳಲ್ಲಿ 11ನೇ ಮಗನ ಚಿನ್ನದ ಸಾಮ್ರಾಜ್ಯ
Vastu Tips: ಮನೆಗೆ ಮಹಾಲಕ್ಷ್ಮಿ ಈ ಮನಿ ಪ್ಲಾಂಟ್ ಗಿಡಕ್ಕೆ ಪ್ರತಿದಿನ ನೀರು ಹಾಕುವ ದಡ್ಡ ಕೆಲಸ ಮಾಡಬೇಡಿ!