Viral Video : ನಾಯಿಯಾಗಿ ಬದಲಾದ ಮನುಷ್ಯನ ವಾಕಿಂಗ್ ವೀಡಿಯೋ ವೈರಲ್

By Suvarna News  |  First Published Jul 31, 2023, 2:42 PM IST

ಸ್ಕೂಲಿನಲ್ಲಿ ಮಕ್ಕಳಿಗೆ ವೇಷ ಭೂಷಣ ಸ್ಪರ್ಧೆ ಇದ್ದಾಗ ಪ್ರಾಣಿ, ಪಕ್ಷಿಗಳ ಬಟ್ಟೆ ತಂದು ಅವರನ್ನು ಆ ಪ್ರಾಣಿಯಂತೆ ತೋರಿಸುವ ಪ್ರಯತ್ನ ಮಾಡ್ತೇವೆ.  ಹಾಗಂತ ಪರ್ಮನೆಂಟ್ ಇದೇ ವೇಷದಲ್ಲಿರು ಅಂದ್ರೆ ಸಾಧ್ಯವಿಲ್ಲ. ಆದ್ರೆ ಇಲ್ಲೊಬ್ಬ ವ್ಯಕ್ತಿ ಅದನ್ನೂ ಮಾಡಿ ತೋರಿಸಿದ್ದಾನೆ.
 


ಅತಿ ಬುದ್ಧಿವಂತ ಎನ್ನಿಸಿಕೊಂಡಿರುವ ಮನುಷ್ಯ ಈಗಿನ ದಿನಗಳಲ್ಲಿ ಚಿತ್ರವಿಚಿತ್ರವಾಗಿ ಆಡ್ತಿದ್ದಾನೆ. ತನ್ನ ಕೆಲಸ ಕಡಿಮೆ ಮಾಡಿಕೊಳ್ಳಲು ಒಂದಿಷ್ಟು ಸೌಲಭ್ಯಗಳನ್ನು ಸೃಷ್ಟಿ ಮಾಡಿಕೊಂಡು ಪರಿಸರ ನಾಶಕ್ಕೆ ಮುಂದಾಗ್ತಿದ್ರೆ ಮತ್ತೊಂದು ಕಡೆ ಪ್ರಾಣಿಯಂತೆ ಬದುಕುವ ಆಸೆಯಲ್ಲಿ ಮತ್ತೊಂದು ಕೆಲಸಕ್ಕೆ ಕೈ ಹಾಕಿದ್ದಾನೆ. ರಾಮಾಯಣದಲ್ಲಿ ಮಾರೀಚ ಚಿನ್ನದ ಜಿಂಕೆಯಾಗಿ ಬದಲಾಗುವ ಕಥೆಯನ್ನು ನೀವು ಕೇಳಿರ್ತೀರಿ, ಮಹಿಷಾಸುರ ಎಮ್ಮೆ ಆಗಿದ್ದು ಸೇರಿದಂತೆ ಪುರಾಣದಲ್ಲಿ ಅನೇಕ ದೇವರು, ರಾಕ್ಷಕರು ತಮ್ಮ ಅವತಾರ ಬದಲಿಸಿಕೊಂಡಿದ್ದಾರೆ. ಕಲಿಯುಗದಲ್ಲೂ ಜನರು ಇಂಥ ಪ್ರಯೋಗಕ್ಕೆ ಮುಂದಾಗ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೆ ತನ್ನ ದೇಹವನ್ನು ಬಾರ್ಬಿಡಾಲ್ ನಂತೆ ಮಾಡಿಕೊಳ್ಳಲು ಮಹಿಳೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಳು. ಅನೇಕ ಕಲಾವಿದರು ತಮ್ಮ ರೂಪದಲ್ಲಿ ಬದಲಾವಣೆ ತರಲು ಸರ್ಜರಿ ಮಾಡಿಸಿಕೊಳ್ತಾರೆ. ಸುಂದರವಾಗಿ ಕಾಣ್ಬೇಕು ಎಂಬುದು ಎಲ್ಲರ ಆಸೆ. ಆದ್ರೆ ಇಲ್ಲೊಬ್ಬ ವ್ಯಕ್ತಿಯ ಆಸೆ ಸಂಪೂರ್ಣ ಭಿನ್ನವಾಗಿದೆ. ತನ್ನ ರೂಪವನ್ನು ಮುಚ್ಚಿಟ್ಟು ಆತ ನಾಯಿಯಾಗಿದ್ದಾನೆ. ಹೌದು, ಅಚ್ಚರಿ ಎನ್ನಿಸಿದ್ರೂ ಇದು ಅತ್ಯ. 

ಮನುಷ್ಯ ರೂಪ ಬಿಟ್ಟು ನಾಯಿ (Dog) ಯಾದ ವ್ಯಕ್ತಿ..! : ನಾಯಿಯನ್ನು ನಿಷ್ಠಾವಂತ ಪ್ರಾಣಿ ಎನ್ನಲಾಗುತ್ತದೆ. ಬಹುತೇಕರ ಮನೆಯಲ್ಲಿ ನಾಯಿ ಸಾಕೋದನ್ನು ನಾವು ನೋಡ್ಬಹುದು. ನಾಯಿ ತನ್ನ ಯಜಮಾನನಿಗೆ ಸದಾ ನಿಷ್ಠೆಯಿಂದ ಇರುತ್ತದೆ, ಎಲ್ಲ ಪ್ರಾಣಿಗಳಿಗಿಂತ ಹೆಚ್ಚು ಪ್ರೀತಿಸುವ, ನಂಬಲು ಅರ್ಹವಾದ ಪ್ರಾಣಿ ನಾಯಿ ಎನ್ನಲಾಗುತ್ತದೆ. ಜಪಾನ್ ವ್ಯಕ್ತಿಯೊಬ್ಬ ನಾಯಿಯನ್ನು ಸಾಕೋ ಬದಲು ತಾನೇ ನಾಯಿಯಾಗಿದ್ದಾನೆ. 

ಮೂರನೇ ಪತ್ನಿಗೂ ರಾಹುಲ್‌ ಮಹಾಜನ್‌ ವಿಚ್ಛೇದನ, 4ನೇ ಪ್ರೀತಿಯ ಹುಡುಕಾಟದಲ್ಲಿ ಬಿಗ್‌ ಬಾಸ್‌ ಸ್ಟಾರ್‌!

Tap to resize

Latest Videos

ಜಪಾನ್ (Japan) ನ ವ್ಯಕ್ತಿ ಟೊಕೊ ನಾಯಿಯಾಗಿ ಪರಿವರ್ತನೆಯಾಗಿದ್ದಾನೆ. ಕಳೆದ ವರ್ಷವೇ ನಾನು ನಾಯಿ ಆಗುವ ಇಚ್ಛೆ ಹೊಂದಿದ್ದೇನೆ ಎಂದು ಟೊಕೊ ಹೇಳಿದ್ದ. ಟೊಕೊ ತನ್ನ ನೈಜ ಮುಖವನ್ನು ತೋರಿಸಿಲ್ಲ. ನಾಯಿಯಾಗುವ ನನ್ನ ಆಸೆ ನನ್ನ ಕುಟುಂಬಸ್ಥರು ಹಾಗೂ ಆಪ್ತರಿಗೆ ವಿಚಿತ್ರವಾಗಿದೆ. ಆದ್ರೆ ನನಗೆ ಇದು ಇಷ್ಟವೆಂದು ಟೊಕೊ ಹೇಳಿದ್ದ. ಆರಂಭದಲ್ಲಿ ಟೊಕೊವನ್ನು ಜನರು ಒಪ್ಪಿಕೊಂಡಿರಲಿಲ್ಲ. ಆದ್ರೀಗ ಟೀಕೆ ಮಾಡಿದ ಜನರೇ ಟೊಕೊವನ್ನು ಮೆಚ್ಚಿಕೊಂಡಿದ್ದಾರೆ.

ಟೊಕೊ ನಾಯಿಯಾಗಿದ್ದು ಹೇಗೆ? : ಟೊಕೊಗೆ ನಾಯಿ ರೂಪ ನೀಡುವ ಕೆಲಸವನ್ನು ಜಪಾನ್ ನ ಜೆಪೆಟ್ ಕಂಪನಿ ಮಾಡಿದೆ. ಈ ಕಂಪನಿ ಮನುಷ್ಯನಿಗಾಗಿ ಅಲ್ಟ್ರಾ-ರಿಯಲಿಸ್ಟಿಕ್ ನಾಯಿಯ ವೇಷಭೂಷಣವನ್ನು ತಯಾರಿಸಿದೆ. ಅದನ್ನು ತಯಾರಿಸಲು 40 ದಿನಗಳನ್ನು ತೆಗೆದುಕೊಂಡಿದೆ. ಜೆಪೆಟ್ ಕಂಪನಿ, ಟಿವಿ ಜಾಹೀರಾತು, ಸಿನಿಮಾಗಳಿಗೆ ಅಗತ್ಯವಿರುವ ವೇಷಭೂಷಗಳನ್ನು ತಯಾರಿಸುವ ಕಂಪನಿಯಾಗಿದೆ. ಈ ನಾಯಿ ಡ್ರೆಸ್ ಎಷ್ಟು ನೈಜವಾಗಿದೆ ಅಂದ್ರೆ ಅದ್ರಲ್ಲಿ ಇರೋದು ಮನುಷ್ಯ ಎನ್ನಲು ಸಾಧ್ಯವೇ ಇಲ್ಲ.

Inspiring Story : ಟ್ಯಾಕ್ಸಿ ಓಡಿಸ್ತಾನೇ ಯುಕೆ ವಿವಿಗೆ ಪ್ರವೇಶ ಪಡೆದ ದಿಟ್ಟೆ

ಟೊಕೊ ಖರ್ಚು ಮಾಡಿದ ಹಣವೆಷ್ಟು ? : ಪ್ಲಾಸ್ಟಿಕ್ ಸರ್ಜರಿ, ಅದು ಇದು ಅಂತಾ ಸೌಂದರ್ಯ ಹೆಚ್ಚಿಸಿಕೊಳ್ಳಲು ಜನರು ಲಕ್ಷಾಂತರ ರೂಪಾಯಿ ಖರ್ಚು ಮಾಡ್ತಾರೆ. ಅದ್ರಂತೆ ಟೊಕೊ ನಾಯಿಯಾಗಲು ಸುಮಾರು 12 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. 

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ :  ಐ ವಾಂಟ್ ಟು ಬಿ ಎ ಅನಿಮಲ್ ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ಟೊಕೊ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗುತ್ತದೆ. 31000 ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಈ ಚಾನೆಲ್ ನಲ್ಲಿ ಟೊಕೊ ವಿಡಿಯೋವನ್ನು ಸುಮಾರು 10 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ.  ವರ್ಷಗಳ ಹಿಂದೆ ಶೂಟ್ ಮಾಡಿರುವ ವಿಡಿಯೋವನ್ನು ಇತ್ತೀಚಿಗೆ ಅಪ್ಲೋಡ್ ಮಾಡಲಾಗಿದೆ. ಪ್ರಾಣಿಯಾಗಬೇಕೆಂಬ ನನ್ನ ಬಾಲ್ಯದ ಕನಸು ನನಸಾಗಿದೆ. ನಾನು ಪೋರ್ಟರ್ ಆದೆ ಎಂದು ವಿಡಿಯೋಕ್ಕೆ ಶೀರ್ಷಿಕೆ ನೀಡಲಾಗಿದೆ. ಟೊಕೊ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡೋದನ್ನು ನೀವು ವಿಡಿಯೋದಲ್ಲಿ  ನೋಡ್ಬಹುದು. 

click me!