
ಸ್ಯಾಲರಿ ಉದ್ಯೋಗಿಗಳು, ವಿದ್ಯಾರ್ಥಿಗಳು, ಪೋಷಕರು, ಉದ್ಯಮಿಗಳು, ವ್ಯಾಪಾರಸ್ಥರು ಸೇರಿದಂತೆ ಬಹುತೇಕರು ವೀಕೆಂಡ್ ಬಂದಾಗ ಕೊಂಚ ರಿಲ್ಯಾಕ್ಸ್ ಆಗುತ್ತಾರೆ. ಎರಡು ದಿನ ಅಥವಾ ಒಂದು ದಿನ ರಜೆಯನ್ನು ವಿಶ್ರಾಂತಿ ಪಡೆಯುತ್ತಾ, ತಮ್ಮ ನೆಚ್ಚಿನ ಕೆಲಸ ಕಾರ್ಯಗಳನ್ನು ಮಾಡುತ್ತಾ ಕಳೆಯಲು ಇಷ್ಟಪಡುತ್ತಾರೆ. ಜೊತೆಗೆ ಆಹಾರದಲ್ಲೂ ತಮ್ಮಿಷ್ಟದ ಫುಡ್ ಬಯಸುತ್ತಾರೆ. ಇದರಲ್ಲಿ ತಪ್ಪೇನು ಇಲ್ಲ. ಆದರೆ ವಾರಾಂತ್ಯದಲ್ಲಿ ಸಣ್ಣ ಸಣ್ಣ ನಿರ್ಲಕ್ಷ್ಯಗಳಿಂದ ದೇಹದ ಇನ್ಸುಲಿನ್ ಸೆನ್ಸಿಟಿವಿಟಿ ಕುಗ್ಗುತ್ತೆ. ಇದರಿಂದ ವೀಕೆಂಡ್ ಮಸ್ತಿಗೆ ಬ್ರೇಕ್ ಹಾಕಬೇಕಾದ ಅನಿವಾರ್ಯತೆ ಎದುರಾಗಲಿದೆ. ಹೌದು, ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಭಾರಿ ವ್ಯತ್ಯಾಸವಾಗಲಿದೆ. ಇದರಿಂದ ಜೀವನ ಪರ್ಯಂತೆ ಶುಗರ್ ಮಾತ್ರೆ ಸೇವನೆಯಲ್ಲೇ ಕಳೆಯಬೇಕಾಗುತ್ತದೆ.
ವೀಕೆಂಡ್‌ನಲ್ಲಿ ಬಹುತೇಕರು ತಮ್ಮ ದೈನಂದಿನ ದಿನಚರಿ ಪಾಲಿಸುವುದಿಲ್ಲ. ವಿಶ್ರಾಂತಿ ಕಾರಣದಿಂದ ತಡವಾಗಿ ಏಳುತ್ತಾರೆ.ಸ್ಲೀಪ್ ಸೈಕಲ್ ಬದಲಾದಾಗ ಕಾರ್ಟಿಸೋಲ್ ಎಂಬ ಸ್ಟ್ರೆಸ್ ಹಾರ್ಮೋನ್ ಮಟ್ಟ ಹೆಚ್ಚಾಗುತ್ತದೆ. ಇದು ಇನ್ಸುಲಿನ್ ನಿರೋಧಕತೆಯನ್ನು ಹೆಚ್ಚಿಸಿ, ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ದಿಢೀರ್ ಏರಿಕೆ ಮಾಡುತ್ತದೆ. ಇದರಿಂದ ಶುಗರ್ ಸಮಸ್ಯೆಗಳು ಕಾಡುತ್ತದೆ.
ವೀಕೆಂಡ್‌ನಲ್ಲಿ ಸ್ನೇಹಿತರು, ಕುಟುಂಬಸ್ಥರು, ಆಪ್ತರ ಜೊತೆ ಸೇರಿ ಮಸ್ತಿ ಮಾಡುವುದು, ಮಾತುಕತೆ ಹರಟೆಗಳಿಂದ ಊಟ ತಡವಾಗಿ ಮಾಡುವುದು, ಊಟದ ಸಮಯ ವಿಳಂಬ ಮಾಡುವುದರಿಂದಲೂ ಸಮಸ್ಯೆ ತೀವ್ರಗೊಳ್ಳಲಿದೆ. ರಾತ್ರಿ ತಡವಾಗಿ ಕ್ಯಾರೋಬೋಹೈಡ್ರೇಟ್ ಹೆಚ್ಚಿರುವ ಆಹಾರ ಸೇವಿಸುವ ಕಾರಣ ರಾತ್ರಿಯಿಡೀ ರಕ್ತದಲ್ಲಿ ಶುಗರ್ ಪ್ರಮಾಣ ಹೆಚ್ಚೇ ಇರುತ್ತದೆ. ಮರುದಿನ ಬೆಳಗ್ಗೆ ಇನ್ಸುಲಿನ್ ಸರಿಯಾಗಿ ಕೆಲಸ ಮಾಡದೆ ಬೆಳಗಿನ ರಕ್ತದ ಸಕ್ಕರೆ ಮಟ್ಟ ಏರಿಕೆಯಾಗುತ್ತದೆ.
ವೀಕೆಂಡ್ ಕಾರಣದಿಂದ ಹೊರಗಡೆ ಸುತ್ತಾಟ, ಹೊರಗಿನ ಆಹಾರ ಸೇವನೆ, ಅದರಲ್ಲೂ ಜಂಕ್ ಫುಡ್ ಸೇವನೆಗಳಿಂದ ಸಮಸ್ಯೆಗಳು ತೀವ್ರಗೊಳ್ಳಲಿದೆ. ಪಿಜ್ಜಾ, ಬರ್ಗರ್ ಹಾಗೂ ಕೋಲ್ಡ್ ಡ್ರಿಂಕ್ಸ್ ಸೇವನೆ ಶುಗರ್ ಲೆವೆನ್ ಅಪಾಯಾಕಾರಿ ಮಟ್ಟದಲ್ಲಿರುವರಿಗೆ ಸಮಸ್ಯೆ ಹೆಚ್ಚಾಗಲಿದೆ. ಜೊತೆಗೆ ಫಿಟ್ ಆ್ಯಂಡ್ ಫೈನ್ ಆಗಿದ್ದವರ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಿಸುತ್ತದೆ.
ವೀಕೆಂಡ್‌ನಲ್ಲಿ ದೈನಂದಿನ ದಿನಚರಿ ಪಾಲಿಸುವವರ ಸಂಖ್ಯೆ ವಿರಳ. ಜಿಮ್ ಅಥವಾ ನಡಿಗೆ ಸೇರಿದಂತೆ ಯಾವುದೇ ರೀತಿಯ ದೈಹಿಕ ಅಭ್ಯಾಸಗಳಿಗೆ ಬ್ರೇಕ್ ನೀಡಲಾಗುತ್ತದೆ. ಇಷ್ಟೇ ಆದರೇ ಉತ್ತಮ. ಆದರೆ ಜಂಕ್ ಫುಡ್, ಮಲಗುತ್ತಾ ಕಾಲ ಕಳೆಯುವುದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೈಹಿಕ ಚಟುವಟಿಕೆ ಇಲ್ಲದ ಕಾರಣ ಸ್ನಾಯುಗಳು ಗ್ಲೋಕೋಸ್ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ.
ವೀಕೆಂಡ್ ಪಾರ್ಟಿ ಇದೀಗ ಸಾಮಾನ್ಯವಾಗಿದೆ. ಮದ್ಯಪಾನ, ಕೆಫೀನ್‌ಯುಕ್ತ ಪಾನೀಯ ಸೇವನೆಯಿಂದ ಒಂದೇ ಸಮನೆ ಶುಗಲ್ ಲೆವೆಲ್ ಹೆಚ್ಚಾಗಲಿದೆ. ಮದ್ಯಪಾನ ಲಿವರ್‌ನ ಗ್ಲೋಕೋಸ್ ಉತ್ಪಾದನಾ ಪ್ರಕ್ರಿಯೆಗೆ ಅಡ್ಡಿಯಾಗಲಿದೆ. ಇದಿರಂದ ಹೈ ಶುಗರ್ ಅಥವಾ ಲೋಶುಗರ್ ಎರಡು ಸಮಸ್ಯೆಗಳಿಗೆ ಕಾರಣವಾಗಲಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.