ಪಿತ್ತಜನಕಾಂಗ ಮತ್ತು ಮೂತ್ರಪಿಂಡದ ಸ್ಥಿತಿಯನ್ನು ಬಹಿರಂಗಪಡಿಸುವ ನಾಲಗೆ, ನಿಮ್ಮ ಹೃದಯ ಮತ್ತು ಶ್ವಾಸಕೋಶಗಳ ಪರಿಸ್ಥಿತಿಯನ್ನೂ ತೋರಿಸುತ್ತದೆ.
ಹೊಟ್ಟೆಯ ಸ್ಥಿತಿಯನ್ನು ನಾಲಿಗೆ ಮಧ್ಯವನ್ನು ಪರಿಶೀಲಿಸುವ ಮೂಲಕ ಕಂಡುಹಿಡಿಯಬಹುದು. ನಾಲಗೆಯನ್ನುಆಳವಾಗಿ ಪರಿಶೀಲಿಸುವುದರಿಂದ ಕರುಳಿನ ಆರೋಗ್ಯವನ್ನೂ ತಿಳಿದುಕೊಳ್ಳಬಹುದು. ಇದರ ಸ್ವಚ್ಛತೆ ಹೇಗೆ ಮಾಡುವುದು?
ಪ.ನಾ. ಹಳ್ಳಿ ಹರೀಶ್ ಕುಮಾರ್ ಬಾಯಿ ಮುಕ್ಕಳಿಸಿ, ಹಲ್ಲುಜ್ಜಿ, ನಾಲಿಗೆ ಸ್ವಚ್ಛಗೊಳಿಸಿ... ಈ ಸಲಹೆಗಳು ಸಾಮಾನ್ಯ. ಅದ್ರೇಲೇನು ವಿಶೇಷ ಎನಿಸೋದು ಸಹಜ. ಮೌಖಿಕ ನೈರ್ಮಲ್ಯ, ಆರೋಗ್ಯಕರ ಬಾಯಿಗೆ ಮಾತ್ರವಲ್ಲ, ನಿಮ್ಮ ಒಟ್ಟಾರೆ ಆರೋಗ್ಯದ ಸೂಚಕವೂ ಹೌದು. ನಾಲಗೆ ಮೂಲಕವೇ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಬೇಕು. ಅದಕ್ಕೇ ವೈದ್ಯರೂ ರೋಗಿಯನ್ನು ಪರೀಕ್ಷಿಸುವಾಗ ನಾಲಿಗೆ ತೋರಿಸಲು ಹೇಳುವುದು.
ಬೆನ್ನು ಮೂಳೆ ಹೊಂದಿರುವ ಎಲ್ಲ ಪ್ರಾಣಿಗಳಿಗೂ ನಾಲಗೆ ಇರುತ್ತದೆ. ಆಹಾರ ಜೀರ್ಣವಾಗಲು, ರುಚಿಯ ಅನುಭವದಲ್ಲಿ ಮತ್ತು ಮನುಷ್ಯನಿಗೆ ಮಾತಾಡುವುದರಲ್ಲಿ ನೆರವಾಗುವ ತೀರಾ ಮುಖ್ಯವಾದ ಅಂಗವಿದು. ಪಿತ್ತಜನಕಾಂಗ ಮತ್ತು ಮೂತ್ರಪಿಂಡದ ಸ್ಥಿತಿಯನ್ನು ಬಹಿರಂಗಪಡಿಸುವ ನಾಲಗೆ, ನಿಮ್ಮ ಹೃದಯ ಮತ್ತು ಶ್ವಾಸಕೋಶಗಳ ಪರಿಸ್ಥಿತಿಯನ್ನೂ ತೋರಿಸುತ್ತದೆ. ಹೊಟ್ಟೆಯ ಸ್ಥಿತಿಯನ್ನು ನಾಲಿಗೆ ಮಧ್ಯವನ್ನು ಪರಿಶೀಲಿಸುವ ಮೂಲಕ ಕಂಡುಹಿಡಿಯಬಹುದು. ನಾಲಗೆಯನ್ನು ಆಳವಾಗಿ ಪರಿಶೀಲಿಸುವುದರಿಂದ ಕರುಳಿನ ಆರೋಗ್ಯವನ್ನೂ ತಿಳಿದುಕೊಳ್ಳಬಹುದು.
ನಾಲಗೆ ಮೇಲೆ ಅನೇಕ ಬ್ಯಾಕ್ಟೀರಿಯಾ ಬೆಳೆಯುವ ಕಾರಣ ಅದನ್ನು ಹೇಗೆ ಶುದ್ಧವಿರ ಬೇಕೆಂಬುದನ್ನು ಅರಿಯುವುದು ಅತ್ಯಗತ್ಯ. ಅನಾರೋಗ್ಯಕರ ನಾಲಗೆ, ಹಲ್ಲಿನ ಸಮಸ್ಯೆ ಮತ್ತು ಕೆಟ್ಟ ಉಸಿರಾಟದ ಸಮಸ್ಯೆಗಳಿಗೆ ಎಡೆ ಮಾಡಿಕೊಡಬಲ್ಲದು. ಅಲ್ಲದೇ, ಇದು ನಿಮ್ಮ ಒಟ್ಟಾರೆ ಯೋಗಕ್ಷೇಮದ ಮೇಲೂ ಪರಿಣಾಮ ಬೀರಬಲ್ಲದು. ಈ ಅಂಗವನ್ನು ಸ್ವಚ್ಛಗೊಳಿಸುವ ಬಗೆ ಹೇಗೆ? ನಾಲಗೆಯನ್ನು ಸ್ವಚ್ಛಗೊಳಿಸಲು ಪ್ಲಾಸ್ಟಿಕ್ ಅಥವಾ ಲೋಹದ ಟಂಗ್ ಸ್ಕಾಪರ್ ಬಳಸಿ. ರಕ್ತ ಬರುವಷ್ಟು ಉಜ್ಜುವ ಅಗತ್ಯವಿಲ್ಲ. ಮೌತ್ ವಾಷ್ ಬಳಸಿದರೆ ನಾಲಿಗೆ ಮೇಲೆ ಬೆಳೆಯುವ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುತ್ತದೆ. ಲವಣಯುಕ್ತ ನೀರು ಬಳಸಿ ನಿಯಮಿತವಾಗಿ ಬಾಯಿ ತೊಳೆದುಕೊಂಡರೆ, ಮೌತ್ ವಾಷ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದು ಉಸಿರಿನ ದುರ್ವಾಸನೆಯನ್ನು ತಡೆಯುತ್ತದೆ.
ಹಲವು ಸಂಸ್ಥೆಗಳು ಒಂದು ಒರಟಾಗಿರುವ ಬ್ರಷ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ನಾಲಿಗೆ ಸ್ವಚ್ಛಗೊಳಿಸಲು, ನಿರ್ವಹಿಸಲು ಹಾಗೂ ಕೆಲವೊಮ್ಮೆ ಟೂತ್‌ಪೇಸ್ಟ್ ನೊಂದಿಗೂ ಬಳಸಬಹುದು. ಗ್ರೀನ್ ಟೀ ಬಾಯಿಯ ಬ್ಯಾಕ್ಟೀರಿಯಾ ತೆಗೆದುಹಾಕುವುದರೊಂದಿಗೆ, ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಡೀ ಹೈಡ್ರೇಷನ್ (ನಿರ್ಜಲೀಕರಣ) ಸಹ ನಾಲಗೆಯ ಬಣ್ಣಗೆಡಿಸುವಿಕೆ ಮತ್ತು ನಾಲಗೆಯ ಒಣಗಿಸುತ್ತದೆ. ನಾಲಗೆ ಶುಷ್ಕವಾಗ ದಂತೆ ಅಗತ್ಯದಷ್ಟು ನೀರು ಕುಡಿಯುತ್ತಿರಿ. ಊಟದ ಮೊದಲು ಬಾಯಿಯನ್ನು ಸ್ವಚ್ಛಗೊಳಿಸಿಕೊಳ್ಳುವುದರಂದ ಹೊಟ್ಟೆಗೆ ಹೋಗುವ ಅಪಾಯಕಾರಿ ಬ್ಯಾಕ್ಟೀರಿಯಾವನ್ನು ತಡೆಯಬಹುದು. ನಿಮಗೆ ಅಲರ್ಜಿಯನ್ನುಂಟು ಮಾಡುವ ಆಹಾರವನ್ನು ದೂರವಿಡಿ.