ಸ್ಟ್ರೆಸ್ ದೂರವಾಗಿಸಲು ಬೆಸ್ಟ್ ಮದ್ದು ಕಿಸ್...!

By Web Desk  |  First Published Jan 3, 2019, 11:42 AM IST

ನಾವು ಏನೇ ಕೆಲಸ ಮಾಡಿದರೂ ನೂರಕ್ಕೆ ನೂರರಷ್ಟು ಭಾಗಿಯಾದರೆ ಸಿಗೋ ಪ್ರತಿಫಲಾನೇ ಬೇರೆ. ಇದು ರೊಮಾನ್ಸ್‌ಗೂ ಅಪ್ಲೈ ಆಗುತ್ತೆ. ಮನಸ್ಸು ಹಾಗೂ ಆರೋಗ್ಯದ ಮೇಲೆ ರೊಮಾನ್ಸ್ ಧನಾತ್ಮಕ ಪರಿಣಾಮ ಬೀರಬೇಕು ಎಂದರೆ ಏನು ಮಾಡಬೇಕು. ಇಲ್ಲಿದೆ ಉತ್ತರ....


ತುಂಬಾ ಲವ್ ಆದಾಗ, ಮುದ್ದು ಬಂದಾಗ ಸಂಗಾತಿಗೆ ಕಿಸ್ ಮಾಡಬೇಕೆಂಬ ಬಯಕೆ ಏಳೋದು ಸಹಜ. ಈ ಮುತ್ತಿನಲ್ಲೂ ಹಲವಾರು ವಿಧಗಳಿವೆ. ಕಿಸ್ ಯಾವುದೇ ಇರಲಿ, ಪರಸ್ಪರ ಚುಂಬಿಸಿದಾಗ ಪ್ರೀತಿಯೂ ಹೆಚ್ಚುತ್ತೆ, ಜೊತೆಗೆ ಆರೋಗ್ಯವೂ ವೃದ್ಧಿಸುತ್ತೆ.   

ಇಬ್ಬರು ಒಬ್ಬರಿಗೊಬ್ಬರು ಕಿಸ್ ಮಾಡಿದಾಗ ಲವ್‌ ಹಾರ್ಮೋನ್‌ ಉತ್ಪತ್ತಿಯಾಗುತ್ತದೆ. ಇದರಿಂದ ಇಬ್ಬರ ನಡುವೆ ಪ್ರೀತಿ ಹೆಚ್ಚುತ್ತದೆ. ಅದರಲ್ಲಿಯೂ ಸಂಗಾತಿಯಲ್ಲಿ ಯಾರಿಗಾದರೂ ಅನಾರೋಗ್ಯ ಕಾಡಿದಾಗ ಈ ಮುತ್ತು ಮಾಡೋ ಮ್ಯಾಜಿಕ್ಕೇ ಬೇರೆ. ಮನಸ್ಸಿಗೆ ಹಿತವೆನಿಸಿದರೆ ಅದು ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರಿ, ಆರೋಗ್ಯ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚಾಗಿ, ಕಾಯಿಲೆಯೊಂದಿಗೆ ಹೋರಾಡುವ ಸಾಮರ್ಥ್ಯ ಹೆಚ್ಚುತ್ತದೆ.

Latest Videos

ಬಿಗ್ ಬಾಸ್‌ನಲ್ಲಿ ಹೀಗಿತ್ತು ಮುತ್ತಿನ ಗಮ್ಮತ್ತು

- ದೇಹದ ಅನಗತ್ಯ ಕ್ಯಾಲೋರಿ ಕರಗಿಸುವಲ್ಲಿ ಸೆಕ್ಸ್‌ ಎಷ್ಟು ನೆರವಾಗುತ್ತದೆಯೋ, ಅಂತೆಯೇ ಕಿಸ್‌ ಸಹ ಸಹಕಾರಿಯಾಗಿದೆ. ಕಿಸ್ ಮಾಡ್ತಾ ಇದ್ರೆ ಫಿಟ್ ಆಗುತ್ತೀರಿ. 
- ಲವ್ ಲೈಫ್ ತುಂಬಾನೇ ಚೆನ್ನಾಗಿರಬೇಕು ಎಂದರೆ ಪ್ರತಿದಿನ ಮಿಸ್ ಮಾಡದೆ ಕಿಸ್ ಮಾಡಿ. ಇದರಿಂದ ದಿನದಲ್ಲಿ ಎಷ್ಟು ಸಲ ಜಗಳವಾಡಿದರೂ ವಿರಸ ದೂರವಾಗಿ ಜೀವನ ಸುಂದರವಾಗಿರುತ್ತೆ. 
- ಲಿಪ್ ಲಾಕ್ ಮಾಡಿದರೆ ಮನಸ್ಸಿನಲ್ಲಿ ಅದೆಷ್ಟೇ ಬೇಸರ, ದುಃಖವಿದ್ದರೂ ಉಪಶಮನವಾಗುತ್ತದೆ. 
- ಒಂದು ನಿಮಿಷ ಬಿಡದೆ ದಿನವಿಡೀ ಕೆಲಸ ಮಾಡಿ ಸ್ಟ್ರೆಸ್‌ನಲ್ಲಿದ್ದರೆ ಸಂಜೆ ಮನೆಗೆ ಬಂದು ಸಂಗಾತಿಗೆ ಕಿಸ್ ಮಾಡಿ. ಎಲ್ಲಾ ಟೆನ್ಷನ್ ದೂರವಾಗಿ ಮನಸ್ಸು ಹಗುರಾಗುತ್ತದೆ. 
 

click me!