ಕಾಲ ಬದಲಾಗಿದೆ. ನಾವು ಮಾತ್ರವಲ್ಲ ಪ್ರಾಣಿಗಳೂ ಮಾಡರ್ನ್ ಆಗ್ತಿರುವಂತೆ ಕಾಣಿಸ್ತಿದೆ. ಯಾಕೆಂದ್ರೆ ಪುಂಗಿ ಬಿಟ್ಟು ಪಾಪ್ ಸಾಂಗ್ ಹಾವಿಗೂ ಇಷ್ಟವಾದಂತಿದೆ. ಹಾಗಾಗೇ ಹಾವು ಈ ಹಾಡಿಗೆ ತಲೆದೂಗಿ ಡಾನ್ಸ್ ಮಾಡಿದೆ.
ಪುಂಗಿ ಊದಿದಾಗ ಹಾವು ತಲೆದೂಗುತ್ತದೆ.. ನಾವು ಅನೇಕ ಸಿನಿಮಾಗಳಲ್ಲಿ ಇದನ್ನು ನೋಡಿದ್ದೇವೆ. ಹಿಂದೆ ಮನೆ ಮನೆಗೆ ಹಾವಾಡಿಗರು ಬರ್ತಿದ್ದರು. ಪುಂಗಿ ಊದಿ ತಮ್ಮ ಡಬ್ಬದಲ್ಲಿರುವ ಹಾವನ್ನು ಹೊರಗೆ ತೆಗೆದು ಅದು ತಲೆ ಆಡಿಸುವಂತೆ ಮಾಡ್ತಿದ್ದರು. ಕೆಲ ಹಾವಾಡಿಗರು ನಿಮ್ಮ ಮನೆ ಅಕ್ಕಪಕ್ಕ ಹಾವಿದೆ, ಪುಂಗಿ ಊದಿ ಅದನ್ನು ಹೊರಗೆ ಕರೆಯುತ್ತೇನೆ ಎಂದಿದ್ದೂ ಇದೆ. ಹಾವು, ಪುಂಗಿ ನಾದಕ್ಕೆ ಡಾನ್ಸ್ ಮಾಡುತ್ತೆ ಎಂಬುದು ಎಷ್ಟು ಸತ್ಯವೋ ಗೊತ್ತಿಲ್ಲ. ಆದ್ರೆ ಪುಂಗಿಗೆ ಮಾತ್ರವಲ್ಲ ಪಾಪ್ ಮ್ಯೂಜಿಕ್ ಗೂ ಹಾವು ಡಾನ್ಸ್ ಮಾಡುತ್ತೆ ಅಂದ್ರೆ ನೀವು ನಂಬ್ಲೇಬೇಕು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ಹರಿದಾಡ್ತಿದೆ. ಅದ್ರಲ್ಲಿ ಹಾವು ಇಂಗ್ಲೀಷ್ ಮ್ಯೂಜಿಕ್ ಗೆ ತಲೆ ಆಡಿಸ್ತಿದೆ.
ಈ ವಿಡಿಯೋವನ್ನು @kohtshoww ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮರದ ಮೇಜಿನ ಮೇಲೆ ಬ್ಲೂಟೂತ್ ಸ್ಪೀಕರ್ ಇರಿಸಿರುವುದನ್ನು ಈ ವೈರಲ್ (Viral) ಕ್ಲಿಪ್‌ನಲ್ಲಿ ಕಾಣಬಹುದು. ಸ್ಪೀಕರ್ ಬಳಿ ಒಂದು ತೆಳುವಾದ ಹಾವು ಇದೆ. ಸ್ಪೀಕರ್‌ನಲ್ಲಿ ಮ್ಯೂಸಿಕ್ ಪ್ಲೇ ಆಗುತ್ತಿದೆ. ಕೆಲ ಸಮಯ ಹಾವು ಶಾಂತವಾಗಿ ನಿಂತಿರುವುದು ಕಂಡು ಬಂದಿದೆ. ಆದರೆ ಸ್ಪೀಕರ್ ನಲ್ಲಿ ಫಾಸ್ಟ್ ಬೀಟ್ಸ್ ಬರುತ್ತಿದ್ದಂತೆ ಹಾವಿನ ರಿಯಾಕ್ಷನ್ ಬದಲಾಗುತ್ತದೆ. ಹಾವು (Snake) ನೃತ್ಯ ಮಾಡಲು ಪ್ರಾರಂಭಿಸುತ್ತದೆ. ಸ್ವಲ್ಪ ಸಮಯದ ನಂತರ ತನ್ನ ದೇಹವನ್ನು ತಿರುಗಿಸುತ್ತದೆ. ವೇಗವಾಗಿ ಚಲಿಸಲು ಪ್ರಾರಂಭಿಸುತ್ತದೆ. ಇಲ್ಲಿಗೆ ಕ್ಲಿಪ್ ಮುಗಿಯುತ್ತದೆ.
ಭಾರತದ ಅತ್ಯಂತ ಕೆಟ್ಟ ಸ್ಟ್ರೀಟ್‌ಫುಡ್ ಲಿಸ್ಟ್ ಬಿಡುಗಡೆ, ನಿಮ್ಮ ನೆಚ್ಚಿನ ಚಾಟ್ಸ್ ಇದ್ಯಾ ಚೆಕ್ ಮಾಡ್ಕೊಳ್ಳಿ
ಫಾಸ್ಟ್ ಬೀಟ್ ಗೆ ಹಾವು ತಲೆ ಆಡಿಸೋದನ್ನು ನೋಡಿದ ಜನರು ಖುಷಿಯಾಗಿದ್ದಾರೆ . ಇದನ್ನು ಕೆಲವರು ಡಿಜೆ ಸ್ನೇಕ್ ಎಂದು ಕರೆದಿದ್ದಾರೆ. 36 ಲಕ್ಷಕ್ಕೂ ಹೆಚ್ಚು ಬಾರಿ ಈ ವಿಡಿಯೋವನ್ನು ನೋಡಲಾಗಿದೆ. 2 ಲಕ್ಷ 44 ಸಾವಿರ ಲೈಕ್ ಬಂದಿದೆ. ಅನೇಕ ಇನ್ಸ್ಟಾಗ್ರಾಮ್ ಬಳಕೆದಾರರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಪ್ರತಿ ಕ್ಷಣವನ್ನೂ ಎಂಜಾಯ್ ಮಾಡಿ ಎಂದು ಒಬ್ಬರು ಬರೆದ್ರೆ, ಮ್ಯೂಸಿಕ್ ನ ಪವರ್ ಇದು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಸ್ನೇಕ್ ಡಾನ್ಸ್, ಹಾವೂ ಡಾನ್ಸ್ ಮಾಡುವಂತ ಹಾಡು ಹಾಕಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಹಾವಿಗೆ ಕಿವಿ ಕೇಳಿಸಲ್ಲ ಅಂತಾ ಯಾರು ಹೇಳಿದ್ದು ಎಂದು ಒಬ್ಬರು ಪ್ರಶ್ನೆ ಮಾಡಿದ್ರೆ ಇನ್ನೊಬ್ಬರು , ಹಾವಿಗೆ ಕಿವಿ ಕೇಳೋದಿಲ್ಲ, ಅದು ವೈಬ್ರೇಷನ್ ನಿಂದ ಅರ್ಥ ಮಾಡಿಕೊಳ್ಳುತ್ತೆ ಎನ್ನಲಾಗಿದೆ. ಆದ್ರೆ ಇಲ್ಲಿ ಕಂಪನದ ಬದಲು ಶಬ್ಧಕ್ಕೆ ಹಾವು ಸ್ಪಂದಿಸುತ್ತಿದೆ ಅಲ್ಲವೇ ಎಂದು ಇನ್ನೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾನೆ. ಈಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಾವು ಟ್ರೆಂಡ್ ಆಗಿದೆ. ಅನೇಕರು ಹಾವಿನ ವಿಡಿಯೋಗಳನ್ನು ಹಂಚಿಕೊಳ್ತಿದ್ದಾರೆ.
undefined
Relationship Tip : ಲಿವ್ ಇನ್ ಖುಷಿಯಾಗಿರ್ಬೇಕೆಂದ್ರೆ ಈ ರೂಲ್ಸ್ ಹಾಕಿಕೊಳ್ಳಿ!
ಹಾವಿಗೆ ಬಾಹ್ಯ ಕಿವಿ ಇಲ್ಲ. ಹಾಗಂತ ಹಾವಿಗೆ ಕೇಳೋದಿಲ್ಲ ಎನ್ನುವುದು ತಪ್ಪು. ಅದು ಭೂಮಿಯ ಕಂಪನ, ತರಂಗಗಳನ್ನು ಹೊಟ್ಟೆ ಹಾಗೂ ದವಡೆ ಮೂಲಕ ಗ್ರಹಿಸಿ ಪ್ರತಿಕ್ರಿಯೆ ನೀಡುತ್ತದೆ. ಹಾವಿನ ಒಳಕಿವಿಗಳು ಬಹಳ ಚುರುಕಾಗಿರುತ್ತವೆ. ಅವು ತಕ್ಷಣ ಪ್ರತಿಕ್ರಿಯೆ ನೀಡುತ್ತವೆ ಎಂದು ಸಂಶೋಧನಾ ವರದಿಯೊಂದು ಹೇಳಿದೆ. ಹಾವು ಕಿವುಡಲ್ಲ. ಆದ್ರೆ ಹಾವಿನ ಶ್ರವಣೇಂದ್ರಿಯವು ರುಚಿ ಮತ್ತು ದೃಷ್ಟಿಯಂತಹ ಇತರ ಭೌತಿಕ ಇಂದ್ರಿಯಗಳಿಗಿಂತ ದುರ್ಬಲವಾಗಿರುತ್ತದೆ. ಸಂಶೋಧಕರು 19ಕ್ಕೂ ಹೆಚ್ಚು ಜಾತಿಯ ಹಾವುಗಳ ಸಂಶೋಧನೆ ಮಾಡಿದ್ದರು. ನೆಲದಲ್ಲಿ ಕಂಪನವನ್ನುಂಟು ಮಾಡುವ ಶಬ್ಧ ಹಾಗೂ ಕಂಪನವನ್ನು ಉಂಟು ಮಾಡದ ಶಬ್ಧವನ್ನು ಅವರು ಮಾಡುವ ಮೂಲಕ ಹಾವಿನ ಶ್ರವಣ ಕ್ಷಮತೆಯನ್ನು ಪರೀಕ್ಷೆ ಮಾಡಿದ್ದರು.