
ಬೆಂಗಳೂರು: ಇಂದು ಪ್ರತಿಯೊಬ್ಬ ಸದಸ್ಯರ ಬಳಿಯಲ್ಲಿಯೂ ಸ್ಮಾರ್ಟ್‌ಫೋನ್ ಇದ್ದೇ ಇರುತ್ತದೆ. ಮೊಬೈಲ್ ಬಳಕೆದಾರರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. 2Gಯಿಂದ5Gಗೆ ನೆಟ್‌ವರ್ಕ್ ಬದಲಾಗಿದ್ದು, ಇಂಟರ್‌ನೆಟ್ ಸ್ಪೀಡ್ ಹೆಚ್ಚಾಗಿದೆ. ವಿಡಿಯೋ, ರೀಲ್ಸ್, ಫೋಟೋ, ಹಾಡು ಕೇಳಲು ಸೇರಿದಂತೆ ಹಲವು ವಿವಿಧ ಉದ್ದೇಶಗಳಿಗಾಗಿ ಮೊಬೈಲ್ ಬಳಕೆ ಮಾಡಲಾಗುತ್ತದೆ. ಎಷ್ಟೋ ಜನರು ಮೊಬೈಲ್ ನಲ್ಲಿಯೇ ಕೆಲಸ ಮಾಡುತ್ತಾರೆ. ಇಂದು ಇಂಟರ್‌ನೆಟ್ ಬಳಕೆಯೂ ಹೆಚ್ಚಾಗಿದೆ. ರಿಲಯನ್ಸ್ ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಬಿಎಸ್‌ಎನ್‌ಎಲ್ ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಾಗಿವೆ. ಇದೆಲ್ಲದರ ಜೊತೆಯಲ್ಲಿಯೂ ಮಾರುಕಟ್ಟೆಗೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಡುತ್ತಿವೆ. ಕೆಲವರಂತೂ ಪ್ರತಿವರ್ಷ ಮೊಬೈಲ್ ಬದಲಾಯಿಸುತ್ತಿರುತ್ತಾರೆ. ಎಷ್ಟೇ ಮೊಬೈಲ್ ಬದಲಾದ್ರೂ ಸಂಖ್ಯೆ ಮಾತ್ರ ಅದೇ ಆಗಿರುತ್ತದೆ.
ಇತ್ತೀಚೆಗೆ ಟ್ಯಾರಿಫ್ ಬೆಲೆ ಏರಿಕೆಯಾಗಿದ್ದರಿಂದ ಬಳಕೆದಾರರು ಎಂಎನ್‌ಪಿ ಮೂಲಕ ನೆಟ್‌ವರ್ಕ್ ಬದಲಿಸಿಕೊಳ್ಳುತ್ತಿದ್ದಾರೆ. ಕೆಲವರು ಹೊಸ ಸಿಮ್ ಖರೀದಿಸುತ್ತಿದ್ದಾರೆ. ಕಳೆದ 5-10 ವರ್ಷಗಳಿಂದ ನೀವು ಒಂದೇ ನಂಬರ್ ಬಳಸುತ್ತಿದ್ರೆ ಈ ಸುದ್ದಿಯನ್ನು ಓದಲೇಬೇಕು. ನೀವು ಒಂದೇ ಸಿಮ್ ಕಾರ್ಡ್ ಹೊಂದಿದ್ದು, ದಿನನಿತ್ಯದ ವಹಿವಾಟುಗಳಿಗೆ ಅದೇ ಸಂಖ್ಯೆ ಬಳಕೆ ಮಾಡುತ್ತಿದ್ರೆ ಇತರ ಬಳಕೆಗಾರರಗಿಂತ ನೀವು ತುಂಬಾ ವಿಭಿನ್ನವಾಗಿ ನಿಲ್ಲುತ್ತೀರಿ. ಮೊಬೈಲ್ ಸಂಖ್ಯೆ ಬಳಕೆ ಅವಧಿ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಗುರುತಿಸಬಹುದು. ಒಂದೇ ಸಂಖ್ಯೆಯನ್ನು ಐದರಿಂದ 10 ವರ್ಷಗಳವರೆಗೆ ಬಳಕೆ ಮಾಡುವ ವ್ಯಕ್ತಿಯ ಸ್ವಭಾವವನ್ನು ಸುಲಭವಾಗಿ ಗುರುತಿಸಲಾಗುತ್ತದೆ. ಆ ಗುಣಗಳು ಏನು ಎಂಬುದನ್ನು ನೋಡೋಣ ಬನ್ನಿ.
1.ನೀವು ಸುಸ್ತಿದಾರರು ಅಲ್ಲ
ಪದೇ ಪದೇ ಸಾಲ ತೆಗೆದುಕೊಂಡು ಸರಿಯಾದ ಸಮಯಕ್ಕೆ ಹಣ ಹಿಂದಿರುಗಿಸದ ವ್ಯಕ್ತಿಗಳು ಆಗಾಗ್ಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಿಸುತ್ತಿರುತ್ತಾರೆ. ಸಾಲಗಾರರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡುತ್ತಿರುತ್ತಾರೆ. ಕಳೆದ 5-10 ವರ್ಷಗಳಿಂದ ಒಂದೇ ಸಂಖ್ಯೆ ಬಳಕೆ ಮಾಡುತ್ತಿದ್ರೆ ನೀವು ಸುಸ್ತಿದಾರರು ಅಲ್ಲ ಎಂದರ್ಥ.
2.ನಂಬಿಕಸ್ಥ
ಒಂದೇ ನಂಬರ್ ಬಳಸುವ ವ್ಯಕ್ತಿ ನಂಬಿಕಸ್ಥ ಎಂದು ನಂಬಬಹುದು. ಕೆಲವರು ಮೊಬೈಲ್ ಕಳೆದುಕೊಂಡರೂ ನಿಯಮಗಳ ಪ್ರಕಾರ, ಅದೇ ಸಂಖ್ಯೆಯ ಸಿಮ್ ಪಡೆದುಕೊಳ್ಳುತ್ತಾರೆ. ಈ ಮೂಲಕ ತಮ್ಮ ಎಲ್ಲಾ ಸಂಪರ್ಕವನ್ನು ಪುನಃ ಸಾಧಿಸಿಕೊಳ್ಳುತ್ತಾರೆ. ಇಂತಹ ವ್ಯಕ್ತಿಗಳು ಯಾರನ್ನೂ ಸಹ ಕಳೆದುಕೊಳ್ಳಲು ಇಷ್ಟಪಡಲ್ಲ. ಸಂಬಂಧಗಳಿಗೆ ಬೆಲೆ ಕೊಡುವ ವ್ಯಕ್ತಿತ್ವ ಹೊಂದಿರುತ್ತಾರೆ.
ಇದನ್ನೂ ಓದಿ: ಒಂದೇ ದಿನದಲ್ಲಿ 2,366 ಕೋಟಿ ಹಣ ಕಳೆದುಕೊಂಡ ಗೌತಮ್ ಅದಾನಿ; ಯಾಕೆ ಇಷ್ಟೊಂದು ನಷ್ಟ?
3.ಪ್ರಾಮಾಣಿಕತೆ
ನೀವು ಹಲವಾರು ವರ್ಷಗಳಿಂದ ಒಂದೇ ನಂಬರ್ ಬಳಕೆ ಮಾಡುತ್ತಿದ್ದರೆ ನಿಮ್ಮನ್ನು ಪ್ರಾಮಾಣಿಕ ಎಂದು ಪರಿಗಣಿಸಬಹುದು. ಯಾವುದೇ ಸಂದರ್ಭದಲ್ಲಿ ಪ್ರಾಮಾಣಿಕತೆಯನ್ನು ಯಾವ ವಿಷಯಕ್ಕೂ ರಾಜಿ ಮಾಡಿಕೊಳ್ಳಲ್ಲ ಎಂದರ್ಥ. ಮೋಸ ಮಾಡುವ ಗುಣ ಹೊಂದಿರುವ ವ್ಯಕ್ತಿಗಳು ಅಧಿಕ ಸಿಮ್ ಮತ್ತು ನಂಬರ್ ಬದಲಾಯಿಸುತ್ತಿರುತ್ತಾರೆ.
4.ಆರೋಪ ರಹಿತ ವ್ಯಕ್ತಿ
ಯಾವುದೇ ಆರೋಪವಿಲ್ಲದ ವ್ಯಕ್ತಿ ಒಂದೇ ಸಂಖ್ಯೆಯನ್ನು ದೀರ್ಘಕಾಲದವರೆಗೆ ಬಳಸುತ್ತಾರೆ. ನಿಮ್ಮ ವಿರುದ್ಧ ಯಾರಿಗೂ ಯಾವುದೇ ದೂರು/ಆರೋಪಗಳಿಲ್ಲ ಎಂದರ್ಥ. ಒಂದೇ ಸಂಖ್ಯೆಯನ್ನು ದೀರ್ಘಕಾಲದವರೆಗೆ ಬಳಸಿದ ವ್ಯಕ್ತಿತ್ವ ಪರಿಶುದ್ಧವಾಗಿರುತ್ತೆ ಎಂದು ನಂಬಬಹುದು.
ಇದನ್ನೂ ಓದಿ: ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆದ ಬಿಎಸ್‌ಎನ್ಎಲ್; ಅತೀ ಕಡಿಮೆ ಬೆಲೆ 90 ದಿನದ ಪ್ಲಾನ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.