ಆಫೀಸ್ ಎಂದಾಕ್ಷಣ ಕೇಳ್ಳೋದೇ ಬೇಡ, ಕೆಲಸ ಮಾಡಲು ಬೇಜಾರು ಎಂದು ಮುಖಗಂಟಿಕ್ಕುವವರೇ ಹೆಚ್ಚು. ಎಲ್ಲೆಲ್ಲೂ ಮುಖ ಗಂಟಿಕ್ಕಿದವರೇ ಇದ್ದರೆ, ಅಲ್ಲಿ ಒಂಚೂರೂ ಸಂತೋಷ, ನಗೆ ಇರಲಾರದು. ಯಾವಾಗಲೂ ನಗು ನಗುತ್ತಾ ಇದ್ದರೆ ಕೆಲಸ ಮಾಡಲು ಉತ್ಸಾಹ ಬರುತ್ತದೆ.
ಆಫೀಸ್ ಎಂದಾಕ್ಷಣ ಕೇಳ್ಳೋದೇ ಬೇಡ, ಕೆಲಸ ಮಾಡಲು ಬೇಜಾರು ಎಂದು ಮುಖಗಂಟಿಕ್ಕುವವರೇ ಹೆಚ್ಚು. ಎಲ್ಲೆಲ್ಲೂ ಮುಖ ಗಂಟಿಕ್ಕಿದವರೇ ಇದ್ದರೆ, ಅಲ್ಲಿ ಒಂಚೂರೂ ಸಂತೋಷ, ನಗೆ ಇರಲಾರದು. ಆದರೆ ಮೆಲು ನಗೆ, ಸಂತೋಷ, ಇದ್ದರೆ ಕೆಲಸ ಮಾಡಲೂ ಉತ್ಸಾಹ. ನಾವು ನಗುನಗುತ್ತಾ ಇದ್ದರೆ, ನಮ್ಮ ಜೊತೆ ಕೆಲಸ ಮಾಡುವ ಸಹೋದ್ಯೋಗಿಗಳಲೂ ನಗುತ್ತಲೇ ಮಾತನಾಡುತ್ತಾರೆ.
ಹೀಗೆ ನಗ್ತಾ ಇದ್ರೆ ಪ್ರಮೋಷನ್ ವಿಚಾರದಲ್ಲಿ ಬೆಳವಣಿಗೆ ಖಂಡಿತ ಎಂದು ಸಮೀಕ್ಷೆ ಹೇಳಿದೆ. ಆಕ್ಸ್‌ಫೋರ್ಡ್ ವಿವಿಯ ಮನಃಶಾಸ್ತ್ರಜ್ಞರು ಈ ಸಮೀಕ್ಷೆ ನಡೆಸಿದ್ದು, ನಗು ಉತ್ತಮ ಸಂಬಂಧಗಳನ್ನು ಹುಟ್ಟು ಹಾಕುತ್ತದೆ. ವ್ಯಕ್ತಿಯ ಬಗ್ಗೆ ಸಕಾರಾತ್ಮಕ ಭಾವನೆಗೆ ಕಾರಣವಾಗುತ್ತವೆ ಎಂದು ಹೇಳಿದ್ದಾರೆ. ಆಫೀಸಿನಲ್ಲಿ ನಗುತ್ತಾ, ಚಟುವಟಿಕೆಯಿಂದಿರುವ ವ್ಯಕ್ತಿಗೆ ಶೇ.60 ರಷ್ಟು ಬಡ್ತಿಯಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನುವುದು ಸಮೀಕ್ಷೆಯಲ್ಲಿ ಗೊತ್ತಾಗಿದೆ.
ಶೇ.62 ರಷ್ಟು ಮಂದಿ ಬಾಸ್‌ಗಳು ನಗುತ್ತಾ ಕೆಲಸ ಮಾಡುವವರನ್ನು ಇಷ್ಟಪಡುವುದಾಗಿಯೂ ಹೇಳಿದ್ದಾರಂತೆ. ಏಕೆಂದರೆ ಅಂಥವರು ಮುಖಗಂಟಿಕ್ಕಿಕೊಳ್ಳದೆ ಎಲ್ಲರೊಂದಿಗೆ ನಗುತ್ತಾ, ಕಚೇರಿಯಲ್ಲಿ ಒಂದು ರೀತಿ ಬಾಂದವ್ಯ ಸೃಷ್ಟಿಸುತ್ತಾರೆ ಮತ್ತು ಅವರ ನಗುವಿನಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತದೆ ಎಂದಿದ್ದಾರೆ. ಆದರೆ ಅಚ್ಚರಿಯೆಂದರೆ, ಹಲವರಿಗೆ ನಮ್ಮ ನಗು ಚೆನ್ನಾಗಿಲ್ಲ, ನಕ್ಕರೆ ಚೆನ್ನಾಗಿ ಕಾಣಲ್ಲ ಎಂಬ ತಲೆನೋವು ಇದೆಯಂತೆ. ಅದೂ ಮಹಿಳೆಯರಿಗೇ ಇಂತಹ ಚಿಂತೆ ಹೆಚ್ಚು ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.