ಸೆಕ್ಸ್ ವೇಳೆ ಸ್ಟೀಲ್ತಿಂಗ್ ಮಾಡುವ ಪ್ರವೃತ್ತಿ ಹುಡುಗರಲ್ಲಿ ಹೆಚ್ಚುತ್ತಿದೆಯಾ? ಏನಿದು ಸ್ಟೀಲ್ತಿಂಗ್?

By Suvarna Web DeskFirst Published May 4, 2017, 9:21 AM IST
Highlights

ಜೋಡಿಗಳು ಕಾಂಡಮ್ ಧರಿಸಿ ಲೈಂಗಿಕ ‌ಕ್ರಿಯೆಯಲ್ಲಿ ತೊಡಗಿರುವಾಗ, ಆ ನಡುವೆ ಸಂಗಾತಿಗೆ ತಿಳಿಯದಂತೆ ಕಾಂಡಮನ್ನು ಕಳಚುವುದನ್ನು ಸ್ಟೀಲ್ತಿಂಗ್ ಅನ್ನುತ್ತಾರೆ. ಈ ಬಗ್ಗೆ ಕೊಲಂಬಿಯಾ ಜರ್ನಲ್ ಆಫ್ ಜಂಡರ್ ಅಂಡ್ ಲಾ ನಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದ್ದು, ಸಂಗಾತಿಯ ಅನುಮತಿಯಿಲ್ಲದೇ ಕಾಂಡೂಮ್ ಕಳಚುವ ಇಂತಹ ಪ್ರಕರಣಗಳು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ನಿರ್ಲಕ್ಷಿಸಲ್ಪಡುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚು  ಗಂಭೀರವಾಗಿ ಚರ್ಚೆಯಾಗುವ ಅಗತ್ಯವಿದೆಯೆಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಲೈಂಗಿಕ ಲೋಕದಲ್ಲಿ ಚರ್ಚೆಯಾಗುತ್ತಿರುವ ಹೊಸ ದುಷ್ಟ ಪ್ರವೃತ್ತಿ ಸ್ಟೀಲ್ತಿಂಗ್. ಲೈಂಗಿಕ  ಕ್ರಿಯೆಯಲ್ಲಿ ದಂಪತಿಗಳ ಮಧ್ಯೆ ಪ್ರಾಮಾಣಿಕತೆ ಹಾಗೂ ವಿಶ್ವಾಸ ಬಹಳ ಮುಖ್ಯ. ಆದರೆ ಪುರುಷರಲ್ಲಿ ಸ್ಟೀಲ್ತಿಂಗ್ ಅಭ್ಯಾಸವು ಹೆಚ್ಚುತ್ತಿದ್ದು, ಅದನ್ನು ಲೈಂಗಿಕ  ಅಪರಾಧವೆಂದೇ ಪರಿಗಣಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ.

ಸ್ಟೀಲ್ತಿಂಗ್ ಎಂದರೇನು?
ಜೋಡಿಗಳು ಕಾಂಡಮ್ ಧರಿಸಿ ಲೈಂಗಿಕ ‌ಕ್ರಿಯೆಯಲ್ಲಿ ತೊಡಗಿರುವಾಗ, ಆ ನಡುವೆ ಸಂಗಾತಿಗೆ ತಿಳಿಯದಂತೆ ಕಾಂಡಮನ್ನು ಕಳಚುವುದನ್ನು ಸ್ಟೀಲ್ತಿಂಗ್ ಅನ್ನುತ್ತಾರೆ. ಈ ಬಗ್ಗೆ ಕೊಲಂಬಿಯಾ ಜರ್ನಲ್ ಆಫ್ ಜಂಡರ್ ಅಂಡ್ ಲಾ ನಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದ್ದು, ಸಂಗಾತಿಯ ಅನುಮತಿಯಿಲ್ಲದೇ ಕಾಂಡೂಮ್ ಕಳಚುವ ಇಂತಹ ಪ್ರಕರಣಗಳು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ನಿರ್ಲಕ್ಷಿಸಲ್ಪಡುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚು  ಗಂಭೀರವಾಗಿ ಚರ್ಚೆಯಾಗುವ ಅಗತ್ಯವಿದೆಯೆಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಸ್ಟೀಲ್ತಿಂಗ್'ನಿಂದ ಸಮಸ್ಯೆಗಳೇನು?
ಲೈಂಗಿಕ ಜೀವನದಲ್ಲಿ ಜೋಡಿಗಳ ನಡುವೆ ಪ್ರಾಮಾಣಿಕತೆ ಹಾಗೂ ವಿಶ್ವಾಸ ಬಹಳ ಮುಖ್ಯ. ಅಂತಹುದರಲ್ಲಿ  ಸ್ಟೀಲ್ತಿಂಗ್ ದುರಭ್ಯಾಸವು ಪರಸ್ಪರ ಸಂಬಂಧಗಳನ್ನು ಹದೆಗೆಡಿಸುವುದು.
ಎರಡನೆಯದಾಗಿ, ಸ್ಟೀಲ್ತಿಂಗ್'ನಿಂದ ಮಹಿಳಾ ಸಂಗಾತಿಯ (ಯೋಜನೆಯಿಲ್ಲದ) ಗರ್ಭಧರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಜತೆಗೆ, ಸಂಗಾತಿಯು ಲೈಂಗಿಕ ರೋಗಗಳಿಗೆ ತುತ್ತಾಗುವ ಅಪಾಯವೂ ಕೂಡ ಸ್ಟೀಲ್ತಿಂಗ್'ನಿಂದ ಹೆಚ್ಚಾಗುತ್ತದೆ.

click me!