ಕರ್ನಾಟಕ ಹಿಂದಿಕ್ಕಿ 3 ವರ್ಷದಿಂದ ಮದ್ಯ ರಾಜಧಾನಿ ಪಟ್ಟ ಗಿಟ್ಟಿಸಿಕೊಂಡಿದೆ ಭಾರತದ ಈ ರಾಜ್ಯ

Published : Oct 25, 2026, 03:17 PM IST
Alcohol

ಸಾರಾಂಶ

ಭಾರತದ ಮದ್ಯ ರಾಜಧಾನಿ ಎಂದು ಕರ್ನಾಟಕ ಖ್ಯಾತಿ ಪಡೆದಿತ್ತು. ಆದರೆ ಈ ಸ್ಥಾನ ಕಳೆದ ಮೂರು ವರ್ಷಗಳಿಂದ ಬೇರೆ ರಾಜ್ಯದ ಪಾಲಾಗಿದೆ. ಸದ್ಯ ಭಾರತದ ಮದ್ಯ ರಾಜಧಾನಿ ಸ್ಥಾನ ಯಾವ ರಾಜ್ಯಕ್ಕಿದೆ, ಕರ್ನಾಟಕ ಎಲ್ಲಿದೆ?

ಬೆಂಗಳೂರು (ಅ.25) ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಮದ್ಯ ಸರ್ಕಾರದ ಪ್ರಮುಖ ಆದಾಯದ ಮೂಲವಾಗಿದೆ. ಕರ್ನಾಟಕದಲ್ಲಿನ ಮದ್ಯದ ನೀತಿ, ನಿಯಮಗಳು ಮದ್ಯಪ್ರಿಯರಿಗೆ ಹೆಚ್ಚಿನ ಅನುಕೂಲ ಮಾಡುವಂತಿದೆ. ಹೀಗಾಗಿ ಕರ್ನಾಟಕದಲ್ಲಿ ಹೆಚ್ಚಿನ ನಿರ್ಬಂಧವಿಲ್ಲ, ಬಹುತೇಕ ಕಡೆಗಳಲ್ಲಿ ಅಡೆ ತಡೆ ಇಲ್ಲದೆ ಮದ್ಯ ಲಭ್ಯವಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ತನ್ನ ಮದ್ಯ ರಾಜಧಾನಿ ಪಟ್ಟ ಕಳೆದುಕೊಂಡಿದೆ. ಈ ಸ್ಥಾನವನ್ನು ಆಕ್ರಮಿಸಿಕೊಂಡ ರಾಜ್ಯ ಗೋವಾ ಅಲ್ಲ, ಉತ್ತರ ಸಿಂಪಲ್, ಉತ್ತರ ಪ್ರದೇಶ.

ನಂಬರ್ 1 ಆಗಿದ್ದ ಕರ್ನಾಟಕಕ್ಕೆ 2ನೇ ಸ್ಥಾನ

2003ರ ವರೆಗೆ ಕರ್ನಾಟಕ ದೇಶದ ಮದ್ಯ ರಾಜಧಾನಿ ಎಂದು ಗುರುತಿಸಿಕೊಂಡಿತ್ತು. ಪ್ರಮುಖವಾಗಿ ಮದ್ಯದಿಂದ ಸರ್ಕಾರಕ್ಕೆ ಬರುತ್ತಿರುವ ಆದಾಯ, ಮದ್ಯ ಮಾರಾಟವೇ ಈ ರಾಜಧಾನಿ ಪಟ್ಟಕ್ಕೆ ಕಾರಣವಾಗಿತ್ತು. ಆದರೆ ಕಳೆದ ಕೆಲ ವರ್ಷಗಳಲ್ಲಿ ಕರ್ನಾಟಕದಲ್ಲಿ ಮದ್ಯದ ಮೇಲೆ ವಿಪರೀತ ತೆರಿಗೆಯಿಂದ ಬೆಲೆಯಲ್ಲಿ ಬಾರಿ ಏರಿಕೆ ಕಂಡಿತ್ತು. ಇತ್ತೀಚಿಗಿನ ಇಳಿಕೆ ಹೊರತುಪಡಿಸಿದರೆ, ಕರ್ನಾಟಕದಲ್ಲಿ ಮದ್ಯ ಬಲು ದುಬಾರಿಯಾಗಿತ್ತು. ಇದೇ ವೇಳೆ ಉತ್ತರ ಪ್ರದೇಶ ತನ್ನ ಮದ್ಯ ಮಾರಾಟ ನೀತಿಗಳನ್ನು ಸಡಿಲಗೊಳಿಸಿತ್ತು. ಜೊತೆಗೆ ಹಲವು ಕ್ರಮಗಳನ್ನು ಕೈಗೊಂಡಿತ್ತು. ಪರಿಣಾಮ ಉತ್ತರ ಪ್ರದೇಶ ಕಳೆದ ಮೂರು ವರ್ಷಗಳಿಂದ ನಂ1 ಸ್ಥಾನ ಪಡೆದುಕೊಂಡಿದೆ.

57,722 ಕೋಟಿ ರೂಪಾಯಿ ಆದಾಯ

2025-26ರ ಸಾಲಿನಲ್ಲಿ ಉತ್ತರ ಪ್ರದೇಶ ಮದ್ಯದಿಂದ ಬರೋಬ್ಬರಿ 57,722 ಕೋಟಿ ರೂಪಾಯಿ ಆದಾಯಗಳಿಸಿದೆ. ಇತರ ಎಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಅತೀ ಹೆಚ್ಚು. 2018ರಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಅಬಕಾರಿ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದರು. ಮಾಫಿಯಾ, ಹಲವು ಪ್ರಮುಖರ ಕೈಯಲ್ಲಿದ್ದ ಅಬಕಾರಿ ಇಲಾಖೆಯಲ್ಲಿ ನೀತಿ ಬದಲಿಸಲಾಗಿತ್ತು. ಹೀಗಾಗಿ 2023ರಿಂದ ಉತ್ತರ ಪ್ರದೇಶ ಮದ್ಯ ಆದಾಯದಲ್ಲಿ ಕರ್ನಾಟಕವನ್ನೇ ಹಿಂದಿಕ್ಕಿತ್ತು.

2026-27ರ ಸಾಲಿನಲ್ಲಿ ಉತ್ತರ ಪ್ರದೇಶದ ಮದ್ಯ ಆದಾಯ ಬರೋಬ್ಬರಿ 63 ಸಾವಿರ ಕೋಟಿ ರೂಪಾಯಿ ದಾಟಲಿದೆ ಎಂದು ಅಂದಾಜಿಲಾಗಿದೆ. 100ಕ್ಕೂ ಹೆಚ್ಚು ಮದ್ಯ ಉತ್ಪಾದನೆ ಫ್ಯಾಕ್ಟರಿ, ಹಾಗೂ 100 ಕೋಟಿ ಲೀಟರ್ ಮದ್ಯ ರಫ್ತು ಮಾಡುತ್ತಿದೆ.

ಕರ್ನಾಟಕದಲ್ಲಿ ಇತ್ತೀಚೆಗೆ ತೆರಿಗೆ ಕಡಿತದಿಂದ ಮದ್ಯ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಹೀಗಾಗಿ ಆದರೆ ಕಳೆದ ಸಾಲಿನಲ್ಲಿ ಮದ್ಯ ಆದಾಯದಲ್ಲಿ ಕುಸಿತ ಕಂಡಿತ್ತು. ದುಬಾರಿ ಬೆಲೆಯಿಂದ ಬಿಯರ್ ಮಾರಾಟ ಕರ್ನಾಟಕದಲ್ಲಿ ಗಣನೀಯವಾಗಿ ಇಳಿಕೆಯಾಗಿತ್ತು. ಹೀಗಾಗಿ ಕಳೆದ ಸಾಲಿನಲ್ಲಿ ಕರ್ನಾಟಕ ಮದ್ಯದಿಂದ 35,784 ಕೋಟಿ ರೂಪಾಯಿ ಆದಾಯಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ ಈ ಸಾಲಿನಲ್ಲಿ ಕರ್ನಾಟಕದ ಮದ್ಯ ಆದಾಯ 40 ರಿಂದ 45 ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಮದ್ಯದ ಒಟ್ಟು ಬಾಕ್ಸ್ ಮಾರಾಟದಲ್ಲಿ ಕರ್ನಾಟಕ ನಂಬರ್ 1 ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ವಾರ್ಷಿಕವಾಗಿ ಸರಾಸರಿ 6.88 ಕೋಟಿ ಕೇಸಸ್ ಮದ್ಯ ಮಾರಾಟವಾಗುತ್ತದೆ. ಗೋವಾದಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಮದ್ಯ ಲಭ್ಯ, ಗೋವಾದಲ್ಲಿ ಮದ್ಯದ ಸರಾಸರಿ ಬೆಲೆ ದೇಶದ ಬೆಲೆಗೆ ಹೋಲಿಕೆ ಮಾಡಿದರೆ ಶೇಕಡಾ 49. ಕರ್ನಾಟಕದಲ್ಲಿ ಶೇಕಡಾ 83 ಆದರೆ ದೆಹಲಿಯಲ್ಲಿ ಶೇಕಡಾ 51ರಷ್ಟು ದುಬಾರಿ.

25,466 ಕೋಟಿ ರೂಪಾಯಿ ಮದ್ಯ ಆದಾಯದೊಂದಿಗೆ ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ. ಆದಾಯದ ವಿಚಾರದಲ್ಲಿ ಉತ್ತರ ಪ್ರದೇಶ ಸದ್ಯ ಭಾರತದ ಮದ್ಯ ರಾಜಧಾನಿಯಾಗಿ ಹೊರಹೊಮ್ಮಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Lifestyle: ಹೊಸ ಬಟ್ಟೆ ತಂದ ತಕ್ಷಣ ಧರಿಸೋ ಅಭ್ಯಾಸ ನಿಮಗಿದ್ಯಾ? ಈ ಅಪಾಯ ತಿಳಿದ್ರೆ ಇಂದೇ ಬಿಟ್ಟುಬಿಡ್ತೀರಾ!
ಪೀರಿಯಡ್ಸ್ ಟೈಂನಲ್ಲಿ ಪದೇ ಪದೇ ಬಾತ್‌ ರೂಮ್‌ ಗೆ ಹೋಗ್ತೀರಾ? ಇದಕ್ಕೆ ಕಾರಣ ತಿಳಿದ್ಕೊಳ್ಳಿ