
ಮೇಷ : ಸಪ್ತಮದ ಗುರುವಿನಿಂದಾಗಿ ದಾಂಪತ್ಯದಲ್ಲಿ ಸಾಮ್ಯತೆ, ಹೊಂದಾಣಿಕೆ ಸಾಧ್ಯತೆ, ಕಳೆದು ಹೋಗಿದ್ದ ನಂಟು ಮತ್ತೆ ಬೆಸೆಯಲಿದೆ, ಐಕ್ಯಮತ್ಯ ಮಂತ್ರಗಳ ಪಾರಾಯಣ ಮಾಡಿಸಿ.
ವೃಷಭ : ಕುಜನ ನೇರದೃಷ್ಟಿ ರಾಶಿಯಮೇಲಿರುವುದರಿಂದ ದೇಹ ಬಾಧೆ, ಸಂಸಾರದಲ್ಲಿ ವಿರಸ, ಸಾಮಾನ್ಯದಿನ, ಸುಬ್ರಹ್ಮಣ್ಯ ಜಪ/ಹೋಮಾದಿಗಳನ್ನು ಮಾಡಿಸಿ
ಮಿಥುನ : ರಾಶಿಯ ಅಧಿಪತಿ ನೀಚನಾಗಿರುವುದರಿಂದ ಕಾರ್ಯ ವಿಘ್ನ, ಆದರೆ ಗುರುವಿನ ಅನುಗ್ರಹವೂ ಇರುವುದರಿಂದ ಹೆಚ್ಚು ಚಿಂತಿಸುವ ಅಗತ್ಯವಿಲ್ಲ,
ಕಟಕ : ರಾಶ್ಯಾಧಿಪತಿ ನೀಚನಾಗಿದ್ದಾನೆ, ಮಾನಸಿಕ ನೋವು, ಅಶಾಂತಿ ಆದರೆ ದಿನದ ಅಂತ್ಯದಲ್ಲಿ ಎಲ್ಲವೂ ಸರಿಹೋಗಲಿದೆ.
ಸಿಂಹ : ಮಕ್ಕಳ ಪ್ರತಿಭಾ ಪ್ರದರ್ಶನ, ಸಹೋದರರಲ್ಲಿ ಸಾಮರಸ್ಯ, ಲಿಂಗಾಷ್ಟಕವನ್ನು ಹೇಳಿಕೊಳ್ಳಿ
ಕನ್ಯಾ : ಸಪ್ತಮಾಧಿಪತಿ ಧನಸ್ಥಾನಗತನಾಗಿರುವುದರಿಂದ ಹೆಂಡತಿಯಿಂದ ಧನಲಾಭ, ಇದಲ್ಲದೆ, ಬಂಧುಗಳಲ್ಲಿ ಕಲಹ, ಸೌಖ್ಯ ಹಾನಿ, ವಿಷ್ಣು ಸಹಸ್ರನಾಮ ಪಠಿಸಿ
ತುಲಾ : ಧೈರ್ಯದಿಂದ ಕಾರ್ಯ ಮುನ್ನಡೆಸಲಿದ್ದೀರಿ, ತಾಯಿಯಿಂದ ಸಹಕಾರ ದೊರೆಯಲಿದೆ, ಮಹಾಲಕ್ಷ್ಮಿಗೆ ತಾವರೆ ಹೂವನ್ನು ಸಮರ್ಪಿಸಿ
ವೃಶ್ಚಿಕ : ಸಹೋದರರಿಂದ ಹೆಚ್ಚಿನ ಸಹಾಯ, ಹೋಟೆಲ್ ವ್ಯಾಪಾರಿಗಳಿಗೆ ಉತ್ತಮ ದಿನ, ಸುಬ್ರಹ್ಮಣ್ಯ ಕ್ಷೇತ್ರ ದರ್ಶನ ಮಾಡಿಬನ್ನಿ
ಧನಸ್ಸು : ಸ್ವಂತ ವ್ಯಾಪಾರಿಗಳಿಗೆ ಲಾಭದ ದಿನ, ದಾಂಪತ್ಯದಲ್ಲಿ ಮಾತಿನ ಸಮರ, ಅರ್ಧನಾರೀಶ್ವರ ದರ್ಶನ ಮಾಡಿ
ಮಕರ : ಹಣಕಾಸಿನ ತೊಂದರೆ, ಮಾತಿನಿಂದ ಕಾರ್ಯ ವಿಘ್ನ, ಸಾಧಾರಣ ದಿನ, ಕಾಲಭೈರವ ಸ್ತೋತ್ರ ಪಠಿಸಿ
ಕುಂಭ : ಗುರು ದೃಷ್ಟಿಯಿಂದಾಗಿ ಆರೋಗ್ಯದಲ್ಲಿ ಚೇತರಿಕೆ, ಕಾಲಹರಣ ಮಾಡದೆ ಕಾರ್ಯ ಸಾಧಿಸಿ, ರುದ್ರಾಭಿಷೇಕ ಮಾಡಿಸಿದವರಿಗೆ ಇಷ್ಟಾರ್ಥ ಸಿದ್ಧಿ
ಮೀನ : ರೋಗ ನಿವಾರಣೆ, ಧನ ಸ್ಥಾನಕ್ಕೆ ಗುರು ದೃಷ್ಟಿ ಇದೆ ಧನಾಗಮನ, ಶುಭ ದಿನ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.