
ಇತ್ತೀಚಿನ ದಿನಗಳಲ್ಲಿ ಸಾಕು ಪ್ರಾಣಿಗಳು ಮನೆಯ ಒಳಗೆ ಜಾಗ ಪಡೆದಿವೆ. ಸಾಕು ಪ್ರಾಣಿಗಳೆಂದ್ರೆ ಎಲ್ಲಿಲ್ಲದ ಪ್ರೀತಿ ಎನ್ನುವ ಜನರಿದ್ದಾರೆ. ಮನೆಯ ಹೊರಗೆ ಮನೆ ಕಾಯ್ತಾ ಕುಳಿತುಕೊಳ್ತಿದ್ದ ನಾಯಿಗಳು ಈಗ ಮನೆಯ ಸದಸ್ಯರಂತಾಗಿವೆ. ಅನೇಕರು ತಮ್ಮ ಸಾಕು ನಾಯಿಗಳನ್ನು ಮಕ್ಕಳಿಗಿಂತ ಹೆಚ್ಚು ಪ್ರೀತಿ ಮಾಡ್ತಾರೆ. ಮನೆಯ ಸದಸ್ಯರಂತೆ ಅವರಿಗೂ ವಿಶೇಷ ಬೆಡ್, ಆಹಾರ ಸೇವನೆಗೆ ಸ್ಪೇಷಲ್ ಜಾಗವನ್ನು ವ್ಯವಸ್ಥೆ ಮಾಡುತ್ತಾರೆ. ಅಷ್ಟೇ ಅಲ್ಲ ನಾಯಿಗಳಿಗಾಗಿ ದುಬಾರಿ ವಸ್ತುಗಳನ್ನು ಖರೀದಿ ಮಾಡುವವರಿದ್ದಾರೆ.
ಸಾಕು ಪ್ರಾಣಿಯಲ್ಲಿ ಅಗ್ರಸ್ಥಾನವಿರೋದು ನಾಯಿ (Dog) ಗೆ. ಮನೆಯಲ್ಲಿ ಮುದ್ದು ಮುದ್ದಾಗಿ ಸಾಕಲ್ಪಡುವ ನಾಯಿಗಳ ಆಟಕ್ಕೆಂದೇ ಅನೇಕ ವಸ್ತುಗಳು ಮಾರುಕಟ್ಟೆ (Market) ಯಲ್ಲಿ ಲಭ್ಯವಿದೆ. ನಾಯಿಯನ್ನು ಮನೆಯಲ್ಲಿಯೇ ತರಬೇತಿಗೊಳಿಸಲು ಅನೇಕರು ಮುಂದಾಗ್ತಾರೆ. ಹಾಗಾಗಿ ಅನೇಕ ವಸ್ತುಗಳನ್ನು ಮನೆಗೆ ತಂದು ನಾಯಿಗೆ ತರಬೇತಿ ನೀಡ್ತಾರೆ. ನಾಯಿಗೆ ಟೈಂ ಪಾಸ್ ಆಗ್ಲಿ ಎನ್ನುವ ಕಾರಣಕ್ಕೆ ಬಾಲ್ (Ball) ನೀಡುವವರು ಅನೇಕರು. ನಾಯಿ ಸಾಕಿರುವ ಬಹುತೇಕರ ಮನೆಯಲ್ಲಿ ನೀವು ಬಾಲ್ ನೋಡಬಹುದು. ನಾಯಿ ಜೊತೆ ಮಾಲಿಕರು ಕೂಡ ಈ ಬಾಲ್ ಜೊತೆ ಆಟವಾಡ್ತಾ ಎಂಜಾಯ್ ಮಾಡ್ತಾರೆ. ಪ್ರಾಣಿಗಳನ್ನು ಸಾಕೋದು ಸಣ್ಣ ಮಕ್ಕಳನ್ನು ಸಾಕಿದಷ್ಟೆ ಸವಾಲಿನ ಕೆಲಸ. ಸಾಕುಪ್ರಾಣಿಗಳನ್ನು ಚಿಕ್ಕ ಮಗುವಿನಂತೆ ನೋಡಿಕೊಳ್ಳಬೇಕು. ಸ್ವಲ್ಪ ಎಚ್ಚರ ತಪ್ಪಿದ್ರೂ ಅವುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಮಕ್ಕಳಂತೆ ಸಾಕು ಪ್ರಾಣಿಗಳು ಕೂಡ ಆಟದ ವಸ್ತುವನ್ನು ಬಾಯಿಗೆ ಹಾಕಿಕೊಂಡು ಆಟ ಆಡ್ತವೆ. ಆದ್ರೆ ಅದೇ ಆಟ ಅವರ ಪ್ರಾಣಕ್ಕೆ ಕುತ್ತು ತಂದ್ರೆ ಕಷ್ಟ. ಸಾಮಾಜಿಕ ಜಾಲತಾಣದಲ್ಲಿ ಇಂಥ ವಿಡಿಯೋ (Video) ಒಂದು ವೈರಲ್ ಆಗಿದೆ. ಅದೃಷ್ಟವಶಾತ್ ನಾಯಿ ಪ್ರಾಣ ಉಳಿದಿದೆ.
ಮಾಜಿ ಗರ್ಲ್‌ಫ್ರೆಂಡ್‌ಗಾಗಿ ಚಳಿಯಲ್ಲೂ ಬರೋಬ್ಬರಿ 21 ಗಂಟೆ ಮಂಡಿಯೂರಿ ಕುಳಿತ ಪ್ರೇಮಿ!
ಸಮಯಕ್ಕೆ ಸರಿಯಾಗಿ ಪಶುವೈದ್ಯರು ನಾಯಿಯ ಜೀವವನ್ನು ಉಳಿಸುತ್ತಿದ್ದಾರೆ. ಈ ಸಮಯದಲ್ಲಿ ಅವರು ತಮ್ಮ ಕೈಯನ್ನು ನಾಯಿಯ ಬಾಯಿ ಒಳಗೆ ಹಾಕುವ ಮೂಲಕ ಆಟಿಕೆ ಹೊರತೆಗೆಯಲು ಪ್ರಯತ್ನಿಸುತ್ತಾರೆ.
ವೀಡಿಯೋದಲ್ಲಿ ನಾಯಿಯ ಬಾಯಿಯಲ್ಲಿ ಸಿಕ್ಕಿಬಿದ್ದಿದ್ದ ಆಟಿಕೆ ಹೊರಬರುವುದನ್ನು ನೋಡಿದ ಬಳಕೆದಾರರ ಕಣ್ಣು ಒದ್ದೆಯಾಗಿದೆ. ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ವೈದ್ಯ (Doctor) ರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಗುಡ್ ನ್ಯೂಸ್ ಕರೆಸ್ಪಾಂಡೆಂಟ್ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ನಾಯಿಯೊಂದು ನೆಲದ ಮೇಲೆ ಬಿದ್ದಿರುವುದು ಕಂಡು ಬರುತ್ತದೆ. ಈ ನಾಯಿ ಆಟವಾಡುವಾಗ ಆಕಸ್ಮಿಕವಾಗಿ ಆಟಿಕೆ ನುಂಗಿದೆ. ಅದನ್ನು ಆಸ್ಪತ್ರೆಗೆ ಕರೆತರಲಾಗಿದೆ. ವೀಡಿಯೊದಲ್ಲಿ ಪಶುವೈದ್ಯರೊಬ್ಬರು ನಾಯಿಯ ಗಂಟಲಿನಿಂದ ಚೆಂಡನ್ನು ಹೊರತೆಗೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಶಾಂತವಾಗಿ ಹಾಗೂ ಬುದ್ಧಿವಂತಿಕೆಯಿಂದ ಪಶುವೈದ್ಯೆ ನಾಯಿಯ ಬಾಯಿಗೆ ಕೈ ಹಾಕಿ, ಕತ್ತಿನ ಹಿಂಭಾಗವನ್ನು ಒತ್ತಿ ಆಟಿಕೆಯನ್ನು ಹೊರಗೆ ತೆಗೆಯಲು ಪ್ರಯತ್ನಿಸುತ್ತಿದ್ದಾರೆ. ಕೊನೆಯಲ್ಲಿ ಆಟಿಕೆ ಹೊರಗೆ ಬರುತ್ತದೆ. ನಾಯಿ ಬಾಯಿಂದ ಆಟಿಕೆ ಹೊರಗೆ ಬರ್ತಿದ್ದಂತೆ ಪಶುವೈದ್ಯರು ಖುಷಿಯಾಗಿದ್ದಾರೆ. ಡಾನ್ಸ್ ಮಾಡ್ತಿದ್ದಾರೆ. ಒಂದು ಪ್ರಾಣಿಯ ಜೀವ ಉಳಿಸಿದ ತೃಪ್ತಿಯನ್ನು ನೀವು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದಾಗಿದೆ. ಆಟಿಕೆ ಹೊರಗೆ ಬರ್ತಿದ್ದಂತೆ ನಾಯಿ ಅಲ್ಲಿಂದ ಓಡುವ ಪ್ರಯತ್ನ ಮಾಡುತ್ತದೆ.
Kitchen Tips : ಅರ್ಜೆಂಟ್ ಇದೆ ಅಂತಾ ಹಾಲನ್ನು ಬೇಗ ಬೇಗ ಕುದಿಸ್ಬೇಡಿ
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಮೆಚ್ಚುಗೆ ಗಳಿಸಿದೆ. ಈವರೆಗೆ 4 ಲಕ್ಷ 30 ಸಾವಿರಕ್ಕೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಿಸಲಾಗಿದೆ. 7 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ವೀಡಿಯೊವನ್ನು ವೀಕ್ಷಿಸಿದ ಬಳಕೆದಾರರು ನಿರಂತರವಾಗಿ ಕಾಮೆಂಟ್ ಮಾಡಿದ್ದಾರೆ. ನಾಯಿಯ ಜೀವವನ್ನು ಉಳಿಸಿದ್ದಕ್ಕಾಗಿ ಪಶುವೈದ್ಯರಿಗೆ ಧನ್ಯವಾದ ಹೇಳಿದ್ದಾರೆ. ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದಿದ್ದರೆ ಎಷ್ಟು ಅಪಾಯಕಾರಿ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.