Interesting Facts: ಸ್ಟೂಲ್ ಮಧ್ಯೆ ರಂಧ್ರ ಇರೋಕೆ ಇದೇ ಕಾರಣ ನೋಡಿ

Published : Dec 24, 2022, 04:27 PM IST
Interesting Facts: ಸ್ಟೂಲ್ ಮಧ್ಯೆ ರಂಧ್ರ ಇರೋಕೆ ಇದೇ ಕಾರಣ ನೋಡಿ

ಸಾರಾಂಶ

ಪ್ರತಿ ದಿನ ಸ್ಟೂಲ್ ಬಳಸ್ತೇವೆ. ಅದ್ರ ಮಧ್ಯೆ ರಂಧ್ರ ಇರೋದನ್ನೂ ಗಮನಿಸಿರ್ತೇವೆ. ಆದ್ರೆ ಯಾಕಿದೆ ಅನ್ನೋದು ತಿಳಿದಿರೋದಿಲ್ಲ. ಹಾಗೆಯೇ ವಿಶ್ವದ ಮೊದಲ ಹಣ್ಣು ಯಾವುದು, ಬೇಗ ಹಾಳಾಗುವ ಜ್ಯೂಸ್ ಯಾವುದು ಎಂಬುದನ್ನು ನಾವಿಂದು ಹೇಳ್ತೇವೆ.  

ನಾವು ನಮ್ಮ ಅನುಕೂಲಕ್ಕಾಗಿ ಅನೇಕ ವಸ್ತುಗಳನ್ನು ಸಿದ್ಧಪಡಿಸಿಕೊಂಡಿದ್ದೇವೆ. ಕೆಲವೊಂದು ವಸ್ತುಗಳನ್ನು ನಾವು ಪ್ರತಿ ದಿನ ಬಳಸ್ತೇವೆ. ನಮ್ಮ ಮನೆಯಲ್ಲಿ ಸೋಫಾ, ಟಿವಿ ಸ್ಟ್ಯಾಂಡ್, ಫ್ರಿಜ್, ಮಂಚ, ಕುರ್ಚಿ, ಸ್ಟೂಲ್ ಹೀಗೆ ಅನೇಕ ವಸ್ತುಗಳಿರುತ್ತವೆ. ಕೆಲವೊಂದು ವಸ್ತುಗಳಿಗೆ ಅದರದೆ ಆದ ವಿನ್ಯಾಸವಿರುತ್ತದೆ. ನೀವು ಬಳಸುವ ಬ್ಲೇಡ್ ನೋಡಿರಬಹುದು. ಎಲ್ಲ ಬ್ಲೇಡ್ ಗಳ ಆಕಾರ ಒಂದೇ ರೀತಿಯಲ್ಲಿ ಇರುತ್ತದೆ. ಹಾಗೆಯೇ ನಿಮ್ಮ ಮನೆಯಲ್ಲಿರುವ ಸ್ಟೂಲನ್ನು ಒಮ್ಮೆ ನೋಡಿ. 

ನೀವು ಅನೇಕ ಕೆಲಸಕ್ಕೆ ಈ ಸ್ಟೂಲ್ (Stool) ಬಳಸ್ತೀರಿ. ಅದ್ರ ಮೇಲೆ ವಸ್ತುಗಳನ್ನು ಇಡ್ತಿರಿ. ಅದ್ರ ಮೇಲೆ ಕುಳಿತುಕೊಳ್ತಿರಿ. ಅದ್ರ ಮೇಲೆ ಹತ್ತಿ ಮೇಲಿರುವ ವಸ್ತುಗಳನ್ನು ತೆಗೆಯುತ್ತೀರಿ. ಆದ್ರೆ ಈ ಪ್ಲಾಸ್ಟಿಕ್ (Plastic) ಸ್ಟೂಲ್ ವಿನ್ಯಾಸವನ್ನು ಗಮನಿಸಿರೋದಿಲ್ಲ. ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಬಗೆ ಬಗೆಯ ವಿನ್ಯಾಸದ ಸ್ಟೂಲ್ ಸಿಗುತ್ತದೆ. ಬೆಂಗಳೂರಿನ ಕಾರ್ಖಾನೆ ಇರಲಿ, ದೆಹಲಿ ಕಾರ್ಖಾನೆ ಇರಲಿ ಎಲ್ಲ ಕಡೆ ಸ್ಟೂಲ್ ನಿರ್ಮಾಣ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸಲೇ ಬೇಕಾಗುತ್ತದೆ. ಸ್ಟೂಲ್ ತಯಾರಿಸುವ ಕಂಪನಿ, ಸ್ಟೂಲ್ ಯಾವುದೇ ಆಕಾರದಲ್ಲಿ ನೀಡಲಿ, ಅದ್ರ ಮಧ್ಯೆ ಒಂದು ರಂಧ್ರ (Hole) ವನ್ನು ಇಡಬಲೇಬೇಕು. 

ನಮ್ಮ ಮನೆಯ ಅತಿ ಪುಟ್ಟ ಜಾಗದಲ್ಲಿ ಕೂರುವ ಪಿಠೋಪಕರಣ (Furniture) ಅಂದ್ರೆ ಅದು ಸ್ಟೂಲ್.  ನಾವು ಈ ಸ್ಟೂಲನ್ನು ಒಂದರ ಮೇಲೆ ಒಂದರಂತೆ ಇಡಬಹುದು. ನಾಲ್ಕೈದು ಸ್ಟೂಲ್ ಮನೆಯಲ್ಲಿದ್ದರೂ ಅದು ಜಾಗ ತಿನ್ನುವುದಿಲ್ಲ. ಇಷ್ಟೆಲ್ಲ ಸ್ಟೂಲ್ ಬಗ್ಗೆ ತಿಳಿದಿರುವ ನಮಗೆ ಸ್ಟೂಲ್ ಮಧ್ಯೆ ಯಾಕೆ ರಂಧ್ರ ಇಡ್ತಾರೆ ಅನ್ನೋದು ತಿಳಿದಿರೋದಿಲ್ಲ. ನಾವಿಂದು ಸ್ಟೂಲ್ ಮಧ್ಯ ರಂಧ್ರವೇಕೆ ಇರುತ್ತೆ ಎಂಬುದನ್ನು ನಿಮಗೆ ಹೇಳ್ತೆವೆ.  

ವೈನ್ ಬಾಟಲಿ 750 ಎಂಎಲ್ ಇರೋದ್ಯಾಕೆ?

ಸ್ಟೂಲ್ ಮಧ್ಯೆ ರಂಧ್ರಗಳನ್ನು ಏಕೆ ಮಾಡಲಾಗುತ್ತದೆ? : ಒತ್ತಡ ಮತ್ತು ನಿರ್ವಾತವನ್ನು ಕಡಿಮೆ ಮಾಡಲು ಸ್ಟೂಲ್ ಮಧ್ಯೆ ರಂಧ್ರಗಳನ್ನು ಮಾಡಲಾಗುತ್ತದೆ. ಕಡಿಮೆ ಸ್ಥಳಾವಕಾಶದ ಕಾರಣ ಪ್ಲಾಸ್ಟಿಕ್ ಸ್ಟೂಲನ್ನು ಒಂದರ ಮೇಲೊಂದರಂತೆ ಇಡುತ್ತೇವೆ. ಬಳಕೆಯ ಸಮಯದಲ್ಲಿ ಅವುಗಳನ್ನು ಪ್ರತ್ಯೇಕಗೊಳಿಸಲಾಗುತ್ತದೆ. ಸ್ಟೂಲ್ ಮಧ್ಯೆ ರಂಧ್ರವಿಲ್ಲ ಎಂದಾದ್ರೆ ಸ್ಟೂಲ್ ಒಂದಕ್ಕೊಂದು ಸೇರಿಕೊಂಡಿರುತ್ತದೆ. ಒಂದು ಸ್ಟೂಲನ್ನು ಇನ್ನೊಂದು ಸ್ಟೂಲ್ ನಿಂದ ಬೇರ್ಪಡಿಸುವುದು ಕಷ್ಟವಾಗುತ್ತದೆ. ಈ ರಂಧ್ರಗಳು ಎರಡು ಸ್ಟೂಲ್ ಮಧ್ಯೆ  ಜಾಗವನ್ನು ಕಾಪಾಡಿಕೊಳ್ಳಲು ಮತ್ತು ಸುಲಭವಾಗಿ ತೆಗೆಯಲು ಬಹಳ ಮುಖ್ಯ.

ಸ್ಟೂಲ್ ಮಧ್ಯೆ ರಂಧ್ರವಿರಲು ಸುರಕ್ಷತೆಯೂ ಕಾರಣ :  ಒತ್ತಡ ಮತ್ತು ನಿರ್ವಾತದ ಹೊರತಾಗಿ ಪ್ಲಾಸ್ಟಿಕ್ ಸ್ಟೂಲ್ ರಂಧ್ರ ಇರಲು ಅನೇಕ  ಕಾರಣಗಳಿವೆ. ವಿಜ್ಞಾನದ ದೃಷ್ಟಿಕೋನದಿಂದ  ಸುರಕ್ಷತೆಗಾಗಿ ಸ್ಟೂಲ್ ನಲ್ಲಿ ರಂಧ್ರಗಳನ್ನು ಮಾಡಲಾಗುತ್ತದೆ. ಭಾರವಾದ ವ್ಯಕ್ತಿಯು ಸ್ಟೂಲ್ ಮೇಲೆ ಕುಳಿತಾಗ, ರಂಧ್ರಗಳು ಅವನ ದೇಹದ ತೂಕವನ್ನು ಸಮಾನವಾಗಿ ವಿತರಿಸುತ್ತವೆ. ಇದರಿಂದಾಗಿ ಸ್ಟೂಲ್ ಒಡೆಯುವುದಿಲ್ಲ ಮತ್ತು ವ್ಯಕ್ತಿ  ಸುರಕ್ಷಿತವಾಗಿರುತ್ತಾನೆ.

ಸ್ಟೂಲ್ ಅಲ್ಲದೆ ನಾವು ಕೆಲ ವಿಷ್ಯಗಳ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ :
ಅತಿ ಬೇಗ ಡೇಟ್ ಬಾರ್ ಆಗುವ ಜ್ಯೂಸ್ ಅಂದ್ರೆ ಅದು ಕಬ್ಬಿನ ಜ್ಯೂಸ್. ಕಬ್ಬಿನ ರಸವನ್ನು ತಯಾರಿಸಿದ 15 ನಿಮಿಷಗಳ ನಂತರ ಅದರ ಅವಧಿ ಮುಗಿಯುತ್ತದೆ.  15 ನಿಮಿಷದ ನಂತ್ರ ನೀವು ಅದನ್ನು ಕುಡಿದ್ರೆ ಅದರ ರುಚಿಯಲ್ಲಿ ವ್ಯತ್ಯಾಸ ಕಂಡು ಬರುತ್ತದೆ.  

ಟೂತ್ ಪೇಸ್ಟ್ ಹಿಂದೆ ಬಣ್ಣದ ಗೆರೆ ನೋಡಿ ಕ್ವಾಲಿಟಿ ಡಿಸೈಡ್ ಮಾಡ್ಬೇಡಿ

ಪ್ರಪಂಚದಲ್ಲಿ ಮೊದಲ ಬಂದ ಹಣ್ಣು ಯಾವುದು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಪ್ರಪಂಚದಲ್ಲಿ ಮೊದಲು ಬಂದ ಹಣ್ಣು ಕಿತ್ತಳೆ ಹಣ್ಣು. ಅದನ್ನು ಜೆ ವ್ಯಾಲ್ಯೂ ರೆಡ್ ಎಂದು ಕರೆಯಲಾಗುತ್ತಿತ್ತು. ಎಲ್ಲರಿಗೂ ಕರೆಯಲು ಸುಲಭವಾಗಲಿ ಎನ್ನುವ ಕಾರಣಕ್ಕೆ ಅದಕ್ಕೆ ಆರೆಂಜ್ ಎಂದು ಹೆಸರಿಡಲಾಯಿತು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ವಿವಿಧ ರಾಜ್ಯಗಳ Popular Vegetarian Dishes, ನೀವು ಟ್ರೈ ಮಾಡಲೇಬೇಕು
Bhagyalakshmi Serial: ಆ ಪ್ರಶ್ನೆಯನ್ನು ಆದಿಗೆ ಕೇಳಿ ಬಿರುಗಾಳಿ ಎಬ್ಬಿಸಿದ ಕುಸುಮಾ! ಫ್ಯಾನ್ಸ್​ ಬೇಸರ