
ಕೆಲಸದ ಸ್ಥಳದಲ್ಲಿ ವೃತ್ತಿಪರತೆ ಮತ್ತು ಗೌರವ ಕಾಪಾಡಿಕೊಳ್ಳುವುದು ಮುಖ್ಯ. ಕೆಲವು ವಿಷಯಗಳನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವುದು ನಿಮ್ಮ ವೃತ್ತಿಜೀವನಕ್ಕೆ ಹಾನಿಯುಂಟುಮಾಡಬಹುದು. ಯಾವ ವಿಷಯಗಳನ್ನು ಗೌಪ್ಯವಾಗಿಡಬೇಕು? ತಿಳಿಯೋಣ!
ವೈಯಕ್ತಿಕ ಆರ್ಥಿಕ ವಿಷಯಗಳು:
ನಿಮ್ಮ ಸಂಬಳ, ಸಾಲ, ಉಳಿತಾಯ, ಅಥವಾ ಆರ್ಥಿಕ ತೊಂದರೆಗಳ ಬಗ್ಗೆ ಆಫೀಸ್‌ನಲ್ಲಿ ಮಾತನಾಡಬೇಡಿ. ಇದು ತಪ್ಪು ತಿಳುವಳಿಕೆಗೆ ಕಾರಣವಾಗಬಹುದು ಮತ್ತು ವೃತ್ತಿಪರ ಇಮೇಜ್‌ಗೆ ಧಕ್ಕೆ ತರಬಹುದು.
ಟಿಪ್: ಆರ್ಥಿಕ ಚರ್ಚೆಯನ್ನು ಕುಟುಂಬ ಅಥವಾ ಆರ್ಥಿಕ ಸಲಹೆಗಾರರೊಂದಿಗೆ ಮಾತ್ರ ಮಾಡಿ.
ವೈಯಕ್ತಿಕ ಜೀವನದ ಗೌಪ್ಯ ವಿಷಯಗಳು:
ಪ್ರೀತಿ-ಪ್ರೇಮ, ಕೌಟುಂಬಿಕ ವಿವಾದಗಳು, ಅಥವಾ ಖಾಸಗಿ ಸಮಸ್ಯೆಗಳನ್ನು ಆಫೀಸ್‌ನಲ್ಲಿ ಚರ್ಚಿಸಬೇಡಿ. ಇವು ಗಾಸಿಪ್‌ಗೆ ಕಾರಣವಾಗಬಹುದು ಮತ್ತು ನಿಮ್ಮ ವಿಶ್ವಾಸಾರ್ಹತೆಗೆ ಧಕ್ಕೆ ತರಬಹುದು. ಹೀಗಾಗಿ ಆಫೀಸ್ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವುದು ಸೂಕ್ತವಲ್ಲ.
ಟಿಪ್: ವೈಯಕ್ತಿಕ ವಿಷಯಗಳಿಗೆ ಆಪ್ತ ಸ್ನೇಹಿತರೊಂದಿಗೆ ಮಾತನಾಡಿ
ಇತರ ಸಹೋದ್ಯೋಗಿಗಳ ಬಗ್ಗೆ ಟೀಕೆ:
ಸಹೋದ್ಯೋಗಿಗಳ ಬಗ್ಗೆ ಋಣಾತ್ಮಕವಾಗಿ ಮಾತನಾಡುವುದು ಅಥವಾ ಗಾಸಿಪ್‌ನಲ್ಲಿ ಭಾಗಿಯಾಗುವುದು ತಪ್ಪು. ಇದು ತಂಡದ ಸಾಮರಸ್ಯಕ್ಕೆ ಧಕ್ಕೆ ತರುವುದಲ್ಲದೆ, ನಿಮ್ಮ ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಯಾವುದೇ ವಿಚಾರವಾದರೂ ನಿಮಗೆ ಸಂಬಂಧಿಸಿರದ, ವ್ಯಕ್ತಿತ್ವಕ್ಕೆ ಧಕ್ಕೆ ತರುವ ಇಂಥ ವಿಷಯಗಳಲ್ಲಿ ಬಗ್ಗೆ ಮಾತನಾಡದಿರುವುದೇ ಒಳಿತು.
ಟಿಪ್: ಸಕಾರಾತ್ಮಕ ಚರ್ಚೆಗಳಿಗೆ ಒತ್ತು ನೀಡಿ, ಟೀಕೆಯಿಂದ ದೂರವಿರಿ.
ಆಫೀಸ್‌ನ ಗೌಪ್ಯ ಮಾಹಿತಿ:
ಕಂಪನಿಯ ಯೋಜನೆಗಳು, ಗೌಪ್ಯ ಒಪ್ಪಂದಗಳು, ಅಥವಾ ಆಂತರಿಕ ತಂತ್ರಗಳ ಬಗ್ಗೆ ಎಲ್ಲರೊಂದಿಗೆ ಮಾತನಾಡಬೇಡಿ. ಇದು ನಿಮ್ಮ ವೃತ್ತಿಪರತೆಗೆ ಧಕ್ಕೆ ತರುವುದು ಮಾತ್ರವಲ್ಲ, ಕಾನೂನು ಸಮಸ್ಯೆಗೂ ಕಾರಣವಾಗಬಹುದು.
ಟಿಪ್: ಗೌಪ್ಯತೆಯ ಒಪ್ಪಂದವನ್ನು ಗೌರವಿಸಿ, ಅಗತ್ಯವಿರುವವರೊಂದಿಗೆ ಮಾತ್ರ ಚರ್ಚಿಸಿ.
ಭವಿಷ್ಯದ ವೃತ್ತಿಯ ಯೋಜನೆಗಳು
ನೀವು ಉದ್ಯೋಗ ಬದಲಾಯಿಸಲು ಯೋಜಿಸುತ್ತಿದ್ದರೆ ಅಥವಾ ಆಫೀಸ್‌ನಿಂದ ಹೊರಗಡೆ ಯಾವುದೇ ಯೋಜನೆಯನ್ನು ಹೊಂದಿದ್ದರೆ, ಇದನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಬೇಡಿ. ಇದು ತಪ್ಪು ತಿಳುವಳಿಕೆಗೆ ಕಾರಣವಾಗಬಹುದು.
ಟಿಪ್: ಈ ಯೋಜನೆಗಳನ್ನು ಮೇಲಧಿಕಾರಿಗಳೊಂದಿಗೆ ಮಾತ್ರ ಚರ್ಚಿಸಿ.
ಒಟ್ಟಿನಲ್ಲಿ ಆಫೀಸ್‌ನಲ್ಲಿ ವೃತ್ತಿಪರತೆ ಕಾಪಾಡಿಕೊಳ್ಳಲು, ವೈಯಕ್ತಿಕ ಮತ್ತು ಗೌಪ್ಯ ವಿಷಯಗಳನ್ನು ಹಂಚಿಕೊಳ್ಳದಿರಿ. ಸಕಾರಾತ್ಮಕ, ಕೆಲಸಕ್ಕೆ ಸಂಬಂಧಿಸಿದ ಸಂವಾದಕ್ಕೆ ಒತ್ತು ನೀಡಿ. ಇದು ನಿಮ್ಮ ವೃತ್ತಿಜೀವನವನ್ನು ಬಲಪಡಿಸುತ್ತದೆ ಮತ್ತು ಗೌರವವನ್ನು ಹೆಚ್ಚಿಸುತ್ತದೆ. ಈ ಟಿಪ್ಸ್‌ಗಳನ್ನು ಇಂದಿನಿಂದಲೇ ಅನುಸರಿಸಿ ಮತ್ತು ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಿಕೊಳ್ಳು ಪ್ರಯತ್ನಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.