
ಮಾನವನ ಸಾಧನೆಗೆ ಮಿತಿಯಿಲ್ಲ. ಮನಸ್ಸು ಮಾಡಿದರೆ ಯಾವುದೂ ಕಷ್ಟಸಾಧ್ಯವಲ್ಲ ಎಂಬುದನ್ನು ಈ ವ್ಯಕ್ತಿ ಸಾಬೀತುಪಡಿಸಲು ಹೊರಟಿದ್ದಾನೆ.
ತೆಂಗಿನ ಮರ ಹತ್ತುವುದನ್ನು ನಾವೆಲ್ಲ ನೋಡಿದ್ದೇವೆ. ಅದರಲ್ಲೇನು ವಿಶೇಷ ಅಂತಿರಾ? ಖಂಡಿತ ಇದೆ. ಈ ವಿಡಿಯೋದಲ್ಲಿರುವ ವ್ಯಕ್ತಿ ಮುಕೇಶ್ ಕುಮಾರ್ ಅಂತ. ಹರ್ಯಾಣದ ನಿವಾಸಿ. ಇವರು ಮರ ಹತ್ತುವುದನ್ನು ನೋಡಿದರೆ ನೀವು ದಂಗಾಗುತ್ತಿರಿ. ಇವರು ತಲೆಕೆಳಗಾಗಿ ಮರ ಹತ್ತುತ್ತಾರೆ. ಮೊದ ಮೊದಲು ಕಷ್ಟಪಟ್ಟರೂ ಕಡೆಗೂ ಮರವೇರುವುದರಲ್ಲಿ ಯಶಸ್ವಿಯಾಗಿದ್ದಾರೆ.
ಕೇವಲ 5 ನಿಮಿಷಗಳಲ್ಲಿ ನಾನು ಮರವೇರುತ್ತೇನೆ. ಗಿನ್ನೀಸ್ ದಾಖಲೆ ಮಾಡುವ ಆಸೆಯಿದೆ. ಇದರಿಂದ ಸ್ವಲ್ಪ ಹಣ ಗಳಿಸಬಹುದು. ಕುಟುಂಬಕ್ಕೆ ಸಹಾಯವಾಗುತ್ತದೆ ಎಂದು ಕುಮಾರ್ ಹೇಳುತ್ತಾರೆ.
ಮುಕೇಶ್ ಕುಮಾರ್ ಮರವೇರುವ ವಿಡಿಯೋ ಇಲ್ಲಿದೆ ನೋಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.