
ಮಕ್ಕಳ ಮುದ್ದಾದ ವಿಡಿಯೋಗಳು ಪ್ರತಿದಿನ ಅಂತರ್ಜಾಲದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇದರಲ್ಲಿ ಮಕ್ಕಳು ತಮ್ಮ ಮುದ್ದಾದ ಮಾತುಗಳಿಂದ, ಕೆಲಸಗಳಿಂದ ನಮ್ಮ ಹೃದಯವನ್ನು ಗೆಲ್ಲುತ್ತಾರೆ ಅಥವಾ ನಮ್ಮನ್ನು ಭಾವುಕರನ್ನಾಗಿ ಮಾಡುತ್ತಾರೆ. ಈಗ, ಅಂತಹುದೇ ಹೊಸ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಮುದ್ದಾದ ಒರ್ವ ಪುಟ್ಟ ಹುಡುಗಿ ತನ್ನ ತಾಯಿಯ ಲಿಪ್ಸ್ಟಿಕ್ ಅನ್ನು ಮುಖದ ಮೇಲೆ ಹಚ್ಚಿಕೊಂಡು ನಿಂತಿದ್ದಾಳೆ. ಆಕೆಯ ತಾಯಿ ಮಗಳ ಈ ಕೆಲಸ ನೋಡಿ ಏನೋ ಕೇಳುತ್ತಾಳೆ. ಅವರಿಬ್ಬರ ಸಂಭಾಷಣೆಯ ಈ ವಿಡಿಯೋ ವೈರಲ್ ಆಗುತ್ತಿದೆ. ಹಾಗೆಯೇ ಜನ-ಮನ ಗೆದ್ದಿದೆ.
ವಿಡಿಯೋದಲ್ಲಿ ತೋರಿಸಿರುವ ಹಾಗೆ ಈ ಪುಟ್ಟ ಹುಡುಗಿ ತನ್ನ ತಾಯಿಯ ಲಿಪ್ಸ್ಟಿಕ್ ಜೊತೆ ಆಟವಾಡುತ್ತಾ ಅದನ್ನು ಬಾಯಿಗೆ ಹಚ್ಚಿಕೊಂಡಿದೆ. ಇದು ಮುಖಕ್ಕೆ ಪೂರ್ತಿಯಾಗಿ ಮೆತ್ತಿಕೊಂಡಿದ್ದು ಮಾತ್ರವಲ್ಲದೆ, ಲಿಪ್ಸ್ಟಿಕ್ ಸಹ ಹಾಳು ಮಾಡಿದೆ. ನಂತರ ಮಗಳ ಈ ಕೆಲಸ ನೋಡಿ ತಾಯಿ ಗದರಿಸುತ್ತಾಳೆ. ವಿಡಿಯೋದಲ್ಲಿ ತಾಯಿ ಮಗಳಿಗೆ ಇನ್ನು ಮುಂದೆ ನಿನ್ನ ಜೊತೆ ಮಾತನಾಡುವುದಿಲ್ಲ ಎಂದು ಹೇಳುವುದನ್ನು ನೀವು ನೋಡಬಹುದು. ಅದರ ನಂತರ ಮುದ್ದು ಹುಡುಗಿ ಅಳುವ ಮುಖ ಮಾಡಿಕೊಳ್ಳುತ್ತದೆ. ಹೀಗೆ ಮಾಡಿದರೆ ತನ್ನ ತಾಯಿ ಕರಗಿ ಹೋಗುತ್ತಾಳೆ ಎಂದು ಆ ಮಗು ಅಂದರೆ ಮುದ್ದು ಹುಡುಗಿ ಭಾವಿಸುತ್ತದೆ. ಆದರೆ, ತಾಯಿ ಮಗಳಿಗೆ ಪಾಠ ಕಲಿಸಲು ನಿರ್ಧರಿಸಿದ್ದಳು. ಹಾಗಾಗಿ ತಾಯಿಯು ಮಗುವಿಗೆ ಕ್ಷಮಿಸು ಎಂದು ಕೇಳಲು ಮನವೊಲಿಸಲು ಪ್ರಯತ್ನಿಸುತ್ತಾಳೆ. ಅಂತೂ ಕೊನೆಯಲ್ಲಿ ಅವಳಿಗೆ ಒಂದು ಸಿಹಿ ಮುತ್ತು ನೀಡಿ ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಎಂದು ಬಾಲಕಿ ಭರವಸೆ ನೀಡುತ್ತಾಳೆ.
ವಿಡಿಯೋ ಇಲ್ಲಿ ವೀಕ್ಷಿಸಿ...
ವಿಡಿಯೋದಲ್ಲಿ ವೈರಲ್ ಆಗುತ್ತಿರುವುದು ಆ ಮುದ್ದು ಹುಡುಗಿ ಅಳುತ್ತಿರುವುದು. ಹೌದು ಇದನ್ನು ನೋಡಿ ಎಲ್ಲರೂ ಭಾವುಕರಾಗುತ್ತಾರೆ. ಬಹುಶಃ ನೀವು ಈ ವಿಡಿಯೋ ನೋಡಿದಾಗ ನೀವು ಕೂಡ ಹಾಗೇ ಹೇಳುತ್ತೀರಿ. ಹುಡುಗಿ ತುಂಬಾ ಮುದ್ದಾಗಿದ್ದಾಳೆ. ಅನೇಕ ಬಳಕೆದಾರರು ಆ ಮುಗ್ಧ ಮಗುವಿನ ತರಲೆಯನ್ನು ಮೆಚ್ಚಿದರು, ಈ ವಿಡಿಯೋವನ್ನು @parishaykhn ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿದೆ. ವಿಡಿಯೋವನ್ನು 10 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು 17 ಲಕ್ಷಕ್ಕೂ ಹೆಚ್ಚು ಬಾರಿ ಲೈಕ್ ಮಾಡಲಾಗಿದೆ. ಜನರು ವಿಡಿಯೋ ನೋಡಿ ಕಾಮೆಂಟ್ ಮಾಡುವ ಮೂಲಕ ಹುಡುಗಿಯ ಮೇಲೆ ಪ್ರೀತಿಯನ್ನು ಸುರಿಸುತ್ತಿದ್ದಾರೆ. ಓರ್ವ ಬಳಕೆದಾರರು ಎಂಥಹ ಮುದ್ದಾದ ಗೊಂಬೆ, ದುಷ್ಟ ಕಣ್ಣುಗಳು ಆಕೆಯ ಮೇಲೆ ಬೀಳದಿರಲಿ ಎಂದರೆ, ಮತ್ತೋರ್ವ ಬಳಕೆದಾರರು ಮಗುವಿನ ಕಣ್ಣುಗಳಲ್ಲಿ ತುಂಬಾ ಮುಗ್ಧತೆ ಇದೆ ಎಂದು ಕೊಂಡಾಡಿದ್ದಾರೆ. ಹಾಗೆಯೇ ಮತ್ತೆ ಕೆಲವರು ಅವಳು ಎಷ್ಟು ಮುದ್ದಾದ ಹುಡುಗಿ, ದಯವಿಟ್ಟು ಅವಳನ್ನು ಅಳುವಂತೆ ಮಾಡಬೇಡಿ ಎಂದಿದ್ದಾರೆ.
ಅಪರಿಚಿತ ಹಿರಿಯ ವ್ಯಕ್ತಿಯ ತೊಡೆಯ ಮೇಲೆ ನಿದ್ರೆ ಮಾಡಿದ ಮಗು..
ಇದೇ ರೀತಿಯ ಮತ್ತೊಂದು ಕ್ಯೂಟ್ ಆಗಿರುವ ವಿಡಿಯೋ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಮಕ್ಕಳು ಪ್ರಯಾಣ ಮಾಡುವಾಗ ಬೇಗನೆ ಸುಸ್ತಾಗುತ್ತಾರೆ ಮತ್ತು ಪ್ರಯಾಣದ ಮಧ್ಯದಲ್ಲಿ ನಿದ್ರಿಸುತ್ತಾರೆ. ಕೆಲವು ಮಕ್ಕಳು ನಿದ್ರೆ ಮಾಡುವುದನ್ನು ಬಿಡುವುದಿಲ್ಲ. ಪ್ರಯಾಣದ ಸಮಯದಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು ತುಂಬಾ ಕಠಿಣ ಕೆಲಸ. ಸದ್ಯ ದೆಹಲಿ ಮೆಟ್ರೋದ ಈ ವೈರಲ್ ವಿಡಿಯೋದಲ್ಲಿ, ಮಗುವೊಂದು ನಿದ್ರಿಸುತ್ತಿರುವ ಸುಂದರವಾದ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನಂತರ, ಮೊದಲು ನೀವು ಮಗುವಿನ ಮುಗ್ಧತೆಯನ್ನು ಪ್ರೀತಿಸುತ್ತೀರಿ. ನಂತರ ಮಗುವಿನ ಬಗ್ಗೆ ತನ್ನ ವರ್ತನೆಯಿಂದ ಜನರ ಹೃದಯಗಳನ್ನು ಗೆದ್ದ ಹಿರಿಯ ವ್ಯಕ್ತಿ ನೋಡಿ ಚಪ್ಪಾಳೆ ತಟ್ಟುತ್ತೀರಿ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋ ಜನರ ಮುಖದಲ್ಲಿ ನಗು ತರಿಸುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.