ಮಗುವಿಗೆ ಎದೆ ಹಾಲು ಕಮ್ಮಿ ಆಗ್ತಿದ್ಯಾ? ಇದನ್ನು ತಿಂದು ನೋಡಿ...

By Web Desk  |  First Published Jun 5, 2019, 12:24 PM IST

ಮಗುವಿಗೆ ಹಾಲುಣಿಸುವ ಪ್ರತಿಯೊಬ್ಬ ತಾಯಿಗೂ ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು, ಏನು ತಿಂದರೆ ಎದೆಹಾಲು ಹೆಚ್ಚಬಹುದು ಎಂಬ ವಿಷಯಗಳಲ್ಲಿ ಹಲವಾರು ಪ್ರಶ್ನೆಗಳಿರುತ್ತವೆ. ಅದಕ್ಕೆ ಉತ್ತರ ಇಲ್ಲಿದೆ.
 


ಮಗು ಪದೇ ಪದೆ ಹಾಲು ಕೇಳಿದರೆ ಎಲ್ಲಿ ಎದೆಹಾಲು ಸಾಲುತ್ತಿಲ್ಲವೋ ಎಂಬ ಆತಂಕ ತಾಯಿಗೆ. ಇನ್ನು ಜಂಕ್ ಫುಡ್ ತಿಂದ ದಿನವಂತೂ ಹಾಲಿನಲ್ಲಿ ಪೋಷಕಾಂಶ ಕೊರತೆಯಿದೆಯೇನೋ ಎಂಬ ಗಿಲ್ಟ್ ಜೊತೆಗಿನ ಭಯ ಕಾಡತೊಡಗುತ್ತದೆ. ಮೂರು ತಿಂಗಳು ಕಳೆದ ಮೇಲೆ ಹಾಲು ಮುಂಚಿನಷ್ಟು ದಪ್ಪವಿಲ್ಲ ಎನಿಸಬಹುದು. ಮಗು ದಪ್ಪಗಾಗುತ್ತಿಲ್ಲವೆಂದು ಕಷ್ಟಪಟ್ಟು ಹೆಚ್ಚಿನ ಆಹಾರ ಹೊಟ್ಟೆಗಿಳಿಸುವ ತಾಯಂದಿರೂ ಇದ್ದಾರೆ. ಹಾಗಿದ್ದರೆ, ಗುಣಮಟ್ಟದ ಎದೆಹಾಲು ಹೆಚ್ಚಿಸುವ ಆಹಾರಗಳು ಯಾವುವು? ಏನನ್ನು ಸೇವಿಸಿದರೆ ಹಾಲು ಹೆಚ್ಚುತ್ತದೆ ತಿಳ್ಕೋಬೇಕಾ? ಮುಂದೆ ಓದಿ.

1. ಬೆಳ್ಳುಳ್ಳಿ


ಬೆಳ್ಳುಳ್ಳಿಯು ತಾಯಿ ಹಾಲನ್ನು ಹೆಚ್ಚಿಸುವಲ್ಲಿ ಶ್ರೀಮಂತ ಆಹಾರ ಪದಾರ್ಥ. ಮಗುವಿನ ಹೊಟ್ಟೆನೋವನ್ನೂ ಕಡಿಮೆ ಮಾಡುತ್ತದೆ. ನಿಮ್ಮ ದೈನಂದಿನ ಆಹಾರಕ್ಕೆ ಹೆಚ್ಚಿನ ಫ್ಲೇವರ್ ನೀಡುವ ಬೆಳ್ಳುಳ್ಳಿ ಸೇವನೆ ಅಧಿಕ ಮಾಡಿ. ಇದು ಆರೋಗ್ಯಕ್ಕೆ ಕೂಡಾ ಹಲವಾರು ಲಾಭಗಳನ್ನುಂಟು ಮಾಡುತ್ತದೆ. ಒಂದು ವೇಳೆ ಬೆಳ್ಳುಳ್ಳಿ ವಾಸನೆ ನಿಮಗೆ ಆಗುವುದಿಲ್ಲವೆಂದರೆ ಗಾರ್ಲಿಕ್ ಮಾತ್ರೆಗಳು ದೊರೆಯುತ್ತವೆ. ಇವು ವಾಸನೆರಹಿತವಾಗಿರುವುದರಿಂದ ಸುಲಭವಾಗಿ ನೀವದನ್ನು ಸೇವಿಸಬಹುದು.

2. ಓಟ್‌ಮೀಲ್

Latest Videos


ಅನೀಮಿಯಾದಿಂದ ಎದೆಹಾಲು ಕಡಿಮೆಯಾಗುತ್ತದೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ. ಪ್ರೆಗ್ನೆನ್ಸಿ ಮುಗಿದ ಬಳಿಕ ಅನೀಮಿಯಾದಿಂದ ನರಳುವ ತಾಯಂದಿರಿಗೆ ಓಟ್‌ಮೀಲ್ ಉತ್ತಮ ಆಹಾರ. ಇದರಲ್ಲಿ ಐರನ್ ಹೆಚ್ಚಿದ್ದು, ರಕ್ತದಲ್ಲಿ ಕಬ್ಬಿಣಾಂಶ ಹೆಚ್ಚಿಸುತ್ತದೆ. ಇದರಿಂದ ಹಾಲಿನ ಉತ್ಪಾದನೆಯೂ ಹೆಚ್ಚುತ್ತದೆ. 

3. ಕ್ಯಾರಟ್


ಕ್ಯಾರಟ್ ಎದೆಹಾಲು ಹೆಚ್ಚಿಸುವುದಲ್ಲದೆ, ಮಗುವಿನ ಬೆಳವಣಿಗೆಯನ್ನೂ ಹೆಚ್ಚಿಸುತ್ತದೆ. ಇದರಲ್ಲಿರುವ ವಿಟಮಿನ್ ಎ ತಾಯಿಯ ಚರ್ಮ ಹಾಗೂ ಕಣ್ಣಿನ ಆರೋಗ್ಯವನ್ನೂ ಕಾಪಾಡುತ್ತದೆ.

4. ಹಸಿರು ಪಪ್ಪಾಯ 


ಪಪ್ಪಾಯ ಕಾಯಿ ಸೇವನೆಯು ಎದೆಹಾಲು ಹೆಚ್ಚಿಸುವ ಕಾರಣಕ್ಕೆ ಏಷ್ಯಾದುದ್ದಕ್ಕೂ ಜನಪ್ರಿಯವಾಗಿದೆ. ಇದು ದೇಹದಲ್ಲಿ ಆಕ್ಸಿಟೋಸಿನ್ ಪ್ರಮಾಣ ಹೆಚ್ಚಿಸಿ, ಎದೆಹಾಲು ಉತ್ಪಾದನೆ ಹೆಚ್ಚಿಸಲು ಕಾರಣವಾಗುತ್ತದೆ. ಪಪ್ಪಾಯ ಕಾಯನ್ನು ಬೇಯಿಸಿ ಸೇವಿಸಬಹುದು. ಅಥವಾ ಥಾಯ್ ರೆಸಿಪಿಗಳಲ್ಲಿ ಪಪ್ಪಾಯ ಬಳಕೆ ಹೆಚ್ಚು. ಅಂಥ ರೆಸಿಪಿ ತಯಾರಿಸಿ ಸೇವಿಸಬಹುದು. 

5. ಪಾಲಕ್ ಸೊಪ್ಪು


ಪಾಲಕ್ ಸೊಪ್ಪು ಕೂಡಾ ಐರನ್‌ನಿಂದ ಶ್ರೀಮಂತವಾಗಿದೆ. ಆದರೆ, ಇದನ್ನು ಬೇಯಿಸದೇ ಸೇವಿಸಬಾರದು.

6.ಮೆಂತ್ಯೆ ಕಾಳು


ಮೆಂತ್ಯೆಯನ್ನು ಸಾಮಾನ್ಯವಾಗಿ ಒಗ್ಗರಣೆಯಲ್ಲಿ ಬಳಸಲಾಗುತ್ತದೆ. ಮೆಂತ್ಯೆ ತಂಬುಳಿ, ಮೆಂತ್ಯೆ ನೆನೆಸಿ ಮೊಳಕೆ ಕಾಳನ್ನು ಬೆಲ್ಲ ಹಾಕಿ ಮಿಕ್ಸಿ ಮಾಡಿ ತಯಾರಿಸುವ ಜ್ಯೂಸ್, ಮೆಂತ್ಯ ಹಲ್ವಾ ಯಾವ ರೀತಿಯಲ್ಲಿ ಬೇಕಾದರೂ ಸೇವಿಸಬಹುದು. ಎದೆಹಾಲು ಉತ್ಪಾದನೆ ಹೆಚ್ಚಿಸುವುದರೊಂದಿಗೆ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.

7. ಸೋಂಪಿನ ಕಾಳು

ತ್ವಚೆಯ ಸೌಂದರ್ಯಕ್ಕೆ ನೇರಳೆ: ನಾಚಿ ನೀರಾಗುವುದು ನಾರಿಯ ನೆರಳು!

ದೊಡ್ಡ ಸೋಂಪಿನ ಕಾಳು ಈಸ್ಟ್ರೋಜನ್‌ನಲ್ಲಿರುವಂಥ ಗುಣಗಳನ್ನೇ ಹೊಂದಿದ್ದು, ಚೆನ್ನಾಗಿ ಹಾಲು ಆಗುವಂತೆ ನೋಡಿಕೊಳ್ಳುತ್ತದೆ.

8.ಡ್ರೈಫ್ರೂಟ್ಸ್


ನಟ್ಸ್ ಹಾಲಿನ ಉತ್ಪತ್ತಿಗೆ ಅಗತ್ಯವಾದ ಸೆರಟೋನಿನ್ ಹಾರ್ಮೋನ್ ಉತ್ಪತ್ತಿಗೆ ಸಹಾಯ ಮಾಡುತ್ತದೆ. 

9. ಸಬ್ಬಸ್ಸಿಗೆ ಸೊಪ್ಪು

ಕೊಬ್ಬು ಕರಗಿಸುವ ಕಬ್ಬಿನ ಹಾಲು ಮ್ಯಾಜಿಕ್ ಇಲ್ಲಿದೆ!

ಸಬ್ಬಸ್ಸಿಗೆ ಸೊಪ್ಪಿನ ಸೂಪ್ ಆದರೂ ಸರಿ, ಪಲ್ಯ, ರೊಟ್ಟಿ ಏನಾದರೂ ಸರಿ, ಚೆನ್ನಾಗಿ ಸಬ್ಬಸ್ಸಿಗೆ ಸೊಪ್ಪು ತಿಂದ ದಿನ ಹಾಲು ತುಂಬಿ ಎದೆ ನೋವು ಬರುವುದನ್ನು ಬಾಣಂತಿಯರು ಫೀಲ್ ಮಾಡಬಹುದು. 

10. ಸಾಲ್ಮೋನ್
ಸಾಲ್ಮೋನ್  ಕೇವಲ ಲ್ಯಾಕ್ಟೇಶನ್‌ಗೆ ಸಹಾಯ ಮಾಡುವುದಷ್ಟೇ ಅಲ್ಲ, ಹಾಲಿಗೆ ಡಿಎಚ್ಎ ಹಾಗೂ ಒಮೆಗಾ 3 ಪೋಷಕಸತ್ವಗಳನ್ನು ನೀಡುವುದರೊಂದಿಗೆ ಅದನ್ನು ಹೆಚ್ಚು ನ್ಯೂಟ್ರಿಶಿಯಸ್ ಮಾಡುತ್ತದೆ. 

click me!