ಶಾಂಪು ಮುಗಿದರೆ ಶಾಂಪು ಬಾಟಲ್ ಕತ್ತರಿಸುತ್ತಾರೆ, ಪೇಸ್ಟ್ ಮುಗಿದರೆ ಅದರ ಟ್ಯೂಬ್ ಕತ್ತರಿಸುತ್ತಾರೆ. ಹೀಗೆ ಏನಾದರೊಂದು ಜುಗಾಡ್ ತಂತ್ರದ ಮೂಲಕ ಒಂದು ಬಿಂದುವೂ ಹಾಳಾಗದಂತೆ ವೇಸ್ಟ್ ಆಗದಂತೆ ಉಳಿಸುವ ಪ್ರಯತ್ನವನ್ನು ಬಹುತೇಕರು ಮಾಡುತ್ತಾರೆ.
ಮುಗಿದ ಶಾಂಪೂ ಬಾಟಲ್ ತಳದಲ್ಲಿರುವ ಶಾಂಪೂ, ಪೇಸ್ಟ್ ಟ್ಯೂಬ್ ಒಳಗಿರುವ ಪೇಸ್ಟ್, ಖಾಲಿಯಾದ ಕ್ರೀಮ್ ಸ್ಯಾಚೆಟ್, ಖಾಲಿಯಾದ ತುಪ್ಪ ಬೆಣೆ ಜಾಮ್ ಮುಂತಾದ ಡಬ್ಬಿಗಳ ತಳದಲ್ಲಿ ಉಳಿದಿರುವುದಕ್ಕಾಗಿ ಬಹುತೇಕರು ಅದನ್ನು ನಾನಾ ತಂತ್ರ ಪ್ರಯೋಗಿಸಿ ತೆಗೆಯಲು ನೋಡುತ್ತಾರೆ, ಶಾಂಪು ಮುಗಿದರೆ ಶಾಂಪು ಬಾಟಲ್ ಕತ್ತರಿಸುತ್ತಾರೆ, ಪೇಸ್ಟ್ ಮುಗಿದರೆ ಅದರ ಟ್ಯೂಬ್ ಕತ್ತರಿಸುತ್ತಾರೆ. ಹೀಗೆ ಏನಾದರೊಂದು ಜುಗಾಡ್ ತಂತ್ರದ ಮೂಲಕ ಒಂದು ಬಿಂದುವೂ ಹಾಳಾಗದಂತೆ ವೇಸ್ಟ್ ಆಗದಂತೆ ಉಳಿಸುವ ಪ್ರಯತ್ನವನ್ನು ಬಹುತೇಕರು ಮಾಡುತ್ತಾರೆ. ಆದರೆ ಬಾಟಲ್ ಗಾಜಿನದ್ದಾದರೆ ಈ ಟ್ರಿಕ್ಸ್‌ಗಳೆಲ್ಲಾ ವರ್ಕ್‌ಔಟ್ ಆಗಲ್ಲ, ಗಾಜಿನ ಬಾಟಲಿ ಒಡೆದ ನಂತರ ಅದರೊಳಗಿನ ವಸ್ತುವನ್ನು ತೆಗೆಯುವುದು ಸುಲಭದ ಕೆಲಸವಲ್ಲ, ಹೀಗಿರುವಾಗ ಇಲ್ಲೊಬ್ಬ ಯುವತಿ ಇದಕ್ಕೊಂದು ಸುಲಭ ಟ್ರಿಕ್ಸ್ ಕಂಡು ಹಿಡಿದಿದ್ದು, ಇದರ ವೀಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.
caseyrieger15 (Casey Rieger) ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು ಸಾಕಷ್ಟು ವೈರಲ್ ಆಗಿದೆ. ವೀಡಿಯೋದಲ್ಲಿ ಕಾಣಿಸುವಂತೆ ಯುವತಿ ಸಾಸ್‌ನ ಬಾಟಲಿಯನ್ನು ತಲೆಕೆಳಗಾಗಿ ಹಿಡಿದು ಜೋರಾಗಿ ತಿರುಗಿಸುತ್ತಾಳೆ. ಈ ವೇಳೆ ತಳದಲ್ಲಿ ಇದ್ದ ಸಾಸ್ ಎಲ್ಲವೂ ಬಾಟಲಿಯ ಮುಚ್ಚಳದ ಸಮೀಪ ಬಂದು ಸೇರುತ್ತದೆ. ಈ ಸುಲಭದ ಟ್ರಿಕ್ಸ್‌ನ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಈ ವೀಡಿಯೋ ನೋಡಿದ ಒಬ್ಬರು ಹೌದು ಇದನ್ನು ಕೇಂದ್ರಾಪಗಾಮಿ ಬಲ (centrifugal force)ಎಂದು ಕರೆಯಲಾಗುತ್ತದೆ. ನಾವು ಆರನೇ ತರಗತಿಯ ವಿಜ್ಞಾನದಲ್ಲಿ ಇದರ ಬಗ್ಗೆ ಕಲಿತಿದ್ದೇವೆ. ಆದರೆ ಬಳಸಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಹುಡುಗರೇ ಈ ಹಕ್ಕಿ ಮುಂದೆ ನೀವ್ಯಾವ ಲೆಕ್ಕ: ಮನದರಸಿಯ ಒಲಿಸಿಕೊಳ್ಳಲು ಪಡ್ತಿರುವ ಪಾಡು ನೋಡಿ : ವೀಡಿಯೋ
ವೀಡಿಯೋದಲ್ಲಿ ಏನಿದೆ?
ವೀಡಿಯೋದಲ್ಲಿ ಹುಡುಗಿಯೊಬ್ಬಳು ಬಹುತೇಕ ಮುಗಿದ ತಳದಲ್ಲಿ ಮಾತ್ರ ತುಸು ಬಾಕಿ ಇರುವ ಕೆಚಪ್ ಬಾಟಲ್ ಹಿಡಿದು ಸಂಪೂರ್ಣ ಕೆಚಪ್ ನಿಮ್ಮ ಕೈ ಸೇರಬೇಕೆಂದರೆ ಏನು ಮಾಡಬೇಕು ಎಂಬುದನ್ನು ನಾನೀಗ ತೋರಿಸುತ್ತೇನೆ ಎಂದು ಹೇಳುತ್ತಾಳೆ. ನಂತರ ತನ್ನ ಕೈಯಲ್ಲಿದ್ದ ಬಾಟಲ್‌ನ್ನು ಉಲ್ಟಾ ಹಿಡಿದು ತಳಭಾಗಕ್ಕೆ ಕೈನಲ್ಲಿ ಬಡಿದ ಆಕೆ ನಂತರ ಜೋರಾಗಿ ಆ ಬಾಟಲ್‌ನ್ನು ಕೈನಲ್ಲಿ ಹಿಡಿದು ಕೈಯನ್ನು ಸುತ್ತ ತಿರುಗಿಸುತ್ತಾಳೆ. ಅಶ್ಚರ್ಯ ಎಂಬಂತೆ ಬಾಟಲ್‌ನ ತಳದಲ್ಲಿದ್ದ ಕೆಚಪ್ ಎಲ್ಲವೂ ಮೇಲ್ಭಾಗದ ಮುಚ್ಚಳದ ಬಳಿ ಬಂದು ಸೇರಿದೆ. ಎಷ್ಟು ಕೂಲ್ ಆಗಿದೆ ಈ ಐಡಿಯಾ ಎಂದು ಆಕೆ ನೋಡುಗರನ್ನುಕೇಳುತ್ತಾಳೆ. ಈ ವೀಡಿಯೋ ನೋಡಿದ ಜನ ಸಖತ್ ಇಂಪ್ರೆಸ್ ಆಗಿದ್ದು, ಈ ಪ್ರಯೋಗವನ್ನು ನಾವು ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ಆದರೆ ಕೆಲವರು ನೀವು ಕೊಟ್ಟ ಸೂಚನೆ ಸರಿ ಇಲ್ಲ, ಹೀಗೆ ಬಾಟಲ್ ತಿರುಗಿಸಲು ಹೋಗಿ ನನ್ನ ಕೈಯೇ ತಿರುಗಿ ಹೋಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.