ಮಗಳ ಹುಟ್ಟುಹಬ್ಬಕ್ಕೆ ಅಪ್ಪ ಗಿಫ್ಟ್​ ಕೊಟ್ಟ ಈ ಹಕ್ಕಿಯ ಬೆಲೆ 4 ಕೋಟಿ ರೂ! ಯಾವುದೀ ಪಕ್ಷಿ? ಏನಿದರ ವಿಶೇಷತೆ

Published : Sep 04, 2026, 10:44 PM IST
White Falcon

ಸಾರಾಂಶ

ಅಬುಧಾಬಿಯಲ್ಲಿ ನಡೆದ ಅಂತರರಾಷ್ಟ್ರೀಯ ಬೇಟೆ ಮತ್ತು ಕುದುರೆ ಸವಾರಿ ಪ್ರದರ್ಶನದ ಹರಾಜಿನಲ್ಲಿ, "ಅಲ್ಟ್ರಾ ವೈಟ್ ಪ್ಯೂರ್ ಗೈರ್ ಗರ್ಮೌಶಾ" ಎಂಬ ಅಪರೂಪದ ಗಿಡುಗದ ಮರಿಯು ದಾಖಲೆಯ 1.5 ಮಿಲಿಯನ್ ದಿರ್ಹಮ್‌ಗೆ (ಸುಮಾರು 4 ಕೋಟಿ ರೂ.) ಮಾರಾಟವಾಗಿದೆ. ಅಬುಧಾಬಿಯ ಉದ್ಯಮಿಯೊಬ್ಬರು ತಮ್ಮ ಮಗಳ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಇದನ್ನು ಖರೀದಿಸಿದ್ದಾರೆ.

ಅಬುಧಾಬಿ: ಅಬುಧಾಬಿ ಅಂತರರಾಷ್ಟ್ರೀಯ ಬೇಟೆ ಮತ್ತು ಕುದುರೆ ಸವಾರಿ ಪ್ರದರ್ಶನ (ADIHEX) 2026 ರಲ್ಲಿ ನಡೆದ ಐದನೇ ಸುತ್ತಿನ ಹರಾಜಿನಲ್ಲಿ ಇಂದು ದಾಖಲೆ ನಿರ್ಮಾಣವಾಯಿತು. ಇದಕ್ಕೆ ಕಾರಣ, "ಅಲ್ಟ್ರಾ ವೈಟ್ ಪ್ಯೂರ್ ಗೈರ್ ಗರ್ಮೌಶಾ" ಗಿಡುಗದ ಮರಿಯನ್ನು ದಿರ್ಹಮ್ 1.5 ಮಿಲಿಯನ್‌ಗೆ (ಸುಮಾರು ನಾಲ್ಕು ಕೋಟಿ ರೂಪಾಯಿ) ಮಾರಾಟ ಮಾಡಲಾಗಿದ್ದು, ಇದು ಪ್ರಸ್ತುತ ಆವೃತ್ತಿಯ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಗಿಡುಗ ಆಗಿದೆ. ಈ ಗಿಡುಗನನ್ನು ಅಬುಧಾಬಿಯ ಉದ್ಯಮಿ ಒಬ್ಬರು ಖರೀದಿ ಮಾಡಿದ್ದು, ಅದನ್ನು ಅವರು ತಮ್ಮ ಚಿಕ್ಕ ಮಗಳ ಹುಟ್ಟುಹಬ್ಬಕ್ಕೆ ಗಿಫ್ಟ್​ ಕೊಟ್ಟಿದ್ದಾರೆ. ಅದರ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಒಂದು ಸಾವಿರ ಗ್ರಾಂ ತೂಕ

ಯುನೈಟೆಡ್ ಸ್ಟೇಟ್ಸ್‌ನ ಮಾರ್ಕ್ ಮೊಗ್ಲಿಚ್ ಫಾರ್ಮ್‌ನಿಂದ ಸಾಕಲ್ಪಟ್ಟ ಅಪರೂಪದ ಗಿಡುಗ 1,000 ಗ್ರಾಂ ತೂಗುತ್ತದೆ ಮತ್ತು 16.5 ಇಂಚು ಉದ್ದ ಮತ್ತು 16.5 ಇಂಚು ಅಗಲವನ್ನು ಹೊಂದಿದೆ, ಇದು ಅದರ ಶುದ್ಧ ಬಿಳಿ ಪುಕ್ಕಗಳು ಮತ್ತು ಅಸಾಧಾರಣ ಭೌತಿಕ ಗುಣಲಕ್ಷಣಗಳಿಂದ ಗುರುತಿಸಲ್ಪಟ್ಟಿದೆ. ADNEC ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಗ್ರೂಪ್ ಸಿಇಒ ಹುಮೈದ್ ಮಾತರ್ ಅಲ್ ಧಹೇರಿ, ದಾಖಲೆಯ ಮಾರಾಟವು ADIHEX ಹರಾಜಿನ ಜಾಗತಿಕ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಮತ್ತು ಗಿಡುಗದ ರಾಜಧಾನಿಯಾಗಿ ಅಬುಧಾಬಿಯ ಪಾತ್ರವನ್ನು ಒತ್ತಿಹೇಳುತ್ತದೆ, ಭವಿಷ್ಯದ ಪೀಳಿಗೆಗೆ ಅಧಿಕೃತ ಎಮಿರಾಟಿ ಪರಂಪರೆಯನ್ನು ಸಂರಕ್ಷಿಸುವ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.

ಪ್ರತಿಷ್ಠೆಯ ಸಂಕೇತ

ಅಷ್ಟಕ್ಕೂ ಗಲ್ಫ್ ರಾಷ್ಟ್ರಗಳಲ್ಲಿ ಗಿಡುಗವನ್ನು ರಾಜಮನೆತನದ ಪರಂಪರೆ, ಪ್ರತಿಷ್ಠೆ ಮತ್ತು ಸಾಮಾಜಿಕ ಸ್ಥಾನಮಾನದೊಂದಿಗೆ ಬಿಗಿಯಾಗಿ ಹೆಣೆಯಲಾಗಿದೆ. ಅಲ್ಟ್ರಾ-ವೈಟ್ ಫಾಲ್ಕನ್ ಅನ್ನು ಹೊಂದುವುದು ಐಷಾರಾಮಿ ಮತ್ತು ಸಾಂಪ್ರದಾಯಿಕ ಹೆಮ್ಮೆಯ ಸಂಪೂರ್ಣ ಪರಾಕಾಷ್ಠೆಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಇದರ ಹರಾಜಿನ ಸಮಯದಲ್ಲಿ ಪ್ರತಿಷ್ಠೆಗಾಗಿ ಹಲವಾರು ಮಂದಿ ಮುಗಿ ಬೀಳುವುದು ಇದೆ. ಕೊನೆಗೆ ಅತ್ಯಧಿಕ ಬಿಡ್​ ಕೂಗಿದವರಿಗೆ ಈ ಗಿಡುಗ ದಕ್ಕುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಮಿಕಲ್ ಬದಲು ನೈಸರ್ಗಿಕ ರೀತಿಯಲ್ಲಿ ಫ್ರಿಡ್ಜ್ ಸ್ವಚ್ಚ ಹಾಗೂ ದುರ್ವಾಸೆ ಮುಕ್ತ ಮಾಡುವ ಸುಲಭ ವಿಧಾನ
ಹೋಟೆಲ್​ ವಡೆ ಗಂಟೆಗಟ್ಟಲೆ ಕ್ರಿಸ್ಪಿಯಾಗಿರೋ ಗುಟ್ಟು ರಟ್ಟಾಯ್ತು: ಮನೆಯಲ್ಲೂ ಈ ಈಸಿ ಟಿಪ್ಸ್​ ಫಾಲೋ ಮಾಡಿ