
ಇಂಟರ್‌ನೆಟ್ ಅಗ್ಗವಾಗಿ ಸಿಗದಿದ್ದ ದಿನಗಳಲ್ಲಿಯೂ ಇವಳಿಗಾಗಿಯೇ ಅತಿ ಹೆಚ್ಚು ಹುಡುಕಾಟ ನಡೆದದ್ದು. ದೇಶದಲ್ಲಿ ಅಗ್ಗದ ಇಂಟರ್‌ನೆಟ್ ಪ್ರಾಪ್ತವಾದ ನಂತರವಂತೂ ಆಕೆಯನ್ನು ಹುಡುಕುತ್ತಿರುವವರ ಸಂಖ್ಯೆ ಅಧಿಕವಾಗಿದೆ.
ಮೊನ್ನೆ ಮೊನ್ನೆ ಅವಳು ಭೇಟಿ ಕೊಟ್ಟ ಒಂದು ಪ್ರದೇಶ ದಲ್ಲಂತೂ ಸಿಕ್ಕಾಪಟ್ಟೆ ಅಭಿಮಾನಿಗಳು ನೆರೆದು ಸ್ಥಳೀಯ ಪೊಲೀಸರಿಗೆ ಸವಾಲಾಗಿ, ಅದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿಬಿಟ್ಟಿತ್ತು. ಹಾಗೆ ದೇಶದಲ್ಲಿ ಸಣ್ಣ ಪುಟ್ಟದ್ದಕ್ಕೂ ಬಾರೀ ಸುದ್ದಿಯಾಗುವ ತಾಕತ್ತು ಇರುವುದು ಬಹುಶಃ ಈಕೆಗೇ ಅನ್ನಿಸುತ್ತದೆ. ಇವಳ ಹೆಸರು ಸನ್ನಿ ಲಿಯೋನ್. ವಿಷಯ ಏನಪ್ಪಾ ಅಂದರೆ 2017ಕ್ಕೆ ಕೊನೆ ಹೇಳುವ ಹೊತ್ತಿನಲ್ಲಿ ನಾವಿರುವಾಗ ಯಾಹೂ ಸಂಸ್ಥೆ ನಡೆಸಿರುವ ಅಧ್ಯಯನವೊಂದರಲ್ಲಿ ಸನ್ನಿ ಪ್ರಥಮ ಸ್ಥಾನಿಯಾಗಿ ದ್ದಾಳೆ. 2016ರಲ್ಲಿ ದೇಶದ ಜನತೆ ಇಂಟರ್‌ನೆಟ್‌ನಲ್ಲಿ ಯಾರನ್ನು ಹೆಚ್ಚಾಗಿ ಹುಡುಕಾಡಿದ್ದರು ಎಂದು ಹಿಸ್ಟರಿ ತೆಗೆದು ನೋಡಿದಾಗ ಅಲ್ಲಿ ಕಂಡ ಹೆಸರು ಇದೇ ಸನ್ನಿ ಲಿಯೋನ್.
ಈಗ ಮತ್ತದೇ ಸ್ಥಾನದಲ್ಲಿ ಅವಳದೇ ಹೆಸರು. ಯಾಹೂ ಸಂಸ್ಥೆ ಈ ಬಗ್ಗೆ ಅಧಿಕೃತವಾಗಿ ತಿಳಿಸಿದೆ. ಸನ್ನಿ ಲಿಯೋನ್ ಅಂತರ್ಜಾಲದಲ್ಲಿ ಹೆಚ್ಚು ಹುಡುಕಾಟಕ್ಕೆ ಒಳಗಾದ ಹೆಸರು. ಇದರ ಬೆನ್ನಿಗೆ ನಿಂತಿರುವುದು ಐಶ್ವರ್ಯ ರೈ ಮತ್ತು ಪ್ರಿಯಾಂಕಾ ಜೋಪ್ರಾ. ಆದರೂ ಕೂಡ ಈ ಮೂವರ ನಡುವಿನ ಅಂತರ ಹೆಚ್ಚಾಗಿಯೇ ಇದೆ. ಸನ್ನಿ ಲಿಯೋನ್ ತನ್ನ ಪತಿಯೊಂದಿಗೆ ಒಂದು ಮಗುವಿರುವ ಚಿತ್ರ ಹಂಚಿಕೊಂಡಿದ್ದು, ಅದೂ ಕೂಡ ಸಾಕಷ್ಟು ಹುಡುಕಾಟಕ್ಕೆ ಒಳಗಾಗಿದೆ ಎನ್ನುವ ಅಂಶವೂ ಈ ವೇಳೆ ಗೊತ್ತಾಗಿದೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.