ರೋಗಿಗಳಿಗೆ ಜೆನೆರಿಕ್ ಔಷಧಗಳನ್ನೇ ಶಿಫಾರಸು ಮಾಡಬೇಕು, ಇಲ್ಲದಿದ್ದರೆ ದಂಡ/ಶಿಕ್ಷೆ ವಿಧಿಸಲಾಗುವುದು ಎಂಬ ಭಾರತೀಯ ವೈದ್ಯಕೀಯ ಆಯೋಗದ ಆದೇಶಕ್ಕೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ವಿರೋಧ ವ್ಯಕ್ತಪಡಿಸಿದೆ.
ನವದೆಹಲಿ (ಆ.23): ದೇಶದ ವೈದ್ಯರು ರೋಗಿಗಳಿಗೆ ಜೆನೆರಿಕ್ ಔಷಧಗಳನ್ನೇ ಶಿಫಾರಸು ಮಾಡಬೇಕು ಹಾಗೂ ಅನಗತ್ಯವಾಗಿ ಅನ್ಯ ಔಷಧಗಳನ್ನು ಸೂಚಿಸಬಾರದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಹೊರಡಿಸಿದ್ದ ಸೂಚನೆಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ವಿರೋಧ ವ್ಯಕ್ತಪಡಿಸಿದ್ದು, ಜೆನರಿಕ್ ಔಷಧಗಳ ಗುಣಮಟ್ಟಖಾತರಿ ಸಾಬೀತಾಗುವತನಕ ಈ ಆದೇಶವನ್ನು ಹಿಂಪಡೆಯಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದೆ. ಈ ಸಂಬಂಧ ಐಎಂಎ, ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಅವರಿಗೆ ಪತ್ರ ಬರೆದಿದೆ.
‘ಸರ್ಕಾರದ ಆದೇಶವು ರೋಗಿಗಳ ಸುರಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ. ಭಾರತದ ಜೆನರಿಕ್ ಔಷಧಗಳಲ್ಲಿ ಕೇವಲ ಶೇ.1ರಷ್ಟುಔಷಧಗಳು ಮಾತ್ರ ಗುಣಮಟ್ಟಪರೀಕ್ಷೆಗೆ ಒಳಪಟ್ಟಿವೆ. ದೇಶದಲ್ಲಿ ಗುಣಮಟ್ಟ ಖಾತರಿ ಪರೀಕ್ಷೆ ಕೂಡ ಸರಿಯಿಲ್ಲ’ ಎಂದು ಹೇಳಿದೆ.
undefined
ಎನ್‌ಇಪಿ ರದ್ದು ನಿರ್ಧಾರಕ್ಕೆ ತೀವ್ರ ವಿರೋಧ, ಸರ್ಕಾರ ಬದಲಾದಂತೆ ಶಿಕ್ಷಣ ಬದಲಾವಣೆ ಒಳ್ಳೆಯದಲ್ಲ
ಅಲ್ಲದೆ, ಈ ಆದೇಶದಿಂದ ವೈದ್ಯರು ಫಾರ್ಮಾ ಕಂಪನಿಗಳು ನಡೆಸುವ ಸಮ್ಮೇಳನಗಳಿಗೆ ಹಾಜರಾಗುವುದನ್ನು ತಡೆಯುತ್ತದೆ ಎಂದು ಐಎಂಎ ಕಳವಳ ವ್ಯಕ್ತಪಡಿಸಿದೆ.
ಸರ್ಕಾರ ಏನು ಆದೇಶಿಸಿತ್ತು?: ‘ಔಷಧ ಖರೀದಿಸಲು ರೋಗಿಗಳು ಸಾಕಷ್ಟುಹಣ ವ್ಯಯ ಮಾಡುತ್ತಿರುವುದನ್ನು ತಪ್ಪಿಸಲು ದೇಶದ ವೈದ್ಯರು ರೋಗಿಗಳಿಗೆ ಜೆನೆರಿಕ್ ಔಷಧಗಳನ್ನೇ ಶಿಫಾರಸು ಮಾಡಬೇಕು ಹಾಗೂ ಅನಗತ್ಯವಾಗಿ ಔಷಧಗಳನ್ನು ಸೂಚಿಸಬಾರದು’ ಎಂದು ಇತ್ತೀಚೆಗೆ ಎನ್‌ಎಂಸಿ ಸೂಚನೆ ನೀಡಿತ್ತು.
ಒಂದು ವೇಳೆ, ಜೆನೆರಿಕ್ ಔಷಧ ಬಿಟ್ಟು ಬ್ರ್ಯಾಂಡೆಡ್ ಔಷಧವನ್ನು ವೈದ್ಯರು ಸಲಹೆ ಮಾಡಿದರೆ ಅಂತಹ ವೈದ್ಯರ ಮೇಲೆ ದಂಡ ಹಾಗೂ ನಿರ್ದಿಷ್ಟಅವಧಿಗೆ ಲೈಸೆನ್ಸ್ ಅಮಾನತುಗೊಳಿಸುವಂತಹ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಔಷಧ ಕಂಪನಿಗಳಿಂದ ವೈದ್ಯರು ಉಡುಗೊರೆ ಪಡೆಯುವಂತಿಲ್ಲ ಎಂದು ಎಚ್ಚರಿಕೆ ನೀಡಿತ್ತು.
Bengaluru: ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಹಾ ಟ್ರೇ ಹಿಡಿದು ಸರ್ವರ್ ಆದ ಇಸ್ರೋ
ಜನೌಷಧಿ ಕೇಂದ್ರಗಳು ಹಾಗೂ ಇನ್ನಿತರೆ ಜೆನೆರಿಕ್ ಔಷಧ ಮಳಿಗೆಗಳಿಂದ ಜೆನೆರಿಕ್ ಔಷಧ ಖರೀದಿಸುವಂತೆ ರೋಗಿಗಳಿಗೆ ವೈದ್ಯರು ಸಲಹೆ ಮಾಡಬೇಕು. ಸಾಕಷ್ಟುಜೆನೆರಿಕ್ ಔಷಧ ದಾಸ್ತಾನು ಇಟ್ಟುಕೊಳ್ಳುವಂತೆ ಆಸ್ಪತ್ರೆಗಳು ಹಾಗೂ ಸ್ಥಳೀಯ ಔಷಧ ಅಂಗಡಿಗಳಿಗೂ ವೈದ್ಯರು ಸೂಚಿಸಬೇಕು. ಬ್ರ್ಯಾಂಡೆಡ್ ಔಷಧಿಗೂ ಜೆನೆರಿಕ್ ಔಷಧಿಗೂ ವ್ಯತ್ಯಾಸವಿಲ್ಲ ಎಂದು ಜನರಲ್ಲಿ ಅರಿವು ಮೂಡಿಸಬೇಕು ಎಂದಿತ್ತು.